Karnataka Rains: ಚಂಡಮಾರುತ ಪರಿಚಲನೆ ತೀವ್ರತೆ, ಒಳನಾಡು ಜಿಲ್ಲೆಗಳಲ್ಲಿ ಗುಡಗು ಸಹಿತ ಮಳೆ ಮುನ್ಸೂಚನೆ | Karnataka Rains: IMD Predicts Rain in Many Districts From Feb 22 Due to Cyclonic Circulation

Karnataka

oi-Shankrappa Parangi

ಬೆಂಗಳೂರು: ಕರ್ನಾಟಕದಲ್ಲಿ ಬಿರು ಬೇಸಿಗೆ ಶುರುವಾಗಿದೆ. ಕೆಲವೆಡೆ ಗರಿಷ್ಠ ತಾಪಮಾನದ ಅನುಭವ ಇನ್ನೂವರೆಗೆ ಆಗಿಲ್ಲ. ಈ ಮಧ್ಯೆ ಎರಡು ದಿನಗಳ ಹಿಂದೆ ರಾಜ್ಯದ ಪುತ್ತೂರು ಸುತ್ತಮುತ್ತ ಕೆಲ ಕಾಲ ಜೋರು ಮಳೆ ದಾಖಲಾಗಿತ್ತು. ವಾತಾವರಣದಲ್ಲಿ ಸುಮಾರು 04 ಕಡೆಗಳಲ್ಲಿ ವಾಯು ಚಂಡಮಾರುತ ಪರಿಚಲನೆಯಂತಹ ವೈಪರೀತ್ಯಗಳು ಉಂಟಾಗಿರುವ ಕಾರಣ ನಾಳೆ ಫೆಬ್ರವರಿ 22 ಭಾನುವಾರದಿಂದ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಅಧಿಕೃತ ಮುನ್ಸೂಚನೆ ನೀಡಿದೆ.

ಚಂಡಮಾರುತ ಪರಿಚಲನೆ ತೀವ್ರತೆ ಹೆಚ್ಚಳ?

ಹಿಂದೂ ಮಹಾಸಾಗರ ಮತ್ತು ಅದಕ್ಕೆ ಹೊಂದಿಕೊಂಡ ಬಂಗಾಳಕೊಲ್ಲಿ ನೈಋತ್ಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ಉಂಟಾಗಿತ್ತು, ಅದರ ತೀವ್ರತೆ ಕಡಿಮೆ ಆಗಿದೆ. ಅದೇ ಭಾಗದಲ್ಲಿ ಸೃಷ್ಟಿಯಾಗಿರುವ ಚಂಡಮಾರುತ ಪರಿಚಲನೆಯು ಸಮುದ್ರ ಮಟ್ಟದಿಂದ ಸರಾಸರಿ 3.1 ಕಿ.ಮೀ ವರೆಗೆ ವಿಸ್ತರಿಸಿದೆ. ಇದು ಮುಂದಿನ 24 ಗಂಟೆಗಳಲ್ಲಿ ಶ್ರೀಲಂಕಾದ ಕಡೆಗೆ ಪಶ್ಚಿಮ-ವಾಯುವ್ಯಕ್ಕೆ ಚಲಿಸುವ ಸಾಧ್ಯತೆಯಿದೆ.

Karnataka Rains

ಬಂಗಾಳಕೊಲ್ಲಿಯ ಆಗ್ನೆಯ ಭಾಗದಲ್ಲಿ ಸಮುದ್ರ ಮಟ್ಟದಿಂದ 5.8 ಕಿ.ಮೀ. ಎತ್ತರದವರೆಗೆ ಮತ್ತೊಂದು ವಾಯು ಚಂಡಮಾರುತದ ಪರಿಚಲನೆ ಉಂಟಾಗಿದೆ. ಅದು ಮುಂದಿನ 48 ಗಂಟೆಗಳಲ್ಲಿ ಇನ್ನಷ್ಟು ತೀವ್ರಗೊಂಡು ಕಡಿಮೆ ಒತ್ತಡದ ಪ್ರದೇಶವಾಗಿ ರೂಪುಗೊಳ್ಳುವ ನಿರೀಕ್ಷೆ ಇದೆ. ಅಲ್ಲಿಂದ ಅದು ವಾಯುವ್ಯ ದಿಕ್ಕಿನತ್ತ ಸಾಗುವ ಸಂಭವವಿದೆ. ಇದರೊಂದಿಗೆ ಹಿಂದೂ ಮಹಾಸಾಗರ ಹಾಗೂ ಬಂಗಾಳಕೊಲ್ಲಿಯ ಇನ್ನೆರಡು ಪ್ರತ್ಯೇಕ ಕಡೆಗಳಲ್ಲಿ ದಕ್ಷಿಣ ತಮಿಳುನಾಡು ಮತ್ತು ದಕ್ಷಿಣ ಕೇರಳದಾದ್ಯಂತ ಲಕ್ಷದ್ವೀಪ ಪ್ರದೇಶದವರೆಗೆ ಸರಾಸರಿ ಸಮುದ್ರ ಮಟ್ಟದಿಂದ 3.1 ಮತ್ತು 4.5 ಕಿ.ಮೀ. ಎತ್ತರದಲ್ಲಿ ಒಂದು ಟ್ರಫ್ ಉದ್ಭವವಾಗಿದೆ. ಇವೆಲ್ಲವುಗಳ ತೀವ್ರತೆಯಿಂದ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಮಳೆ ಉಂಟಾಗಲಿದೆ.

ಯಾವೆಲ್ಲ ಜಿಲ್ಲೆಗಳಿಗೆ ಮಳೆ ಎಚ್ಚರಿಕೆ

ದಕ್ಷಿಣ ಒಳನಾಡು ಜಿಲ್ಲೆಗಳಾದ ಚಾಮರಾಜನಗರ, ಕೊಡಗು, ಮೈಸೂರು, ಮಂಡ್ಯ ಮತ್ತು ರಾಮನಗರ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಾಗೂ ಬೀದರ್, ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗು ಸಹಿತ ಹಗುರ/ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇನ್ನುಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಬಳ್ಳಾರಿ, ವಿಜಯನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ, ಉಡುಪಿ ಮತ್ತು ಉತ್ತರ ಕನ್ನಡ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಯಾದಗಿರಿ, ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ.

ಈ ಮಳೆಯ ಕಾರಣಕ್ಕೆ ಕೆಲವೆಡೆ ಬೆಳಗ್ಗೆ ಮತ್ತು ರಾತ್ರಿ ತಂಪು ವಾತಾವರಣದ ಅನುಭವವಾಗಲಿದೆ. ಮಳೆ ಎಚ್ಚರಿಕೆ ನಡುವೆಯು ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಾಮನ 2-3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆ ಆಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ರಾಜ್ಯದ ಗರಿಷ್ಠ ತಾಪಮಾನ 35 ಡಿ.ಸೆ. ದಾಖಲು

ರಾಜ್ಯದಲ್ಲಿ ಅತ್ಯಧಿಕ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ನೆನ್ನೆ ಕಲಬುರಗಿಯಲ್ಲಿ ದಾಖಲಾಗಿದೆ. ಉಳಿದಂತೆ ಹೊನ್ನಾವರ, ಮಂಗಳೂರು ಏರ್‌ಪೋರ್ಟ್, ಕೊಪ್ಪಳ, ಬಾಗಲಕೋಟೆ, ಗದಗ, ಹಿರಿಯೂರು, ಚಿಕ್ಕನಹಳ್ಳಿ (ತುಮಕೂರು) ಭಾಗದಲ್ಲಿ 34 ಡಿಗ್ರಿ ಸೆಲ್ಸಿಯಸ್, ವಿಜಯಪುರ, ಬೀದರ್, ಬೆಳಗಾವಿ ಏರ್‌ಪೋರ್ಟ್, ಹಾವೇರಿ, ಧಾರವಾಡ, ಕಾರವಾರ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಬೆಂಗಳೂರು ಹವಾಮಾನ ಸ್ಥಿತಿಗತಿ

ರಾಜಧಾನಿಯಲ್ಲಿ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 17-18 ಡಿಗ್ರಿ ಸೆಲ್ ಸೆಲ್ಸಿಯಸ್ ತಾಪಮಾನ ಕಂಡು ಬರುತ್ತಿದೆ. ಇಲ್ಲಿ ತಂಪು ವಾತಾವರಣ ಸಂಪೂರ್ಣ ಮರೆಯಾಗಿದೆ. ಸ್ವಚ್ಛ ನೀಲಿ ಆಕಾಶ ಇದ್ದು, ಹಗಲು ಒಣಹವೆ ಮುನ್ಸೂಚನೆ ಇದೆ. ಎಲ್ಲೆಡೆ ಬಿಸಿಸಲಿನ ಪ್ರಮಾಣ ಏರಿಕೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-rains-imd-predicts-rain-in-many-districts-from-feb-22-due-to-cyclonic-circulation-444513.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo