Rahul Chahar Divorce: ಟೀಂ ಇಂಡಿಯಾ ಕ್ರಿಕೆಟರ್ ರಾಹುಲ್‌ ಚಹರ್ ಬಾಳಲ್ಲಿ ಬಿರುಗಳಿ | Rahul Chahar Announces Divorce from Wife Ishani Johar After Over 3 Years of Marriage: Know details

Sports

oi-Madhusudhan KR

Rahul Chahar Divorce: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಅನ್ನುವುದು ಒಂದು ಟ್ರೆಂಡ್‌ ಆಗಿಬಿಟ್ಟಿದೆ. ಅದರಲ್ಲೂ, ಹೆಚ್ಚಾಗಿ ಸೆಲೆಬ್ರೆಟಿಗಳು ಈ ದಾರಿ ಹಿಡಿಯುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ಹಾಗೂ ಐಪಿಎಲ್‌ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್ ರಾಹುಲ್ ಚಹರ್ ಅವರು (ಫೆಬ್ರವರಿ 20)ರಂದು ತಮ್ಮ ಪತ್ನಿ ಇಶಾನಿ ಜೋಹರ್‌ನಿಂದ ವಿಚ್ಛೇದನ ಪಡೆದಿದ್ದಾರೆ. ಈ ಬಗ್ಗೆ ಚಹರ್ ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತವಾಗಿ ಘೋಷಿಸಿದ್ದಾರೆ.

ಮೂರೂವರೆ ವರ್ಷಗಳಿಗಿಂತ ಹೆಚ್ಚು ಕಾಲ ದಾಂಪತ್ಯ ಜೀವನ ನಡೆಸಿದ ಬಳಿಕ, ರಾಹುಲ್ ಇಶಾನಿಯಿಂದ ವಿಚ್ಛೇದನ ಪಡೆದಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಕೊಂಡು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ರಾಹುಲ್ ಸ್ವತಃ ಈ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

Rahul Chahar Announces Divorce from Wife Ishani Johar After Over 3 Years of Marriage Know details

ಇವರು 2022ರ ಮಾರ್ಚ್ 9ರಂದು ಗೋವಾದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. 26 ವರ್ಷದ ರಾಹುಲ್ ಚಹರ್ ತಮ್ಮ ಹೇಳಿಕೆಯಲ್ಲಿ ಕಾನೂನು ಸಂಬಂಧಿತ ಪ್ರಕ್ರಿಯೆಗಳು ಈಗ ಪೂರ್ಣಗೊಂಡಿದ್ದು, ವಿಚಾರವನ್ನು ಪರಸ್ಪರ ಒಪ್ಪಿಗೆಯೊಂದಿಗೆ ಅಂತಿಮಗೊಳಿಸಲಾಗಿದೆ. ತಮ್ಮ ಜೀವನ ಈ ಮೂಲಕ ಅಂತ್ಯ ಕಂಡಿದೆ ಎಂದು ಅವರು ವಿವರಿಸಿದ್ದಾರೆ.

ರಾಹುಲ್‌ ಚಹರ್ ಹೇಳಿರುವುದೇನು?

ರಾಹುಲ್‌ ಚಹಾರ್‌ ಅವರು 22ನೇ ವಯಸ್ಸಿಗೆ ವಿವಾಹ ಆಗಿದ್ದರು. ಇದೀಗ ವಿಚ್ಛೇದನ ಪಡೆದ ವಿಚಾರವನ್ನು ಹಂಚಿಕೊಂಡಿರುವ ಅವರು, “ನಾನು ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಆದೆ, ಆ ಸಮಯದಲ್ಲಿ, ನಾನು ನನ್ನನ್ನು, ನನ್ನ ಮೌಲ್ಯವನ್ನು ಅಥವಾ ನಾನು ಬಯಸುವ ಜೀವನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಿಲ್ಲ. ನಂತರದ ವರ್ಷಗಳು ನಾನು ಎಂದಿಗೂ ನಿರೀಕ್ಷಿಸದ ಪಾಠಗಳನ್ನು ಕಲಿಸಿದವು. ಕಳೆದ 15 ತಿಂಗಳುಗಳನ್ನು ನ್ಯಾಯಾಲಯದಲ್ಲೇ ಕಳೆದಿದ್ದೇನೆ. ತಾಳ್ಮೆ, ಸತ್ಯದಿಂದ ಬರುವ ಶಕ್ತಿಯ ಬಗ್ಗೆ ಕಲಿಯುತ್ತಿದ್ದೇನೆ,” ಎಂದು ಬರೆದುಕೊಂಡಿದ್ದಾರೆ.

ಅಲ್ಲದೆ, “ಇಂದು ನನ್ನ ಜೀವನದ ಆ ಅಧ್ಯಾಯ ಅಧಿಕೃತವಾಗಿ ಕೊನೆಗೊಂಡಿದೆ. ಕಾನೂನು ಪ್ರಕ್ರಿಯೆಯ ಬಳಿಕ ಈ ವಿಷಯ ಬಗೆಹರಿದಿದೆ. ಅದು ನನಗೆ ತುಂಬಾ ಕಷ್ಟಕರ ಆಗಿದೆ. ಆದರೆ, ಸ್ಪಷ್ಟ ನಿಲುವಿನೊಂದಿಗೆ ಇದನ್ನು ಮುಗಿಸುತ್ತಿದ್ದೇನೆ. ಕೆಲವು ಸಂಬಂಧಗಳು ಶಾಶ್ವತ ಅಲ್ಲ. ಅವು ನಮ್ಮನ್ನು ಜಾಗೃತಗೊಳಿಸಲು, ಕಲಿಸಲು ಉದ್ದೇಶಿಸಿವೆ. ಈಗ ನಾನು ಬುದ್ಧಿವಂತನಾಗಿದ್ದೇನೆ. ಹೆಚ್ಚು ಸ್ವಯಂ ಅರಿವು ಹೊಂದಿದ್ದೇನೆ,” ಎಂದು ರಾಹುಲ್ ಚಾಹರ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.

ಐಪಿಎಲ್‌ನತ್ತ ಗಮನಹರಿಸಿದ ರಾಹುಲ್ ಚಹರ್

ಇನ್ನೂ ರಾಹುಲ್ ಚಹಾರ್ ಅವರನ್ನು ಐಪಿಎಲ್ 2026ರ ಹರಾಜಿನಲ್ಲಿ 5.20 ಕೋಟಿ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಇದೀಗ ಅವರು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ ಮಿಂಚಲು ತಯಾರಾಗುತ್ತಿದ್ದಾರೆ. ಇದೀಗ ಅವರ ಗಮನವನ್ನು ಸಂಪೂರ್ಣ ಐಪಿಎಲ್‌ ಅಭ್ಯಾಸದತ್ತ ಹರಿಸಿದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/sports/rahul-chahar-announces-divorce-from-wife-ishani-johar-after-over-3-years-of-marriage-know-details-444491.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo