Railway Board: ಗಂಟೆಗೆ 220 ಕಿಮೀ ಸಂಚರಿಸಬಲ್ಲ ದೇಶಿ ಸೆಮಿ-ಹೈಸ್ಪೀಡ್ ರೈಲುಗಳ ತಯಾರಿಕೆಗೆ ಗ್ರೀನ್ ಸಿಗ್ನಲ್ | Semi-High Speed Rails Railway Board Approves manufactur 200 kmph Semi-High Speed Trains FY 2027-28

India

oi-Shankrappa Parangi

ನವದೆಹಲಿ; ಕೇಂದ್ರ ರೈಲ್ವೆ ಮಂಡಳಿಯು ಸ್ವದೇಶಿಯವಾಗಿ ರೈಲುಗಳ ಉತ್ಪಾದನೆಗೆ ಒತ್ತು ನೀಡುತ್ತಿದೆ. ಈಗಾಗಲೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ತಯಾರಿಸಿ ಹೆಸರುವಾಸಿಯಾದ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಸೆಮಿ-ಹೈ ಸ್ಪೀಡ್ ರೈಲುಗಳ ತಯಾರಿಕೆಯು ರೈಲ್ವೆ ಮಂಡಳಿಯಿಂದ ಅನುಮೋದನೆ ಪಡೆದಿದೆ. ಈ ಮೂಲಕ ಹೊಸ ಹೊಸ ಮಾರ್ಗಗಳಲ್ಲಿ ಗಂಟೆಗೆ 200ಕ್ಕೂ ಅಧಿಕ ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವ ರೈಲುಗಳ ತಯಾರಿಕೆ ಇನ್ನೆರಡು ವರ್ಷಗಳಲ್ಲಿ ಆಗಲಿವೆ.

ರೈಲ್ವೆ ಮಂಡಳಿಯು ಕಳೆದ ತಿಂಗಳು ಮಾರ್ಚ್ 23ರಂದು ತನ್ನ ಅಧಿಕೃತವಾಗಿ ಆದೇಶದಲ್ಲಿ ಅನುಮೋದನೆ ನೀಡಿದ್ದಾಗಿ ತಿಳಿಸಿತ್ತು. 2027-28 ರ ಹಣಕಾಸು ವರ್ಷದಲ್ಲಿ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ICF) ಎರಡು ಬ್ರಾಡ್ ಗೇಜ್ ಟ್ರೈನ್‌ಸೆಟ್ ರೇಕ್‌ಗಳ ತಯಾರಿಸಲಿದೆ. ಈ ಉತ್ಪಾದನೆಗೆ ಅನುಮೋದನೆ ನೀಡಲಾಗಿದೆ ಎಂದು ಆದೇಶದ ಮೂಲಕ ಮಾಹಿತಿ ನೀಡಿದೆ.

Semi-High Speed Rails

16 ಬೋಗಿಗಳ ರೈಲು, ಗರಿಷ್ಠ ವೇಗ 220 ಕಿಮೀ!

ಉದ್ದೇಶಿತ ಈ ಎರಡು ಸೆಮೈ ಹೈ ಸ್ಪೀಡ್ ರೈಲುಗಳು ಒಟ್ಟು 16 ಬೋಗಿಗಳನ್ನು ಹೊಂದಿರಲಿವೆ. ಬ್ರಾಡ್‌ ಗೇಟ್‌ ಟ್ರೈನ್ ಸೆಟ್ ಇವಾಗಿರಲಿವೆ. ಈ ರೈಲುಗಳ ವೈಶಿಷ್ಟ್ಯ ನೋಡುವುದಾದರೆ ಪ್ರತಿ ಗಂಟೆಗೆ 220 ಕಿಲೋ ಮೀಟರ್ ವೇಗದಲ್ಲಿ ಚಲಿಸಬಲ್ಲ ವಿನ್ಯಾಸ ಹೊಂದಿವೆ. ಗರಿಷ್ಠ 200 ಕಿಲೋ ಮಿಟರ್ ಕಾರ್ಯಾಚರಣೆಯ ವೇಗದ ಸಾಮರ್ಥ್ಯ ತಡೆದುಕೊಳ್ಳುವ ಸ್ಟೀಲ್-ಬಾಡಿಯು ಈ ಬೋಗಿಗಳಿಗೆ ಇರಲಿವೆ. ಆ ರೀತಿಯಲ್ಲಿ ಇವುಗಳನ್ನು ತಯಾರಿಸಲು ಕಂಪನಿಗೆ ಸೂಚನೆ ನೀಡಲಾಗಿದೆ. 2028ರಲ್ಲಿ ಈ ಗಟ್ಟಿಮುಟ್ಟಾದ ಹೊಸ ರೈಲುಗಳನ್ನು ಭಾರತೀಯ ರೈಲ್ವೆ ಜಾಲದಲ್ಲಿ ಸೆಮಿ-ಹೈ ಸ್ಪೀಡ್ ಸೇವೆಗೆ ನಿಯೋಜಿಸಲು ಚಿಂತನೆ ನಡೆಸಿದೆ.

ರೈಲ್ವೆ ಮಂಡಳಿಯು ಈ ಅನುಮೋದನೆಯು ದೇಶೀಯವಾಗಿ ಸೆಮಿ-ಹೈ ಸ್ಪೀಡ್ ರೋಲಿಂಗ್ ಸ್ಟಾಕ್ ಉತ್ಪಾದನೆ ವಿಸ್ತರಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ನಗರಗಳ ನಡುವಿನ ರೈಲು ಸಂಚಾರದ ಕಾರ್ಯಕ್ಷಮತೆಯನ್ನು ಸುಧಾರಿಸಲು ವಂದೇ ಭಾರತ್ ಮಾದರಿಯಲ್ಲಿ ಈ ರೈಲುಗಳು ಮೂಲಕ ಸೇವೆ ನೀಡಲು ಭಾರತೀಯ ರೈಲ್ವೆ ಪ್ಲ್ಯಾನ್ ಮಾಡಿಕೊಂಡಿದೆ.

ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ

ದೇಶಾದ್ಯಂತ ವಿವಿಧೆಡೆ ಏಳು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್ ಮಾರ್ಗದಲ್ಲೂ ಈ ಕಾರಿಡಾರ್ ತಲೆ ಎತ್ತಲಿದೆ. ಈ ಮಾರ್ಗಗಳಲ್ಲಿ ದೇಶಿಯ ಈ ಸೆಮಿ ಹೈಸ್ಪೀಡ್ ರೈಲುಗಳು ಸಂಚರಿಸಬಹುದೆಂದು ಹೇಳಲಾಗುತ್ತಿದೆ.

ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಈಗಾಗಲೇ ವಂದೇ ಭಾರತ್ ರೈಲುಗಳನ್ನು ಯಶಸ್ವಿಯಾಗಿ ನಿರ್ಮಿಸಿ ಜಗತ್ತಿನ ಗಮನ ಸೆಳೆದಿದೆ. ಅದೇ ಕಂಪನಿಗೆ ರೈಲ್ವೆ ಮಂಡಳಿಯು 2027-28ರ ಹಣಕಾಸು ವರ್ಷದಲ್ಲಿ ಎರಡು ಪೂರ್ಣ ಪ್ರಮಾಣದ (ತಲಾ 16 ಬೋಗಿಗಳ) ರೇಕ್‌ಗಳನ್ನು ತಯಾರಿಸಲು ಒಪ್ಪಿಗೆ ನೀಡಿದೆ. ಇದು ಇದು ಸಂಪೂರ್ಣ ‘ಮೇಕ್ ಇನ್ ಇಂಡಿಯಾ’ ಯೋಜನೆಯ ಭಾಗವಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/semi-high-speed-rails-railway-board-approves-manufactur-200-kmph-semi-high-speed-trains-fy-2027-28-449691.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo