Ish Sodhi: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಭಾರತ ಮೂಲದ ಕಿವೀಸ್ ಆಟಗಾರ ಇಶ್ ಸೋಧಿ | Ish Sodhi Gets Emotional Before T20 World Cup Final in Ahmedabad, Viral Video Melts Fans’ Hearts

Sports

oi-Madhusudhan KR

Ish Sodhi: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯ ಆರಂಭವಾಗುವ ಮುನ್ನ ನ್ಯೂಜಿಲೆಂಡ್ ತಂಡದ ಪ್ರಮುಖ ಲೆಗ್-ಸ್ಪಿನ್ನರ್ ಇಶ್ ಸೋಧಿ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹೇಳುವ ಸಮಯದಲ್ಲಿ ಈ ಘಟನೆ ನಡೆದಿದೆ. ಇನ್ನೂ ನ್ಯೂಜಿಲೆಂಡ್‌ ತಂಡದ ಇಶ್ ಸೋಧಿ ಅವರ ಈ ಭಾವನಾತ್ಮಕ ಕ್ಷಣ ಜಗತ್ತಿನಾದ್ಯಂತ ಕ್ರೀಡಾಭಿಮಾನಿಗಳ ಗಮನ ಸೆಳೆದಿದೆ. ಇಶ್ ಸೋಧಿ ಅವರು ಜನಿಸಿದ್ದು ಪಂಜಾಬ್‌ನ ಲೂಧಿಯಾನದಲ್ಲಿ. ತಮ್ಮ ಬಾಲ್ಯದ ಆರಂಭಿಕ ದಿನಗಳನ್ನು ಭಾರತದಲ್ಲಿ ಕಳೆದ ಅವರು, ನಂತರ ತಮ್ಮ ಕುಟುಂಬದೊಂದಿಗೆ ನ್ಯೂಜಿಲೆಂಡ್‌ಗೆ ತೆರಳಿದರು.

Ish Sodhi Gets Emotional Before T20 World Cup Final in Ahmedabad Viral Video Melts Fans Hearts

ಇದೀಗ ಅದೇ ಭಾರತದ ಮಣ್ಣಿನಲ್ಲಿ, ಅಹಮದಾಬಾದ್‌ನ ಐತಿಹಾಸಿಕ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವಕಪ್ ಫೈನಲ್ ಪಂದ್ಯವನ್ನು ಆಡುವುದು ಅವರ ಪಾಲಿಗೆ ದೊಡ್ಡ ಕನಸಾಗಿತ್ತು. ಅದರಂತೆಯೇ ಕನಸು ನೆರವೇರಿದಾಗ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ ಎಂದು ವರದಿಯಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿ ಕ್ರೀಡಾಭಿಮಾನಿಗಳ ಮನ ಗೆದ್ದಿದೆ.

ಕಣ್ಣೀರಿಡಲು ಕಾರಣ ಏನು?

ತನ್ನ ಹುಟ್ಟಿದ ನೆಲದಲ್ಲಿ ಆಡುತ್ತಿರುವ ಹೆಮ್ಮೆ, ಪಂದ್ಯದ ಮಹತ್ವ ಮತ್ತು ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುತ್ತಿರುವ ಜವಾಬ್ದಾರಿ, ಈ ಎಲ್ಲಾ ಭಾವನೆಗಳು ಆ ಕ್ಷಣದಲ್ಲಿ ಇಶ್ ಸೋಧಿ ಅವರನ್ನು ಭಾವುಕರನ್ನಾಗಿಸಿದವು. ತನ್ನ ತಾಯ್ನಾಡಿನಲ್ಲೇ ಇಂತಹ ದೊಡ್ಡ ವೇದಿಕೆಯಲ್ಲಿ ನಿಂತು ದೇಶಕ್ಕಾಗಿ ಹೋರಾಡಲು ಸಿದ್ಧರಾದಾಗ, ಅವರು ತನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿರಬಹುದು ಎಂಬುದು ಅಭಿಮಾನಿಗಳ ಅಭಿಪ್ರಾಯ.

ಇಶ್ ಸೋಧಿ ಕಣ್ಣೀರಿಟ್ಟ ವಿಡಿಯೋ ವೈರಲ್‌

ಇಶ್ ಸೋಧಿ ಅವರ ಈ ಭಾವುಕ ದೃಶ್ಯವನ್ನು ಕ್ಯಾಮೆರಾಗಳು ಸೆರೆಹಿಡಿದಿದ್ದು, ಆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಒಬ್ಬ ಆಟಗಾರ ತನ್ನ ವೃತ್ತಿಜೀವನದಲ್ಲಿ ಬೆಳೆದು ಬಂದ ಹಾದಿಯನ್ನು ಮತ್ತು ತನ್ನ ಬೇರುಗಳನ್ನು ಮರೆಯುವುದಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಅಭಿಮಾನಿಗಳು ಸೋಧಿ ಅವರ ಈ ನಡವಳಿಕೆಯನ್ನು ಶ್ಲಾಘಿಸಿದ್ದು, ಕ್ರೀಡೆಯು ಗಡಿಗಳನ್ನು ಮೀರಿ ಹೇಗೆ ಮನುಷ್ಯನನ್ನು ಭಾವನಾತ್ಮಕವಾಗಿ ಬಂಧಿಸುತ್ತದೆ ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ ಎಂದು ಬಣ್ಣಿಸಿದ್ದಾರೆ.

ಅಭಿಮಾನಿಗಳಿಂದ ಮೆಚ್ಚುಗೆಗಳ ಸುರಿಮಳೆ

“ಕ್ರೀಡಾಪಟುವಾಗಿ ಯಶಸ್ಸಿನ ಉತ್ತುಂಗದಲ್ಲಿದ್ದರೂ, ತನ್ನ ಹುಟ್ಟಿದ ನಾಡಿನ ಮೇಲೆ ಇಶ್ ಸೋಧಿ ಹೊಂದಿರುವ ಗೌರವ ಮತ್ತು ಪ್ರೀತಿ ನಿಜಕ್ಕೂ ಮೆಚ್ಚುವಂತಹದ್ದು,” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಪಂದ್ಯ ಮುಗದರೂ ಸಹ ಈ ವಿಡಿಯೋ ಮಾತ್ರ ಇದೀಗ ಎಲ್ಲೆಡೆ ವೈರಲ್‌ ಆಗುತ್ತಲಿದೆ. ತುಂಬಾ ಮಂದಿ ಇದನ್ನು ವ್ಯಾಟ್ಸಪ್, ಇನ್‌ಸ್ಟಾಗ್ರಾಂ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು, ಮೆಚ್ಚುಗೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

ಇಶ್‌ ಸೋಧಿ ಜನನದ ವಿವರ

ಇಶ್ ಸೋಧಿ ನ್ಯೂಜಿಲೆಂಡ್ ತಂಡದ ಪ್ರಮುಖ ಲೆಗ್-ಸ್ಪಿನ್ನರ್. ಇವರು ಮೂಲತಃ ಭಾರತೀಯ ಮೂಲದವರಾಗಿದ್ದು, ಪಂಜಾಬ್‌ನ ಲೂಧಿಯಾನದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಕುಟುಂಬದೊಂದಿಗೆ ನ್ಯೂಜಿಲೆಂಡ್‌ಗೆ ವಲಸೆ ಹೋದ ಇಶ್ ಸೋಧಿ, ಅಲ್ಲಿನ ಕ್ರಿಕೆಟ್ ವ್ಯವಸ್ಥೆಯಲ್ಲಿ ಬೆಳೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡರು. ಐಸಿಸಿ ರ‍್ಯಾಂಕಿಂಗ್‌ನಲ್ಲಿ ಹಲವು ಬಾರಿ ಅಗ್ರಗಣ್ಯ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಅವರು, ಕಿವೀಸ್ ತಂಡದ ಕಠಿಣ ಪರಿಸ್ಥಿತಿಯಲ್ಲಿ ಉತ್ತಮ ಬೌಲಿಂಗ್ ದಾಳಿ ಮಾಡುವ ಆಟಗಾರರಲ್ಲಿ ಒಬ್ಬರು.

ಇನ್ನೊಂದು ಮೂಲ ಹೇಳೋದೇನು?: ಮತ್ತೊಂದೆಡೆ, ಟಿ20 ವಿಶ್ವಕಪ್ 2026 ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧದ ಸೋಲು ನ್ಯೂಜಿಲೆಂಡ್ ತಂಡದ ಆಟಗಾರರಿಗೆ ತೀವ್ರ ನೋವನ್ನುಂಟು ಮಾಡಿತು. ಈ ಪಂದ್ಯದ ನಂತರ ಮೈದಾನದಲ್ಲಿ ಭಾರತೀಯ ಮೂಲದ ಕಿವೀಸ್‌ನ ಅನುಭವಿ ಆಟಗಾರ ಇಶ್ ಸೋಧಿ ಕಣ್ಣಿರಿಟ್ಟಿದ್ದಾರೆ ಎಂದು ವರದಿಯಾಗಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/sports/ish-sodhi-gets-emotional-before-t20-world-cup-final-in-ahmedabad-viral-video-melts-fans-hearts-446651.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo