MS Dhoni: ಟೀಂ ಇಂಡಿಯಾ ಸೆಮಿಫೈನಲ್‌ ಪ್ರವೇಶದ ಹಿಂದಿದೆ ನಂಬರ್ ‘7’ ಲಿಂಕ್‌: ಇಲ್ಲಿದೆ ಅಚ್ಚರಿ ಸಂಖ್ಯಾಶಾಸ್ತ್ರ | MS Dhoni’s Jersey No.7 Trends After India’s 7-Run Win Over England in T20 World Cup 2026 Semi-Final

Sports

oi-Madhusudhan KR

MS Dhoni Jersey Number Trend: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟಿ20 ವಿಶ್ವಕಪ್ 2026ರ ಸೆಮಿಫೈನಲ್ ಪಂದ್ಯದಲ್ಲಿ, ಭಾರತವು ಇಂಗ್ಲೆಂಡ್ ತಂಡವನ್ನು 7 ರನ್‌ಗಳ ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿತು. ಈ ಪಂದ್ಯ ನೋಡಲು ಕ್ರಿಕೆಟ್‌ ದಿಗ್ಗಜರು, ಸಿನಿ ತಾರೆಯಾರು, ರಾಯಕೀಯ ನಾಯಕರು ಹಾಗೂ ಉದ್ಯಮಿಗಳ ದಂಡೇ ಆಗಮಿಸಿತ್ತು. ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಕೂಡ ಕೂಡ ಬಂದಿದ್ದು, ಅವರ ಜೆರ್ಸಿ ನಂಬರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಭಾರತವು 7 ರನ್‌ಗಳಿಂದ ಜಯಗಳಿಸಿದ ಬೆನ್ನಲ್ಲೇ, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ‘ತಲಾ ಫಾರ್ ಎ ರೀಸನ್’ ಎಂದು ಬರೆದುಕೊಂಡು ಗಮನ ಸೆಳೆದಿದ್ದಾರೆ. ಧೋನಿ ಅವರ ಜೆರ್ಸಿ ಸಂಖ್ಯೆ 7 ಆಗಿದ್ದು, ಭಾರತ ಗೆದ್ದ ಅಂತರವೂ 7 ರನ್ ಆಗಿದ್ದರಿಂದ, ಅಭಿಮಾನಿಗಳು ಈ ರೀತಿಯಾಗಿ ಧೋನಿಯವರ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

MS Dhoni s Jersey No 7 Trends After India s 7-Run Win Over England in T20 World Cup 2026 Semi-Final

‘ತಲಾ’ ಪದದ ಅರ್ಥವೇನು?

ಧೋನಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಪ್ರೀತಿಯಿಂದ ‘ತಲಾ’ (ತಮಿಳು ಭಾಷೆಯಲ್ಲಿ ‘ನಾಯಕ’ ಅಥವಾ ‘ಮುಖ್ಯಸ್ಥ’) ಎಂದು ಕರೆಯುತ್ತಾರೆ. ಇದೀಗ ಈ ಹೆಸರು ಕೇವಲ ತಮಿಳುನಾಡಿಗೆ ಸೀಮಿತವಾಗದೆ, ದೇಶಾದ್ಯಂತ ಇರುವ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಮನದಲ್ಲೂ ಅಚ್ಚಳಿಯದೆ ಉಳಿದಿದೆ.

ಸಾಮಾಜಿಕ ಜಾಲತಾಣದಲ್ಲಿ ನಂಬರ್ 7 ಕ್ರೇಜ್

ಧೋನಿ ಅವರ ಜೆರ್ಸಿ ಸಂಖ್ಯೆ 7 ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕ್ರಿಕೆಟ್ ಅಥವಾ ಎಲ್ಲಿಯೇ 7 ಸಂಖ್ಯೆ ಕಂಡುಬಂದರೂ, ಅದನ್ನು ಧೋನಿಯ ಜೆರ್ಸಿಯೊಂದಿಗೆ ಹೋಲಿಕೆ ಮಾಡಿ ‘ತಲಾ ಫಾರ್ ಎ ರೀಸನ್’ ಎಂದು ಕರೆಯುತ್ತಾರೆ. ಅಚ್ಚರಿ ಅಂದ್ರೆ ಗುರುವಾರ ನಡೆದ ಪಂದ್ಯಕ್ಕೆ ಈ ಸಂಖ್ಯೆ ಎಲ್ಲಾ ದೃಷ್ಟಿಯಿಂದಲೂ ಹೋಲಿಕೆ ಆಗುತ್ತಿದೆ. ಹೇಗೆ ಅಂತೀರಾ? ಇಲ್ಲಿದೆ ನೋಡಿ ಉತ್ತರ.

ಭಾರತ-ಇಂಗ್ಲೆಂಡ್‌ ಪಂದ್ಯದಲ್ಲಿ ನಂಬರ್ 7 ಮ್ಯಾಜಿಕ್

* India win by 7 runs
* Tilak scored 21 in 7 balls
* Sanju Samason hit 7 sixes
* Bethel hit 7 sixes
* India 7 wickets
* Brook scored 7 runs
* England lost 7 wickets
* Totally MS Dhoni jersey No: 7

ಕಾಮನಬಿಲ್ಲಿನ ಬಣ್ಣಗಳು, ಮದುವೆಯ ಏಳು ಸಪ್ತಪದಿಗಳು, ವಾರಕ್ಕೆ ಏಳು ದಿನಗಳು ಹೀಗೆ ಯಾವುದನ್ನಾದರೂ 7 ಸಂಖ್ಯೆಗೆ ಸಂಬಂಧಿಸಿದಂತೆ ತಮಾಷೆಯಾಗಿ ಅಥವಾ ಭಕ್ತಿಯಿಂದ ಧೋನಿಯವರ ಅದೃಷ್ಟದ ಸಂಖ್ಯೆಯೊಂದಿಗೆ ಹೋಲಿಕೆ ಮಾಡಿ ಮೀಮ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಟ್ರೆಂಡ್‌ ಆಗಿಬಿಟ್ಟಿದೆ.

ಎಂ.ಎಸ್‌.ಧೋನಿ ಹೇಳಿದ್ದೇನು?

ಈ ಟ್ರೆಂಡ್ ಬಗ್ಗೆ ಎಂ.ಎಸ್‌.ಧೋನಿ ಪ್ರತಿಕ್ರಿಯಿಸಿ, “ನನಗೆ ಈ ಮೀಮ್‌ಗಳ ಬಗ್ಗೆ ತಿಳಿದಿದೆ, ಆದರೆ ಅವುಗಳ ಹಿಂದಿನ ನಿಖರ ಕಾರಣವೇನು ಎಂದು ತಿಳಿದಿಲ್ಲ. ಇದು ಹಾಸ್ಯಕ್ಕಾಗಿ ಅಥವಾ ತಮಾಷೆಗಾಗಿ ಇರಬಹುದು. ಆದರೆ ನನ್ನ ಅಭಿಮಾನಿಗಳು ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿರುವುದು ನನಗೆ ಸಂತೋಷದ ವಿಷಯ,” ಎಂದು ಅವರು ಹೇಳಿದರು.

ಅಭಿಮಾನಿಗಳು ಮಾತ್ರವಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳು ಹಾಗೂ ಗೂಗಲ್ ಇಂಡಿಯಾದ ಅಧಿಕೃತ ಖಾತೆಯಲ್ಲೂ ‘ತಲಾ ಫಾರ್ ಎ ರೀಸನ್’ ಎಂಬ ಹಾಸ್ಯಮಯ ಟ್ರೆಂಡ್‌ ಆಗಿದೆ. ಸೆಮಿಫೈನಲ್‌ನಲ್ಲಿ ಜೇಕಬ್ ಬೆಥೆಲ್ 105 ರನ್‌ಗನ್ನು ಸಿಡಿಸಿದರು. ಆದರೂ, ಭಾರತ ತಂಡವು ಇಂಗ್ಲೆಂಡ್ ವಿರುದ್ಧ 7 ರನ್‌ಗಳ ಅಂತರದಿಂದ ಜಯ ಸಾಧಿಸಿತು. ಹ್ಯಾರಿ ಬ್ರೂಕ್ ನಾಯಕತ್ವದ ಇಂಗ್ಲೆಂಡ್ ತಂಡವು ಚೇಸ್ ಮಾಡುವ ಹಂತಕ್ಕೆ ತಲುಪಿದ್ದರೂ, ಅಂತಿಮವಾಗಿ ಗೆಲುವು ಭಾರತಕ್ಕೇ ಸಿಕ್ಕಿತು.

ಸಂಜು ಸ್ಯಾಮ್ಸನ್ ಸಿಡಿಸಿದ 89 ರನ್‌ಗಳ ನೆರವಿನಿಂದ ಭಾರತವು 7 ವಿಕೆಟ್ ನಷ್ಟಕ್ಕೆ 253 ರನ್‌ಗಳ ಮೊತ್ತವನ್ನು ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಜೇಕಬ್ ಬೆಥೆಲ್ ಅವರ ಅದ್ಭುತ ಆಟದ ನಡುವೆಯೂ 7 ವಿಕೆಟ್‌ಗೆ 246 ರನ್‌ಗಳಷ್ಟೇ ಕಲೆಹಾಕಿ ಸೋಲನುಭವಿಸಿತು. ಫಿಲ್ ಸಾಲ್ಟ್ 5, ಹ್ಯಾರಿ ಬ್ರೂಕ್ 7, ಜೋಸ್ ಬಟ್ಲರ್ 25 ರನ್‌ ಗಳಿಸಿ ಬೇಗನೇ ವಿಕೆಟ್‌ ಒಪ್ಪಿಸಿದರು. ಈ ಮೂಲಕ ಇಂಗ್ಲೆಂಡ್ 64 ರನ್‌ಗೆ 3 ವಿಕೆಟ್ ಕಳೆದುಕೊಂಡಿತು.

ಆದರೆ, ಜೇಕಬ್ ಬೆಥೆಲ್ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿ ಕೇವಲ 48 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 8 ಬೌಂಡರಿಗಳೊಂದಿಗೆ 105 ರನ್‌ಗನ್ನು ಕಲೆಹಾಕಿ ಮಿಂಚಿದರು. ಇವರು ಅಂತಿಮ ಓವರ್‌ನಲ್ಲಿ ರನ್ ಔಟ್ ಆಗುತ್ತಿದ್ದಂತೆಯೇ ಭಾರತದ ಸಂಭ್ರಮಾಚರಣೆ ಮಾಡಿತು. ಕೊನೆಗೂ ಇಂಗ್ಲೆಂಡ್‌ ತಂಡವನ್ನು ಮಣಿಸಿ ಟೀಂ ಇಂಡಿಯಾ ಫೈನಲಗ್ ಪ್ರವೇಶ ಮಾಡಿತು.

ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ತವರಿನ ನೆಲದಲ್ಲೇ ಟಿ20 ವಿಶ್ವಕಪ್ ಗೆಲ್ಲುವ ಮೊದಲ ತಂಡವಾಗುವ ಗುರಿಯೊಂದಿಗೆ ಭಾರತ ಕಣಕ್ಕಿಳಿಯಲಿದೆ. ಇನ್ನೂ ಫೈನಲ್‌ಗಾಗಿ ಅಹಮದಾಬಾದ್‌ಗೆ ಹೋಗುತ್ತಿರುವುದು ಅಸಾಧಾರಣ ಅನುಭವ. ನಮ್ಮ ತಂಡದ ಆಟಗಾರರಿಗೆ ಇದು ತುಂಬಾ ವಿಶೇಷ ಕ್ಷಣ, ಎಂದು ಹೇಳಿದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಸೋತ ಇಂಗ್ಲೆಂಡ್ ತಂಡಕ್ಕೂ ಗೌರವ ಸಲ್ಲಿಸಿದರು.


Disclaimer: This content was automatically imported from a third-party source via RSS feed. The original source is: https://kannada.oneindia.com/news/sports/ms-dhoni-s-jersey-no-7-trends-after-india-s-7-run-win-over-england-in-t20-world-cup-2026-semi-final-446313.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo