Mukul Choudhary: ಕೆಕೆಆರ್ ಧೂಳೀಪಟ ಮಾಡಿದ ₹2.6 ಕೋಟಿಯ ಮುಕುಲ್ ಚೌಧರಿ | Mukul Choudhary Shines for LSG in IPL 2026: 54 off 27 Powers Thrilling Win Over KKR: Know details

Sports

oi-Madhusudhan KR

Mukul Choudhary: ಐಪಿಎಲ್ 2026ರ ಹರಾಜಿನಲ್ಲಿ ಕೇವಲ 2.6 ಕೋಟಿ ರೂಪಾಯಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೇರ್ಪಡೆಯಾದ ಮುಕುಲ್ ಚೌಧರಿ ಅವರು ಈಗ ಇಡೀ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ರೋಚಕ ಜಯ ತಂದುಕೊಟ್ಟ ಈ ಯುವ ಆಟಗಾರ, ರಾತ್ರೋರಾತ್ರಿ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

ಗುರುವಾರ (ಏಪ್ರಿಲ್‌ 09) ನಡೆದ ಪಂದ್ಯದಲ್ಲಿ ಎಲ್‌ಎಸ್‌ಜಿ ತಂಡದ ಮುಕುಲ್ ಚೌಧರಿ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಕೆಕೆಆರ್‌ ಬೌಲರ್‌ಗಳ ಮೇಲೆ ದಂಡಯಾತ್ರೆ ನಡೆಸಿದರು. ಸೋಲಿನ ಸುಳಿಯಲ್ಲಿ ಸಿಲುಕಿದ್ದ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು. ಅವರು ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ವಿಶೇಷವಾಗಿ ಅವರು ಸಿಡಿಸಿದ 7 ಭರ್ಜರಿ ಸಿಕ್ಸರ್‌ಗಳು ಪಂದ್ಯದ ಚಿತ್ರಣವನ್ನೇ ಬದಲಿಸಿದವು. ಅವರ ಈ ಆಕ್ರಮಣಕಾರಿ ಆಟದಿಂದಾಗಿ ಲಕ್ನೋ ಸೂಪರ್ ಜೈಂಟ್ಸ್‌ ತಂಡವನ್ನು ಗೆಲುವಿನ ದಡ ಸೇರಿಸಿತು.

Mukul Choudhary Shines for LSG in IPL 2026 54 off 27 Powers Thrilling Win Over KKR Know details

ಕೆಕೆಆರ್ ವಿರುದ್ಧ ಮಿಂಚಿದ ಮುಖುಲ್ ಚೌಧರಿ

ಮುಕುಲ್ ಚೌಧರಿ ಕೇವಲ 27 ಎಸೆತಗಳಲ್ಲಿ 2 ಬೌಂಡರಿ, 7 ಸಿಕ್ಸರ್‌ಗಳ ಸಹಿತ 54 ರನ್ ಚಚ್ಚುವ ಮೂಲಕ ಕೊನೆಯ ಎಸೆತದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ರಿಷಬ್ ಪಂತ್ ನಾಯಕತ್ವದ ಎಲ್‌ಎಸ್‌ಜಿಗೆ ಇದು ಸತತ ಎರಡನೇ ಗೆಲುವಾಗಿದೆ. ಇನ್ನೂ ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್ ತಂಡಕ್ಕೆ ನಾಲ್ಕು ಪಂದ್ಯಗಳಲ್ಲಿ ಮೂರನೇ ಸೋಲಾಗಿದ್ದು, ಅಂಕಪಟ್ಟಿಯಲ್ಲಿ ಹಿನ್ನೆಡೆ ಅನುಭವಿಸಿತು.

ಯಾರು ಈ ಮುಕುಲ್ ಚೌಧರಿ?

ಮುಕುಲ್ ಚೌಧರಿ ಅವರನ್ನು ಲಕ್ನೋ ಸೂಪರ್ ಜೈಂಟ್ಸ್‌ ತಂಡವು 2.6 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಹರಾಜಿನ ಸಮಯದಲ್ಲಿ ಇವರ ಮೇಲೆ ಅಷ್ಟಾಗಿ ನಿರೀಕ್ಷೆ ಇರಲಿಲ್ಲ, ಆದರೆ ಈಗ ತಮ್ಮ ಮೌಲ್ಯ ಏನೆಂದು ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸಾಬೀತುಪಡಿಸಿದ್ದಾರೆ.

ಮುಕುಲ್ ಚೌಧರಿ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಅನ್‌ಕ್ಯಾಪ್ಡ್ ಆಟಗಾರ. ಇವರು ತಮ್ಮ ಸ್ಫೋಟಕ ಬ್ಯಾಟಿಂಗ್‌ ಶೈಲಿಯಿಂದಲೇ ಐಪಿಎಲ್ ಹರಾಜಿನಲ್ಲಿ ಫ್ರಾಂಚೈಸಿಗಳ ಗಮನ ಸೆಳೆದಿದ್ದರು. ಐಪಿಎಲ್ 2026ರ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಇವರ ಮೇಲೆ ಭರವಸೆಯಿಟ್ಟು 2.6 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು.

ಮೊದಲ ಕೆಲವು ಪಂದ್ಯಗಳಲ್ಲಿ ಅವಕಾಶಕ್ಕಾಗಿ ಕಾದಿದ್ದ ಇವರು, ಸಿಕ್ಕ ಮೊದಲ ಅವಕಾಶದಲ್ಲೇ ತಮ್ಮ ಪ್ರದರ್ಶನವನ್ನು ಸಾಬೀತುಪಡಿಸಿದ್ದಾರೆ. ಕೆಕೆಆರ್ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಸುನಿಲ್ ನರೈನ್ ಅವರಂತಹ ದಿಗ್ಗಜರ ಎದುರು ಸಿಕ್ಸರ್‌ಗಳ ಸುರಿಮಳೆಯನ್ನೇ ಸುರಿಸಿದರು. ಲಕ್ನೋ ತಂಡವು 128 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿತ್ತು.

ಕೆಕೆಆರ್ ಬೌಲರ್‌ಗಳ ಚಳಿ ಬಿಡಿಸಿದ ಮುಕುಲ್

ಆದರೆ, ಮುಕುಲ್ ಚೌಧರಿ ಕ್ರೀಸ್‌ಗೆ ಬಂದ ನಂತರ ಪಂದ್ಯದ ಚಿತ್ರಣವೇ ಬದಲಾಯಿತು. ಕೊನೆಯ ಓವರ್‌ಗಳಲ್ಲಿ ಬೌಂಡರಿಗಿಂತ ಸಿಕ್ಸರ್‌ಗಳ ಮೇಲೆಯೇ ಕಣ್ಣಿಟ್ಟಿದ್ದ ಮುಕುಲ್, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಪಂದ್ಯವು ಕೊನೆಯ ಎಸೆತದವರೆಗೆ ಸಾಗಿತ್ತು. ಒತ್ತಡದ ನಡುವೆಯೂ ಸ್ಫೋಟಕ ಬ್ಯಾಟಿಂಗ್‌ ಮಾಡಿದ ಮುಕುಲ್, ಲಕ್ನೋ ಗೆಲ್ಲಿಸುವ ಮೂಲಕ 2 ಅಂಕಗಳನ್ನು ತಂದುಕೊಟ್ಟರು.

ರಿಷಬ್ ಪಂತ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್‌ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಒಬ್ಬ ಫಿನಿಶರ್‌ನ ಅಗತ್ಯವಿತ್ತು. ಮುಕುಲ್ ಚೌಧರಿ ಅವರ ಈ ಇನ್ನಿಂಗ್ಸ್ ನೋಡಿದ ಬಳಿಕ ಲಕ್ನೋಗೆ ಒಬ್ಬ ಭರವಸೆಯ ಮ್ಯಾಚ್ ವಿನ್ನರ್ ಸಿಕ್ಕಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮುಕುಲ್ ಅವರ ಈ ಪವರ್-ಹಿಟ್ಟಿಂಗ್ ಸಾಮರ್ಥ್ಯಕ್ಕೆ ನೆಟ್ಟಿಗರು ಮೆಚ್ಚುಗೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ, ಕೇವಲ 2.6 ಕೋಟಿ ರೂಪಾಯಿಗೆ ಸಿಕ್ಕ ಈ ಆಟಗಾರ ಈಗ ಎಲ್‌ಎಸ್‌ಜಿ ಪಾಲಿಗೆ ಕೋಟಿ ಕೋಟಿ ಬೆಲೆಯ ಆಸ್ತಿ ಆಗಿದ್ದಾರೆ ಅಂತಲೇ ಹೇಳಲಾಗುತ್ತದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/mukul-choudhary-shines-for-lsg-in-ipl-2026-54-off-27-powers-thrilling-win-over-kkr-know-details-450045.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo