
Entertainment
oi-Hitesh Y
Lakshmi Nivasa Big Twist: ಕನ್ನಡದ ಪ್ರಮುಖ ಸೀರಿಯಲ್ ಲಕ್ಷ್ಮೀ ನಿವಾಸ ರೋಚಕ ತಿರುವು ಪಡೆದುಕೊಂಡಿದ್ದು, ಹೊಸ ಪ್ರೋಮೋ ನೋಡಿ ಪ್ರೇಕ್ಷಕರು ಖುಷಿಯಾಗಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಸೀರಿಯಲ್ ಇದೀಗ ಹೊಸ ಹಾಗೂ ರೋಚಕ ಘಟ್ಟವನ್ನು ತಲುಪಿದೆ. ಜಯಂತ್ – ಜಾನವಿಯ ಮದ್ಯೇ ಶುರುವಾಯ್ತು ಹೊಸ ಕಥೆ… ಚಿನ್ನು ಮರಿಯ ಹೊಸ ಹೆಜ್ಜೆ.. ರೋಚಕ ತಿರುವಿನಲ್ಲಿ ಲಕ್ಷ್ಮೀ ನಿವಾಸ ಎನ್ನುವ ಪ್ರೋಮೋ ಬಿಡುಗಡೆಯಾಗಿದ್ದು, ಇದಕ್ಕೆ ಸೀರಿಯಲ್ ವೀಕ್ಷಕರು ಫಿದಾ ಆಗಿದ್ದಾರೆ.
ಈ ಸೀರಿಯಲ್‌ನಲ್ಲಿ ಸೈಕೋ ಆಗಿ ಜಯಂತ್ ಮಾಡಿದ ಕೆಲಸಗಳನ್ನೇ ಜಾನವಿ ಶುರು ಮಾಡುವಂತೆ ಪ್ರೋಮೋ ಇದೆ. ಮುಳ್ಳನ್ನು ಮುಳ್ಳಿನಿಂದಲೇ ತಗಿಯೋದು ಅಂದ್ರೆ ಇದೇನಾ ಅಂತಿದ್ದಾರೆ ವೀಕ್ಷಕರು. ಇದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.

ಹೊಸ ಪ್ರೋಮೋದಲ್ಲಿ ಜಾನವಿ – ಜಯಂತ್ ಅವರ ಮನೆಗೆ ಹಿಂದಿರುಗಿರುವುದನ್ನು ತೋರಿಸಲಾಗಿದೆ. ಜನವಿಯನ್ನು ಎತ್ತಿಕೊಂಡು ಮನೆಯ ಒಳಗೆ ಜಯಂತ್ ಬರುವುದು ಹಾಗೂ ಜನವಿಗಾಗಿ ಅದ್ಧೂರಿ ಸ್ವಾಗತ ಕೋರಿರುವುದು ಇದೆ. ಅಲ್ಲದೆ ಇಷ್ಟು ದಿನ ಆದ ಮೇಲೆ ಮನೆಗೆ ಬರ್ತಾ ಇದ್ದೀರಾ, ವೆಲ್‌ಕಮ್ ಬ್ಯಾಕ್ ಚಿನ್ನು ಮರಿ ಎಂದು ಗುಲಾಬಿ ಹೂಗುಚ್ಛವನ್ನು ಜಯಂತ್ ಅವರು ಜಾನವಿ ಅವರ ಕೈಗೆ ಇರಿಸಿದ್ದಾರೆ. ಈ ಹೂವು ನಿಮಗೋಸ್ಕರ ಎಂದು ಮಂಡಿಯೂರಿ ಜಯಂತ್ ಅವರು ಹೂವಿನ ಗುಚ್ಛ ನೀಡಿದ್ದಾರೆ.
ಗುಲಾಬಿ ಹೂವು ತೆಗೆದುಕೊಳ್ಳುವ ಬದಲು ಜಯಂತ್ ಕೈಯಲ್ಲೇ ಗುಲಾಬಿ ಹೂವಿನ / ಮುಳ್ಳುಗಳು ತಾಗುವಂತೆ ಬಿಗಿಯಾಗಿ ಕೈಹಿಡಿದುಕೊಂಡಿರುವುದು ಇದೆ. ಈ ಹಿಂದೆ ಜಯಂತ್ ಸಹ ಗುಲಾಬಿ ಹೂವು ಕೊಟ್ಟಾಗ ಜಾನವಿಯ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ಗುಲಾಬಿ ಹೂವಿನ ಗಿಡದ ಮುಳ್ಳುಗಳು ಜಾನವಿಗೆ ಚುಚ್ಚಿಕೊಂಡು ರಕ್ತ ಬಂದಿತ್ತು. ಈಗ ತೋರಿಸಿರುವ ಪ್ರೋಮೋದಲ್ಲಿ ಸೀನ್ ರಿವರ್ಸ್ ಆಗಿರುವಂತೆ ತೋರಿಸಲಾಗಿದೆ.
ಗುಲಾಬಿ ಗಿಡ ಮುಳ್ಳುಗಳು ಜಯಂತ್‌ಕೈಗೆ ಚುಚ್ಚುತ್ತಿದ್ದರೂ, ಜಾನವಿ – ಜಯಂತ್ ಅವರ ಕಡೆ ನೋಡಿ, ನೀವು ನನ್ನ ಬಿಟ್ಟು ಯಾವೊತ್ತೋ ಹೋಗಲ್ಲ ಅಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ. ನಾನು ನಿಮ್ಮನ್ನ ತುಂಬಾ ಪ್ರೀತಿ ಮಾಡುತ್ತೀನಿ ಅಂತ ಹೇಳುವುದು ಇದೆ. ಅಲ್ಲದೆ ಈ ಸೀನ್‌ನಲ್ಲಿ ಜಯಂತ್ ಅವರ ಕೈಯಿಂದ ರಕ್ತಸ್ರಾವ ಆಗುತ್ತಿರುವಂತೆ ತೋರಿಸಲಾಗಿದೆ. ಅದರೊಂದಿಗೆ Big Twist ಎನ್ನುವ ಬರಹವನ್ನು ತೋರಿಸಲಾಗಿದೆ. ಜಯಂತ್ ಕೈಯಿಂದ ರಕ್ತ ಬರುವುದನ್ನು ನೋಡಿ ಜಾನವಿ ನಾಟಕೀಯವಾಗಿ ಅಯ್ಯೋ ಸಾರಿ ಅಂತ ಕೇಳಿರುವುದು ಸಹ ಪ್ರೋಮೋದಲ್ಲಿದೆ.
ಮುಂದುವರಿದು ಹಣೆಗೆ ಮೆಟ್ಟಿಲುಗಳ ಕೆಳಭಾಗ ತಾಗಿಸಿಕೊಂಡಿರುವ ಜಾನವಿ, ನಿಮಗೇನಾದರು ಆದಾಗ ಏನು ಮಾಡ್ತಿದ್ರಿ ಹೇಳಿ ಅಂತ ಹೇಳಿ ಜಯಂತ್ ಸಹ ಸ್ವಯಂ ಪೆಟ್ಟು ಮಾಡಿಕೊಳ್ಳುವಂತೆ ಹೇಳಿದ್ದಾರೆ. ಜಯಂತ್ ಸಹ ಹಣೆಗೆ ಪೆಟ್ಟು ಮಾಡಿಕೊಂಡಿದ್ದಾನೆ. ಇದಕ್ಕೆ ಜಾನವಿ, ಗಾಯ ಇಷ್ಟು ಸುಲಭವಾಗಿ ಮಾಯವಾಗಲ್ಲ ಅಂತ ಮಾರ್ಮಿಕವಾಗಿ ಹೇಳಿದ್ದಾರೆ. ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಜಯಂತ್ ಮತ್ತು ಜಾನವಿ ಅವರ ಮೊದಲ ರಾತ್ರಿಯ ದಿನವಾದ ದೃಶ್ಯವನ್ನೂ ಈ ಪ್ರೋಮೋದಲ್ಲಿ ರೀ ಕ್ರಿಯೇಟ್ ಮಾಡಲಾಗಿದೆ. ಅದರಲ್ಲಿ ಜಾನವಿಗೆ ತೊಂದರೆ ಕೊಟ್ಟ ಜಿರಳೆಯನ್ನು ಜಯಂತ್ ಹಾಲಿಗೆ ಹಾಕಿದ್ದ ಸೀನ್ ಇತ್ತು.
ಇದೀಗ ಜಾನವಿ ಜಿರಳೆಗೆ ಹೆದರಿಕೊಂಡಂತೆ ಮಾಡಿ ಆ ಜಿರಳೆಯನ್ನು ಹಾಲಿಗೆ ಹಾಕಿದ್ದಾಳೆ. ಕೊಡಿ ಬಿಸಾಕುತ್ತೀನಿ ಎಂದು ಜಯಂತ್ ಕೇಳಿದರೂ, ನೀವು ಜಿರಳೆ ಸಿಕ್ಕರೆ ಏನು ಮಾಡುತ್ತಿದ್ರಿ ಅಂತ ಹಳೆಯದನ್ನ ನೆನಪಿಸಿದ್ದಾಳೆ. ಇದೆಲ್ಲವನ್ನು ನೋಡಿ ಜಯಂತ್ ಶಾಕ್ ಆರಿರುವುದ ಪ್ರೋಮೋದಲ್ಲಿದೆ. ಬೇಡ ಚಿನ್ನು ಮರಿ ಅಂತಂದ್ರೂ ಜಿರಳೆ ಇರುವ ಹಾಲನ್ನ ಜಯಂತ್‌ಗೆ ಕುಡಿಸಿರುವುದು ಇದೆ.
Lakshmi Nivasa Big Twist: ವಾರ್ನಿಂಗ್ ಕೊಟ್ಟ ಜಾನವಿ
ಇನ್ನು ಕೊನೆಯದಾಗಿ ಜಾನವಿ – ಜಯಂತ್‌ಗೆ ಫೈನಲ್ ವಾರ್ನಿಂಗ್ ಕೊಟ್ಟಿದ್ದಾಳೆ. ನನ್ನನ್ನೇ ನರಳಾಡಿಸಿದವನು ನೀನು, ನರಕ ಅಂದ್ರೆ ಹೇಗಿರುತ್ತೆ ಅಂತ ಇನ್ಮೇಲೆ ನಾನು ನಿನಗೆ ತೋರಿಸುತ್ತೇನೆ ಅಂತ ಪ್ರೋಮೋದಲ್ಲಿ ಹೇಳಿರುವುದು ಇದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/lakshmi-nivasa-big-twist-not-jayant-but-janhvi-turns-psycho-wins-applause-promo-out-watch-viral-vi-449507.html. xn--babytilbehr-pgb.com does not claim ownership of this content. All rights remain with the original publisher.
