Kerala Assembly Election 2026: ಕೇರಳಂ ವಿಧಾನಸಭೆ ಚುನಾವಣೆ 2026: ಒಂದೇ ಹಂತದಲ್ಲಿ 140 ಸ್ಥಾನಗಳಿಗೆ ಚುನಾವಣೆ | Kerala Assembly Election 2026: Tight LDF–UDF Battle as 2.78 Crore Voters Set to Decide the Future

India

oi-Hitesh Y

Kerala Assembly Election 2026: ಕೇರಳಂ ವಿಧಾನಸಭೆ ಚುನಾವಣೆಯು ಒಂದೇ ಹಂತದಲ್ಲಿ ನಡೆಯಲಿದೆ. 2026ರ ಏಪ್ರಿಲ್ 9ರ ಗುರುವಾರ ಕೇರಳಂ ವಿಧಾನಸಭೆಯ 140 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೇ 4ರಂದು ಮತ ಎಣಿಕೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗವು ಮಾಹಿತಿ ನೀಡಿದೆ. ಕೇರಳಂ ವಿಧಾನಸಭೆ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಲಾಗಿದ್ದು, ಅಲ್ಲಿನ ಚಿತ್ರಣ ಇಲ್ಲಿದೆ.

ಕೇರಳಂ ವಿಧಾನಸಭೆ ಚುನಾವಣೆ 2026 ಹಲವು ಕಾರಣಗಳಿಗೆ ಮಹತ್ವ ಪಡೆದುಕೊಂಡಿದೆ. ಕೇರಳದಲ್ಲಿ ಮುಖ್ಯವಾಗಿ ಎಡ ಪ್ರಜಾಸತ್ತಾತ್ಮಕ ರಂಗ (LDF) ಮತ್ತು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಎಂಬ ಎರಡು ಪ್ರಮುಖ ಒಕ್ಕೂಟಗಳ ನಡುವೆ ಸದಾ ಸ್ಪರ್ಧೆ ನಡೆಯುತ್ತದೆ. ಕೇರಳಂನಲ್ಲಿ 140 ಸದಸ್ಯರ ವಿಧಾನಸಭಾ ಕ್ಷೇತ್ರಗಳಿವೆ. ಕೇರಳದ ವಿಧಾನಸಭೆ ಮ್ಯಾಜಿಕ್ ನಂಬರ್ 71 ಆಗಿದೆ. ಕೇರಳದಲ್ಲಿ 14 ಜಿಲ್ಲೆಗಳಿವೆ. ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ (LDF) ಮೈತ್ರಿಕೂಟವು ಅಧಿಕಾರದಲ್ಲಿದೆ.

Kerala Assembly Election 2026

Kerala Assembly Election 2026 ಕೇರಳಂ ಮತದಾರರ ಸಂಖ್ಯೆ

ಇನ್ನು ಕೇರಳಂನಲ್ಲಿ ಒಟ್ಟು ಮತದಾರರ ಸಂಖ್ಯೆ 2,78,10,942. ಇದರಲ್ಲಿ 1,34,41,490 ಪುರುಷರು, 1,43,69,092 ಮಹಿಳೆಯರು ಮತ್ತು 360 ಜನ ತೃತೀಯಲಿಂಗಿಯರು ಇದ್ದಾರೆ.

ಕೇರಳಂ ಮತದಾರರ ವಿವರ (ಅಂದಾಜು)

ಮಹಿಳಾ ಮತದಾರರು: 1,43,69,092
ಪುರುಷ ಮತದಾರರು: 1,34,41,490
ತೃತೀಯ ಲಿಂಗಿಗಳು: 360
ಒಟ್ಟು ಮತದಾರರು: 2,78,10,942

4.24 ಲಕ್ಷ ಯುವ ಮತದಾರರು

ಇನ್ನು ಕೇರಳಂನಲ್ಲಿ ಮೊದಲ ಬಾರಿ ಮತಚಲಾಯಿಸುತ್ತಿರುವವರ ಸಂಖ್ಯೆಯು 4.24 ಲಕ್ಷವಿದೆ.

ಕೇರಳಂ ರಾಜಕೀಯ ಪಕ್ಷಗಳು

ಕೇರಳದಲ್ಲಿ ಈ ಬಾರಿಯೂ ಎಂದಿನಂತೆ ಎಲ್‌ಡಿಎಫ್ ಹಾಗೂ ಯುಡಿಎಫ್‌ನ ನಡುವೆ ನೇರ ಪೈಪೋಟಿ ಇದೆ. 2026ರ ವಿಧಾನಸಭೆ ಚುನಾವಣಾ ಮೈತ್ರಿ ಈ ರೀತಿ ಇದೆ.

ಕೇರಳಂ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ

ಇನ್ನು ವಿಧಾನಸಭೆ ಚುನಾವಣೆ ನಡೆಯುತ್ತಿರುವ ವಿವಿಧ ರಾಜ್ಯಗಳಲ್ಲಿ ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು ನಡೆಸುತ್ತಿದೆ. ಕೇರಳದಲ್ಲೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು ನಡೆಸಲಾಗಿದ್ದು, ಇದರಲ್ಲಿ 9 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.

ಎಲ್‌ಡಿಎಫ್

———–
ಸಿಪಿಎಂ
ಸಿಪಿಐ
ಕೇರಳ ಕಾಂಗ್ರೆಸ್ (ಎಂ)
ಭಾರತೀಯ ಸಮಾಜವಾದಿ ಜನತಾ ದಳ
ಎನ್‌ಸಿಪಿ (ಎಸ್)
ನ್ಯಾಷನಲ್ ಸೆಕ್ಯೂಲರ್ ಕಾನ್ಫರೆನ್ಸ್‌
ಆರ್‌ಜೆಡಿ
ಐಎನ್‌ಎಲ್
ಕಾಂಗ್ರೆಸ್ – ಎಸ್
ಕೇರಳ ಕಾಂಗ್ರೆಸ್ (ಬಿ)
ಜೆಸಿಕೆ

ಯುಡಿಎಫ್

———–
ಕಾಂಗ್ರೆಸ್
ಮುಸ್ಲಿಂ ಲೀಗ್
ಕೇರಳ ಕಾಂಗ್ರೆಸ್
ಕೇರಳ ಕಾಂಗ್ರೆಸ್-ಜಾಕೋಬ್
ಎನ್‌ಸಿಕೆ
ಆರ್‌ಪಿಎಂಐ
ಆರ್‌ಎಸ್‌ಪಿ
ಆರ್‌ಸಿಪಿ
ಸಿಎಂಪಿ
ಜೆಎಸ್‌ಎಸ್
ಫಾರ್ವರ್ಡ್ ಬ್ಲಾಕ್
ಜೆಆರ್‌ಪಿ
ಟಿಎಂಸಿ

ಎನ್‌ಡಿಎ

——–
ಬಿಜೆಪಿ
ಬಿಡಿಜೆಎಸ್
ಟ್ವಿಂಟಿ – 20
ಎಚ್‌ಎಎಂ ಪಾರ್ಟಿ
ಎಐಎಡಿಎಂಕೆ
ಕಾಮರಾಜ್ ಕಾಂಗ್ರೆಸ್

ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ಪಕ್ಷಗಳು
ಎಎಪಿ
ಎಸ್‌ಡಿಪಿಐ
ಬಿಎಸ್‌ಬಿ
ವೆಲ್ಫೇರ್ ಪಾರ್ಟಿ

2021 ರಲ್ಲಿ ಪ್ರಮುಖ ಮೈತ್ರಿಗಳು, ಪಕ್ಷ, ಸ್ಥಾನಗಳು, ಮತ ಹಂ ಹಂಚಿಕೆ

ಎಲ್‌ಡಿಎಫ್- 45.43% ಮತ
———-
ಸಿಪಿಎಂ (62 ಸ್ಥಾನ)- 25.38%
ಸಿಪಿಐ (17 ಸ್ಥಾನ)- 7.58%
ಕೇರಳ ಕಾಂಗ್ರೆಸ್ (ಎಂ) 5 ಸ್ಥಾನ- 3.28%
ಜೆಡಿಎಸ್- 2 ಸ್ಥಾನ- 1.28%
ಎನ್‌ಸಿಪಿ- 2- 0.99%
ನ್ಯಾಷನಲ್ ಜೆಡಿಎಸ್ ಕಾನ್ಫರೆನ್ಸ್‌ – 1
ಎಲ್‌ಜೆಡಿ- 1
ಐಎನ್‌ಎಲ್- 1
ಕಾಂಗ್ರೆಸ್ (ಎಸ್) – 1
ಕೇರಳ ಕಾಂಗ್ರೆಸ್ (ಬಿ) -1
ಜೆಸಿಕೆ-1
ಎಲ್‌ಡಿಎಫ್ ಐಎನ್‌ಡಿ-5

ಯುಡಿಎಫ್- 39.47% ಮತ
———–
ಕಾಂಗ್ರೆಸ್- 21 ಸ್ಥಾನ- 25.12%
ಮೈತ್ರಿಕೂಟ – 15- 8.27%
ಕೇರಳ ಕಾಂಗ್ರೆಸ್- 2 – 2.66%
ಎನ್‌ಸಿಕೆ-1-
ಕೇರಳ ಕಾಂಗ್ರೆಸ್-ಜೆಕೋಬ್-1- 0.41%
ಆರ್‌ಎಂಪಿಐ- 1- 0.031%
ಆರ್‌ಎಸ್‌ಪಿ-
ಸಿಎಂಪಿ

ಎನ್‌ಡಿಎ- 12.41%
———-
ಬಿಜೆಪಿ- 11.30%
ಬಿಡಿಜೆಎಸ್- 1.06%
ಎಐಎಡಿಎಂಕೆ- 0.05%
ಕಾಮರಾಜ್ ಕಾಂಗ್ರೆಸ್,
JRP

Disclaimer: This content was automatically imported from a third-party source via RSS feed. The original source is: https://kannada.oneindia.com/news/india/kerala-assembly-election-2026-tight-ldf-udf-battle-as-2-78-crore-voters-set-to-decide-the-future-447173.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo