PUC ವಿಜ್ಞಾನ ವಿಭಾಗದಲ್ಲಿ ಶೇ.91.69ರಷ್ಟು ದಾಖಲೆ ಫಲಿತಾಂಶ: ಇವರೇ 599 ಅಂಕ ಗಳಿಸಿದ ಟಾಪರ್ | Karnataka 2nd PUC Science Results 2026: Pass Percentage Soars to 91.69, who is topper, Check here

Karnataka

oi-Shankrappa Parangi

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳು ಎಂದಿನಂತೆ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಬಾರಿ ಶೇಕಡಾ 88.5ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಲವು ಮಂದಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತಾಂತ್ರಿಕ ಮತ್ತು ವೈದ್ಯಕೀಯದಂತಹ ವೃತ್ತಿಪರ ಕೋರ್ಸ್‌ಗಳಿಗೆ ಸೇರಲು ಬಯಸುವವರಿಗೆ ಇದು ದೊಡ್ಡ ಉತ್ತೇಜನ ನೀಡಿದೆ. ಎಷ್ಟು ಮಂದಿ ಟಾಪರ್ಸ್‌, ಅವರು ಪಡೆದ ಅಂಕಗಳು, ಕಳೆದ ವರ್ಷದ ಸಾಧನೆ, ಅಂಕಿ ಅಂಶ ಇಲ್ಲಿದೆ.

ದ್ವಿತೀಯ ಪಿಯಸಿ ವಿಜ್ಞಾನ ವಿಭಾಗವು ಇತರ (ಕಲಾ ಮತ್ತು ವಾಣಿಜ್ಯ) ವಿಭಾಗಗಳಿಗಿಂತ ಅತಿ ಹೆಚ್ಚು ಅಂದರೆ ಶೇ. 91.69ರಷ್ಟು ಫಲಿತಾಂಶ ದಾಖಲಿಸಿದ್ದು, ಹಿಂದಿನ ವರ್ಷಕ್ಕಿಂತ ಇದು ಗರಿಷ್ಠ ಸಾಧನೆ ಆಗಿದೆ. ಪಿಯು ವಿಜ್ಞಾನ ಪರೀಕ್ಷೆಗೆ ಒಟ್ಟು 2,90,194 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ 2,66,071 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

Karnataka 2nd PUC 2026 Science Results

ಮಂಗಳೂರಿನ ‘ದಿ ಲರ್ನಿಂಗ್ ಸೆಂಟರ್’ ಪಿಯು ಕಾಲೇಜಿನ ಪ್ರಿಸ್ಸಿಲ್ಲಾ ಕಾರ್ಡೋಜಾ ಅವರು 599 ಅಂಕಗಳನ್ನು ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ನಂತರದ ಸ್ಥಾನದಲ್ಲಿ ಪುತ್ತೂರಿನ ವಿವೇಕಾನಂದ ಪಿಯು ಕಾಲೇಜಿನ ಅಭಿರಾಮ್ ವಿ.ಭಟ್, ಬೆಂಗಳೂರಿನ ಬೇಸ್ ಪಿಯು ಕಾಲೇಜಿನ ಏಂಜೆಲ್ ತಿವಾರಿ ಸೇರಿದಂತೆ ಒಟ್ಟು 12 ವಿದ್ಯಾರ್ಥಿಗಳು 598 ಅಂಕ ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಶಿಕ್ಷಣ ಇಲಾಖೆ ಪ್ರಕಾರ, ಒಟ್ಟು 32 ಮಂದಿ ಅತ್ಯಧಿಕ ಅಂಕ ಪಡೆದಿದ್ದಾರೆ.

ಕಳೆದ ಸಾಲಿನ ವಿಜ್ಞಾನ ವಿದ್ಯಾರ್ಥಿಗಳ ಸಾಧನೆ?

ಕಳೆದ ವರ್ಷ 2024-25ರಲ್ಲಿ ಬರೋಬ್ಬರಿ 2,80,433 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 2,31, 461ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಅಂದು ಒಟ್ಟು ಫಲಿತಾಂಶ 82.54ರಷ್ಟಿತ್ತು. ಇಂದು ವಿಜ್ಞಾನ ವಿದ್ಯಾರ್ಥಿಗಳು 91,63 ರಷ್ಟಾಗುವ ಮೂಲಕ ಮೈಲಿಗಲ್ಲು ಸಾಧನೆ ಮಾಡಿದ್ದಾರೆ.

ಪಿಯುಸಿ ಪರೀಕ್ಷೆ-2 ದಿನಾಂಕ ಘೋಷಣೆ

ಒಟ್ಟಾರೆ ನೋಡುವುದಾದರೆ ರಾಜ್ಯಾದ್ಯಂತ ಒಟ್ಟು 6,32,200 ಹೊಸ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಬಾರಿ ಒಟ್ಟು ಶೇ.86.48 ರಷ್ಟಾಗಿದೆ. 2025ರಲ್ಲಿ ಶೇ. 73.45ರಷ್ಟಾಗಿತ್ತು. ಪ್ರತಿ ವರ್ಷದಂತೆ ಬಾಲಕಿಯರು (ಶೇ. 88.70) ಬಾಲಕರಿಗಿಂತ (ಶೇ. 83.65) ಉತ್ತಮ ಸಾಧನೆ ಪ್ರದರ್ಶಿಸಿದ್ದಾರೆ. ಇನ್ನೂ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ (ಶೇ. 85.95) ಗ್ರಾಮೀಣ ಭಾಗದ ವಿದ್ಯಾರ್ಥಿಗಳು (ಶೇ. 87.62) ಕಲಿಕೆ ಮುಂದುವರಿದಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ-2ನ್ನು ಏಪ್ರಿಲ್ 30ರಿಂದ ಮೇ 13ರವರೆಗೆ ನಡೆಸಲು ಮಂಡಳಿ ನಿರ್ಧರಿಸಿದ್ದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-2nd-puc-science-results-2026-pass-percentage-soars-to-91-69-who-is-topper-check-here-449935.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo