Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ | Karnataka Private Schools Likely to Increase Fees by 8–15% in 2026–27 Academic Year: Know details

Karnataka

oi-Madhusudhan KR

Karnataka School Fee: ಬರುವ ಶೈಕ್ಷಣಿಕ ವರ್ಷದಲ್ಲಿ (2026-27) ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಯೋಜಿಸುತ್ತಿರುವ ಪೋಷಕರಿಗೆ ಆರ್ಥಿಕ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ಶಿಕ್ಷಕರ ವೇತನ ಪರಿಷ್ಕರಣೆ ಮತ್ತು ಶಾಲಾ ನಿರ್ವಹಣಾ ವೆಚ್ಚಗಳ ಏರಿಕೆಯ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ಶುಲ್ಕದಲ್ಲಿ ಶೇಕಡ 8 ರಿಂದ 15ರಷ್ಟು ಹೆಚ್ಚಳವಾಗಲಿದೆ ಎಂದು ಖಾಸಗಿ ಶಾಲೆಗಳ ಸಂಘಗಳು ತಿಳಿಸಿವೆ.

ಶುಲ್ಕ ಹೆಚ್ಚಳಕ್ಕೆ ಪ್ರಮುಖ ಕಾರಣಗಳೇನು?

* ಶಿಕ್ಷಕರ ವೇತನ ಪರಿಷ್ಕರಣೆ: ಶಾಲಾ ಶಿಕ್ಷಕರು ತಮ್ಮ ವೇತನವನ್ನು ಶೇಕಡ 20ರಷ್ಟು ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಸಂಪೂರ್ಣವಾಗಿ ಅಷ್ಟು ಹೆಚ್ಚಳ ಸಾಧ್ಯವಾಗದಿದ್ದರೂ, 2026-27ನೇ ಸಾಲಿನಲ್ಲಿ ಅಧ್ಯಾಪಕರ ಸಂಬಳವನ್ನು ಗಣನೀಯವಾಗಿ ಪರಿಷ್ಕರಿಸಲು ಶಾಲೆಗಳು ನಿರ್ಧರಿಸಿವೆ.

Karnataka Private Schools Likely to Increase Fees by 8 15 in 2026 27 Academic Year Know details

* ನಿರ್ವಹಣಾ ವೆಚ್ಚ: ಶಾಲೆಗಳ ಮಾನ್ಯತಾ ಶುಲ್ಕ ಪಾವತಿ, ಮೂಲಸೌಕರ್ಯಗಳ ನಿರ್ವಹಣೆ ಮತ್ತು ದಿನನಿತ್ಯದ ಆಡಳಿತಾತ್ಮಕ ವೆಚ್ಚಗಳು ಹೆಚ್ಚುತ್ತಿವೆ.

ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಹೇಳಿದ್ದೇನು?

ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಮಾತನಾಡಿ, “ಸಾಮಾನ್ಯವಾಗಿ ಪ್ರತಿ ವರ್ಷ ಶೇಕಡ 8 ರಿಂದ 10 ರಷ್ಟು ಶುಲ್ಕ ಏರಿಕೆಯಾಗುತ್ತಿತ್ತು. ಆದರೆ 2026-27ನೇ ಸಾಲಿನಲ್ಲಿ ಆಯಾ ಶಾಲೆಗಳ ಸೌಲಭ್ಯ ಮತ್ತು ಅಗತ್ಯಕ್ಕೆ ಅನುಗುಣವಾಗಿ ಕನಿಷ್ಠ ಶೇಕಡ 8 ರಿಂದ ಗರಿಷ್ಠ ಶೇಕಡ 15 ರವರೆಗೆ ಶುಲ್ಕ ಹೆಚ್ಚಳವಾಗುವ ನಿರೀಕ್ಷೆಯಿದೆ,” ಎಂದು ತಿಳಿಸಿದ್ದಾರೆ.

ರುಪ್ಸಾ ಅಧ್ಯಕ್ಷರ ಪ್ರಕಟಣೆಯಲ್ಲಿ ಏನಿದೆ?

ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, “ಶಿಕ್ಷಕರ ವೇತನ ಹೆಚ್ಚಳದ ಬೇಡಿಕೆ ಹಾಗೂ ಶಾಲಾ ನಿರ್ವಹಣೆಯ ಹಿತದೃಷ್ಟಿಯಿಂದ ಶುಲ್ಕ ಹೆಚ್ಚಳ ಅನಿವಾರ್ಯವಾಗಿದೆ. ಮುಂಬರುವ ವರ್ಷದಲ್ಲಿ ಶೇಕಡ 15ರಷ್ಟು ಶುಲ್ಕ ಏರಿಕೆ ಮಾಡುವ ಸಾಧ್ಯತೆಯಿದೆ,” ಎಂದು ಹೇಳಿದ್ದಾರೆ.

ಪೋಷಕರಲ್ಲಿ ಆತಂಕ

ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಪೋಷಕರಿಗೆ ಈ ಶುಲ್ಕ ಹೆಚ್ಚಳದ ಸುದ್ದಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಧ್ಯಮ ವರ್ಗದ ಕುಟುಂಬಗಳ ಮೇಲೆ ಈ ನಿರ್ಧಾರವು ದೊಡ್ಡ ಪ್ರಭಾವ ಬೀರಲಿದ್ದು, ಸರ್ಕಾರ ಈ ಬಗ್ಗೆ ಮಧ್ಯಪ್ರವೇಶಿಸಿ ಸಮತೋಲನ ಕಾಯ್ದುಕೊಳ್ಳುತ್ತದೆಯೇ ಎಂದು ಕಾದುನೋಡಬೇಕಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-private-schools-likely-to-increase-fees-by-8-15-in-2026-27-academic-year-know-details-446009.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo