Radhika Pandit: ಯಶ್‌ ನೀಡಿದ ಮೊದಲ ಗಿಫ್ಟ್‌ ಕೊತ್ತಂಬರಿ ಸೊಪ್ಪು: ಹಳೆ ನೆನಪು ಬಿಚ್ಚಿಟ್ಟ ರಾಧಿಕಾ ಪಂಡಿತ್‌ | Radhika Pandit Reveals First Gift from Husband Yash A Bunch of Coriander Leaves instead of flowers

Entertainment

oi-Manohara M

ಸ್ಯಾಂಡಲ್‌ವುಡ್‌ನ ‘ಸಿಂಡ್ರೆಲಾ’ ಖ್ಯಾತಿಯ ನಟಿ, ಯಶ್‌ ಪತ್ನಿ ರಾಧಿಕಾ ಪಂಡಿತ್‌ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಿನಿಮಾಗಳಿಂದ ಹಲವು ವರ್ಷಗಳ ಕಾಲ ದೂರ ಉಳಿದಿದ್ದರೂ, ಅಭಿಮಾನಿಗಳು ತೋರುತ್ತಿರುವ ಈ ಅವಿನಾಭಾವ ಪ್ರೀತಿಯನ್ನು ಕಂಡು ಅವರು ಭಾವುಕರಾದರು. ಇದೇ ಸಂದರ್ಭದಲ್ಲಿ ರಾಧಿಕಾ ಅವರು ತಮ್ಮ ವೈಯಕ್ತಿಕ ಜೀವನದ ಕೆಲವು ಕುತೂಹಲಕಾರಿ ಮತ್ತು ತಮಾಷೆಯ ಸಂಗತಿಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ರಾಕಿಂಗ್ ಸ್ಟಾರ್ ಯಶ್ ನೀಡಿದ ಮೊದಲ ಉಡುಗೊರೆಯ ವಿಷಯ ಎಲ್ಲರ ಗಮನ ಸೆಳೆಯುತ್ತಿದೆ.

ವಸ್ತುಗಳಿಗಿಂತ ಸಮಯವೇ ದೊಡ್ಡ ಉಡುಗೊರೆ

ಬೆಲೆಬಾಳುವ ವಸ್ತುಗಳಿಗಿಂತ ಭಾವನೆಗಳಿಗೆ ಹೆಚ್ಚು ಬೆಲೆ ನೀಡುವ ಈ ಜೋಡಿ, ಉಡುಗೊರೆಗಳ ವಿಚಾರದಲ್ಲಿ ಸರಳತೆಯನ್ನು ಇಷ್ಟಪಡುತ್ತಾರೆ. “ನಾನು ಮತ್ತು ಯಶ್‌ ಸಾಮಾನ್ಯವಾಗಿ ಪರಸ್ಪರ ವಸ್ತುಗಳನ್ನು ಗಿಫ್ಟ್‌ ಮಾಡುವುದಿಲ್ಲ. ನಮ್ಮ ಪ್ರಕಾರ ಪರಸ್ಪರ ಕೊಡುವ ಪ್ರೀತಿ, ಗೌರವ ಮತ್ತು ಜೊತೆಯಲ್ಲಿ ಕಳೆಯುವ ಸಮಯವೇ ಜಗತ್ತಿನ ಅತೀ ದೊಡ್ಡ ಗಿಫ್ಟ್‌. ಇಂತಹ ಪುಟ್ಟ ಪುಟ್ಟ ವಿಷಯಗಳೇ ನಮಗೆ ಬಹಳ ದೊಡ್ಡದು ಅನಿಸುತ್ತೆ” ಎಂದು ರಾಧಿಕಾ ತಮ್ಮ ದಾಂಪತ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

Radhika Pandit

ಕೊತ್ತಂಬರಿ ಸೊಪ್ಪು ಕೊಟ್ಟಿದ್ರು

ಸಾಮಾನ್ಯವಾಗಿ ಪ್ರೀತಿಸುವವರು ಅಥವಾ ಆಪ್ತರು ಮೊದಲ ಭೇಟಿಯಲ್ಲಿ ಹೂಗುಚ್ಛ (Bouquet) ನೀಡುವುದು ವಾಡಿಕೆ. ಆದರೆ ಯಶ್‌ ಅವರ ಶೈಲಿಯೇ ವಿಭಿನ್ನ. ಈ ಬಗ್ಗೆ ನೆನಪು ಮಾಡಿಕೊಂಡ ರಾಧಿಕಾ ಪಂಡಿತ್, ಎಲ್ಲರೂ ಸಾಮಾನ್ಯವಾಗಿ ಹೂಗುಚ್ಛಗಳನ್ನು ನೀಡುತ್ತಾರೆ. ಆದರೆ ಯಶ್‌ ವಿಭಿನ್ನವಾಗಿರಬೇಕು ಎಂದು ನನಗೆ ನೀಡಿದ ಮೊದಲ ಗಿಫ್ಟ್‌ ಅಂದರೆ ಅದು ‘ಕೊತ್ತಂಬರಿ ಸೊಪ್ಪಿನ ದೊಡ್ಡ ಕಟ್ಟು’. ಅದು ನನಗೆ ಎಂದಿಗೂ ಮರೆಯಲಾಗದ ಮತ್ತು ಅತ್ಯಂತ ನೆನಪಿನಲ್ಲಿ ಉಳಿಯುವ ಉಡುಗೊರೆ” ಎಂದು ನಸುನಗುತ್ತಾ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಇಷ್ಟ

ಹುಟ್ಟುಹಬ್ಬದ ಸಂಭ್ರಮದಲ್ಲಿ ನೆರೆದಿದ್ದ ಅಭಿಮಾನಿಗಳ ಸಾಗರವನ್ನು ಕಂಡು ರಾಧಿಕಾ ಪಂಡಿತ್ ಅವರು ಅತ್ಯಂತ ಭಾವುಕರಾಗಿ ಮಾತನಾಡಿದರು. ಸಿನಿಮಾಗಳಿಂದ ಬ್ರೇಕ್ ಪಡೆದಿದ್ದರೂ ತಮ್ಮ ಮೇಲಿರುವ ಅಭಿಮಾನ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದನ್ನು ಕಂಡು ಅವರು ಆಶ್ಚರ್ಯಚಕಿತರಾದರು. ನನಗೆ ವೈಯಕ್ತಿಕವಾಗಿ ಬಹಳ ಖುಷಿಯಾಗುತ್ತದೆ. ಇಷ್ಟು ವರ್ಷಗಳಾದ ಬಳಿಕವೂ ಕರ್ನಾಟಕದ ಹಲವು ಮೂಲೆಗಳಿಂದ ಜನ ಬಂದು ನನಗೆ ಜನ್ಮದಿನದ ಶುಭಾಶಯ ತಿಳಿಸುತ್ತಾರೆ. ಇದು ನಿಜಕ್ಕೂ ಖುಷಿಯ ವಿಚಾರ ಎಂದಿದ್ದಾರೆ.

Radhika Pandit

ಇವತ್ತಿನ ಒಂದು ದಿನ ನಾನು ಅವರೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಇಷ್ಟಪಡುತ್ತೇನೆ ಎನ್ನುವ ಮೂಲಕ ತಮ್ಮ ವಿಶೇಷ ದಿನವನ್ನು ಸಂಪೂರ್ಣವಾಗಿ ಅಭಿಮಾನಿಗಳಿಗೆ ಮೀಸಲಿಟ್ಟರು. ಜನರಿಂದ ಇಷ್ಟೊಂದು ಪ್ರೀತಿ ಪಡೆಯುತ್ತಿರುವ ನಾನು ಅದೃಷ್ಟವಂತೆ ಎಂದೇ ಭಾವಿಸುತ್ತೇನೆ. ಕೆಲವೇ ಜನರಿಗೆ ಮಾತ್ರ ಈ ರೀತಿಯ ಜನಪ್ರೀತಿ ಸಿಗುತ್ತದೆ. ಅದು ನನಗೆ ಸಿಕ್ಕಿರುವುದಕ್ಕೆ ನಾನು ನಿಜಕ್ಕೂ ಧನ್ಯ ಎಂದು ರಾಧಿಕಾ ಸಂತಸ ಹಂಚಿಕೊಂಡಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/radhika-pandit-reveals-first-gift-from-husband-yash-a-bunch-of-coriander-leaves-instead-of-flowers-446345.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo