
International
oi-Hitesh Y
Prediction on Donald Trump: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಯುದ್ಧ ಪ್ರಾರಂಭವಾಗಿ ಒಂದು ವಾರದ ಮೇಲಾಗಿದೆ. ಈ ಯುದ್ಧ ನಡೆಯುವ ಬಗ್ಗೆ ಅಮೆರಿಕ ಸಹ ಮೊದಲೇ ಹೇಳಿರಲಿಲ್ಲ. ಅದು ಯುದ್ಧದ ಕಾರ್ಯತಂತ್ರವೂ ಹೌದು. ಆದರೆ ಯುದ್ಧ ನಡೆಯಲಿದೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇನ್ನೊಂದು ಕೆಲಸವನ್ನೂ ಮಾಡಲಿದ್ದಾರೆ ಎಂದು ಪ್ರೊಫೆಸರ್ ಭವಿಷ್ಯವಾಣಿ ನುಡಿದಿದ್ದಾರೆ. ಈ ಭವಿಷ್ಯವಾಣಿ ಈಗ ಗಮನ ಸೆಳೆದಿರುವುದಕ್ಕೆ ಕಾರಣವಿದೆ. ಮೊದಲನೆಯದಾಗಿ ಈ ವ್ಯಕ್ತಿ ಹೇಳಿದ್ದ ಎರಡು ಭವಿಷ್ಯವಾಣಿಗಳು ಈಗಾಗಲೇ ನಿಜವಾಗಿದೆ. ಮೊದಲನೆಯದಾಗಿ ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಆಯ್ಕೆಯಾಗಲಿದ್ದಾರೆ ಎನ್ನುವುದು ಮತ್ತೊಂದು ಇರಾನ್ ದೇಶದ ಮೇಲೆ ಅಮೆರಿಕ ದಾಳಿ ಮಾಡಲಿದೆ ಎನ್ನುವುದು. ಇದನ್ನು ಅವರು ಹೇಳಿರುವುದು 2024ರಲ್ಲಿ ಎನ್ನುವುದು ವಿಶೇಷ. ಆ ಇನ್ನೊಂದು ಭಯಾನಕವಾದ ಭವಿಷ್ಯವೇನು ಹಾಗೂ ಈಗಾಗಲೇ ಚೀನಾ ವ್ಯಕ್ತಿ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.
ಅಮೆರಿಕ – ಇರಾನ್ ಯುದ್ಧ ನಡೆಯುವುದು ಫಿಕ್ಸ್ ಅಂತ 2024ರಲ್ಲೇ ಹೇಳಲಾಗಿತ್ತು ಎಂದರೆ ನೀವು ನಂಬುತ್ತೀರಾ. ಹೌದು 2024ರ ಉಪನ್ಯಾಸವೊಂದರಲ್ಲಿ ಚೀನಾ – ಕೆನಡಾದ ಶಿಕ್ಷಣ ತಜ್ಞ ಜಿಯಾಂಗ್ ಕ್ಸುಯೆಕ್ಸಿನ್ ಅವರು, ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ ಎಂದಿದ್ದರು. ಅಲ್ಲದೆ ಅಮೆರಿಕ ಮತ್ತು ಇರಾನ್ ನಡುವಿನ ಸಂಭಾವ್ಯ ಯುದ್ಧದ ಬಗ್ಗೆ ಭವಿಷ್ಯ ನುಡಿದಿದ್ದರು. ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ಪ್ರೊಫೆಸರ್ ಅವರ ಕೆಲವು ಭವಿಷ್ಯವಾಣಿಗಳು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಿಖರ ಅಂದಾಜಿಗಿದೆ. ಅನೇಕರು ಈಗ ಅವರನ್ನು ಚೀನಾದ ನಾಸ್ಟ್ರಾಡಾಮಸ್ ಎಂದು ಕರೆಯುತ್ತಿದ್ದಾರೆ. ಇಷ್ಟಕ್ಕೂ ಆ ವೈರಲ್ ವಿಡಿಯೋ ಮತ್ತು ಇನ್ನೊಂದು ಭವಿಷ್ಯವಾಣಿ ಏನು ಅಂತ ನೋಡೋಣ.

ಯೂಟ್ಯೂಬ್ ಚಾನೆಲ್ನಲ್ಲಿ ವಿಶ್ಲೇಷಣೆ
ಜಿಯಾಂಗ್ ಕ್ಸುಯೆಕ್ಸಿನ್ ಅವರು ತಮ್ಮ ಯೂಟ್ಯೂಬ್ ಚಾನೆಲ್, ಪ್ರಿಡಿಕ್ಟಿವ್ ಹಿಸ್ಟರಿ ಮೂಲಕ ವಿಶ್ವಾದ್ಯಂತ ಪ್ರಮುಖ ರಾಜಕೀಯ ಘಟನೆಗಳನ್ನು ವಿಶ್ಲೇಷಿಸುತ್ತಾರೆ. ಈ ಚಾನೆಲ್ನಲ್ಲಿ, ಅವರು ಭೌಗೋಳಿಕ ರಾಜಕೀಯ ಆಸಕ್ತಿಗಳು, ಐತಿಹಾಸಿಕ ಮಾದರಿಗಳು ಮತ್ತು ಅಧಿಕಾರದ ಕಾರ್ಯವೈಖರಿಯ ಆಧಾರದ ಮೇಲೆ ಭವಿಷ್ಯದ ಸಂಭವನೀಯ ಘಟನೆಗಳನ್ನು ಹೇಳುವುದು ಇದೆ. ಅಂತರರಾಷ್ಟ್ರೀಯ ರಾಜಕೀಯ ಮತ್ತು ಇತಿಹಾಸವನ್ನು ಒಟ್ಟಿಗೆ ಅರ್ಥಮಾಡಿಕೊಳ್ಳಲು ಬಯಸುವವರಿಗೆ ಈ ವಿಡಿಯೋಗಳು ಹೆಚ್ಚು ಆಪ್ತವಾಗಿವೆ.
ಆ ಮೂರು ಭವಿಷ್ಯವಾಣಿಗಳಲ್ಲಿ ಈಗ ಎರಡು ನಿಜವಾಗಿವೆ!
ಮೇ 2024ರಲ್ಲಿ ಜಿಯಾಂಗ್ ಕ್ಸುಯೆಕ್ಸಿನ್ ನೀಡಿದ್ದ ಉಪನ್ಯಾಸದಲ್ಲಿ ಜಿಯಾಂಗ್ ಮೂರು ಭವಿಷ್ಯವಾಣಿಗಳನ್ನು ನುಡಿದಿದ್ದರು. ಡೊನಾಲ್ಡ್ ಟ್ರಂಪ್ ಅವರು ಮತ್ತೆ ಅಮೆರಿಕದ ಅಧ್ಯಕ್ಷರಾಗಲಿದ್ದಾರೆ. ಟ್ರಂಪ್ ಅವರ 2ನೇ ಅಧಿಕಾರ ಅವಧಿಯಲ್ಲಿ ಇರಾನ್ ಜೊತೆ ಯುದ್ಧ ಸಾಧ್ಯತೆ ಇದೆ ಹಾಗೂ ಅಂತಹ ಯುದ್ಧವು ಅಮೆರಿಕಕ್ಕೆ ಒಳ್ಳೆಯದಲ್ಲ ಎಂದು ಅವರು ಹೇಳಿದ್ದರು. ಆ ಸಮಯದಲ್ಲಿ, ಅನೇಕರು ಈ ಭವಿಷ್ಯವಾಣಿಗಳನ್ನು ಕೇವಲ ಶೈಕ್ಷಣಿಕ ಊಹಾಪೋಹ ಎಂದಷ್ಟೇ ಭಾವಿಸಿದ್ದರು. ಆದರೆ ಈಗ ಅವರ ಭವಿಷ್ಯವಾಣಿಯು ನಿಜವಾಗಿದೆ. ಅದರಲ್ಲಿ ಮುಖ್ಯವಾಗಿ ಎರಡು ಭವಿಷ್ಯವಾಣಿಯು ನಿಜವಾಗಿದೆ.
ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಯುದ್ಧ ಶೀಘ್ರ ಮುಗಿಯಲ್ಲ
ಇನ್ನು ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧವು ಬೇಗ ಮುಗಿಯುವುದಿಲ್ಲ ಎಂದು ಅವರು ಈಚೆಗಿನ ವಿಡಿಯೋವೊಂದರಲ್ಲಿ ಹೇಳಿದ್ದಾರೆ. ಇತ್ತೀಚಿನ ಉಪನ್ಯಾಸದಲ್ಲಿ ಜಿಯಾಂಗ್ ಯುಎಸ್ ಮತ್ತು ಇರಾನ್ ನಡುವಿನ ಯುದ್ಧವು ಉಲ್ಬಣಗೊಂಡರೆ, ಅದು ಬೇಗನೆ ಕೊನೆಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಈ ಯುದ್ಧವು ದೀರ್ಘಕಾಲ ನಡೆಯುವ ಸಾಧ್ಯತೆ ಇದೆ. ಜಾಗತಿಕ ರಾಜಕೀಯದ ಮೇಲೂ ಇದು ಪರಿಣಾಮ ಬೀರಬಹುದು ಎಂದಿದ್ದಾರೆ. ಜಿಯಾಂಗ್ ಇತ್ತೀಚೆಗೆ ಬ್ರೇಕಿಂಗ್ ಪಾಯಿಂಟ್ಸ್ ಎಂಬ ಸುದ್ದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಇಡೀ ಯುದ್ಧದ ವಿವರವಾದ ವಿಶ್ಲೇಷಣೆಯನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಇರಾನ್ ದೇಶವು ಯುಎಸ್ ವಿರುದ್ಧ ಕೆಲವು ಗಮನಾರ್ಹ ಕಾರ್ಯತಂತ್ರದ ಅನುಕೂಲಗಳನ್ನು ಹೊಂದಿದೆ ಎಂದು ಜಿಯಾಂಗ್ ಹೇಳಿದ್ದಾರೆ.
🇨🇳 Historian who called #Trump win & #Iran war drops another bombshell: ‘#GulfStates have 2 weeks of water’#Beijing-based Jiang Xueqin predicted in May 2024:
📹 Trump wins election
📹 US goes to war with Iran
👉 US loses, global order resetsNow his warning:
📌 “#Iran will… pic.twitter.com/0Kutu4W9I1
— Mahalaxmi Ramanathan (@MahalaxmiRaman) March 5, 2026
ಯಾರು ಈ ಶಿಕ್ಷಣ ತಜ್ಞ ಜಿಯಾಂಗ್ ಕ್ಸುಯೆಕ್ಸಿನ್
ಜಿಯಾಂಗ್ ಕ್ಸುಯೆಕ್ಸಿನ್ ಅವರು ಚೀನಾದ ಬೀಜಿಂಗ್ನಲ್ಲಿ ತತ್ವಶಾಸ್ತ್ರ ಮತ್ತು ಇತಿಹಾಸವನ್ನು ಕಲಿಸುತ್ತಾರೆ. ಅವರು ಯೇಲ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ ಮತ್ತು ಚೀನಾದಲ್ಲಿ ಶಿಕ್ಷಣ ಸುಧಾರಣೆ ಮತ್ತು ಪಠ್ಯಕ್ರಮ ವಿನ್ಯಾಸದ ಕುರಿತು ಹಲವು ವರ್ಷಗಳಿಂದ ಕೆಲಸ ಮಾಡಿದ್ದಾರೆ. ಇತಿಹಾಸ, ರಾಜಕೀಯ ಮತ್ತು ಜಾಗತಿಕ ಘಟನೆಗಳ ನಡುವಿನ ಸಂಪರ್ಕಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಸಂಶೋಧಕರಾಗಿ ಇವರ ವಿಡಿಯೋಗಳು ವರದಾನವಾಗಿವೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/international/trump-win-iran-war-predicted-2024-2-of-3-forecasts-true-professor-s-third-warning-sparks-buzz-446463.html. xn--babytilbehr-pgb.com does not claim ownership of this content. All rights remain with the original publisher.
