Kannada: ಮಲಯಾಳಂ ಜಾಮಿಂಗ್ ಸೆಷನ್‌ಗೆ ಅವಕಾಶ; ದೊಡ್ಡ ಅಪರಾಧ ಎಂದು ತಿಳಿದಿರಲಿಲ್ಲ: ಮೈಸೂರು ಕೆಫೆ ಸ್ಪಷ್ಟನೆ | Kannadigas Raise Objection to Malayalam Jam at Mysuru Cafe; Ikigai Says No Intent to Hurt Sentiments

Karnataka

-Hitesh Y

ಮೈಸೂರು: ಮೈಸೂರಿನ ಖಾಸಗಿ Ikigai ಕೆಫೆಯಲ್ಲಿ ಆಯೋಜನೆ ಮಾಡಲಾಗಿದ್ದ ಮಲಯಾಳಂ ಜಾಮಿಂಗ್ (ಮಲಯಾಳಂ ಸಂಗೀತ ಕಾರ್ಯಕ್ರಮ)ಗೆ ಕನ್ನಡಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಈ ಕಾರ್ಯಕ್ರವನ್ನು ರದ್ದು ಮಾಡಲಾಗಿದೆ. ಕನ್ನಡಿಗರು ಪರಭಾಷಾ ಸಂಗೀತ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವು ಗುರುವಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಏನಿದು ವಿವಾದ ಹಾಗೂ ಈ ಬಗ್ಗೆ Ikigai ಕೆಫೆ ಕೊಟ್ಟ ಸ್ಪಷ್ಟನೆ ಏನು ಎನ್ನುವ ವಿವರ ಇಲ್ಲಿದೆ.

ಮೈಸೂರಿನ ಸಸ್ಯಾಹಾರಿ ಕೆಫೆಯಾಗಿರುವ ಇಕಿಗೈ ಸಂಗೀತ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮಕ್ಕಳು ಮತ್ತು ಕುಟುಂಬದವರು ಸೇರಿ ಸಮಯ ಕಳೆಯುವುದಕ್ಕೆ ಪೂರಕವಾದ ವಾತಾವರಣ ಈ ಕೆಫೆಯಲ್ಲಿ ಇದೆ. ಕೆಫೆಯಲ್ಲಿ ಸಾಂದರ್ಭಿಕವಾಗಿ ಸಂಗೀತ ಕಾರ್ಯಕ್ರಮ / ಜಾಮಿಂಗ್ ಸೆಷನ್‌ಗಳನ್ನು ನಡೆಸಲಾಗುತ್ತದೆ. ಹಿತವಾದ ಕನ್ನಡ ರೆಟ್ರೊ ಹಾಡುಗಳಿಗೆ ಮೈಸೂರಿನ ಕನ್ನಡಿಗರು ಮಾತ್ರವಲ್ಲ ಕರ್ನಾಟಕದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಇದೀಗ ಈ ಕೆಫೆಯಲ್ಲಿ ಮಲಯಾಳಂ ಸಂಗೀತ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದು ಆಕ್ಷೇಪಕ್ಕೆ ಕಾರಣವಾಗಿತ್ತು.

Kannadigas Raise Objection to Malayalam Jam at Mysuru Cafe Ikigai Says No Intent to Hurt Sentiments

ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಈ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು. ನಿಲ್ಲಿಸಬೇಕು ಎನ್ನುವ ಅಭಿಯಾನ ಪ್ರಾರಂಭ ಮಾಡಿದ ಮೇಲೆ ಮಲಯಾಳಿ ಜಾಮಿಂಗ್ ಸೆಷನ್ ಅನ್ನು ರದ್ದು ಮಾಡಲಾಗಿದೆ.

ಮಲಯಾಳಂ ಜಾಮಿಂಗ್ ಸೆಷನ್ ಬಗ್ಗೆ Ikigai ಕೆಫೆ ಹೇಳಿದ್ದೇನು

ಇನ್ನು ಮಲಯಾಳಂ ಜಾಮಿಂಗ್ ಸೆಷನ್‌ಗೆ ಕನ್ನಡಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಈ ಕಾರ್ಯಕ್ರಮವನ್ನು ನಾವು ರದ್ದು ಮಾಡಿದ್ದೇವೆ ಎಂದು Ikigai ಕೆಫೆ ಹೇಳಿದೆ. ಕೆಫೆ ಮಾಲೀಕರ ವಿವರಣೆ ಈ ರೀತಿ ಇದೆ.

ನನ್ನ ಪ್ರೀತಿಯ ಮೈಸೂರಿಗರೇ,

ಮೈಸೂರಿನ ಇಕಿಗೈ ಕೆಫೆಯ ಮಾಲೀಕನಾದ ನಾನು, ಅನಗತ್ಯ ಕಾರಣಗಳಿಗಾಗಿ ಕೆಫೆಯ ಬಗ್ಗೆ ಇಷ್ಟೊಂದು ದ್ವೇಷವನ್ನು ಹರಡುವ ಜನರಿಗೆ ನನ್ನ ಆಳವಾದ ಸಹಾನುಭೂತಿಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಇಕಿಗೈನಲ್ಲಿ ನಾವು ಕನ್ನಡ ಜಾಮಿಂಗ್ ಅನ್ನು ಆಯೋಜಿಸುತ್ತಿದ್ದೇವೆ ಮತ್ತು ಯಾವಾಗಲೂ ಆಯೋಜಿಸುತ್ತೇವೆ. ಕೋಪ ಮತ್ತು ಅಗೌರವವನ್ನು ತೋರಿಸಬಹುದು ಮತ್ತು ಬೆದರಿಕೆ ಹಾಕಬಹುದು. ದಯವಿಟ್ಟು ನೀವೂ ಬಂದು ನಮ್ಮ ಕನ್ನಡ ಜಾಮಿಂಗ್‌ನ ಭಾಗವಾಗಬಹುದು ಮತ್ತು ಸ್ಥಳೀಯ ಯುವ ಕಲಾವಿದರು ಮತ್ತು ಕನ್ನಡ ಕಲಾವಿದರನ್ನು ಬೆಂಬಲಿಸಬಹುದು.

ಮಲಯಾಳಿ ವಿದ್ಯಾರ್ಥಿಗಳ ಗುಂಪು ನಮ್ಮನ್ನು ಸಂಪರ್ಕಿಸಿದಾಗ, ಬೇರೆ ರಾಜ್ಯಗಳ ವಿದ್ಯಾರ್ಥಿಗಳಿಗೆ ಸುರಕ್ಷಿತ ಮನರಂಜನಾ ವಾತಾವರಣವನ್ನು ನಿರ್ಮಾಣ ಮಾಡಲು ಅವರಿಗೆ ಸ್ಥಳ ಕೊಡುವುದು ಅಷ್ಟು ದೊಡ್ಡ ಅಪರಾಧ ಎಂದು ನಮಗೆ ತಿಳಿದಿರಲಿಲ್ಲ. ಆದರೆ ಇನ್ಮುಂದೆ ಅಂತಹ ಜಾಮ್‌ಗಳನ್ನು ನಡೆಸಲು ನಮಗೆ ಆಸಕ್ತಿ ಇಲ್ಲ. ಮಲಯಾಳಂ ಜಾಮ್ ಇಲ್ಲ ಎಂದು ಕೆಫೆಯು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

ಮುಂದುವರಿದು ನಮ್ಮ ಕೊನೆಯ ಎರಡು ಕನ್ನಡ ಜಾಮ್ ಕಾರ್ಯಕ್ರಮಗಳು ತುಂಬಾ ಚೆನ್ನಾಗಿ ನಡೆದವು. ಆದರೆ ಹೆಚ್ಚು ಗಮನ ಸೆಳೆಯಲಿಲ್ಲ. ಕನ್ನಡ ಜಾಮ್‌ಗಳನ್ನು ಬೆಂಬಲಿಸಲು ಬಯಸುವ ಎಲ್ಲರೂ ದಯವಿಟ್ಟು ಬುಕ್ ಮಾಡಿ, ಕನ್ನಡದ ಯುವ ಪ್ರತಿಭೆಗಳನ್ನು ಬೆಂಬಲಿಸಿ ಎಂದೂ ಪೋಸ್ಟ್‌ ಮಾಡಲಾಗಿದೆ.

Kannadigas ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ

ಇನ್ನು ಮೈಸೂರಿನ ಈ ಕೆಫೆಯಲ್ಲಿಯಲ್ಲಿ ಮಲಯಾಳಂ ಭಾಷೆಯ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿರುವ ವಿಚಾರವು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿದೇಶಗಳಲ್ಲೂ ಮಲಯಾಳಂ ಭಾಷೆಯ ಸಂಗೀತ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುತ್ತಿದೆ.

ಈ ರೀತಿ ಇರುವಾಗ ಕರ್ನಾಟಕದಲ್ಲಿ ಯಾಕೆ ಅವಕಾಶ ಇಲ್ಲ, ಕೇರಳದಲ್ಲಿ ಕನ್ನಡ ಹಾಡುಗಳಿಗೆ, ಕಾರ್ಯಕ್ರಮಗಳಿಗೆ ಅವಕಾಶ ಇದೆ ಎಂದು ಕೆಲವು ಮಲಯಾಳಿ ನೆಟ್ಟಿಗರು ರಿಯಾಕ್ಟ್‌ ಮಾಡಿದ್ದಾರೆ. ಆದರೆ ಇದಕ್ಕೆ ಕನ್ನಡಿಗರು ವಿದೇಶಗಳಲ್ಲಿ ಅನುಸರಿಸುವ ವಿಧಾನದಲ್ಲೇ / ನಿಯಮಗಳನ್ನು ಪಾಲಿಸಿ, ನಾಗರಿಕ ಪ್ರಜ್ಞೆಯನ್ನು ಇಲ್ಲಿಯೂ ತೋರಿಸಿ ಎಂದು ತಿರುಗೇಟು ನೀಡಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/kannadigas-raise-objection-to-malayalam-jam-at-mysuru-cafe-ikigai-says-no-intent-to-hurt-sentiment-011-443485.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo