
Entertainment
oi-Manohara M
ಬೆಂಗಳೂರು: ಸಿನಿಮಾ ನಿರ್ಮಾಪಕ ಹಾಗೂ ಉದ್ಯಮಿ, ಎಆರ್ವಿ ಗ್ರೂಪ್ ಮಾಲೀಕ ಅರವಿಂದ್ ರೆಡ್ಡಿಗೆ 7 ಕೋಟಿ ರೂಪಾಯಿ ಹಣದ ಬೇಡಿಕೆ ಇಟ್ಟು ಬೆದರಿಕೆ ಪತ್ರ ಕಳುಹಿಸಿದ್ದ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟಿ ಹಾಗೂ ಬಿಗ್ಬಾಸ್ ಖ್ಯಾತಿಯ ಕೃಷಿ ತಾಪಂಡಗೆ (Krishi Thapanda) ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಎಎಲ್ ಪೊಲೀಸರು ವೈಶಾಖ್ ಎಂಬಾತನನ್ನು ಈಗಾಗಲೇ ಬಂಧಿಸಿದ್ದು, ಆತ ನಟಿ ಕೃಷಿ ತಾಪಂಡ ಅವರ ಆಪ್ತ ಎಂದು ಪೊಲೀಸರು ತಿಳಿಸಿದ್ದಾರೆ.
ಕೊರಿಯರ್ ಮೂಲಕ ಬೆದರಿಕೆ ಪತ್ರ
ಜನವರಿಯಲ್ಲಿ ಬನಶಂಕರಿ ಪ್ರದೇಶದಿಂದ ಕೊರಿಯರ್ ಮೂಲಕ ಅರವಿಂದ್ ರೆಡ್ಡಿ ಅವರಿಗೆ ಬೆದರಿಕೆ ಪತ್ರ ಕಳುಹಿಸಲಾಗಿತ್ತು. ಈ ಪತ್ರದಲ್ಲಿ ಮಹಿಳೆಯೊಬ್ಬರಿಗೆ ಸಂಬಂಧಿಸಿದ ವಿಚಾರವನ್ನು “ಬಗೆಹರಿಸಬೇಕು” ಎಂದು ಎಚ್ಚರಿಕೆ ನೀಡಲಾಗಿದ್ದು, ಅಲ್ಲದೆ 7 ಕೋಟಿ ರೂಪಾಯಿ ಹಣ ನೀಡದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿತ್ತು. ಇದೇ ಬೆದರಿಕೆ ಪತ್ರದಲ್ಲಿ ನಟಿ ಕೃಷಿ ತಾಪಂಡ ಅವರು ಹಿಂದೆ ಅರವಿಂದ್ ರೆಡ್ಡಿ ವಿರುದ್ಧ ನೀಡಿದ್ದ ದೂರಿನ ಉಲ್ಲೇಖವೂ ಇರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಬೆದರಿಕೆ ಪತ್ರ ಪಡೆದ ಬಳಿಕ ಅರವಿಂದ್ ರೆಡ್ಡಿ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಮೊದಲು ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಪೊಲೀಸರು ವಿಚಾರಣೆ ನಡೆಸಿದರು. ಆತ ತನ್ನ ಮಾಲೀಕರ ಸೂಚನೆಯಂತೆ ಕೊರಿಯರ್ ಕಳುಹಿಸಿದ್ದಾಗಿ ಹೇಳಿಕೆ ನೀಡಿದ್ದ. ಈ ಸುಳಿವಿನ ಆಧಾರದ ಮೇಲೆ ಪೊಲೀಸರು ನಟಿಯ ಆಪ್ತ ವೈಶಾಖ್ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ವೈಶಾಖ್ ಈ ಬೆದರಿಕೆ ಪತ್ರ ಕಳುಹಿಸುವ ಸಮಯದಲ್ಲಿ ನಟಿ ಕೃಷಿ ತಾಪಂಡ ಅವರ ನಿವಾಸದಲ್ಲೇ ಇದ್ದ ಎನ್ನಲಾಗಿದೆ. ಬಂಧನದ ಬಳಿಕ ವೈಶಾಖ್ನ ಮೊಬೈಲ್ ಫೋನ್ ವಶಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸಿದಾಗ, ಆ ಮೊಬೈಲ್ ಮನೆಯಲ್ಲಿ ಪತ್ತೆಯಾಗಲಿಲ್ಲ. ಬಂಧನದ ನಂತರ ಅದನ್ನು ಬೇರೆಡೆಗೆ ಸ್ಥಳಾಂತರಿಸಿರುವ ಅನುಮಾನವೂ ಇದೀಗ ವ್ಯಕ್ತವಾಗಿದೆ.
ಕೃಷಿ ತಾಪಂಡಗೆ ನೋಟಿಸ್
ಈ ಹಿನ್ನೆಲೆ ಪ್ರಕರಣದ ಸಂಬಂಧ ಹೆಚ್ಚಿನ ಮಾಹಿತಿ ಪಡೆಯಲು ನಟಿ ಕೃಷಿ ತಾಪಂಡಗೆ ಹೆಚ್ಎಎಲ್ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಈ ಪ್ರಕರಣದಲ್ಲಿ ಬೆದರಿಕೆ ಅಥವಾ ಬ್ಲ್ಯಾಕ್ಮೇಲ್ ಯತ್ನ ನಡೆದಿದೆಯೇ? ಇದರಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರೆಯೇ? ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸ್ಯಾಂಡಲ್ವುಡ್ ಮತ್ತು ಬಿಗ್ಬಾಸ್ ಮೂಲಕ ಜನಪ್ರಿಯತೆ ಪಡೆದಿರುವ ನಟಿಗೆ ನೋಟಿಸ್ ನೀಡಿರುವುದು ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮುಂದಿನ ತನಿಖೆಯಿಂದ ಸತ್ಯಾಂಶ ಏನೆಂಬುದು ಬಹಿರಂಗವಾಗಲಿದೆ.
ಅರವಿಂದ್ ರೆಡ್ಡಿ ಹಾಗೂ ಕೃಷಿ ತಾಪಂಡ ಅವರ ನಡುವಿನ ಕಿತ್ತಾಟವು ಇತ್ತೀಚೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಇದೇ ಪ್ರಕರಣದಲ್ಲಿ ಉದ್ಯಮಿಯ ಬಂಧನವಾಗಿ ಜಾಮೀನಿನ ಮೇಲೆ ಹೊರಬಂದಿದ್ದರು. ಬಳಿಕ ಇಬ್ಬರೂ ಲಿವಿಂಗ್ ಟುಗೆದರ್ನಲ್ಲಿದ್ದ ವಿಷಯವನ್ನು ಅರವಿಂದ್ ರೆಡ್ಡಿ ಬಹಿರಂಗಪಡಿಸಿದ್ದರು. ಈಗ ಮತ್ತೆ ಇದೇ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
-

ಗಿಲ್ಲಿ ಮೇಲೆ ಸಿನಿಮಾ ಪ್ರಚಾರಕ್ಕೆ ಬಾರದ ಆರೋಪ; ವೈರಲ್ ಆಯ್ತು ಪ್ರಮೋಷನ್ ಮಾಡಿರುವ ಹಳೆಯ ವಿಡಿಯೋ
-

ಅಪ್ಪು ಹೀರೋ ಆಗಿದ್ದು ನನ್ನಿಂದ, ನನಗೆ ಮೋಸ ಮಾಡಿದವರನ್ನ ದೇವರೇ ಕರ್ಕೊಂಡ: ಕನಕಪುರ ಶ್ರೀನಿವಾಸ್
-

ಗಂಡಸಾದ್ರೆ, ಅವರಪ್ಪನಿಗೇ ಹುಟ್ಟಿದ್ರೆ ನನ್ನ ಮುಂದೆ ನಿಲ್ಲಲಿ: ಪ್ರೇಮ್, ಧ್ರುವ ಮೇಲೆ ರೊಚ್ಚಿಗೆದ್ದ ಕನಕಪುರ ಶ್ರೀನಿವಾಸ್
-

Gilli: ಗಿಲ್ಲಿ ನಟನ ವಿರುದ್ಧ ದೂರು, ಬಿಗ್ಬಾಸ್ ಗೆದ್ದ ಬೆನ್ನಲ್ಲೇ ದೊಡ್ಡ ಸಂಕಷ್ಟ
-

ಕರ್ನಾಟಕದ 4 ಏರ್ಪೋರ್ಟ್ ಹೆಸರು ಮರುನಾಮಕರಣ ಕೇಂದ್ರಕ್ಕೆ ಸಂಸದ ಜಗದೀಶ್ ಶೆಟ್ಟರ್ ಮನವಿ
-

Gold Rate Feb 5 2026: ಚಿನ್ನ ಪ್ರಿಯರಿಗೆ ಭರ್ಜರಿ ಗುಡ್ನ್ಯೂಸ್: ಚಿನ್ನದ ಬೆಲೆ 5,020 ರೂ. ಕಡಿಮೆ
-

ದಿನ ಭವಿಷ್ಯ ಫೆಬ್ರವರಿ 5: ಯಾವ ರಾಶಿಯವರ ಜಾತಕ ಹೇಗಿರಲಿದೆ ಎಂದು ತಿಳಿಯಿರಿ
-

Bengaluru PG: ಬೆಂಗಳೂರಿನ ಪಿ.ಜಿಗಳಿಗೆ ಬೀಗ ಹಾಕುತ್ತಿರುವ ಜಿಬಿಎ: ಕಾರಣವೇನು, ಇಲ್ಲಿದೆ ಮಾಹಿತಿ
-

ಬೆಂಗಳೂರು-ಪುಣೆ ಹೈಸ್ಪೀಡ್ ರೈಲು: ಜೋಶಿ, ಕುಮಾರಸ್ವಾಮಿ ನಡೆಗೆ ಎಂ.ಬಿ. ಪಾಟೀಲ್ ಮೆಚ್ಚುಗೆ
-

ಹಾಸನಕ್ಕೆ ಡಬಲ್ ಧಮಾಕ: ಮೆಗಾ ಡೇರಿಗೆ 150 ಕೋಟಿ ರೂ. ಬಂಪರ್ ಕೊಡುಗೆ, ರೈಲು ನಿಲ್ದಾಣಗಳಿಗೆ ಹೈಟೆಕ್ ಸ್ಪರ್ಶ
-

ಪಾಕಿಸ್ತಾನ ಮಾನ ಮತ್ತೊಮ್ಮೆ ಹರಾಜು, ಬಲೂಚಿಸ್ತಾನ ಘಟನೆಯಿಂದ ಬಯಲಾಯ್ತು ಕರಾಳ ಮುಖ | Balochistan Crisis
-

Horoscope February 6: ಫೆಬ್ರವರಿ 6 ದಿನ ಭವಿಷ್ಯ: ಯಾವ ರಾಶಿಯವರು ಏನು ಪಾಲನೆ ಮಾಡಬೇಕು ತಿಳಿಯಿರಿ
-

ಅಪ್ಪು ಹೀರೋ ಆಗಿದ್ದು ನನ್ನಿಂದ, ನನಗೆ ಮೋಸ ಮಾಡಿದವರನ್ನ ದೇವರೇ ಕರ್ಕೊಂಡ: ಕನಕಪುರ ಶ್ರೀನಿವಾಸ್
-

SSLC Exam 2026: ಹಿಂದಿ ಹೇರಿಕೆ ವಿರುದ್ಧ ಧ್ವನಿ; ತೃತೀಯ ಭಾಷೆ ‘ಪಾಸ್’ ಕಡ್ಡಾಯ ಮಾಡದಂತೆ ಸರ್ಕಾರಕ್ಕೆ ಒತ್ತಾಯ
-

ಬರಗಾಲದಲ್ಲೂ ಬಡವರಿಗೆ ಯುಗಾದಿ ಹಬ್ಬ ತರುವ ಹುಣಸೆ: ತುಮಕೂರಿನ ತೋವಿನಕೆರೆಯಲ್ಲಿ ಫೆಬ್ರವರಿ 23ಕ್ಕೆ ಹುಣಸೆ ಕಾರ್ಯಾಗಾರ
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/krishi-thapanda-served-police-notice-in-7-crore-blackmail-case-linked-to-producer-arvind-reddy-442855.html. xn--babytilbehr-pgb.com does not claim ownership of this content. All rights remain with the original publisher.
