NWKRTC ಬಸ್‌ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ ‘ಆಡಿಟ್’ ಬಿಸಿ: ಜಗದೀಶ್ ಶೆಟ್ಟರ್‌ಗೆ ನಿತಿನ್ ಗಡ್ಕರಿ ಪತ್ರ | Nitin Gadkari Conditions New Grant for NWKRTC VTMS Scheme on Third-Party Audit Report, know more

Karnataka

oi-Shankrappa Parangi

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ವೆಹಿಕಲ್ ಟ್ರ್ಯಾಕಿಂಗ್ ಮ್ಯಾನೇಜಮೆಂಟ್ ಸಿಸ್ಟಮ್ (VTMS) ಅಳವಡಿಕೆ ಮಾಡಲು NWKRTC ಸಂಸ್ಥೆ ವತಿಯಿಂದ ಕೇಂದ್ರಕ್ಕೆ ಅನುದಾನಕ್ಕಾಗಿ ಕೋರಲಾಗಿತ್ತು. ಈ ಪ್ರಸ್ತಾವನೆಗೆ ಶೀಘ್ರವೇ ಅನುಮೋದನೆ ನೀಡುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.

NWKRTCಗೆ ಅನುದಾನ ಮಂಜೂರು ಕುರಿತು ಸಂಸದ ಜಗದೀಶ್ ಶೆಟ್ಟರ್ ಅವರು ಎಕ್ಸ್‌ ನಲ್ಲಿ ಮಾಹಿತಿ ನೀಡಿದ್ದು, ಅನುದಾನ ಮಂಜೂರಾತಿ ಹಾಗೂ ಈಗಾಗಲೇ ಬಳಕೆ ಆಗಿರುವ ಹಣಕ್ಕೆ ಸಂಬಂಧಿಸಿದಂತೆ ಒಂದಷ್ಟು ಮಾಹಿತಿ ನೀಡಿದ್ದಾರೆ. ವಾಯುವ್ಯ ಸಾರಿಗೆ ವಾಹನಗಳಲ್ಲಿ ವೆಹಿಕಲ್ ಟ್ರ್ಯಾಕಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (VTMS) ಅಳವಡಿಕೆ ಮಾಡಲು 29.39 ಕೋಟಿ ರೂ. ಅನುದಾನಕ್ಕೆ ಮಂಜೂರಾತಿ ಮನವಿ ಮಾಡಲಾಗಿದೆ. ಈ ವಿಟಿಎಂಎಸ್ ಅಳವಡಿಕೆ ಯೋಜನೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಈ ಮೊದಲು 63.55 ಕೋಟಿ ರೂ.ಗೆ ಸಲ್ಲಿಸಿದ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿತ್ತು. ಅದಕ್ಕೆ ಅನುಗುಣವಾಗಿ ಆ ಅನುದಾನದಲ್ಲಿ 33.26 ಕೋಟಿ ರೂ.ಮಾತ್ರ ಬಳಕೆ ಮಾಡಲಾಗಿದೆ.

Nitin Gadkari

ಸಂಸದರಿಗೆ ಕೇಂದ್ರ ಸಚಿವರಿಂದ ಪತ್ರ

ಕೋವಿಡ್-19 ಕಾರಣ ತಿಳಿಸಿ ಈ ಪ್ರಸ್ತಾವನೆಯನ್ನು “ಸ್ವತ್ತು ಮರುಸ್ವಾಧೀನ (foreclosure)” ಎಂದು ಪರಿಗಣಿಸಲು ಕೋರಲಾಗಿದೆ. ಆದರೆ ಮೊದಲ ಅನುದಾನದಲ್ಲಿ ಬಳಕೆ ಮಾಡಿದ ಅನುದಾನವನ್ನು ಮೂರನೇ ಪಕ್ಷದಿಂದ “ಆಡಿಟ್” ಮಾಡಿಸಿ ಅದರ ವರದಿಯನ್ನಾಧರಿಸಿ ಹೊಸದಾಗಿ ಕೋರಿರುವ 29.39 ಕೋಟಿಯ ಪ್ರಸ್ತಾವನೆಗೆ ಅನುಮೋದನೆ ನೀಡುವ ಕುರಿತು ಅವಲೋಕಿಸಲಾಗುವುದು ಎಂದು ತಿಳಿಸಿದ ನಿತಿನ್ ಗಡ್ಕರಿ ಅವರು ಸಂಸದರಿಗೆ ಇದೇ ಮಾರ್ಚ್ 11ರಂದು ಅವರು ಪತ್ರ ಬರೆದಿದ್ದಾರೆ.

ನಾನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಂದಿದ ಸುಮಾರು 5,292 ಬಸ್ಸುಗಳಲ್ಲಿ ವೆಹಿಕಲ್ ಟ್ರ್ಯಾಕಿಂಗ್ ಮ್ಯಾನೇಜಮೆಂಟ್ ಸಿಸ್ಟಮ್ (VTMS) ಅಳವಡಿಸಲು ಅವಶ್ಯಕವಾದ ಸುಮಾರು 29.39 ಕೋಟಿ ರೂಪಾಯಿ ನೀಡುವಂತೆ ಸಾರಿಗೆ ಸಂಸ್ಥೆಯು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಆ ಪ್ರಸ್ತಾವನೆಗೆ ಶೀಘ್ರ ಅನುಮೋದನೆಗೆ ಕೇಂದ್ರ ಸಚಿವರ ಪತ್ರದಲ್ಲಿ ತಿಳಿಸಿರುವುದು ಸ್ಮರಣೀಯ.

ಕಳೆದ ವರ್ಷ ಅನುದಾನ ಕುರಿತು ಸಚಿವರಿಂದ ಸಭೆ

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರ ಅಧ್ಯಕ್ಷತೆಯಲ್ಲಿ ಕಳೆದ ವರ್ಷ 2025 ಅಕ್ಟೋಬರ್ 05 ರಂದು ಮಹತ್ವದ ಸಭೆ ನಡೆದಿತ್ತು. ಅಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (Central Assistance for Strengthening the ITS in the Public Transport System) ಹೊಸ ಹಾಗೂ ಈ ಹಿಂದೆ ಪಡೆದ ಅನುದಾನ, ಸ್ವತ್ತು ಮರುಸ್ವಾಧೀನದ ಹೆಸರಿನಲ್ಲಿ ಸಲ್ಲಿಸಿದ ಹೊಸ ಪ್ರಸ್ತಾವನೆ, ಹಿಂದಿನ ಸಾಲಿನ ಕಾಮಗಾರಿ ಅನುಷ್ಠಾನದ ಮೇಲೆ ಮೇಲೆ ಆಡಿಟ್ ನಡೆಸುವುದು. ಹೊಸ ಪ್ರಸ್ತಾವನೆಗೆ ಒಪ್ಪಿಗೆ ನೀಡುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

ಈ ಮೇಲಿನ ನೀರ್ಣಯಕ್ಕೆ ಸಂಬಂಧಿಸಿದಂತೆ ಫೈನಾನ್ಸಿಯಲ್ ಆಡಿಟ್ ಸರ್ಟಿಫಿಕೇಟ್ ಮಾತ್ರ ಸಲ್ಲಿಕೆಯಾಗಿದೆ. ಈ ಹಿನ್ನಲೆಯಲ್ಲಿ ನೂತನ ಪ್ರಸ್ತಾವನೆಗೆ ಅನುಮೋದನೆ ನೀಡುವ ಪೂರ್ವ ಹಿಂದಿನ ಸಾಲಿನ ಪ್ರಸ್ತಾವನೆಯ ಎಲ್ಲ ಸಂಬಂಧಿತ ವರದಿಗಳನ್ನು ಸಲ್ಲಿಸಿದ ತದನಂತರವೇ ಹೊಸದಾಗಿ ಕೋರಿದ 29.39 ಕೋಟಿ ರೂ.ಪ್ರಸ್ತಾವನೆಗೆ ಅನುಮೋದನೆ ನೀಡುವುದರ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಪತ್ರದಲ್ಲಿ ತಿಳಿಸಿದ್ದಾರೆಂದು ಜಗದೀಶ್ ಶೆಟ್ಟರ್ ಮಾಹಿತಿ ನೀಡಿದ್ದಾರೆ.

ಆಡಿಟ್ ಸಂಪೂರ್ಣ ವರದಿ ಬಂದ ಬಳಿಕ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಬೇಡಿಕೆಯಂತೆ ಅನುದಾನ ಬಿಡುಗಡೆ ಆಗುವ ವಿಶ್ವಾಸ ಇದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/nitin-gadkari-conditions-new-grant-for-nwkrtc-vtms-scheme-on-third-party-audit-report-know-more-447927.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo