Middle East War: ಯುಎಸ್ ಕೊಟ್ಟ ಗಡುವು ಅಂತ್ಯ, ಮತ್ತೊಂದು ಜಲಸಂಧಿ ಬಂದ್‌ಗೆ ಇರಾನ್ ಸಜ್ಜು, ಭಾರತಕ್ಕೆ ಮನವಿ | Middle East War: US Deadline Ends; Iran Threatens to Close Bab al-Mandab Strait Amid Attack Fears

International

oi-Shankrappa Parangi

ಇರಾನ್ ಮೇಲಿನ ಇಸ್ರೇಲ್ ಮತ್ತು ಅಮೆರಿಕಾದ ಜಂಟಿ ದಾಳಿಗಳು ಇವತ್ತು ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಹಾರ್ಮುಜ್ ಜಲಸಂಧಿ ತೆರೆಯಬೇಕು. ಶರಣಾಗಬೇಕು ಇಲ್ಲವೇ ಸಂಧಾನಕ್ಕೆ ಬರಬೇಕು. ಇದಾಗದಿದ್ದರೆ ಮಾರಕ ದಾಳಿ ಮಾಡುವುದಾಗಿ ಇರಾನ್‌ ದೇಶಕ್ಕೆ ಯುಎಸ್ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕಟು ಎಚ್ಚರಿಕೆ ನೀಡಿದ್ದಾರೆ. ಅಂಜದ ಇರಾನ್ ಸೋಮವಾರ ಹಾರ್ಮುಜ್ ಜಲಸಂಧಿಯಂತೆ ಮತ್ತೊಂದು ತೈಲ ಸಾಗಣೆ ಮಾರ್ಗ ‘ಬಾಬ್ ಅಲ್-ಮಂದಾಬ್’ ಜಲಸಂಧಿ ಬಂದ್ ಮಾಡುವುದಾಗಿ ತಿಳಿಸಿದೆ. ತಮ್ಮ ಎಚ್ಚರಿಕೆಗೆ ಮಣಿಯದಿದ್ದರೆ ರಾತ್ರಿ 8 ಗಂಟೆಗೆ ಇರಾನ್‌ನ ಪ್ರಮುಖ ಪ್ರದೇಶಗಳ ಮೇಲೆ ದಾಳಿ ಮಾಡಲು ಯುಎಸ್ ಸಜ್ಜಾಗಿದೆ. ಹಾಗಾದರೆ ದಾಳಿ ನಡೆಯುತ್ತಾ? ದೇಶಗಳ ವ್ಯಾಪ್ತಿಯಲ್ಲಿ ವಿದ್ಯುತ್, ಇಂಟರ್‍‌ನೆಟ್ ಕಡಿತವಾಗಲಿದೆ. ಸಾವು ನೋವಿನ ಭಯ ಎರಡು ದೇಶಗಳ ಜನರಲ್ಲಿ ಹೆಚ್ಚಾಗಿದೆ.

ಮಾರ್ಚ್ 28ರಂದು ಆರಂಭವಾದ ಮಧ್ಯಪ್ರಾಚ್ಯ ದೇಶಗಳ ಯುದ್ಧವು 37ನೇ ದಿನಕ್ಕೆ ಕಾಲಿಟ್ಟಿದೆ. ಭಾರತ್ ಸೇರಿ ನಾಲ್ಕು ದೇಶಗಳನ್ನು ಬಿಟ್ಟು ಇತರ ದೇಶಗಳ ಮೇಲಿನ ಹಾರ್ಮುಜ್ ಜಲಸಂಧಿ ಮಾರ್ಗದ ಬಂದ್ ನಿರ್ಧಾರ ಮುಂದುವರಿದಿದೆ. ಈ ಮಾರ್ಗ ತೆರೆಬೇಕು. ಸಂಧಾನಕ್ಕೆ ಬರಬೇಕು ಎಂದು ಮಾರ್ಚ್ 26ರಂದು ಅಮೆರಿಕ ಹತ್ತು ದಿನಗಳ ಗಡುವು ನೀಡಿತ್ತು. ಆ ಗಡುವು ಏ.4ಕ್ಕೆ ಪೂರ್ಣಗೊಂಡಿತ್ತು. ಮತ್ತೆ ಇರಾನ್‌ಗೆ ಯುಎಸ್ 48 ಗಂಟೆಗಳ ಅಂತಿಮ ಗಡುವು ನೀಡಿದ್ದು, ಅದು ಏ.6ಕ್ಕೆ ಕೊನೆಯಾಗಿದೆ. ಇಂದು ಇಲ್ಲವೇ ನಾಳೆ ಮಂಗಳವಾರ ರಾತ್ರಿ 8ಕ್ಕೆ ಯುಎಸ್ ದಾಳಿಗೆ ಸಜ್ಜಾಗಿದೆ ಎಂದು ವರದಿ ಆಗಿದೆ. ಇತ್ತ ಇರಾನ್ ಸಹ ತನ್ನ ಪ್ರತಿದಾಳಿಗಳನ್ನು ಮುಂದುವರಿಸಿದೆ.

Middle East War

ಮತ್ತೊಂದು ಜಲಸಂಧಿ ಬಂದ್: ಹೆಚ್ಚಲಿದೆ ಉದ್ವಿಗ್ನತೆ

ಒಂದು ವೇಳೆ ಇರಾನ್ ಘೋಷಿಸಿದಂತೆ ‘ಬಾಬ್ ಅಲ್-ಮಂದಾಬ್’ ಜಲಸಂಧಿ ಬಂದ್ ಮಾಡಿದ್ದೇ ಆದಲ್ಲಿ ಯುದ್ಧದ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಲಿದೆ. ಯುಎಸ್, ಅಮೆರಿಕಾ ಮಾತ್ರವಲ್ಲದೇ ಪ್ರಸ್ತುತ ಈ ಜಲಸಂಧಿ ಮಾರ್ಗವಾಗಿ ಹಾದು ಹೋಗುವ ವಿವಿಧ ರಾಷ್ಟ್ರಗಳ ತೈಲ ಹಡಗುಗಳು, ತೈಲ ಪೂರೈಕೆ ಮೇಲೆ ಮತ್ತಷ್ಟು ತೊಂದರೆ ಆಗಲಿದೆ. ಆಗ ಯುಎಸ್ ಮತ್ತಷ್ಟು ಕೆರಳಬಹುದು. ಘೋಷಿಸಿದಂತೆ ಇರಾನ್ ಮೇಲೆ ಭೂ, ವೈಮಾನಿಕ ಹಾಗೂ ನೌಕಾ ಯುದ್ಧ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅದಕ್ಕೆಲ್ಲ ಅವಕಾಶ ಸಿಗದೇ ಶಾಂತಿ ಕಾಯ್ದುಕೊಳ್ಳಬೇಕಿದೆ. ಇದು ವಿಶ್ವದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.

ಯುಎಸ್ ಗುರಿಯಾಗಿಸಿ ಇರಾನ್‌ನ ಪ್ರದೇಶಗಳು ಯಾವುವು?

ಇರಾನ್‌ಗೆ ವಿರುದ್ಧ ನೀಡಿದ ಎಚ್ಚರಿಕೆಯಂತೆ ನಿರ್ಧಾರ ಕೈಗೊಂಡರೆ ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಸಾವು ನೋವು ಆಗುವ ನಿರೀಕ್ಷೆ ಇದೆ. ಒಂದು ವೇಳೆ ಯುಎಸ್ ಯುದ್ಧ ಮಾಡಿದರೆ ಅದು ಇರಾನಿನ, ‘ಹಾರ್ಮುಜ್ ಚೋಕ್ ಪಾಯಿಂಟ್, ಬುಶೆಹರ್ ಪರಮಾಣು ಪ್ಲಾಂಟ್, ದಕ್ಷಿಣ ಪಾರ್ಸ್ ಅನಿಲ ಕ್ಷೇತ್ರ, ಖಾರ್ಕ್ ದ್ವೀಪದ ತೈಲ ಕೇಂದ್ರ, ಅಬದಾನ್ ಸಂಸ್ಕರಣಾಗಾರ, ಬಂದರ್ ಅಬ್ಬಾಸ್ ಸಂಸ್ಕರಣಾಗಾರ, ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ನೆಲೆಗಳ’ ಮೇಲೆ ಭೀಕರ ದಾಳಿ ಮಾಡಲಿದೆ. ದಾಳಿ ಮಾಡದೇ ಮತ್ತೆ ಇರಾನ್‌ಗೆ ಸಂಧಾನ, ಶರಣಾಗತಿಗೆ ನಿರ್ಧಾರ ಮಾಡಿದರೆ ಇರಾನ್ ದೇಶದ ಜನರು ನಿಟ್ಟುಸಿರು ಬಿಡಲಿದ್ದಾರೆ. ಸದ್ಯ ಇರಾನ್ ತನ್ನ ನಿರ್ಧಾರದಿಂದ ಹಿಂದೆ ಸರಿಯದೇ ಪ್ರತಿದಾಳಿ ಮಾಡುವುದಾಗಿ ಹೇಳುತ್ತಲೇ ಬಂದಿದೆ. ಈ ಕಾರಣದಿಂದ ವಿಶ್ವದ ಇತರ ದೇಶಗಳ ಚಿತ್ತ ಈ ಯುದ್ಧದ ಮೇಲೆ ನೆಟ್ಟಿದೆ.

ಇರಾನ್‌ನಿಂದ ಭಾರತಕ್ಕೆ ವಿಶೇಷ ಮನವಿ, ಏನದು?

ಇರಾನ್ ದೇಶದ ಸರ್ವೋಚ್ಚ ನಾಯಕರ ಪ್ರತಿನಿಧಿ ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಅವರು ಭಾರತಕ್ಕೆ ಮನವಿ ಮಾಡಿದ್ದು, ಭಾರತ ರಾಜತಾಂತ್ರಿಕತೆ, ಶಾಂತಿ ನಿರ್ಧಾರಗಳ ಬಗ್ಗೆ ಶ್ಲಾಘಿಸಿದ್ದಾರೆ. ನಾವು ಶಾಂತಿಯ ಬಗ್ಗೆ ಮಾತನಾಡಬೇಕು. ಭಾರತೀಯ ರಾಜತಾಂತ್ರಿಕತೆ ತುಂಬಾ ಉತ್ತಮವಾಗಿದೆ. ಜೊತೆಗೆ ಯುದ್ಧ ನಡೆಯುತ್ತಿರುವುದ ತಪ್ಪು ಎಂದು ಕರೆದರು. ಇದು ಕೇವಲ ಇರಾನ್ ದೇಶ ಮೇಲಿನ ದಾಳಿ ಮಾತ್ರವಲ್ಲ. ಮಾನವ ಕುಲದ ವಿರುದ್ಧ ಯುದ್ಧವೆಂದು ಅವರು ಹೇಳಿದ್ದಾರೆ.

ಇರಾನ್ ಹಾಗೂ ಅಮೆರಿಕಾ-ಇಸ್ರೇಲ್ ಮಧ್ಯದ ಯುದ್ಧಕ್ಕೆ ನೀವು (ಭಾರತ) ಮಧ್ಯವರ್ತಿಯಾಗಬೇಕು. ಭಾರತವು ಯುದ್ಧದ ಉದ್ವಿಗ್ನತೆ ಕಡಿಮೆ ಮಾಡುವಲ್ಲಿ ಹೆಚ್ಚು ಪರಿಣಾಮ ಬೀರಬಹುದು. ಶಾಂತಿ ಕಾಪಾಡುವಲ್ಲಿ ಭಾರತ ಮಹತ್ವದ ಪಾತ್ರ ನಿರ್ವಹಿಸಬಲ್ಲದು ಎಂದು ಈ ಹಿಂದೆ ಇರಾನ್ ಸಹ ಹೇಳಿತ್ತು. ಭಾರತದೊಂದಿಗೆ ಎಲ್ಲ ದೇಶಗಳು ಉತ್ತಮ ಸಂಬಂಧ ಹೊಂದಿವೆ. ಹಾರ್ಮುಜ್ ಜಲಸಂಧಿ ಮೂಲಕ ತೈಲದ ಹಡಗುಗಳು ಭಾರತಕ್ಕೆ ಬರುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಉದ್ವಿಗ್ನತೆ ಕಡಿಮೆ ಮಾಡಲು ಸಹಕರಿಸುವಂತೆ ಇರಾನ್ ಕೋರಿದೆ ಎಂದು ವರದಿ ಆಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/middle-east-war-us-deadline-ends-iran-threatens-to-close-bab-al-mandab-strait-amid-attack-fears-449575.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo