Kim Jong Un: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಗಳಿಗೆ ಉತ್ತರಾಧಿಕಾರಿ ಪಟ್ಟ | Kim Jong Un Chooses Teen Daughter As Heir And Here Is The Complete Details About This Decision

International

-Malathesha M

ಕಿಮ್ ಜಾಂಗ್ ಉನ್ ಹೆಸರು ಇಷ್ಟುದಿನ ಬರೀ ಪರಮಾಣು ಅಸ್ತ್ರಗಳ ವಿಚಾರದಲ್ಲಿ ಸದ್ದು ಮಾಡುತ್ತಾ ಇತ್ತು. ಅದರಲ್ಲೂ ಉತ್ತರ ಕೊರಿಯಾ ಬಳಿ ಇರುವ ನ್ಯೂಕ್ಲಿಯರ್ ಬಾಂಬ್‌ಗಳನ್ನು ಹೆಚ್ಚಿಸುತ್ತಾ ಇದೇ ಕಿಮ್ ಜಾಂಗ್ ಉನ್ ಭಯ ಹೆಚ್ಚು ಮಾಡಿದ್ದು ಗಮನ ಸೆಳೆದಿತ್ತು. ಆದರೆ ಇದೀಗ ದಿಢೀರ್, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತನ್ನ 13 ವರ್ಷದ ಮಗಳಿಗೆ ಉತ್ತರಾಧಿಕಾರಿ ಪಟ್ಟವನ್ನು ಕೊಟ್ಟಿದ್ದಾನೆ. ಕಿಮ್ ಜಾಂಗ್ ಉನ್ ತನ್ನ 13 ವರ್ಷದ ಮಗಳಾದ ಕಿಮ್ ಜು ಆಯೆಗೆ ಮುಂದಿನ ಅಧ್ಯಕ್ಷೆ ಆಗುವ ಅವಕಾಶ ನೀಡಿದ್ದು, ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಈ ಕುರಿತು ದಕ್ಷಿಣ ಕೊರಿಯಾ ಗುಪ್ತಚರ ಸಂಸ್ಥೆ ಮಾಹಿತಿ ನೀಡಿದ್ದು, ಉತ್ತರ ಕೊರಿಯಾ ಶತ್ರುಗಳಿಗೆ ನಡುಕ ಶುರುವಾಗಿದೆ.

ಉತ್ತರ ಕೊರಿಯಾ ಹೆಸರು ಕೇಳಿದರೆ ಸಾಕು ಜಗತ್ತಿನ ಯಾವುದೇ ದೇಶವಾದರೂ ಒಮ್ಮೆ ಚಿಂತೆ ಮಾಡುತ್ತದೆ ಎನ್ನಬಹುದು. ಯಾಕಂದ್ರೆ ಉತ್ತರ ಕೊರಿಯಾ ಆಳುತ್ತಿರುವ ಹುಚ್ಚು ದೊರೆ ಕಿಮ್ ಜಾಂಗ್ ಉನ್ ಎಲ್ಲಾ ಕಡೆ ಹವಾ ಇಟ್ಟಿದ್ದಾನೆ. ಅದ್ರಲ್ಲೂ ಕಿಮ್ ತನ್ನ ಬಳಿ ಇರುವ ನ್ಯೂಕ್ಲಿಯರ್ ಬಾಂಬ್ ಹೊರ ತೆಗೆದು ಪದೇ ಪದೇ ಬೆದರಿಕೆ ಹಾಕುವುದು ಕಾಮನ್ ಆಗಿದೆ. ಇಂತಹ ಸಮಯದಲ್ಲೇ ತನ್ನ ದೇಶದ ಮುಂದಿನ ಅಧಿಕಾರ ತನ್ನ ಮಗಳಿಗೆ ಸಿಗಬೇಕು ಅನ್ನೋ ಮಾಸ್ಟರ್ ಪ್ಲಾನ್ ಮಾಡಿರುವ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಈ ಬಗ್ಗೆ ಉತ್ತರ ಕೊರಿಯಾ ಶತ್ರು ದೇಶ ದಕ್ಷಿಣ ಕೊರಿಯಾ ಮಹತ್ವದ ಮಾಹಿತಿಯನ್ನ ನೀಡಿದೆ. ಅಲ್ಲದೆ ತನ್ನ 13 ವರ್ಷದ ಮಗಳಾದ ಕಿಮ್ ಜು ಆಯೆಗೆ ಅಧಿಕಾರ ಸಿಗುವಂತೆ ಎಲ್ಲಾ ತಯಾರಿ ನಡೆಸಿರುವುದು ಇದೀಗ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ.

Kim Jong Un

ಭೀಕರ ಆರೋಗ್ಯ ಸಮಸ್ಯೆ ಇದೆಯಾ?

ಕಿಮ್ ಹೆಸರು ಕೇಳಿದ್ರೆ ಹೊಟ್ಟೆಯಲ್ಲಿ ಇರುವ ಮಗು ಕೂಡ ಒಂದು ಕ್ಷಣ ಹೆದರುತ್ತದೆ ಅನ್ನೋ ಅತಿರೇಕದ ಮಾತು ಇವೆ. ಯಾಕಂದ್ರೆ ಉತ್ತರ ಕೊರಿಯಾ ಸರ್ವಾಧಿಕಾರಿಯ ಕೋಪ & ತಾಪ ಅಷ್ಟು ಭಯಂಕರವಾಗಿ ಇರುತ್ತದೆ ಅನ್ನೋದು ಇದರ ಅರ್ಥ. ಅದರಲ್ಲೂ ಅಮೆರಿಕ ದೇಶದ ವಿರುದ್ಧ ಕಿಮ್ ಜಾಂಗ್ ಉನ್ ಭಾರಿ ದೊಡ್ಡ ಪ್ಲಾನ್ ಮಾಡಿರುವ ಮಾತುಗಳು ಕೇಳಿ ಬರ್ತಿವೆ. ಇಂತಹ ಸಮಯದಲ್ಲೇ ಕಿಮ್ ಜಾಂಗ್ ಉನ್ ತನ್ನ ಅಧಿಕಾರ ತ್ಯಾಗ ಮಾಡುವ ಬಗ್ಗೆ ನಿರ್ಧಾರ ಮಾಡಿರುವುದು ಭಾರಿ ದೊಡ್ಡ ಚರ್ಚೆಗೆ ವೇದಿಕೆಯನ್ನ ಒದಗಿಸಿದೆ. ಅಲ್ಲದೆ ಮತ್ತೊಂದು ಕಡೆ ಕಿಮ್ ಜಾಂಗ್ ಉನ್ ಭೀಕರ ಆರೋಗ್ಯ ಸಮಸ್ಯೆ ಎದುರಿಸುತ್ತಾ ಇದ್ದಾನೆ ಎಂಬುದಕ್ಕೆ ಇದು ಇಂಬು ಕೊಡುತ್ತಿದೆ.

ಕಿಮ್ ಕುಟುಂಬದಲ್ಲೇ ಕಿರಿಕ್ ಶುರುವಾಯ್ತಾ?

ಹಾಗೇ ಇನ್ನೊಂದು ಕಡೆ ಕಿಮ್ ಜಾಂಗ್ ಉನ್ ಕುಟುಂಬದಲ್ಲೇ ಇದೀಗ ಕಿರಿಕ್ ಶುರುವಾಗಿದೆಯಾ?? ಎಂಬ ಅನುಮಾನ ಕೂಡ ಇದೀಗ ಮೂಡಿದೆ. ಯಾಕಂದ್ರೆ ಈ ಹಿಂದೆ ಕಿಮ್ ಜಾಂಗ್ ಉನ್ ತಂಗಿಗೆ ಉತ್ತರಾಧಿಕಾರ ಪಟ್ಟ ಸಿಗಲಿದೆ ಎನ್ನಲಾಗಿತ್ತು. ಆದರೆ ಇದೀಗ ತನ್ನ ಮಗಳನ್ನೇ ಆ ಪಟ್ಟಕ್ಕೆ ಕೂರಿಸಿ ಹೋಗಲು ಕಿಮ್ ಪ್ಲಾನ್ ಮಾಡಿರುವ ಚರ್ಚೆ ಶುರುವಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/kim-jong-un-chooses-teen-daughter-as-heir-and-here-is-the-complete-details-about-this-decision-011-443759.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo