
Entertainment
oi-Manohara M
ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ (86) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯಿಂದ ನಟ ಪ್ರಕಾಶ್ ರಾಜ್ ಮತ್ತು ಅವರ ಕುಟುಂಬಸ್ಥರು ಆಳವಾದ ಶೋಕದಲ್ಲಿ ಮುಳುಗಿದ್ದಾರೆ. ಪ್ರಕಾಶ್ ರಾಜ್ ಅವರ ಜೀವನದಲ್ಲಿ ತಾಯಿ ಸುವರ್ಣಲತಾ ಅವರ ಪಾತ್ರ ಅತ್ಯಂತ ದೊಡ್ಡದು. ತಂದೆಯ ಮದ್ಯಪಾನದ ವ್ಯಸನದಿಂದಾಗಿ ಕುಟುಂಬ ಸಂಕಷ್ಟದಲ್ಲಿದ್ದಾಗ, ಸುವರ್ಣಲತಾ ಅವರು ಒಬ್ಬಂಟಿಯಾಗಿ ಇಡೀ ಮನೆಯ ಜವಾಬ್ದಾರಿಯನ್ನು ಹೊತ್ತಿದ್ದರು.
ಆರ್ಥಿಕ ಮತ್ತು ಭಾವನಾತ್ಮಕವಾಗಿ ಮಕ್ಕಳನ್ನು ಬೆಳೆಸುವಲ್ಲಿ ಅವರು ತೋರಿದ ಧೈರ್ಯದ ಬಗ್ಗೆ ಪ್ರಕಾಶ್ ರಾಜ್ ಅವರು ಹಲವು ಸಂದರ್ಶನಗಳಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದರು. ತಮ್ಮ ವ್ಯಕ್ತಿತ್ವ ಮತ್ತು ಕಲಾಬದುಕಿನ ಬೆಳವಣಿಗೆಯ ಹಿಂದೆ ತಾಯಿಯ ಪ್ರಭಾವ ಮತ್ತು ಅವರ ಜೀವನದ ಹೋರಾಟವೇ ಅಡಿಪಾಯ ಎಂದು ಪ್ರಕಾಶ್ ರಾಜ್ ಭಾವನಾತ್ಮಕವಾಗಿ ಸ್ಮರಿಸುತ್ತಿದ್ದರು. ಸದ್ಯ ತಾಯಿಯ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

ಪ್ರಕಾಶ್ ರಾಜ್ ಅವರು ತಮ್ಮ ವೈಯಕ್ತಿಕ ಬದುಕಿನ ಏರಿಳಿತಗಳ ಬಗ್ಗೆ ಮತ್ತು ತಾಯಿ ತೋರಿದ ಧೈರ್ಯದ ಬಗ್ಗೆ ಸದಾ ಮುಕ್ತವಾಗಿ ಮಾತನಾಡುತ್ತಿದ್ದರು. ಬಾಲ್ಯದ ಕಠಿಣ ದಿನಗಳಲ್ಲಿ ತಂದೆಯ ಅನುಪಸ್ಥಿತಿಯಲ್ಲೂ ಇಡೀ ಸಂಸಾರವನ್ನು ಒಬ್ಬಂಟಿಯಾಗಿ ಹೆಗಲ ಮೇಲೆ ಹೊತ್ತು ಮುನ್ನಡೆಸಿದ್ದ ಸುವರ್ಣಲತಾ ಅವರ ಛಲದ ಗುಣವು ಪ್ರಕಾಶ್ ರಾಜ್ ಅವರ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅವರ ಈ ಅದ್ಭುತ ಜೀವನಗಾಥೆ ಮತ್ತು ಅವರು ಬಿಟ್ಟುಹೋದ ನೆನಪುಗಳು ಅವರ ಕುಟುಂಬದವರ ಮನದಲ್ಲಿ ಸದಾ ಜೀವಂತವಾಗಿರುತ್ತವೆ ಎಂದು ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.
ಪವನ್ ಕಲ್ಯಾಣ್ ಸಂತಾಪ
ಸುವರ್ಣಲತಾ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ. ಈ ನಡುವೆ, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಖ್ಯಾತ ನಟ ಪವನ್ ಕಲ್ಯಾಣ್ ಅವರು ಪ್ರಕಾಶ್ ರಾಜ್ ಅವರ ಮಾತೃವಿಯೋಗಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ತಮ್ಮ ಅಧಿಕೃತ ಕಚೇರಿಯ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಹಂಚಿಕೊಂಡಿರುವ ಪವನ್ ಕಲ್ಯಾಣ್, “ಖ್ಯಾತ ನಟ ಪ್ರಕಾಶ್ ರಾಜ್ ಅವರ ತಾಯಿ ಸುವರ್ಣಲತಾ ಅವರು ನಿಧನರಾದ ಸುದ್ದಿ ಕೇಳಿ ನನಗೆ ತುಂಬಾ ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ನಾನು ಸರ್ವಶಕ್ತನಲ್ಲಿ ಪ್ರಾರ್ಥಿಸುತ್ತೇನೆ. ತಾಯಿಯನ್ನು ಕಳೆದುಕೊಂಡು ಶೋಕದಲ್ಲಿರುವ ಪ್ರಕಾಶ್ ರಾಜ್ ಗಾರು ಮತ್ತು ಅವರ ಕುಟುಂಬದ ಎಲ್ಲ ಸದಸ್ಯರಿಗೆ ನನ್ನ ಆಳವಾದ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/prakash-raj-mother-swarnalatha-passes-away-at-86-condolences-pour-in-448845.html. xn--babytilbehr-pgb.com does not claim ownership of this content. All rights remain with the original publisher.
