
India
oi-Madhusudhan KR
FASTag annual pass price hike: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್ಯಾಗ್ ವಾರ್ಷಿಕ ಪಾಸ್ ಶುಲ್ಕವನ್ನು ಪರಿಷ್ಕರಿಸಲು ನಿರ್ಧರಿಸಿದೆ. 2026-27ರ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ, ಈ ದರವನ್ನು ಪ್ರಸ್ತುತ ಇರುವ 3,000ರಿಂದ 3,075 ರೂಪಾಯಿಗೆ ಹೆಚ್ಚಿಸಲಾಗುವುದು. ಈ ಹೊಸ ದರಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ ಎಂದು ಎಂದು ಪ್ರಾಧಿಕಾರ ತಿಳಿಸಿದೆ.
ಈ ಪರಿಷ್ಕರಣೆಯನ್ನು ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು, 2008ರ ಅಡಿಯಲ್ಲಿ ನಿಗದಿಪಡಿಸಲಾದ ನಿಯಂತ್ರಣಾತ್ಮಕ ಚೌಕಟ್ಟಿನ ಅನುಸಾರವಾಗಿ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಫಾಸ್ಟ್ಯಾಗ್ ವಾರ್ಷಿಕ ಪಾಸ್, 2025 ಆಗಸ್ಟ್ 15ರಿಂದ ಜಾರಿಗೆ ಬಂದಿದ್ದು, ಖಾಸಗಿ ವಾಹನಗಳಿಗೆ ಗರಿಷ್ಠ 200 ಟ್ರಿಪ್‌ಗಳು ಅಥವಾ ಒಂದು ವರ್ಷದವರೆಗೆ ಮಾನ್ಯವಾಗುತ್ತದೆ.
ಟೋಲ್ ಪ್ಲಾಜಾಗಳಲ್ಲಿ ತಡೆರಹಿತವಾಗಿ ಸಂಚಾರ

ಈ ಅವಧಿಯಲ್ಲಿ ಪಾಸ್ ಹೊಂದಿರುವವರು ನಿರ್ದಿಷ್ಟಪಡಿಸಿದ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇ ಟೋಲ್ ಪ್ಲಾಜಾಗಳಲ್ಲಿ ಪ್ರತಿ ಟ್ರಿಪ್‌ಗೂ ಪ್ರತ್ಯೇಕವಾಗಿ ಬಳಕೆದಾರ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಸರಳವಾಗಿ ಹೇಳುವುದಾದರೆ, ಪದೇ ಪದೇ ಟೋಲ್ ಪಾವತಿಸುವ ಬದಲು, ಒಮ್ಮೆ ಈ ವಾರ್ಷಿಕ ಪಾಸ್ ಪಡೆದರೆ, ನಿಗದಿತ ಮಿತಿಯವರೆಗೆ ಟೋಲ್ ಪ್ಲಾಜಾಗಳಲ್ಲಿ ತಡೆರಹಿತವಾಗಿ ಸಂಚರಿಸಬಹುದು.
ಈ ಪರಿಷ್ಕೃತ ದರಗಳು ಕೇವಲ ವಾಣಿಜ್ಯೇತರ ವಾಹನಗಳಿಗೆ ಮಾತ್ರ ಅನ್ವಯಿಸುತ್ತವೆ. ಈ ಸೌಲಭ್ಯವನ್ನು ಪಡೆಯಲು ವಾಹನದಲ್ಲಿ ಸಕ್ರಿಯ ಫಾಸ್ಟ್ಯಾಗ್ ಇರುವುದು ಕಡ್ಡಾಯ. ಪ್ರಸ್ತುತ ದೇಶಾದ್ಯಂತ ಇರುವ ಸುಮಾರು 1,150 ಟೋಲ್ ಪ್ಲಾಜಾಗಳಲ್ಲಿ (ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ಜಾಲದಲ್ಲಿ) ಈ ಪಾಸ್ ಅನ್ನು ಮಾನ್ಯ ಮಾಡಲಾಗುತ್ತಿದೆ.
ಸಚಿವಾಲಯದ ಮಾಹಿತಿಯ ಪ್ರಕಾರ, ಈ ಯೋಜನೆಯು ದಿನೇ ದಿನೇ ಜನಪ್ರಿಯವಾಗುತ್ತಿದ್ದು, ಈಗಾಗಲೇ 5.6 ಮಿಲಿಯನ್ (56 ಲಕ್ಷಕ್ಕೂ)ಗಿಂತ ಹೆಚ್ಚು ಖಾಸಗಿ ವಾಹನ ಬಳಕೆದಾರರು ಇದನ್ನು ಬಳಸುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಫಾಸ್ಟ್ಯಾಗ್ ವಾರ್ಷಿಕ ಪಾಸ್‌ನ ಪ್ರಮುಖ ಪ್ರಯೋಜನಗಳು
ಪದೇ ಪದೇ ಟೋಲ್ ರೀಚಾರ್ಜ್ ಮಾಡುವ ಅವಶ್ಯಕತೆ ಇರುವುದಿಲ್ಲ. ಒಂದು ಬಾರಿ ಶುಲ್ಕ ಪಾವತಿಸಿದರೆ ಸಾಕು, ವರ್ಷಪೂರ್ತಿ ಅಥವಾ 200 ಟ್ರಿಪ್‌ವರೆಗೂ ಚಿಂತೆಯಿಲ್ಲದೆ ಪ್ರಯಾಣಿಸಬಹುದು. ಟೋಲ್ ಪ್ಲಾಜಾಗಳಲ್ಲಿ ರೀಚಾರ್ಜ್ ಬಾಕಿ ಇದೆಯೇ ಅಥವಾ ಇಲ್ಲವೇ ಎಂಬ ಗೊಂದಲವಿಲ್ಲದೆ, ತಡೆರಹಿತವಾಗಿ ಸಂಚರಿಸಬಹುದು. ಸಕ್ರಿಯ ಫಾಸ್ಟ್ಯಾಗ್ ಹೊಂದಿರುವ ಎಲ್ಲಾ ವಾಣಿಜ್ಯೇತರ ವಾಹನಗಳ ಮಾಲೀಕರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
Attention National Highway Users!
Effective 1st April 2026, the applicable fee for the #FASTagAnnualPass will be revised from ₹3,000 to ₹3,075 for FY 2026–27 in accordance with the National Highways Fee (Determination of Rates and Collection) Rules, 2008.
The Annual Pass… pic.twitter.com/nOhjyrcBoB
— NHAI (@NHAI_Official) March 15, 2026
ಅರ್ಜಿ ಸಲ್ಲಿಸುವ ವಿಧಾನಗಳು
‘ರಾಜಮಾರ್ಗ ಯಾತ್ರಾ’ (Rajmarg Yatra) ಆ್ಯಪ್ ಅಥವಾ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧಿಕೃತ ವೆಬ್‌ಸೈಟ್ ಮೂಲಕ ನೀವು ಒಂದು ಬಾರಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು. ಒಮ್ಮೆ ಶುಲ್ಕ ಪಾವತಿಸಿದರೆ, ನಿಮ್ಮ ವಾಹನಕ್ಕೆ ಲಿಂಕ್ ಆಗಿರುವ ಅಸ್ತಿತ್ವದಲ್ಲಿರುವ ಫಾಸ್ಟ್ಯಾಗ್‌ನಲ್ಲಿ ಎರಡು ಗಂಟೆಗಳ ಒಳಗಾಗಿ ಈ ವಾರ್ಷಿಕ ಪಾಸ್ ಸಕ್ರಿಯಗೊಳ್ಳುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ, ನಿರಂತರವಾಗಿ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಪ್ರಯಾಣಿಸುವವರಿಗೆ ಈ ವಾರ್ಷಿಕ ಪಾಸ್ ಅತ್ಯಂತ ಅನುಕೂಲಕರವಾಗಿದೆ. ಮತ್ತೊಂದೆಡೆ, ವಾರ್ಷಿಕ ಪಾಸ್ ದರ ಏರಿಕೆ ಮಾಡಿರುವುದು ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/nhai-announces-fastag-annual-pass-fee-hike-from-3-000-to-3-075-from-april-1-2026-know-details-447285.html. xn--babytilbehr-pgb.com does not claim ownership of this content. All rights remain with the original publisher.
