Prem controversy: ಅಸಹ್ಯ ಆಗ್ತಿದೆ ಪ್ರೇಮ್, ಎಲ್ಲಿ ಹೋದ್ರು ವಕೀಲರು: ಕೆಡಿ ಹಾಡಿನ ವಿರುದ್ಧ ತಣಿಯದ ಆಕ್ರೋಶ | Prem Faces Massive Backlash Over Sarse Sandalwood Song from KD The Devil Netizens Demand Action

Entertainment

oi-Manohara M

ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರದ “ಸರ್ಸೆ ನಿನ್ನ ಸೆರಗ ಸರ್ಸೆ” ಹಾಡು ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಈ ಹಾಡಿನ ಅಶ್ಲೀಲ ಸಾಹಿತ್ಯ ಮತ್ತು ದೃಶ್ಯಗಳ ವಿರುದ್ಧ ಕೇವಲ ಸಾಮಾನ್ಯ ಜನರಷ್ಟೇ ಅಲ್ಲದೆ, ಪ್ರಬುದ್ಧ ಚಿಂತಕರು ಮತ್ತು ಸಾಮಾಜಿಕ ಕಾರ್ಯಕರ್ತರು ಕೂಡ ಕೆಂಡಾಮಂಡಲವಾಗಿದ್ದಾರೆ. “ಅಸಹ್ಯವಾಗುತ್ತಿದೆ ಪ್ರೇಮ್” ಎನ್ನುವ ಮೂಲಕ ನೆಟ್ಟಿಗರು ಪ್ರೇಮ್‌ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಅಲ್ಲದೆ ಈ ಹಾಡಿಗೆ ಕಾಮೆಂಟ್‌ ಮಾಡುವ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.

ಸದ್ಯ ಈ ಹಾಡಿನ ಬಗ್ಗೆ ನೆಟ್ಟಿಗರು ವ್ಯಕ್ತಪಡಿಸುತ್ತಿರುವ ಕಾಮೆಂಟ್‌ಗಳು ‘ಶೋಮ್ಯಾನ್’ ಪ್ರೇಮ್ ಅವರ ಇಮೇಜ್‌ಗೆ ದೊಡ್ಡ ಪೆಟ್ಟು ನೀಡುತ್ತಿವೆ. “ಇಷ್ಟು ಹೊಲಸು ಮತ್ತು ಅಸಹ್ಯ ಸಾಹಿತ್ಯ ಪ್ರೇಮ್ ಸಿನಿಮಾದಲ್ಲಿ ಇರುತ್ತೆ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ” ಎಂದು ಅನೇಕರು ಕಾಮೆಂಟ್‌ ಮಾಡಿದ್ದಾರೆ. ವ್ಯಕ್ತಪಡಿಸುತ್ತಿದ್ದಾರೆ. ಈ ವರ್ಷ ‘ಅತ್ಯುತ್ತಮ ಅಶ್ಲೀಲ ಚಲನಚಿತ್ರ ಸಾಹಿತ್ಯ’ ಎಂಬ ಪ್ರಶಸ್ತಿಯನ್ನು ಏನಾದರೂ ಘೋಷಿಸಿದರೆ, ಅದು ಖಂಡಿತ ಈ ಹಾಡಿಗೇ ಸಿಗಲಿದೆ ಎಂದು ಜನರು ವ್ಯಂಗ್ಯವಾಡುತ್ತಿದ್ದಾರೆ. ಈ ಹಾಡನ್ನು ಸೂಕ್ಷ್ಮವಾಗಿ ಗಮನಿಸಿರುವ ಸಿನಿಪ್ರಿಯರು ಒಂದೆಡೆ ಅತ್ಯಂತ ಕಳಪೆ ಮಟ್ಟದ ಸಾಹಿತ್ಯವಿದ್ದರೆ, ಇಂತಹ ಅಶ್ಲೀಲಆಲೋಚನೆಗಳಿಂದ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ಕನ್ನಡ ಚಿತ್ರರಂಗದ ಘನತೆ ಕುಗ್ಗುತ್ತಿದೆ. “ಈಗ ಎಲ್ಲಿ ಹೋದರು ವಕೀಲರು ಮತ್ತು ಮಹಿಳಾ ಸಂಘದ ಕಾರ್ಯಕರ್ತರು? ಇಂತಹ ಹಾಡಿನ ವಿರುದ್ಧ ಯಾರೂ ಧ್ವನಿ ಎತ್ತುತ್ತಿಲ್ಲವೇಕೆ?” ಎಂದು ಕಾಮೆಂಟ್‌ ಮಾಡಿದ್ದಾರೆ.

Prem

“ಬೇಡುವೆನು ವರವನ್ನ” ಪ್ರೇಮ್‌ ಎಲ್ಲಿ ಹೋದ್ರು?

ಸಾಮಾನ್ಯವಾಗಿ ಇಂತಹ ‘ಐಟಂ ಸಾಂಗ್’ಗಳು ಹಬ್ಬದ ಸೀಸನ್‌ನಲ್ಲಿ ಹೆಚ್ಚು ಬಳಕೆಯಾಗುತ್ತವೆ. “ಮುಂದಿನ ಗಣೇಶ ವಿಸರ್ಜನೆಯ ಸಮಯದಲ್ಲಿ ಈ ಹಾಡನ್ನು ದೊಡ್ಡ ಸ್ಪೀಕರ್‌ಗಳಲ್ಲಿ ಹಾಕುತ್ತಾರೆ ಎಂಬ ಕಲ್ಪನೆಯೇ ಭಯ ಹುಟ್ಟಿಸುತ್ತಿದೆ” ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ‘ಜೋಗಿ’ಯಂತಹ ಸಿನಿಮಾದಲ್ಲಿ “ಬೇಡುವೆನು ವರವನ್ನ” ಎಂಬ ಸಾರ್ವಕಾಲಿಕ ಶ್ರೇಷ್ಠ ಹಾಡನ್ನು ಬರೆದಿದ್ದ ಪ್ರೇಮ್ ಅವರ ಕಡೆಯಿಂದ ಇಂತಹ ಕಳಪೆ ಗುಣಮಟ್ಟದ ಸಾಹಿತ್ಯ ಬಂದಿರುವುದು ಯಾರೂ ಊಹಿಸಿರಲಿಲ್ಲ. “ಇಂತಹ ಲಿರಿಕ್ಸ್ ಅನ್ನು ಯಾರು ಬೇಕಾದರೂ ಬರೆಯಬಹುದು, ಇದಕ್ಕೆ ಪ್ರೇಮ್ ಅವರಂತಹ ದೊಡ್ಡ ನಿರ್ದೇಶಕರು ಬೇಕಿರಲಿಲ್ಲ” ಎಂದು ಜನ ಕಾಮೆಂಟ್‌ಗಳಲ್ಲಿ ಕಿಡಿಕಾರುತ್ತಿದ್ದಾರೆ. “ಈಗಲೂ ಕಾಲ ಮಿಂಚಿಲ್ಲ, ದಯವಿಟ್ಟು ಹಾಡಿನ ಸಾಹಿತ್ಯವನ್ನು ಬದಲಿಸಿಕೊಳ್ಳಿ. ನಿಮ್ಮಿಂದ ನಾವು ಉತ್ತಮ ಸಂದೇಶಾತ್ಮಕ ಮನರಂಜನೆಯನ್ನು ಬಯಸುತ್ತೇವೆ ಹೊರತು ಇಂತಹ ಅಶ್ಲೀಲತೆಯನ್ನಲ್ಲ” ಎಂದು ಪ್ರೇಮ್ ಅವರಿಗೆ ಕನ್ನಡಿಗರು ನೇರವಾಗಿಯೇ ಕಿವಿಮಾತು ಹೇಳುತ್ತಿದ್ದಾರೆ.

ಹೆಸರು ಹಾಳು ಮಾಡುವುದಕ್ಕೆ ಇದೊಂದು ಹಾಡು ಸಾಕು

ಈ ಬಗ್ಗೆ ಬರಹಗಾರ ಕೃಷ್ಣ ಭಟ್‌ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ‘ಈ ಜೋಗಿ ಪ್ರೇಮ್ಸ್ ಹಾಡಿನಿಂದ ಬಾಲಿವುಡ್ ಹಾಗೂ ಇತರ ಸಿನಿಮಾ ರಂಗದಲ್ಲಿ ಕರ್ನಾಟಕದ ಸಿನಿಮಾ ಗಳಿಸಿದ್ದ ಹೆಸರೂ ಹಾಳಾಗ್ತಾ ಇದೆ. ಹಿಂದಿ ಸಾಹಿತ್ಯವನ್ನು ಕೇಳಿದವರು ಉಗಿದು ಉಪ್ಪಿನಕಾಯಿ ಹಾಕ್ತಾ ಇದ್ದಾರೆ. ಇದನ್ನು ನಿಷೇಧ ಮಾಡಿ ಅಂತಲೂ ಟ್ವಿಟರ್‌ನಲ್ಲಿ ಜನ ಕೇಳ್ತಾ ಇದ್ದಾರೆ. ಕನ್ನಡದ ಸಿನಿಮಾ ರಂಗದವರು ಬೇಗ ಎಚ್ಚೆತ್ತುಕೊಂಡು ಈ ಹಾಡನ್ನು ನಿಲ್ಲಿಸದಿದ್ದರೆ, ಕರ್ನಾಟಕದ ಬೇರೆ ಸಿನಿಮಾಗಳನ್ನೂ ಬೇರೆ ರಾಜ್ಯದ ಜನರು ಅಷ್ಟೇ ಕೀಳಾಗಿ ನೋಡುವುದಕ್ಕೆ ಶುರು ಮಾಡ್ತಾರೆ. ಬಹುಶಃ ಕೆಜಿಎಫ್‌ ಹಾಗೂ ಕಾಂತಾರ ಸಿನಿಮಾಗಳಿಂದ ಗಳಿಸಿದ್ದ ಹೆಸರು ಹಾಳು ಮಾಡುವುದಕ್ಕೆ ಇದೊಂದು ಹಾಡು ಸಾಕು…’

ಇನ್ನು ನಟಿ ಮತ್ತು ಲೇಖಕಿ ಸುಷ್ಮಾ ಭಾರದ್ವಾಜ್ ಅವರು ಕೂಡ ಅಸಮಾಧಾನ ಹೊರಹಾಕಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. “ಅದ್ಯಾಕೋ ಈ ವಿಷಯದ ಬಗ್ಗೆ ಸುಮ್ನಿರಬೇಕು ಅನ್ನಿಸ್ತಿಲ್ಲ. ಸಿನಿಮಾ ಕೆಲವರಿಗೆ ಮನೋರಂಜನೆ ಕೆಲವರಿಗೆ ಅನ್ನ ಇನ್ನೂ ಕೆಲವರಿಗೆ ವೃತ್ತಿ.. ಆದ್ರೆ ಈ ಸಲ Prem S ಇಂಥದ್ದೊಂದು ಹೀನಾಯ ಸ್ಥಿತಿಗೆ ಇಳಿದು ಇಂಥ ಥರ್ಡು ಕ್ಲಾಸ್ ಸಾಹಿತ್ಯ ಬರೆದಿರೋದನ್ನ ನೋಡಿದ್ರೆ ಅಸಹ್ಯ ಆಗುತ್ತೆ.ಸರಿ ಸರ್, you are a film maker, maybe you were desparate. But ಹಾಗಂತ ಇಂಥ ಲೆವೆಲ್ಗೆ ಇಳಿಯೋದ್ ಅವಶ್ಯಕತೆ ಇತ್ತಾ? ನಿಮ್ಮ ತಾಯಿ ಈ ಹಾಡು ಕೇಳಿದ್ರೆ ಇಷ್ಟ ಪಡ್ತಿದ್ರಾ? ನಿಮ್ಮ ಹೆಂಡತಿ ಈ ಹಾಡನ್ನ ಇಷ್ಟ ಪಟ್ಟರಾ? ಪಿ ಜನಾನ ಥಿಯೇಟರ್ಗೆ ಕರೆಸೋ ಪ್ರಯತ್ನದಲ್ಲಿ ನಿಮ್ಮ ಕ್ರಿಯೇಟಿವಿಟಿ ಈ ಮಟ್ಟಕ್ಕೆ ಕುಸಿಯುತ್ತೆ ಅಂದ್ರೆ ನಿಮ್ಮ ಆಟದಲ್ಲಿ fair ಪ್ಲೇನೇ ಇಲ್ಲಾಂತ ಅರ್ಥ”.

“ಈ ಹೆಂಗಾದ್ರೂ ಮಾಡಿ ಗೆಲ್ಲಬೇಕು ಅನ್ನೋ ಚಲಕ್ಕೂ ಒಂದು ಆತ್ಮಸಾಕ್ಷಿಯ ಮಾನದಂಡ ಇರುತ್ತೆ. ಒಂದು ಪ್ರಗತಿಶೀಲ ಸಮಾಜದಲ್ಲಿ ಇರ್ಬೇಕು. ಅದು ಒಬ್ಬ ಕಥೆಗಾರನಾಗಿ ನಿಮ್ಮ ಜವಾಬ್ದಾರಿ, ಹೊಣೆ. ಈ ಹಾಡನ್ನ so called ಪಡ್ಡೆ ಹುಡುಗರು ನೋಡ್ತಾರೆ, ಮಕ್ಕಳು ನೋಡ್ತಾರೆ, ಅವರ ಮನಸ್ಸಿನ ಮೇಲದು ಪರಿಣಾಮ ಬೀರುತ್ತೆ, ಮನೆಲೂ ಅಮ್ಮ, ಅಕ್ಕ ತಂಗೀರ ಮುಂದೆ ಗುನುಗ್ತಾರೆ, ಅನ್ನೋ ಕಲ್ಪನೆನೆ ಇಲ್ವಾ ಸರ್ ನಿಮ್ಗೆ? ಹೇಲು ತಿಂದ್ರೆ ನಾಲ್ಕು ಜನ ನೋಡ್ತಾರೆ, ಹಾಡು ವೈರಲ್ ಆಗುತ್ತೆ ಅನ್ನೋ ನಿಮ್ಮ ಮನಸ್ಥಿತಿಗೆ ಧಿಕ್ಕಾರ . By the way, am curious.. ನಿಮ್ ಮನೇಲಿ ಈ ಹಾಡಿಗೆ ಅದ್ಯಾವ ಥರ ರಿಯಾಕ್ಷನ್ ಇತ್ತು ?! ಅಟ್ಲೀಸ್ಟ್ @ lakshmi_hebbalkar Dr. Nagalakshmi ಡಾ. ನಾಗಲಕ್ಷ್ಮಿJayalaxmi PatilKusuma Ayarahalli ನಿಮಗೇನಾದ್ರೂ ಮಾಡಕ್ಕಾಗುತ್ತಾ ನೋಡಿ ಶಶಿಧರ್ ಕೋಸಂಬೆ #shameonyouprem” ಎಂದು ಬರೆದುಕೊಂಡಿದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/entertainment/prem-faces-massive-backlash-over-sarse-sandalwood-song-from-kd-the-devil-netizens-demand-action-447391.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo