
Karnataka
oi-Shankrappa Parangi
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಸಾರಿಗೆ ಬಸ್ಗಳ ಹೊರ ಭಾಗದಲ್ಲಿ ಅಳವಡಿಸಿದ್ದ ತಂಬಾಕು ಉತ್ಪನ್ನಗಳ ಜಾಹೀರಾತು ನಿರ್ಬಂಧಿಸಿದ್ದ ಸರ್ಕಾರ ತೆರವಿಗೆ ಎರಡು ವಾರಗಳ ಗಡುವು ನೀಡಿತ್ತು. ಇದೀಗ ನಿಯಮಗಳನ್ವಯ ಜಾಹೀರಾತು ಅಳವಡಿಕೆಯು ಸಾರಿಗೇತರ ಆದಾಯ ಮೂಲವಾಗಿದೆ. ಬಸ್ಸುಗಳಲ್ಲಿನ ಜಾಹೀರಾತುಗಳನ್ನು ಅಕ್ರಮವಾಗಿ ತೆರವುಗೊಳಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಮೂಲಕ ಸರ್ಕಾರ ಉಲ್ಟಾ ಹೊಡೆಯಿತಾ ಎಂಬ ಅನುಮಾನ ವ್ಯಕ್ತವಾಗಿದೆ.
ಇತ್ತೀಚೆಗೆ ಬಸ್ಗಳ ಮೇಲೆ ಅಳವಡಿಸಿದ್ದ ಸಿಗರೇಟ್, ಪಾನ್ ಮಸಾಲ ಹಾಗೂ ಇತರ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಸಾರ್ವಜನಿಕರು, ಕನ್ನಡ ಪರ ಸಂಘಟನೆಗಳು ತೆರವು ಮಾಡಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಒಂದು ರೀತಿಯ ಅಭಿಯಾನ ಆರಂಭವಾಗಿತ್ತು. ಅದರ ಬೆನ್ನಲ್ಲೆ ಎಚ್ಚೆತ್ತ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಬಸ್ಗಳ ಮೇಲೆ ಜಾಹೀರಾತು ಅಳವಡಿಕೆ ನಿರ್ಬಂಧಿಸಿ ಆದೇಶಿಸಿದ್ದರು. ಆ ಜಾಹೀರಾತುಗಳ ತೆರವಿಗೆ ಫೆಬ್ರವರಿ 18ರವರೆಗೆ ಗಡುವು ನೀಡಲಾಗಿತ್ತು. ಇದು ಸಾರ್ವಜನಿಕರ ಆಕ್ರೋಶಕ್ಕೆ ಸಿಕ್ಕ ಜಯ ಎಂದು ಬಣ್ಣಿಸಲಾಗಿತ್ತು.

ಜಾಹೀರಾತು ಅಕ್ರಮ ತೆರವು ಅಪರಾಧ
ಆದರೆ ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ನೀಡಿರುವ ಟಿಪ್ಪಣಿಯಲ್ಲಿ ಬಸ್ಸುಗಳಲ್ಲಿನ ಜಾಹೀರಾತುಗಳನ್ನು ಅಕ್ರಮವಾಗಿ ತೆರವುಗೊಸಿದನ್ನು ಅಪರಾಧ ಎಂದಿದೆ. ಅವರ ಬಗ್ಗೆ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಹೌದು, ಕೆಎಸ್ಆರ್ಟಿಸಿ ನೀಡಿದ ಮಾಹಿತಿಯಲ್ಲಿ ‘ಮೇಲ್ಕಂಡ ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ, ನಿಗಮದ ಸಾರಿಗೇತರ ಆದಾಯ ಹೆಚ್ಚಿಸಲು ಹಲವಾರು ವರ್ಷಗಳಿಂದ ನಿಗಮದ ಬಸ್ಸುಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಾರಿಗೆ ಮತ್ತು ಮುಜರಾಯಿ ಸಚಿವರ ಟಿಪ್ಪಣಿಯಂತೆ, ಬಸ್ಸುಗಳ ಜಾಹೀರಾತುಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಜಾಹೀರಾತುಗಳನ್ನು ದಿನಾಂಕ 15-02-2026 ರೊಳಗಾಗಿ ತೆರವುಗೊಳಿಸಲು ಈಗಾಗಲೇ ಸೂಚನೆ ನೀಡಿದ್ದಾರೆ.
ಜಾಹೀರಾತಿಗೆ ಅವಕಾಶ ಇದೆ: ಆಕ್ಷೇಪಣೆ ಸಲ್ಲಿಸಿ
ನಿಗಮದ ಬಸ್ಸುಗಳ ಮೇಲೆ Advertisement Standard Council of India Code (ASCI Code) ನಿಯಮಾವಳಿಗಳನ್ವಯ ಜಾಹೀರಾತುಗಳನ್ನು ಪ್ರದರ್ಶಿಸಲು ಅವಕಾಶವಿರುತ್ತದೆ. ನಿಗಮದ ವಾಹನಗಳ ಮೇಲೆ ಪ್ರದರ್ಶಿತವಾಗುತ್ತಿರುವ ಜಾಹೀರಾತುಗಳು ನಿಗಮಕ್ಕೆ ಸಾರಿಗೇತರ ಆದಾಯದ ಮೂಲವಾಗಿರುತ್ತದೆ. ಆದಾಗ್ಯೂ, ನಿಗಮದ ಬಸ್ಸುಗಳ ಮೇಲೆ ಪ್ರದರ್ಶಿತವಾಗುತ್ತಿರುವ ಜಾಹೀರಾತಿನ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆ/ದೂರುಗಳು ಇದ್ದಲ್ಲಿ, ಲಿಖಿತ ಮನವಿಯನ್ನು ಪಡೆದು, ಈ ಸಂಬಂಧ ಕರಾರಿನ ನಿಯಮಾವಳಿಯಂತೆ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವುದು.
ಆದರೆ, ಕೆಲವು ವ್ಯಕ್ತಿಗಳು ಸಾರ್ವಜನಿಕ ಬಸ್ಸುಗಳಲ್ಲಿನ ಜಾಹೀರಾತುಗಳನ್ನು ಅಕ್ರಮವಾಗಿ ತೆರವುಗೊಳಿಸುತ್ತಿರುವುದು ಕಾನೂನು ಬಾಹಿರವಾಗಿರುತ್ತದೆ. ಅಂತಹ ವ್ಯಕ್ತಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ FIR ದಾಖಲಿಸಿ, ಎಲ್ಲಾ ರೀತಿಯ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದೆ” ಎಂದು ತಿಳಿಸಿದೆ.
ಅಲ್ಲದೇ ಬಸ್ ನಿಲ್ದಾಣದ ಸಿಬ್ಬಂದಿಗಳು, ಚಾಲನಾ ಸಿಬ್ಬಂದಿಗಳು ಹಾಗೂ ಇತರೆ ಸಿಬ್ಬಂದಿಗಳಿಗೂ ಈ ಸಂಬಂಧ ಸೂಕ್ತ ತಿಳುವಳಿಕೆ /ನಿರ್ದೇಶನ ನೀಡಬೇಕು. ಜೊತೆಗೆ ಈ ಮೇಲ್ಕಂಡ ಅಂಶಗಳ ಸಂಬಂಧ ಅಗತ್ಯ ಕ್ರಮ ಕೈಗೊಂಡಿದ್ದರ ಕುರಿತು ಅಗತ್ಯ ವರದಿ ನೀಡುವಂತೆ ಸಾರಿಗೆ ಸಂಸ್ಥೆ ತಿಳಿಸಿದೆ.
ಈ ಮೂಲಕ ಸಾರಿಗೇತರ ಆದಾಯಕ್ಕೆ ಅವಕಾಶ ಇದೆ ಎಂದು ಮತ್ತೆ ಜಾಹೀರಾತು ಹಾಕಲು ಸರ್ಕಾರ ಮುಂದಾಯಿತಾ?. ಈಗಾಗಲೇ ಜಾಹೀರಾತು ಕಿತ್ತು ಸಾಮಾಜಿಕ ಕಳಕಳಿ ಮೆರೆದ ವ್ಯಕ್ತಿ, ಸಂಘಟನೆಗಳ ಕಾರ್ಯವನ್ನು ಅಪರಾಧವೆಂದು ನಿರ್ಧರಿಸಿ ಕ್ರಮಕ್ಕೆ ಮುಂದಾಗುವ ಮೂಲಕ ತಾನೇ ನೀಡಿದ್ದ ಆದೇಶ ಮರೆಯಿತಾ? ಈ ವಿಚಾರದಲ್ಲಿ ಸರ್ಕಾರ ಧ್ವಂಧ್ವ ನಿಲುವು ತಾಳಿತಾ? ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ.
-

BMTC-Namma Metro: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್
-

Nelamangala National Highway 48: ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಖಾಸಗಿ ಬಸ್ ಅಪಘಾತ: 40 ಜನ ಪಾರು
-

Gold Investment: ಚಿನ್ನ ಖರೀದಿಸಿ ನಷ್ಟಕ್ಕೆ ತುತ್ತಾಗದಿರಿ: ಭಾರತೀಯರಿಗೆ ಮುಕೇಶ್ ಅಂಬಾನಿ ಕಿವಿಮಾತು
-

ಅಪ್ಪು ಹೀರೋ ಆಗಿದ್ದು ನನ್ನಿಂದ, ನನಗೆ ಮೋಸ ಮಾಡಿದವರನ್ನ ದೇವರೇ ಕರ್ಕೊಂಡ: ಕನಕಪುರ ಶ್ರೀನಿವಾಸ್
-

ಬರಗಾಲದಲ್ಲೂ ಬಡವರಿಗೆ ಯುಗಾದಿ ಹಬ್ಬ ತರುವ ಹುಣಸೆ: ತುಮಕೂರಿನ ತೋವಿನಕೆರೆಯಲ್ಲಿ ಫೆಬ್ರವರಿ 23ಕ್ಕೆ ಹುಣಸೆ ಕಾರ್ಯಾಗಾರ
-

ಹಾಸನಕ್ಕೆ ಡಬಲ್ ಧಮಾಕ: ಮೆಗಾ ಡೇರಿಗೆ 150 ಕೋಟಿ ರೂ. ಬಂಪರ್ ಕೊಡುಗೆ, ರೈಲು ನಿಲ್ದಾಣಗಳಿಗೆ ಹೈಟೆಕ್ ಸ್ಪರ್ಶ
-

Gold Price: ಚಿನ್ನ-ಬೆಳ್ಳಿ ದರದಲ್ಲಿ ಮತ್ತೆ ಹಾವು-ಏಣಿ ಆಟ: ಒಂದೇ ದಿನದಲ್ಲಿ ದಾಖಲೆಯ ಏರಿಕೆ ಕಂಡ ಬಂಗಾರ
-

ಪಾಕಿಸ್ತಾನ ಮಾನ ಮತ್ತೊಮ್ಮೆ ಹರಾಜು, ಬಲೂಚಿಸ್ತಾನ ಘಟನೆಯಿಂದ ಬಯಲಾಯ್ತು ಕರಾಳ ಮುಖ | Balochistan Crisis
-

Gilli: ಗಿಲ್ಲಿ ನಟನ ವಿರುದ್ಧ ದೂರು, ಬಿಗ್ಬಾಸ್ ಗೆದ್ದ ಬೆನ್ನಲ್ಲೇ ದೊಡ್ಡ ಸಂಕಷ್ಟ
-

ಫೆಬ್ರವರಿ 7 ದಿನ ಭವಿಷ್ಯ: ಎಲ್ಲಾ ರಾಶಿಯವರ ಉದ್ಯೋಗ, ಹಣಕಾಸು, ಆರೋಗ್ಯ ಹಾಗೂ ಸಂಬಂಧಗಳ ಕುರಿತ ಸಂಪೂರ್ಣ ಭವಿಷ್ಯ ತಿಳಿಯಿರಿ
-

Horoscope February 6: ಫೆಬ್ರವರಿ 6 ದಿನ ಭವಿಷ್ಯ: ಯಾವ ರಾಶಿಯವರು ಏನು ಪಾಲನೆ ಮಾಡಬೇಕು ತಿಳಿಯಿರಿ
-

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ವೀಕೆಂಡ್ನಲ್ಲಿ ಕರೆಂಟ್ ಇರಲ್ಲ, 2 ದಿನ ಪವರ್ ಕಟ್
-

Gold: ವಿದೇಶದಿಂದ ಚಿನ್ನ ತರುವುದು ಇನ್ಮುಂದೆ ಇನ್ನಷ್ಟು ಸುಲಭ, ಕೇಂದ್ರ ಸರ್ಕಾರದಿಂದ ಗುಡ್ನ್ಯೂಸ್
-

Gold Price Drop Today: ಚಿನ್ನ – ಬೆಳ್ಳಿ ಪ್ರಿಯರಿಗೆ ಭರ್ಜರಿ ಗುಡ್ನ್ಯೂಸ್: ಬರೋಬ್ಬರಿ 25,000 ರೂ ಇಳಿಕೆ
-

Karnataka Heat Wave: ರಾಜ್ಯದಲ್ಲಿ ಫೆಬ್ರವರಿ ಅಂತ್ಯಕ್ಕೆ ಶಾಖದ ಅಲೆ ವಾತಾವರಣ ನಿರೀಕ್ಷೆ, 7 ದಿನದ ಮುನ್ಸೂಚನೆ
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/ksrtc-u-turn-fir-to-be-filed-against-those-illegally-removing-ads-from-buses-non-fare-revenue-cited-442969.html. xn--babytilbehr-pgb.com does not claim ownership of this content. All rights remain with the original publisher.
