Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ | Karnataka Weather: Rain Alert for 10 More Districts from March 23 to 28 Yellow Alert for Coastal

Karnataka

oi-Shankrappa Parangi

ಬೆಂಗಳೂರು: ಕರ್ನಾಟಕದಲ್ಲಿ ಬೇಸಿಗೆಯಲ್ಲೂ ಮಳೆಯ ಆರ್ಭಟ ಕಾಣುವಂತಾಗಿದೆ. ಬಂಗಾಳಕೊಲ್ಲಿಯ ಆಂಧ್ರಪ್ರದೇಶ ಕರಾವಳಿ ಸಮೀಪ ಹಾಗೂ ಉತ್ತರ ಭಾರತದ ವಿವಿಧ ಕಡೆಗಳಲ್ಲಿ ಮೇಲ್ಮೈ ಸುಳಿಗಾಳಿ ಮತ್ತು ಚಂಡಮಾರುತ ಪ್ರಸರಣದಂತಹ ವೈಪರೀತ್ಯಗಳು ಉಂಟಾಗಿವೆ. ಇದರಿಂದ ರಾಜ್ಯದಲ್ಲಿ ಮಾರ್ಚ್ 23ರಿಂದ 28ರವರೆಗೆ ಸುಮಾರು ಹತ್ತಕ್ಕೂ ಅಧಿಕ ಜಿಲ್ಲೆಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆ ನಿರೀಕ್ಷೆ ಇದೆ.

ಕರಾವಳಿಗೆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಕರ್ನಾಟಕ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಭಾಗಗಳಲ್ಲಿ ಮಾರ್ಚ್ 23ರಿಂದ ಎರಡು ದಿನ ವಿಪರೀತ ಒಣಹವೆ, ಗರಿಷ್ಠ ತಾಪಮಾನದಲ್ಲಿ ಏರಿಕೆ ಕಂಡು ಬರಲಿದೆ. ಅಂದು ಈ ಎರಡು ದಿನ ಉಷ್ಣಅಲೆ (Heat Wave Alert) ಪ್ರಯುಕ್ತ ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ ನೀಡಿದೆ.

Karnataka Weather

ನಂತರ ಮಾರ್ಚ್ 28ರವರೆಗೆ ಇದೇ ಕರಾವಳಿ ಭಾಗದಲ್ಲಿ ಗುಡುಗು ಮಿಂಚು ಸಹಿತ ಹಗುರದಿಂದ ಸಾಧಾರಣ ಮಳೆ ನಿರೀಕ್ಷೆ ಇದೆ. ಆಗ ಗಾಳಿಯ ವೇಗ ಪ್ರತಿ ಗಂಟೆಗೆ ಸುಮಾರು 40-50 ಕಿಲೋ ಮೀಟರ್ ವೇಗದಲ್ಲಿರಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನಾ ವರದಿಯಲ್ಲಿ ತಿಳಿಸಿದ್ದಾರೆ.

ಒಳನಾಡು ಜಿಲ್ಲೆಗಳಿಗೆ ಒಳಣವೆ, ಹಗುರ ಮಳೆ

ಇನ್ನೂ ಮುಂದಿನ 48 ಗಂಟೆ ರಾಜ್ಯದ ವಾತಾವರಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಕರಾವಳಿ ಬಿಟ್ಟರೆ ಒಳನಾಡು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಗಂಭೀರ ಸ್ವರೂಪದ ಬದಲಾವಣೆ ಇಲ್ಲ ಎನ್ನಲಾಗಿದೆ. ಮಾರ್ಚ್ 23ರಿಂದ ಮತ್ತೆ ಪೂರ್ವ ಮುಂಗಾರು ಮಳೆ ಸುರಿಸುವ ಮಾರುತಗಳ ಸಕ್ರಿಯವಾಗಲಿವೆ. ಇದರಿಂದ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೋಲಾರ, ರಾಯಚೂರು, ಬಳ್ಳಾರಿ, ಹಾಸನ, ಕೊಡಗು, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮೂರು ದಿನ ನಿರಂತರವಾಗಿ ಅಲ್ಲದೇ ನಡುವೆ ಒಂದೊಂದು ದಿನ ಗುಡುಗು ಸಹಿತ ವ್ಯಾಪಕ ಮಳೆ ಆಗುವ ಸಂಭವವಿದೆ.

ರಾಮನಗರ, ಮಂಡ್ಯ, ಕೊಪ್ಪಳ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ವಿಜಯಪುರ ಸೇರಿ ಕೆಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆ ಆಗಬಹುದು. ಉಳಿದಂತೆ ರಾಜ್ಯದ ಎಲ್ಲ ಕಡೆಗಳಲ್ಲಿ ಶುಷ್ಕ ವಾತಾವರಣವೇ ಕಂಡು ಬರಲಿದೆ. ಕಳೆದ ವಾರ ಮಳೆಯಿಂದಾಗಿ ತಗ್ಗಿದ್ದ ಗರಿಷ್ಠ ತಾಪಮಾನದಲ್ಲಿ ಮತ್ತೆ ಏರಿಕೆ ಆಗುವ ಸಾಧ್ಯತೆ ಇದೆ.

ರಾಜ್ಯದ ಗರಿಷ್ಠ ತಾಪಮಾನದ ಪಟ್ಟಿ

ಕಲಬುರಗಿ : 36.6 ಡಿಗ್ರಿ ಸೆಲ್ಸಿಯಸ್
ರಾಯಚೂರು : 36.4 ಡಿಗ್ರಿ ಸೆಲ್ಸಿಯಸ್
ಕಾರವಾರ : 35.4 ಡಿಗ್ರಿ ಸೆಲ್ಸಿಯಸ್
ಬಾಗಲಕೋಟೆ : 35.4 ಡಿಗ್ರಿ ಸೆಲ್ಸಿಯಸ್
ಗದಗ : 34.6 ಡಿಗ್ರಿ ಸೆಲ್ಸಿಯಸ್
ಬೀದರ್ : 34.2 ಡಿಗ್ರಿ ಸೆಲ್ಸಿಯಸ್
ವಿಜಯಪುರ : 34.2 ಡಿಗ್ರಿ ಸೆಲ್ಸಿಯಸ್
ಮಂಗಳೂರು : 33.8 ಡಿಗ್ರಿ ಸೆಲ್ಸಿಯಸ್
ಚಿತ್ರದುರ್ಗ : 33.5 ಡಿಗ್ರಿ ಸೆಲ್ಸಿಯಸ್
ಮೈಸೂರು : 33.4 ಡಿಗ್ರಿ ಸೆಲ್ಸಿಯಸ್
ಹೊನ್ನಾವರ : 33.4 ಡಿಗ್ರಿ ಸೆಲ್ಸಿಯಸ್
ಬೆಳಗಾವಿ : 33.2 ಡಿಗ್ರಿ ಸೆಲ್ಸಿಯಸ್
ಧಾರವಾಡ : 32.8 ಡಿಗ್ರಿ ಸೆಲ್ಸಿಯಸ್
ಬೆಂಗಳೂರು ಎಚ್ಎಎಲ್: 32.8 ಡಿಗ್ರಿ ಸೆಲ್ಸಿಯಸ್
ಮಂಡ್ಯ : 32.7 ಡಿಗ್ರಿ ಸೆಲ್ಸಿಯಸ್
ಬೆಂಗಳೂರು ಕೆಐಎಎಲ್: 32.6 ಡಿಗ್ರಿ ಸೆಲ್ಸಿಯಸ್
ಬೆಂಗಳೂರು ನಗರ: 32.6 ಡಿಗ್ರಿ ಸೆಲ್ಸಿಯಸ್

ಬೆಂಗಳೂರು ಹವಾಮಾನ ವರದಿ

ರಾಜಧಾನಿ ಬೆಂಗಳೂರಿನಲ್ಲಿ ಸದ್ಯಕ್ಕೆ ಮಳೆ ಮುನ್ಸೂಚನೆ ಇಲ್ಲ. ಕೆಲವೆಡೆ ಮೋಡ ಕವಿದ ವಾತಾವರಣ ಕಂಡು ಬರುತ್ತಿದೆ. ಮುಂದಿನ ಎರಡು ದಿನ ಇದೇ ರೀತಿಯ ವಾತಾವರಣ ಕಂಡು ಬರಲಿದೆ. ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರಲಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-weather-rain-alert-for-10-more-districts-from-march-23-to-28-yellow-alert-for-coastal-447925.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo