
Entertainment
oi-Hitesh Y
Prem: ನಿರ್ದೇಶಕ ಪ್ರೇಮ್ ಅವರು ನಿರ್ದೇಶಿಸಿರುವ ಹಾಗೂ ವಿವಾದಕ್ಕೆ ಕಾರಣವಾಗಿರುವ ಕೆಡಿ ಸಿನಿಮಾದ ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದದ ಬಗ್ಗೆ ಪ್ರೇಮ್ ಅವರು ವಿಡಿಯೋ ಮೂಲಕ ಸಂದೇಶ ಹಂಚಿಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದಲೂ ಈ ಹಾಡು ವಿವಾದಕ್ಕೆ ಕಾರಣವಾಗಿದೆ. ಮೊದಲು ಈ ಸಿನಿಮಾ ಬಿಡುಗಡೆ ಆಗಲಿ, ಆಗ ನೋಡಿ ಹಾಡು ಚೆನ್ನಾಗಿಲ್ಲ ಎಂದರೆ ಹೇಳಿ ಎಂದು ಮೊದಲು ಪ್ರೇಮ್ ಹೇಳಿದ್ದರು. ಆದರೆ ಇದೀಗ ನಟಿ ನೋರಾ ಫತೇಹಿ ಅವರೇ ಹಾಡಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮೇಲೆ ಪ್ರೇಮ್ ಅವರು ಮಾತು ಬದಲಾಯಿಸಿದ್ದಾರೆ. ಸರ್ಸೆ ಸೆರಗ ಸರ್ಸೆ ಹಾಡನ್ನ ಎಲ್ರೂ ತಪ್ಪಾಗಿ ಅರ್ಥ ಮಾಡ್ಕೊಂಡಿದ್ದೀರಿ ಆದರೆ, ಈ ಹಾಡನ್ನು ನಾನು ರೀರೈಟ್ (ಹೊಸದಾಗಿ ಬರೆಯುತ್ತೇನೆ ಎಂದೂ ಅವರು ಹೇಳಿಕೊಂಡಿದ್ದಾರೆ. ಈ ಸಂಬಂಧ ಪ್ರೇಮ್ ಅವರು ವಿಡಿಯೋ ಹಂಚಿಕೊಂಡಿದ್ದಾರೆ.
ಯಾರಿಗೂ, ಯಾವುದೇ ಉದ್ದೇಶಗಳಿಂದ ಯಾರೂ ಇದನ್ನು ಮಾಡಲೇಬೇಕು ಎಂದು ತಪ್ಪುಗಳನ್ನು ಮಾಡುವುದಿಲ್ಲ. ನಾನೂ ಸಹ ಪ್ರತಿ ಸಂದರ್ಭ ಹಾಗೂ ಸಿನಿಮಾಗಳಿಗೆ ಹಾಡು ಬರೆದಿದ್ದೇನೆ. ದೇವರ ಬಗ್ಗೆಯೂ ನಾನು ಹಾಡುಗಳನ್ನು ಬರೆದಿದ್ದೇನೆ. ತಾಯಿ, ಅಣ್ಣ ತಮ್ಮದಿರ ಹಾಗೂ ಪ್ರೀತಿಯ ಬಗ್ಗೆಯೂ ನಾನು ಹಾಡು ಬರೆದಿದ್ದೇನೆ. ಬೇರೆ ಬೇರೆ ಕಂಟೆಂಟ್ಗಳಿಗೆ ನಾನು ಹಾಡನ್ನು ಬರೆದಿದ್ದೇನೆ. ತುಂಬಾ ಪ್ರೀತಿ ಹಾಗೂ ಪ್ರೋತ್ಸಾಹ ನೀಡಿ ನನ್ನನ್ನು ಎಲ್ಲರೂ ಈ ಎತ್ತರಕ್ಕೆ ಬೆಳೆಸಿದ್ದೀರಿ. ನನ್ನ ಹಾಡುಗಳನ್ನು ಕೇಳಿ ನೀವೆಲ್ಲರೂ ಮೆಚ್ಚಿಕೊಂಡಿದ್ದೀರಿ. ಪ್ರೇಮ್ ಸಿನಿಮಾ ಬರುತ್ತಿದೆ ಎಂದರೆ ಸಾಂಗ್ ಜೋರಾಗಿರುತ್ತೆ ಎನ್ನುವ ಅಭಿಪ್ರಾಯ ಜನರಲ್ಲಿದೆ ಎಂದು ಪ್ರೇಮ್ ಅವರು ಹೇಳಿದ್ದಾರೆ.

ನನ್ನ ಹಾಡುಗಳನ್ನು ಕಾಯುವ ಜನರಿಗೆ ನಾನು ಕೊನೆಯ ಉಸಿರು ಇರುವ ವರೆಗೂ ಚಿರಋಣಿ ಆಗಿರುತ್ತೇನೆ. ಈ ಹಾಡು ಬರೆದಾಗ ನಾನು ನನ್ನ ದೃಷ್ಟಿಕೋನದಲ್ಲಿ ಈ ಹಾಡನ್ನು ಬರೆದೆ. ಒಂದು ಬಾಟಲಿ, ಒಂದು ಉಪ್ಪಿನಕಾಯಿ ಕಂಟೆಂಟ್ ಇರಿಸಿಕೊಂಡು ಸಾಂಗ್ ಬರೆದೆ. ಒಂದು ಪದವನ್ನು ತೆಗೆದು / ಬದಲಾಯಿಸಬಹುದಾಗಿತ್ತು. ಬಾಟಲ್ನ ಹಿಂದೆ ಎತ್ತಿ ಎಂದು ಮಾಡಬಹುದಾಗಿತ್ತು. ಆದರೆ ಕುತೂಹಲ ಇರಲಿ ಎಂದು ಆ ಪದವನ್ನು ತೆಗೆದು ಎಂಡ್ನಲ್ಲಿ ಹಾಕಿದೆ.
ಯಾಕೆ ಕುತೂಹಲ ಇರಲಿ ಎಂದರೆ ಒಂದು ಸಾಹಿತ್ಯ ಬರೆಯುವಾಗ ಸಾಹಿತಿ ಹಂಗೂ ಮಾಡಬಹುದು ಹಿಂಗೂ ಮಾಡಬಹುದು ಅಂತ ವಿಚಾರ ನನ್ನಲ್ಲಿತ್ತು. ಅದನ್ನು ನಾನು ಅಶ್ಲೀಲ ರೀತಿಯಲ್ಲಿ ಆಗಲಿ ಅಥವಾ ಯಾರಿಗಾದರೂ ತೊಂದರೆ ಕೊಡುವುದಕ್ಕೆ, ಮನಸ್ಸು ನೋಯಿಸುವುದಕ್ಕೆ ಇಷ್ಟವಿರಲಿಲ್ಲ. ನನಗೆ ಆ ರೀತಿಯ ಉದ್ದೇಶವೂ ಇಲ್ಲ. ಈ ಹಿಂದೆಯೂ ಇರಲಿಲ್ಲ, ಮುಂದೆಯೂ ಇರಲ್ಲ. ನಾನು ಸಾಯುವ ವರೆಗೂ ಆ ರೀತಿಯ ತಪ್ಪುಗಳನ್ನು ಮಾಡುವುದಿಲ್ಲ ಎಂದು ಪ್ರೇಮ್ ಅವರು ಹೇಳಿದ್ದಾರೆ.
ತುಂಬಾ ಜನ ಇದನ್ನು ಯಾವ ರೀತಿ ಅರ್ಥ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ನನ್ನ ಅರ್ಥದ ಪ್ರಕಾರ ಬಾಟಲಿ ಬಗ್ಗೆ ಬರೆಯುವಂತೆ ಬರೆದಿದ್ದೆ. ಸುಮಾರು ಜನ ನನ್ನನ್ನು ಪ್ರೀತಿ ಮಾಡುವವರು, ತುಂಬಾ ಹೃದಯಕ್ಕೆ ಹತ್ತಿರವಾದವರು ಕೆಲವರಿಗೆ ನೋವಾಗಿದೆ. ಪ್ರೇಮ್ ಹಿಂಗೂ ಬರೆಯುತ್ತಾನ ಎಂದು ಅನಿಸಿದೆ. ಕೀಳು ಮಟ್ಟದ ಸಾಹಿತ್ಯ ಬರೆಯುವ ಆಸಕ್ತಿ ನನಗಿಲ್ಲ. ಬೇರೆ ಬೇರೆ ಅರ್ಥವನ್ನು ಇದು ಕಲ್ಪಿಸಿದೆ. ಲೈಕ್ ಮತ್ತು ಕಾಮೆಂಟ್ಗಾಗಿ ಕೆಲವರು ನನ್ನ ಕಾಲೆಳೆಯುತ್ತಿದ್ದಾರೆ. ಏನೂ ಮಾಡೋಕೆ ಆಗಲ್ಲ. ಈ ರೀತಿ ಮಾಡುತ್ತಿರುವವರಿಗೂ ಒಳ್ಳೆಯದಾಗಲಿ.. ನನ್ನ ಉದ್ದೇಶ ಯಾರಿಗೂ ನೋವುಂಟು ಮಾಡುವುದಲ್ಲ. ಯಾರಿಗಾದರೂ ನನ್ನಿಂದ ನೋವಾಗಿದ್ದರೆ ಕ್ಷಮಿಸಿ, ಕ್ಷಮಿಸಿ ಎಂದು ಕೇಳಿಕೊಳ್ಳುತ್ತೇನೆ ಎಂದು ಪ್ರೇಮ್ ಅವರು ಹೇಳಿದ್ದಾರೆ.
ನಾನು ಕ್ಷಮೆ ಕೇಳುವುದು ತಪ್ಪು ಎಂದು ಅನಿಸುವುದಿಲ್ಲ. ಒಬ್ಬರ ಮನಸ್ಸಿಗೆ ನೋವು ಮಾಡಿ ನಾನು ಅರಮನೆ ಕಟ್ಟುವ ಅವಶ್ಯಕತೆ ಇಲ್ಲ. ನಿಮ್ಮಿಂದಲೇ ನಾನು – ನೀವು ನನಗೆ ಬೆಂಬಲಿಸಿದರೆ ಮಾತ್ರ ನಾನು. ಈ ಹಾಡು ಯಾರಿಗಾದರೂ ನೋವುಂಟು ಮಾಡಿದ್ದರೆ ನಾನು ಈ ಹಾಡನ್ನು ರೀರೈಟ್ ಮಾಡುತ್ತೇನೆ. ಮುಂದೆ ದೇಶದಾದ್ಯಂತ ರಿಲೀಸ್ ಮಾಡುತ್ತೇನೆ. ನಿಮಗೆ ನೋವುಂಟು ಮಾಡುವ ಉದ್ದೇಶ ನನಗಿಲ್ಲ. ಹಿಂದಿಯ ಹಾಡು ಬರೆಯುವಾಗಲೂ ನನಗೆ ಹಿಂದಿ ತುಂಬಾ ಗೊತ್ತಿಲ್ಲ. ಆದರೆ ಹಿಂದಿಯಲ್ಲಿ ಹಾಡು ಬರೆದಿರುವುದು ರಕಿಬಾಲಂ ಅವರು. ಆದರೆ ಅವರು ಏಕಾಏಕಿ ನಾನು ಬರೆದಿಲ್ಲ ಎಂದಿದ್ದಾರೆ. ಕನ್ನಡದಲ್ಲಿ ಸಾಹಿತ್ಯ ತುಂಬಾ ಚೆನ್ನಾಗಿದೆ. ಹಿಂದಿ ನನಗೆ ಅರ್ಥವಾಗಿಲ್ಲ. ಪಾಪ ಅವರು ವಿವಾದವಾಗಿರುವುದರಿಂದ ಈ ರೀತಿ ಹೇಳಿರಬಹುದು.
ಇನ್ನು ನೂರಾ ಅವರು ಹೇಳಿರುವುದು ತುಂಬಾ ತಪ್ಪು ಯಾರೇ ಕಲಾವಿದ ಆಗಲಿ ಒಂದು ಸಿನಿಮಾವನ್ನು ಒಪ್ಪಿಕೊಂಡಾಗ, ಸಾಂಗ್ ಹಾಗೂ ಸಾಹಿತ್ಯ ಎಲ್ಲವನ್ನೂ ಕೇಳುತ್ತಾರೆ. ಸಾಹಿತ್ಯ ಗೊತ್ತಿಲ್ಲ ಎಂದರೆ ಹೇಗೆ ನಟಿಸಲು ಸಾಧ್ಯ ಎಂದು ಕೇಳಿದ್ದಾರೆ. ಅವರು ಸಹ ವಿವಾದವಾಗಬಾರದು ಎಂದು ಆ ಹೆಣ್ಣು ಮಗು ನೊಂದಿಕೊಂಡಿರಬೇಕು. ಈ ಹಾಡನ್ನು ನಾವು ರೀರೈಟ್ ಮಾಡಿ ಮತ್ತೆ ಬಿಡುಗಡೆ ಮಾಡುತ್ತೇವೆ. ನನ್ನ ಹಾಗೂ ಕೆಡಿ ಸಿನಿಮಾ ತಂಡದಿಂದ ಕ್ಷಮೆಯಾಚಿಸುತ್ತೇನೆ. ಧನ್ಯವಾದ, ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಎಂದು ಪ್ರೇಮ್ ಹೇಳಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/prem-clarifies-sarse-seraga-sarse-row-the-song-has-been-widely-misunderstood-447567.html. xn--babytilbehr-pgb.com does not claim ownership of this content. All rights remain with the original publisher.
