PBKS Vs GT: ಪಂಜಾಬ್ ಕಿಂಗ್ಸ್‌ ಪರ ಕೂಪರ್ ಕಾನೊಲಿ ಹರಿಸಿದ ರನ್ ಮಳೆಗೆ ಕೊಚ್ಚಿಹೋದ ಗುಜರಾತ್ ಟೈಟನ್ಸ್ | IPL 2026: Punjab Kings Edge Past Gujarat Titans in Thrilling 3-Wicket Win in Mullanpur on march 31

Sports

oi-Madhusudhan KR

IPL 2026 PBKS Vs GT: ಮುಲ್ಲನ್‌ಪುರ್‌ನಲ್ಲಿ ಮಂಗಳವಾರ (ಮಾರ್ಚ್ 31) ನಡೆದ ಐಪಿಎಲ್‌ 2026ರ ನಾಲ್ಕನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಕೂಪರ್ ಕಾನೊಲಿ ಅವರು ಮಳೆಯ ನಡುವೆಯೇ ಕೇವಲ 44 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ ಅಜೇಯ 72 ರನ್‌ ಸಿಡಿಸುವ ಮೂಲಕ ಪಂಜಾಬ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಶುಭ್‌ಮನ್ ಗಿಲ್‌ ನಾಯಕತ್ವದ ಗುಜರಾತ್ ಟೈಟನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 162 ರನ್‌ಗಳನ್ನು ಕಲೆಹಾಕಿ, 163 ರನ್‌ಗಳ ಗುರಿ ನೀಡಿತು. ಪಂಜಾಬ್ ಕಿಂಗ್ಸ್ ಈ ಗುರಿಯನ್ನು 19.1 ಓವರ್‌ಗಳಲ್ಲಿ ತಲುಪುವ ಮೂಲಕ ಜಯಭೇರಿ ಬಾರಿಸಿತು.

IPL 2026 Punjab Kings Edge Past Gujarat Titans in Thrilling 3-Wicket Win in Mullanpur on march 31

ಪಂಜಾಬ್ ಪರ ಮಿಂಚಿದ ವೈಶಾಕ್

ಗುಜರಾತ್ ಟೈಟನ್ಸ್ ಪರ ಬ್ಯಾಟ್‌ ಬೀಸಿದ, ಶುಭಮನ್ ಗಿಲ್ 39(27), ಜೋಸ್ ಬಟ್ಲರ್ 38(33) ರನ್‌ಗಳನ್ನು ಸಿಡಿಸಿ ತಂಡಕ್ಕೆ ಆಸರೆಯಾದರು. ಉಳಿದವರು 30 ದಾಟದೇ ಪರದಾಡಿದರು. ಇನ್ನೂ ಪಂಜಾಬ್ ಪರ ವಿಜಯ್‌ಕುಮಾರ್ ವೈಶಾಕ್ 3 ವಿಕೆಟ್ ಕಬಳಿಸಿ ಮಿಂಚಿದರು. ಉಳಿದಂತೆ ಚಹಲ್ ಎರಡು, ಮಾರ್ಕೊ ಜಾನ್ಸೆನ್ ಒಂದು ವಿಕೆಟ್‌ ಪಡೆದರು.

ಪಂಜಾಬ್‌ಗೆ ಆಪದ್ಬಾಂಧವನಾದ ಕೂಪರ್ ಕಾನೊಲಿ

163 ರನ್‌ಗಳ ಗುರಿ ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಪದಾರ್ಪಣೆ ಪಂದ್ಯದಲ್ಲೇ ಕೂಪರ್ ಕಾನೊಲಿ ಆಪದ್ಬಾಂಧವರಾದರು. ಅವರು ಅಜೇಯ 72 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಗುಜರಾತ್ ಪರ ಕನ್ನಡಿಗ ಪ್ರಸಿದ್ಧ್ ಕೃಷ್ಣ 3 ವಿಕೆಟ್ ಪಡೆದು ಪಂಜಾಬ್ ತಂಡಕ್ಕೆ ಆಘಾತ ನೀಡಿದ್ದರು. ಒಂದು ಹಂತದಲ್ಲಿ ಪಂಜಾಬ್ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕಾನೊಲಿ ಅವರ ಜವಾಬ್ದಾರಿಯುತ ಆಟದಿಂದ ಪಂಜಾಬ್ ಕಿಂಗ್ಸ್‌ 19.1 ಓವರ್‌ಗಳಲ್ಲಿ ಜಯ ಸಾಧಿಸಿತು.

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11: ಪ್ರಭ್‌ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕಾನೊಲಿ, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಜಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವಿಜಯ್‌ಕುಮಾರ್ ವೈಶಾಕ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್.

ಗುಜರಾತ್ ಟೈಟನ್ಸ್ ಪ್ಲೇಯಿಂಗ್ 11: ಸಾಯಿ ಸುದರ್ಶನ್, ಶುಭ್‌ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಎಂ.ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಅಶೋಕ್ ಶರ್ಮಾ, ಮೊಹಮ್ಮದ್ ಸಿರಾಜ್.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/ipl-2026-punjab-kings-edge-past-gujarat-titans-in-thrilling-3-wicket-win-in-mullanpur-on-march-31-449015.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo