LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ | LPG Cylinder Booking Limits 2026: How Many Cylinders Can You Keep at Home Amid Oil Crisis?

India

oi-Shankrappa Parangi

LPG Cylinder Limit & Price: ಮಧ್ಯಪ್ರಾಚ್ಯ ಯುದ್ಧವು ಭಾರತದ ತೈಲ ಪೂರೈಕೆ ಮೇಲೆ ಪ್ರಭಾವ ಬೀರಿದೆ. ಅನೇಕ ನಗರಗಳಲ್ಲಿ LPG ಪೂರೈಕೆಯಲ್ಲಿ ಅಡಚಣೆ ಉಂಟಾಗಿದ್ದು, ಜನರಲ್ಲಿ ಅನಿಲದ ದರ ಹೆಚ್ಚಳದ ಆತಂಕ ಉಂಟಾಗಿದೆ. ಅನೇಕ ಮನೆಗಳು ಈಗ ಮೂಲಭೂತ ಸಮಸ್ಯೆಯನ್ನು ಎದುರು ನೋಡುತ್ತಿವೆ. ಅನೇಕ ಜನರು ಡಿಜಿಟಲ್ ವ್ಯವಸ್ಥೆ ಮೂಲಕ ಸಿಲಿಂಡರ್ ಬುಕಿಂಗ್ ವೇಳೆ ಸಮಸ್ಯೆ ಎದುರಿಸುತ್ತಿದ್ದಾರೆ. ಇದೀಗ ಕಾನೂನುಬದ್ಧವಾಗಿ ಒಂದು ಮನೆಯಲ್ಲಿ ಎಷ್ಟು ಸಿಲಿಂಡರ್‌ಗಳನ್ನು ಇಟ್ಟುಕೊಳ್ಳಲು ಅವಕಾಶ ಇದೆ. ಹಾಗಾದರೆ ಒಂದು ಕುಟುಂಬ ಒಂದು ವರ್ಷದಲ್ಲಿ ಎಷ್ಟು ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು? ಎಂಬಿತ್ಯಾದಿ ಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ತೈಲ ಸರಬರಾಜು, ಕೊರತೆ, ಅಡುಗೆ ಅನಿಲ ವಿತರಣೆ, ದೇಶಿಯ ಮತ್ತು ವಾಣಿಜ್ಯ LPG ಸಿಲಿಂಡರ್‌ಗಳೆರಡರಲ್ಲೂ ದರ ಏರಿಕೆಯ ಆತಂಕ ಎದುರಾಗಿದೆ. ಅಡುಗೆ ಅನಿಲ ಖಚಿತತೆಗಾಗಿ ಹಾಗೂ ಸಂಭಾವ್ಯ ತೈಲ, ಇಂಧನ ತೊಂದರೆ ನಿವಾರಣೆಗೆ ಕೇಂದ್ರ ಸರ್ಕಾರವು ಅಗತ್ಯ ಸರಕುಗಳ ಕಾಯ್ದೆ ಜಾರಿಗೆ ತಂದಿದೆ. ದೇಶೀಯ ್ಗ್ರಗ್ರಾಹಕರ ವಾರ್ಷಿಕ ಎಲ್‌ಪಿಜಿ ಸಿಲಿಂಡರ್ ಬುಕ್ ಮಿತಿ ವಿವರ ಇಲ್ಲಿದೆ.

LPG Cylinder Booking Limits

ಎಲ್‌ಪಿಜಿ ಸಿಲಿಂಡರ್ ಬುಕಿಂಗ್ ಮಿತಿ

ಭಾರತದಲ್ಲಿ ಸದ್ಯ ದೇಶೀಯ ಸರ್ಕಾರಿ ಬೆಂಬಲಿತ ಎಲ್‌ಪಿಜಿ ವ್ಯವಸ್ಥೆ ಅಡಿಯಲ್ಲಿ ಒಂದು ವರ್ಷಕ್ಕೆ 14.2 ಕೆಜಿಯ 12 ಸಬ್ಸಿಡಿ ಸಿಲಿಂಡರ್‌ಗಳನ್ನು ಬುಕ್ ಮಾಡಲು ಅರ್ಹರಾಗಿರುತ್ತಾರೆ. 5 ಕೆಜಿ ಸಿಲಿಂಡರ್‌ಗಳನ್ನು ಬಳಸುವ ಗ್ರಾಹಕರು ಒಂದು ವರ್ಷಕ್ಕೆ 34 ಸಿಲಿಂಡರ್ ಬುಕ್ ಮಾಡುವ ಮಿತಿ ಜಾರಿಯಲ್ಲಿದೆ. ಒಬ್ಬ ಗೃಹ ಬಳಕೆಯ ಗ್ರಾಹಕರು ಸಾಮಾನ್ಯವಾಗಿ ಈ ಕೋಟಾದ ಅಡಿಯಲ್ಲಿ ತಿಂಗಳಿಗೆ ಒಂದು ಸಬ್ಸಿಡಿ ಸಿಲಿಂಡರ್ ಪಡೆಯಬಹುದು. ಈ ಮಿತಿ ಮುಗಿದ ಬಳಿಕವು ಬೇಕಾದರೆ ಅವರು ಮಾರುಕಟ್ಟೆಯಲ್ಲಿನ ನಿಗದಿತ ದರ ನೀಡಿ ಹೆಚ್ಚುವರಿ ಸಿಲಿಂಡರ್ ಖರೀದಿಸಲು ಅವಕಾಶ ಇದೆ.

ಗೃಹ ಬಳಕೆಗೆ 15 ಸಿಲಿಂಡರ್ ಬುಕಿಂಗ್

ಒಂದು ವರ್ಷದಲ್ಲಿ ಮನೆಯು 14.2 ಕೆಜಿಯ 15 ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಅಂದರೆ ವಾರ್ಷಿಕ ಸಬ್ಸಿಡಿ ಕೋಟಾ ಮುಗಿದ ಬಳಿಕ ಸಬ್ಸಿಡಿ ವ್ಯವಸ್ಥೆಯಡಿ 12 ಸಿಲಿಂಡರ್, ಸಬ್ಸಿಡಿ ರಹಿತ ಮಾರುಕಟ್ಟೆ ದರದಲ್ಲಿ 03 ಹೆಚ್ಚುವರಿ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದಾಗಿದೆ. ಅನಿಲದ ದುರುಪಯೋಗ ತಡೆಗೆ ಹಾಗೂ ತೈಲ ಸಂರಕ್ಷಣೆಗಾಗಿ ದೇಶೀಯ LPG ಬುಕಿಂಗ್‌ಗೆ 25 ದಿನಗಳ ಅಂತರ ನೀಡಲಾಗಿದೆ. ಒಂದು ಸಿಲಿಂಡರ್ ಬುಕ್ ಮಾಡಿದ 25 ದಿನ ಒಳಗೆ ಮತ್ತೊಂದು ಸಿಲಿಂಡರ್ ಬುಕ್ ಮಾಡಲು ಅವಕಾಶ ಇಲ್ಲ.

ಮನೆಯಲ್ಲಿ ಎಷ್ಟು ಸಿಲಿಂಡರ್ ಇಡಬಹುದು

ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್ ಮಿತಿ ನಿಯಮಗಳ ಪ್ರಕಾರ ಮನೆಯಲ್ಲಿ ಸಿಲಿಂಡರ್ ಸಂಗ್ರಹಣೆಯನ್ನು ಪ್ರತ್ಯೇಕ ಸುರಕ್ಷತಾ ಮಾನದಂಡಗಳಿಂದ ನಿಯಂತ್ರಿಸಲಾಗುತ್ತದೆ. LPG ಗ್ರಾಹಕರು ಸಾಮಾನ್ಯವಾಗಿ ಒಂದೇ ಸಮಯದಲ್ಲಿ ಒಟ್ಟು ಎರಡು ಸಿಲಿಂಡರ್‌ಗಳನ್ನು ಮನೆಯಲ್ಲಿ ಇಡಲು ಅವಕಾಶ ಇದೆ. ಇದಕ್ಕಿಂತ ಹೆಚ್ಚಿನ ಸಿಲಿಂಡರ್‌ಗಳನ್ನು ಇಡಲು ಅವಕಾಶ ಇಲ್ಲ.

ಮನೆಯಲ್ಲಿ ನಿತ್ಯ ಬಳಕೆಗಾಗಿ ಒಂದು ಸಿಲಿಂಡರ್ ಇಟ್ಟುಕೊಳ್ಳುವ ಜೊತೆಗೆ ಬ್ಯಾಕಪ್ ಆಗಿ ಒಂದು ಸಿಲಿಂಡರ್ ಇಟ್ಟುಕೊಳ್ಳಬಹುದು. ಸುರಕ್ಷತೆ ಇಲ್ಲದೇ ಪ್ರದೇಶಗಳಲ್ಲಿ ಗೃಹ ಬಳಕೆಯ ಸಿಲಿಂಡರ್‌ ಹೆಚ್ಚು ಇಡಲು ಅವಕಾಶ ಇಲ್ಲ. ಆಕಸ್ಮಾತ್ ಬೆಂಕಿ ತಗುಲಿದರೆ ಅನಿಲವು ಹೆಚ್ಚಿನ ಪ್ರದೇಶ ವಿಸ್ತರಿಸಿ ಹಾನಿ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಲಾಗಿದೆ.

ವಾಣಿಜ್ಯ ಬಳಕೆದಾರರಿಗೆ, ಶೇಖರಣಾ ನಿಯಮಗಳು ವಿಭಿನ್ನವಾಗಿವೆ. ವಾಣಿಜ್ಯ ಸಂಸ್ಥೆಗಳು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ 100 ಕೆಜಿ ವರೆಗೆ ಎಲ್‌ಪಿಜಿ ಅನ್ನು ಸಂಗ್ರಹಿಸಬಹುದು. ಇನ್ನೂ ಮನೆಗಳಲ್ಲಿ ಸಂಪರ್ಕ ಇಲ್ಲದ ಸಿಲಿಂಡರ್ ಹಾಗೆ ಇಡುವಂತಿಲ್ಲ. ಇಡುವಂತಿದ್ದರೆ ಅದಕ್ಕೆ ಪರವಾನಿಗೆ ಅಗತ್ಯವಿರುತ್ತದೆ.

LPG Cylinder Booking Limits

ಕೈಗಾರಿಕೆ ವಾಣಿಜ್ಯ ಬಳಕೆ ಮಿತಿಗಳೇನು?

ಕೈಗಾರಿಕಾ/ವಾಣಿಜ್ಯ ಬಳಕೆಗಾಗಿ ಎಲ್‌ಪಿಜಿ ಗ್ಯಾಸ್ ಬಳಸುವವರಿಗೆ ಮೀತಿಗಳು ಭಿನ್ನವಾಗಿದೆ. ಇವರಿಗೆ ಹೆಚ್ಚಿನ ಸಿಲಿಂಡರ್ ಸಂಗ್ರಹಣೆ ಅಗತ್ಯವಿರುತ್ತದೆ. ಎಲ್‌ಪಿಜಿ ಪೈಪ್‌ಲೈನ್‌ಗಳ ಮೂಲಕ ಸಂಪರ್ಕ ನೀಡಿ ಬಳಸಲಾಗುತ್ತದೆ. ಸಂಬಂಧಿಸಿದವರಿಂದ ವಾಣಿಜ್ಯ/ಕೈಗಾರಿಕೆ ಬಳಕೆದಾರರು ಪರಿಶೀಲಿಸಿರಬೇಕು. ಇಂದಿನ ಯುದ್ಧದ ಸನ್ನಿವೇಶದಲ್ಲಿ ತೈಲ ಸಂಗ್ರಹಣೆಯ ಭಯ ಹೆಚ್ಚುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಪರಿಶೀಲನೆಗಳನ್ನು ಹೆಚ್ಚಿಸಿದೆ. ಸಂಗ್ರಹಿಸಿಟ್ಟುಕೊಳ್ಳಂತೆ ಎಚ್ಚರ ವಹಿಸುತ್ತಿದೆ.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಯುದ್ಧಗಳ ತೀವ್ರತೆ ಹೆಚ್ಚಾಗಿದ್ದು, ಜಾಗತಿಕ ಇಂಧನ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತಿದೆ. ಇದು ಇರಾನ್, ಇರಾಕ್ ಹಾಗೂ ಕೊಲ್ಲಿ ದೇಶಗಳಿಂದ ಆಮದು ಮಾಡಿಕೊಳ್ಳುವ ಭಾರತದ ಎಲ್‌ಪಿಜಿ ಪೂರೈಕೆ ಸರಪಳಿಯ ಮೇಲೆ ಒತ್ತಡ ಹೆಚ್ಚಿಸಿದೆ. ಹೀಗಾಗಿ ಅದರ ವಿತರಣೆಯಲ್ಲಿ ಕೊರತೆ ಆಗಬಹುದು ಎನ್ನಲಾಗಿದೆ. ಆದರೆ ಕೇಂದ್ರ ಸರ್ಕಾರ ತೈಲ ವಿತರಣೆ, ಪೂರೈಕೆ, ಬಳಕೆ, ಸಂಗ್ರಹಣೆ ಕುರಿತು ಅಗತ್ಯ ಮುನ್ನೆಚ್ಚರಿಕೆ ವಹಿಸಿದೆ.

ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆ (14.2 ಕೆಜಿ)

ದೆಹಲಿ: 913 ರೂಪಾಯಿ
ಮುಂಬೈ: 912.50 ರೂಪಾಯಿ
ಕೋಲ್ಕತ್ತಾ: 939 ರೂಪಾಯಿ
ಚೆನ್ನೈ: ರೂ 928.50 ರೂಪಾಯಿ
ಕಳೆದ ಒಂದೇ ವಾರದಲ್ಲಿ ಸುಮಾರು 60 ರೂಪಾಯಿ ಬೆಲೆ ಹೆಚ್ಚಾಗಿದೆ.

ಮಹಾನಗರಗಳಲ್ಲಿ ದೇಶೀಯ ಎಲ್‌ಪಿಜಿ ದರ ಎಷ್ಟಿದೆ?

ನವದೆಹಲಿ: 913 ರೂಪಾಯಿ
ಬೆಂಗಳೂರು: 915.50 ರೂಪಾಯಿ
ಮುಂಬೈ: 912.50 ರೂಪಾಯಿ
ಜೈಪುರ: 916.50 ರೂಪಾಯಿ
ಪಾಟ್ನಾ: 1,002.50 ರೂಪಾಯಿ
ತಿರುವನಂತಪುರಂ: 922.00 ರೂಪಾಯಿ
ಭುವನೇಶ್ವರ: 939.00 ರೂಪಾಯಿ
ನೋಯ್ಡಾ: 910.50 ರೂಪಾಯಿ
ಗುರ್‌ಗಾಂವ್: 921.50 ರೂಪಾಯಿ
ಹೈದರಾಬಾದ್: 965.00 ರೂಪಾಯಿ
ಲಕ್ನೋ: 950.50 ರೂಪಾಯಿ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ (19 ಕೆಜಿ)

ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಆಹಾರ ಸೇವಾ ನಿರ್ವಾಹಕರು ಹೆಚ್ಚಾಗಿ ಈ 19 ಕೆಜಿ ತೂಕದ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಬಳಸುತ್ತಾರೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 144 ರೂ.ಗಳಷ್ಟು ಹೆಚ್ಚಾಗಿದ್ದು, ಒಂದು ಸಿಲಿಂಡರ್‌ಗೆ ದರ ಎಷ್ಟಿದೆ?

ನವದೆಹಲಿ: 1,884.50 ರೂಪಾಯಿ
ಹೈದರಾಬಾದ್: 2,105.50 ರೂಪಾಯಿ
ಪಾಟ್ನಾ: 2,133.50 ರೂಪಾಯಿ
ಮುಂಬೈ: 1,836.00 ರೂಪಾಯಿ
ಕೋಲ್ಕತ್ತಾ: 1,988.50 ರೂಪಾಯಿ
ಚೆನ್ನೈ: 2,043.50 ರೂಪಾಯಿ

Disclaimer: This content was automatically imported from a third-party source via RSS feed. The original source is: https://kannada.oneindia.com/news/india/lpg-cylinder-booking-limits-2026-how-many-cylinders-can-you-keep-at-home-amid-oil-crisis-446837.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo