Mysore Sandal Brand: ಮೈಸೂರು ಸ್ಯಾಂಡಲ್ ಉತ್ಪನ್ನ: ನಟಿ ತಮನ್ನಾ ಭಾಟಿಯಾ ಆಯ್ಕೆಗೆ ಇದೇ ಕಾರಣ: ಸಚಿವ ಎಂ.ಬಿ ಪಾಟೀಲ್‌ | Mysore Sandal Brand Ambassador: Minister M.B. Patil Explains Why Tamannaah Bhatia Was Chosen

Karnataka

oi-Hitesh Y

Mysore Sandal Brand Ambassador: ಮೈಸೂರು ಸ್ಯಾಂಡಲ್ ಉತ್ಪನ್ನಗಳ ರಾಯಭಾರಿಯನ್ನಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ನಟಿ ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಉತ್ಪನ್ನಗಳ ರಾಯಭಾರಿಯನ್ನಾಗಿ ಯಾಕೆ ಆಯ್ಕೆ ಎನ್ನುವ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಉತ್ಪನ್ನಗಳ ರಾಯಭಾರಿಯನ್ನಾಗಿ ಆಯ್ಕೆ ಮಾಡಿದ್ದರ ಕುರಿತು ಕೆಲ ತಿಂಗಳ ಹಿಂದೆಯೇ ಸ್ಪಷ್ಟನೆ ನೀಡಿದ್ದೆ. ಕರ್ನಾಟಕ ಮಾತ್ರವಲ್ಲದೇ ದೇಶದಾದ್ಯಂತ ಮಾರುಕಟ್ಟೆ ವಿಸ್ತರಣೆಗೆ ಮತ್ತು ವಿದೇಶಕ್ಕೆ ರಫ್ತು ಹೆಚ್ಚಿಸಲು ಜನಪ್ರಿಯ ರಾಯಭಾರಿಯ ಅವಶ್ಯಕತೆ ಇದ್ದು, ಅದಕ್ಕಾಗಿ ಬ್ರಾಂಡಿಂಗ್-ಮಾರ್ಕೆಟಿಂಗ್ ತಜ್ಞರೂ ಸೇರಿದಂತೆ ಒಂದು ಸಮಿತಿ ರಚಿಸಲಾಗಿತ್ತು.

Mysore Sandal Brand Ambassador Minister M B Patil Explains Why Tamannaah Bhatia Was Chosen

ಸಮಿತಿಯು ನಮ್ಮ ರಾಜ್ಯದ 2-3 ನಟಿಯರೂ ಸೇರಿದಂತೆ 5-6 ಬಹುಭಾಷಾ ನಟಿಯರ ಹೆಸರುಗಳನ್ನು ಅಂತಿಮಗೊಳಿಸಿದ್ದರು. ಆದರೆ ಕೆಲವರು ಈಗಾಗಲೇ ಬೇರೆ ಬ್ರಾಂಡ್ ನೊಂದಿಗೆ ರಾಯಭಾರಿ ಆಗಿರುವುದು ಮತ್ತು ಕೆಲವರು ನಮ್ಮ ಮಾರ್ಗಸೂಚಿಗೆ ಹೊಂದಿಕೆಯಾಗದ ಕಾರಣ; ಅರ್ಹತೆ ಆಧಾರದ ಮೇಲೆ ಸಮಿತಿಯು ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದೆ. ಬೆಳವಣಿಗೆಯ ದೃಷ್ಠಿಯಿಂದ ಇದು ಕೆ.ಎಸ್.ಡಿ.ಎಲ್.ನ ವ್ಯವಹಾರಿಕ ನಿರ್ಧಾರ ಎಂದು ಸಚಿವ ಎಂ. ಬಿ ಪಾಟೀಲ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮೈಸೂರು ಸ್ಯಾಂಡಲ್: ನಮ್ಮ ಗುರಿ

1. ಕೆ.ಎಸ್.ಡಿ.ಎಲ್. ಉತ್ಪನ್ನಗಳಿಗೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚಿಸಿ ಮಾರುಕಟ್ಟೆ ವಿಸ್ತರಿಸುವುದು.

2. 2030ರ ವೇಳೆಗೆ 5,000 ಕೋಟಿ ರೂ. ವ್ಯವಹಾರ.

3. ಕಳೆದ ವರ್ಷ 450 ಕೋಟಿ ಲಾಭ ಮಾಡಿದ್ದು, ಈ ವರ್ಷ 500 ಕೋಟಿ ರೂ. ದಾಟುವ ನಿರೀಕ್ಷೆ ಇದೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/mysore-sandal-brand-ambassador-minister-m-b-patil-explains-why-tamannaah-bhatia-was-chosen-443355.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo