
Karnataka
oi-Shankrappa Parangi
Gadag-Hotgi Rail Doubling Project: ಬಹುನಿರೀಕ್ಷೆಯ ಉತ್ತರ ಕರ್ನಾಟಕದ ಗದಗ-ಹೊಟಗಿ ರೈಲು ಮಾರ್ಗ ಕಾರ್ಯ ಪೂರ್ಣಗೊಂಡಿದೆ. ಬಾಕಿ ಇದ್ದ ಎಲ್ಲ ಕೆಲಸಗಳು ಪೂರ್ಣಗೊಂಡಿದ್ದು, ಪ್ರಮುಖ ಪ್ರದೇಶದಲ್ಲಿ ನದಿ ಮೇಲೆ ಗರ್ಡರ್ ಸಹ ನಿರ್ಮಿಸಲಾಗಿದೆ. ಪ್ರಾಯೋಗಿಕ ರೈಲು ಸಂಚಾರ, ಪರಿಶೀಲನೆ ಮುಗಿದಿದ್ದು, ಮಾರ್ಗದಲ್ಲಿ ಇದೇ ಮಾರ್ಚ್ 25ರಿಂದ ಪ್ರಯಾಣಿಕರ ರೈಲು ಸೇವೆ ಆರಂಭಿಸಿದೆ. ಇದರಿಂದ ಗದಗ, ಬಾಗಲಕೋಟೆ, ವಿಜಯಪುರ ಮಾರ್ಗ ಮಾತ್ರವಲ್ಲದೆ ರಾಜ್ಯದಿಂದ ಉತ್ತರ ಭಾರತದ ರಾಜ್ಯಗಳಿಗೆ ತೆರಳಲು ಹಾಗೂ ದಕ್ಷಿಣ ಕರ್ನಾಟಕದ ಭಾಗಕ್ಕೆ ಸುಗಮ ಸಂಪರ್ಕ ಸಾಧ್ಯವಾಗಿದೆ.
ಗದಗ-ಹೊಟಗಿ ರೈಲು ಹಳಿ ಡಬ್ಲಿಂಗ್ ಯೋಜನೆ ಅಡಿಯಲ್ಲಿ 9.60 ಕಿಲೋ ಮೀಟರ್ ಉದ್ದದ ಅಳಮಟ್ಟಿ-ವಂಡಾಲ ಮಾರ್ಗ ಪೂರ್ಣಗೊಂಡಿದೆ. ಹೊಸ ಬ್ರಾಡ್ ಗೇಜ್ ಡಬಲ್ ಲೈನ್ ಆರಂಭವಾಗಿದೆ. ಇದೆ ಮಾರ್ಚ್ 25ರಿಂದ ಈ ಮಾರ್ಗದಲ್ಲಿ ಪ್ರಯಾಣಿಕರ ಸೇವೆಗೆ ಆರಂಭಿಸಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು
ಮಾಹಿತಿ ನೀಡಿದ್ದಾರೆ.

ನದಿ ಮೇಲೆ ಓಪನ್ ವೆಬ್ ಗರ್ಡರ್
ಕಾಮಗಾರಿಯಲ್ಲಿ ಪ್ರಮುಖ ಸವಾಲಾಗಿದ್ದ ಪರ್ವತಿಕಟ್ಟಿ ನದಿಯ ಮೇಲೆ ಪ್ರಮುಖ ಓಪನ್ ವೆಬ್ ಗರ್ಡರ್ ಸೇತುವೆ ಹಾಗೂ 110 ಕಿಮೀ ವೇಗಕ್ಕೆ ಅನುಗುಣವಾದ ಆಧುನಿಕ ಸಂಚಾರ ಮೂಲಸೌಕರ್ಯ ನಿರ್ಮಿಸಲಾಗಿದೆ.
ಈ ಮೂಲಕ ಗದಗ-ಹೋಟಗಿ ಡಬ್ಲಿಂಗ್ ಯೋಜನೆ ಸಂಪೂರ್ಣಗೊಂಡಂತಾಗಿದೆ. ರೈಲು ಮೂಲಕ ಸಾಮರ್ಥ್ಯ ಹೆಚ್ಚಾಗಿದೆ. ಈ ಮಾರ್ಗದಲ್ಲಿ ಸಂಚಾರ ಕಿರಿಕಿರಿ ತಪುತ್ತಿದೆ. ಸಮಯ ಉಳಿತಾಯ ಜೊತೆಗೆ ಉತ್ತರ ಕರ್ನಾಟಕ ರೈಲು ಜಾಲ ಸುಧಾರಣೆಗೊಂಡಂತಾಗಿದೆ.
ಈ ಮಾರ್ಗವಾಗಿ ವಂದೇ ಭಾರತ್ ರೈಲು ಸಹ ಗಂಟೆಗೆ 110 ಕಿಲೋ ಮಿಟರ್ ವೇಗದಲ್ಲಿ ಸಂಚಾರ ಮಾಡಿದರೂ ಯಾವುದೇ ತೊಂದರೆ ಆಗದಂತೆ ಹಳಿ, ಮಾರ್ಗ ವಿನ್ಯಾಸಗೊಳಿಸಲಾಗಿದೆ. ಈ ನದಿ ಸೇತುವೆ ವಿನ್ಯಾಸ ಎಂಜಿನಿಯರಿಂಗ್ ಕಾರ್ಯಕ್ಕೆ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ರೈಲು ಮಾರ್ಗದ ಪ್ರಯೋಜನಗಳು
ನೈಋತ್ಯ ರೈಲ್ವೆ ವಲಯದ ಪ್ರಮುಖ ಕಾರಿಡಾರ್ ಅಂತಲೇ ಇದನ್ನು ಕರೆಯಲಾಗುತ್ತಿದ್ದು, ಗದಗ ಜಂಕ್ಷನ್‌ನಿಂದ ಮಹಾರಾಷ್ಟ್ರದ ಸೋಲಾಪುರಕ್ಕೆ ತೆರಳುವಾಗ ಈ ಮಾರ್ಗ, ಸೇತುವೆ ಹಾದು ಹೋಗಬೇಕಾಗುತ್ತದೆ. ನೆರೆ ರಾಜ್ಯದ ದಂಪರ್ಕ ಮತ್ತಷ್ಟು ಸುಧಾರಿಸಿದೆ. ಗದಗ-ಹೊಟಗಿ ವಿಭಾಗದ ದಟ್ಟಣೆ ಕಡಿಮೆ ಆಗಲಿದೆ. ಈ ಯೋಜನೆಗೂ ಮುನ್ನ ಇದ್ದ ಇತರ ರೈಲು ಮಾರ್ಗಗಳು, ನಿಲ್ದಾಣಗಳ ಮೇಲಿನ ಒತ್ತಡ ತಗ್ಗಿದೆ.
ಪ್ರಯಾಣಿಕರ ಸಂಚಾರ ಮಾತ್ರವಲ್ಲದೇ, ಸರಕು ಸಾಗಣೆ (ಕಬ್ಬಿಣದ ಅದಿರು ಮತ್ತು ಇತರ ಸರಕುಗಳು ಸೇರಿದಂತೆ) ಸಂಚಾರಕ್ಕೆ ಈ ದ್ವಿಪಥ ರೈಲು ಮಾರ್ಗ ಸಹಕಾರಿಯಾಗಲಿದೆ. ಪ್ರವಾಸೋದ್ಯಮ, ಈ ಭಾಗದ ಸಾರ್ವಜನಿಕ ಸಂಚಾರ, ಕೈಗಾರಿಕೆ ಉದ್ದೇಶಗಳಿಗೂ ಮಾರ್ಗ ಅನುಕೂಲವಾಗಲಿದೆ.
ಹುಬ್ಬಳ್ಳಿಗೆ ಪರಿಣಾಮಕಾರಿ ಸಂಚಾರ ಸಂಪರ್ಕ
ಪ್ರಮುಖವಾಗಿ ಈ ಯೋಜನೆಯು ಹುಬ್ಬಳ್ಳಿ ವಿಭಾಗದಲ್ಲಿ ರೈಲು ಸಂಪರ್ಕವನ್ನು ಹೆಚ್ಚಿಸುತ್ತದೆ. ಇದು ಮುಂಬೈ, ಬೆಂಗಳೂರು ಮತ್ತು ಇತರ ಪ್ರಮುಖ ನಗರಗಳ ಕಡೆಗೆ ಸುಗಮ ಸಂಚಾರ ಸಾಧ್ಯವಾಗಿಸಿದೆ. ಯೋಜನೆ ಆರಂಭವಾಗುತ್ತಿದ್ದಂತೆ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಮತ್ತು ಸೂಪರ್‌ಫಾಸ್ಟ್ ರೈಲುಗಳನ್ನು ಪ್ರಾರಂಭಿಸಲು ಒತ್ತಾಯಿಸಿದ್ದಾರೆ. ಅಂದರೆ ವಿಜಯಪುರ ಮೂಲಕ ಹುಬ್ಬಳ್ಳಿ-ಮುಂಬೈ ಅಥವಾ ಬೆಂಗಳೂರು-ವಿಜಯಪುರವರೆಗೆ ಹೊಸ ರೈಲುಗಳ ಸಂಚಾರ ಆರಂಭಿಸುವಂತೆ ಕೋರಿದ್ದಾರೆ.
ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತರು ಹೊಸ ಹಳಿ, ಸೇತುವೆ ಮತ್ತು ಮೂಲಸೌಕರ್ಯವನ್ನು ಮಾರ್ಚ್ ಆರಂಭದಲ್ಲಿ ಶಾಸನಬದ್ಧ ಸುರಕ್ಷತಾ ಪರಿಶೀಲನೆ ನಡೆಸಿದ್ದಾರೆ. ಬಳಿಕವೇ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/gadag-hotgi-rail-doubling-completed-passenger-services-begin-on-alamatti-vandala-line-got-girder-448723.html. xn--babytilbehr-pgb.com does not claim ownership of this content. All rights remain with the original publisher.
