
Entertainment
oi-Manohara M
ನಟ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ರಿಲೀಸ್ಗೆ ದಿನಗಣನೆ ಆರಂಭವಾಗಿರುವ ನಡುವೆಯೇ, ಯಶ್ ಅವರ ಪತ್ನಿ ಹಾಗೂ ಸ್ಯಾಂಡಲ್ವುಡ್ ಸಿಂಡ್ರೆಲಾ ಎಂದೇ ಖ್ಯಾತರಾಗಿರುವ ನಟಿ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಹಂಚಿಕೊಳ್ಳುವ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಮಗ ಯಥರ್ವ್ ಜೊತೆಗೆ ರಾಧಿಕಾ ಬಾಲ್ಯಕ್ಕೆ ಮರಳಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ರಾಧಿಕಾ ಪಂಡಿತ್ ಶೇರ್ ಮಾಡಿಕೊಂಡಿರುವ ಒಂದು ಅಪರೂಪದ ಫೋಟೋ ಇದೀಗ ವೈರಲ್ ಆಗಿದ್ದು, ಮುದ್ದು ಮಗ ಯಥರ್ವ್ಗೆ “ಬೊಂಬೆ ಮಿಠಾಯಿ” ಕೊಡಿಸುತ್ತಿರುವ ಕ್ಷಣ ಎಲ್ಲರ ಮನ ಗೆದ್ದಿದೆ. ಈ ಫೋಟೋ ಜೊತೆ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿರುವ ರಾಧಿಕಾ, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

‘ಆ ಧ್ವನಿ ಕೇಳಿದರೆ ಸಾಕು… ಖುಷಿ ತುಂಬುತ್ತಿತ್ತು’
“ಚಿಕ್ಕವರಾಗಿದ್ದಾಗ ದೂರದಿಂದ ಕೇಳಿಸುತ್ತಿದ್ದ ಆ ಪರಿಚಿತ ಧ್ವನಿ… 😍 ಅದನ್ನು ಕೇಳಿದ ಕ್ಷಣವೇ ಮನಸ್ಸು ಖುಷಿಯಿಂದ ತುಂಬುತ್ತಿತ್ತು. ಯಾಕೆಂದರೆ ಏನು ಬರ್ತಿದೆ ಅಂತ ನಮಗೆ ಗೊತ್ತೇ ಇರುತ್ತಿತ್ತು” ಎಂದು ಬರೆದುಕೊಂಡಿರುವ ರಾಧಿಕಾ, ಇಂದು ಅದೇ ಕ್ಷಣವನ್ನು ನನ್ನ ಮಗ ಯಥರ್ವ್ ಮೊದಲ ಬಾರಿಗೆ ಅನುಭವಿಸುತ್ತಿರುವುದನ್ನು ನೋಡೋದು ತುಂಬಾ ವಿಶೇಷ ಎಂದು ಹೇಳಿದ್ದಾರೆ. ಯಥರ್ವ್ ಕಣ್ಣಲ್ಲಿದ್ದ ಕುತೂಹಲ, ಮುಖದಲ್ಲಿದ್ದ ನಗು ಅಮೂಲ್ಯ ಎಂದು ಹೇಳಿರುವ ಅವರು, “ಯಾವ ಸಿಹಿ ತಿಂಡಿ ಅಂತ ಗೆಸ್ ಮಾಡಿ ನೋಡೋಣ…?” ಎಂದು ಅಭಿಮಾನಿಗಳಿಗೆ ಕುತೂಹಲದ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ.
‘ಇದು ಎಲ್ಲರ ಫೇವರೇಟ್!’
ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳ ಬಹುಪಾಲು, “ಇದು ಎಲ್ಲರ ಫೇವರೇಟ್ ಬೊಂಬೆ ಮಿಠಾಯಿ” ಎಂದು ಕಾಮೆಂಟ್ ಮಾಡಿದ್ದು, ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಕೆಲವರು “ನಮ್ಮ ಬಾಲ್ಯ ನೆನಪಾಯಿತು”, “ಈ ಕ್ಷಣ priceless” ಎಂದರೆ, ಇನ್ನೂ ಕೆಲವರು ರಾಧಿಕಾ ಅವರನ್ನು ‘ಅತ್ತಿಗೆ’ ಎಂದು ಪ್ರೀತಿಯಿಂದ ಕರೆದಿದ್ದಾರೆ.
ಒಂದು ಕಡೆ ಯಶ್ ಅವರ ‘ಟಾಕ್ಸಿಕ್’ ಸಿನಿಮಾ ರಿಲೀಸ್ಗೆ ಭಾರೀ ನಿರೀಕ್ಷೆ, ಮತ್ತೊಂದು ಕಡೆ ರಾಧಿಕಾ-ಯಥರ್ವ್ ಅವರ ಈ ಆತ್ಮೀಯ ಕ್ಷಣ… ಈ ಎರಡೂ ಸೇರಿ ಯಶ್ ಅಭಿಮಾನಿಗಳ ಮನಸ್ಸು ಇನ್ನಷ್ಟು ಕರಗಿಸಿದೆ. ಸ್ಟಾರ್ಡಮ್ನ ಗದ್ದಲದ ಮಧ್ಯೆಯೂ, ಕುಟುಂಬದ ಸಣ್ಣ ಸಂತೋಷಗಳೇ ದೊಡ್ಡದಾಗಿದೆ ಎಂಬ ಸಂದೇಶ ಈ ಪೋಸ್ಟ್ ಮೂಲಕ ಮತ್ತೆ ಸಾಬೀತಾಗಿದೆ ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು. ಸಿನಿಮಾ ಹೈಪ್ ನಡುವೆ ಬಂದ ಈ ಸಿಹಿಯಾದ ಕುಟುಂಬದ ಕ್ಷಣ, ಸೋಷಿಯಲ್ ಮೀಡಿಯಾದಲ್ಲಿ ಈಗ ಸಕ್ಕತ್ ಸದ್ದು ಮಾಡುತ್ತಿದೆ.
ಮರೆಯಾಗುತ್ತಿರುವ ಬೊಂಬೆ ಮಿಠಾಯಿ
ಬೊಂಬೆ ಮಿಠಾಯಿ ಒಂದು ಸಾಂಪ್ರದಾಯಿಕ ಮತ್ತು ಅಪರೂಪವಾಗುತ್ತಿರುವ ಸಿಹಿತಿಂಡಿಯಾಗಿದ್ದು, ಇದನ್ನು ಸಾಮಾನ್ಯವಾಗಿ ಸಕ್ಕರೆಯಿಂದ ತಯಾರಿಸಲಾಗುತ್ತದೆ. ಇದು ಕೆಂಪು, ಬಿಳಿ ಮತ್ತು ಹಳದಿ ಬಣ್ಣಗಳಲ್ಲಿ ಸಿಗುವ ರಬ್ಬರಿ ಚೂಯಿಂಗ್ ಕ್ಯಾಂಡಿ (Chewy Candy) ಆಗಿದೆ. ಹಲವು ವರ್ಷಗಳ ಹಿಂದೆ ಕೋಲಿಗೆ ಬೊಂಬೆಗಳನ್ನು ಕಟ್ಟಿ ಮಾರಾಟ ಮಾಡುತ್ತಿದ್ದರಿಂದ ಇದಕ್ಕೆ ಬೊಂಬೆ ಮಿಠಾಯಿ ಈ ಹೆಸರು ಬಂದಿದೆ.

ಇದು ವಿವಿಧ ಬೊಂಬೆಗಳ ಆಕಾರದಲ್ಲಿ ಲಭ್ಯವಿರುತ್ತದೆ ಮತ್ತು ಪ್ರಕಾಶಮಾನವಾದ ಬಣ್ಣಗಳನ್ನು ಹೊಂದಿರುತ್ತದೆ. ಇದು ಅಗಿಯುವಿಕೆಗೆ ಮೃದುವಾಗಿದ್ದು, ಸಿಹಿಯಾಗಿರುತ್ತದೆ. ಇಂದಿನ ದಿನಗಳಲ್ಲಿ ಈ ಬೊಂಬೆ ಮಿಠಾಯಿವಾಲಾಗಳು ಅಪರೂಪವಾಗಿದ್ದು, ವಿಶೇಷವಾಗಿ ಜಾತ್ರೆಯಂತಹ ಸಮಾರಂಭಗಳಲ್ಲಿ ಕಾಣಸಿಗುತ್ತಾರೆ. ಅಲ್ಲದೆ ಇದು ಆಧುನಿಕ ಚಾಕೊಲೇಟ್ಗಳ ಭರಾಟೆಯಲ್ಲಿ ಕಣ್ಮರೆಯಾಗುತ್ತಿರುವ ಒಂದು ವಿಶಿಷ್ಟ ಸಿಹಿ ತಿನಿಸು ಎಂದರೆ ತಪ್ಪಾಗದು.
-

ಅಪ್ಪು ಹೀರೋ ಆಗಿದ್ದು ನನ್ನಿಂದ, ನನಗೆ ಮೋಸ ಮಾಡಿದವರನ್ನ ದೇವರೇ ಕರ್ಕೊಂಡ: ಕನಕಪುರ ಶ್ರೀನಿವಾಸ್
-

ಬರಗಾಲದಲ್ಲೂ ಬಡವರಿಗೆ ಯುಗಾದಿ ಹಬ್ಬ ತರುವ ಹುಣಸೆ: ತುಮಕೂರಿನ ತೋವಿನಕೆರೆಯಲ್ಲಿ ಫೆಬ್ರವರಿ 23ಕ್ಕೆ ಹುಣಸೆ ಕಾರ್ಯಾಗಾರ
-

ಹಾಸನಕ್ಕೆ ಡಬಲ್ ಧಮಾಕ: ಮೆಗಾ ಡೇರಿಗೆ 150 ಕೋಟಿ ರೂ. ಬಂಪರ್ ಕೊಡುಗೆ, ರೈಲು ನಿಲ್ದಾಣಗಳಿಗೆ ಹೈಟೆಕ್ ಸ್ಪರ್ಶ
-

Gold Price: ಚಿನ್ನ-ಬೆಳ್ಳಿ ದರದಲ್ಲಿ ಮತ್ತೆ ಹಾವು-ಏಣಿ ಆಟ: ಒಂದೇ ದಿನದಲ್ಲಿ ದಾಖಲೆಯ ಏರಿಕೆ ಕಂಡ ಬಂಗಾರ
-

ಪಾಕಿಸ್ತಾನ ಮಾನ ಮತ್ತೊಮ್ಮೆ ಹರಾಜು, ಬಲೂಚಿಸ್ತಾನ ಘಟನೆಯಿಂದ ಬಯಲಾಯ್ತು ಕರಾಳ ಮುಖ | Balochistan Crisis
-

Gilli: ಗಿಲ್ಲಿ ನಟನ ವಿರುದ್ಧ ದೂರು, ಬಿಗ್ಬಾಸ್ ಗೆದ್ದ ಬೆನ್ನಲ್ಲೇ ದೊಡ್ಡ ಸಂಕಷ್ಟ
-

ಫೆಬ್ರವರಿ 7 ದಿನ ಭವಿಷ್ಯ: ಎಲ್ಲಾ ರಾಶಿಯವರ ಉದ್ಯೋಗ, ಹಣಕಾಸು, ಆರೋಗ್ಯ ಹಾಗೂ ಸಂಬಂಧಗಳ ಕುರಿತ ಸಂಪೂರ್ಣ ಭವಿಷ್ಯ ತಿಳಿಯಿರಿ
-

Horoscope February 6: ಫೆಬ್ರವರಿ 6 ದಿನ ಭವಿಷ್ಯ: ಯಾವ ರಾಶಿಯವರು ಏನು ಪಾಲನೆ ಮಾಡಬೇಕು ತಿಳಿಯಿರಿ
-

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ವೀಕೆಂಡ್ನಲ್ಲಿ ಕರೆಂಟ್ ಇರಲ್ಲ, 2 ದಿನ ಪವರ್ ಕಟ್
-

Gold: ವಿದೇಶದಿಂದ ಚಿನ್ನ ತರುವುದು ಇನ್ಮುಂದೆ ಇನ್ನಷ್ಟು ಸುಲಭ, ಕೇಂದ್ರ ಸರ್ಕಾರದಿಂದ ಗುಡ್ನ್ಯೂಸ್
-

Gold Price Drop Today: ಚಿನ್ನ – ಬೆಳ್ಳಿ ಪ್ರಿಯರಿಗೆ ಭರ್ಜರಿ ಗುಡ್ನ್ಯೂಸ್: ಬರೋಬ್ಬರಿ 25,000 ರೂ ಇಳಿಕೆ
-

Karnataka Heat Wave: ರಾಜ್ಯದಲ್ಲಿ ಫೆಬ್ರವರಿ ಅಂತ್ಯಕ್ಕೆ ಶಾಖದ ಅಲೆ ವಾತಾವರಣ ನಿರೀಕ್ಷೆ, 7 ದಿನದ ಮುನ್ಸೂಚನೆ
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/radhika-pandit-relives-childhood-while-giving-bombay-mithai-to-son-yatharv-photo-goes-viral-442993.html. xn--babytilbehr-pgb.com does not claim ownership of this content. All rights remain with the original publisher.
