Ramayana: ಯಶ್‌ ‘ರಾಮಾಯಣ’ಕ್ಕೆ 700 ಕೋಟಿ ರೂಪಾಯಿ ಆಫರ್ ತಿರಸ್ಕರಿಸಿದ ನಿರ್ಮಾಪಕ, 1000 ಕೋಟಿ ರೂ.ಗೆ ಪಟ್ಟು | Ramayana OTT Deal Producer Namit Malhotra Rejects 700 Crore Offer Targets 1000 Crore digital rights

Entertainment

oi-Manohara M

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಮಹತ್ವಾಕಾಂಕ್ಷೆಯ ಸಿನಿಮಾ ಎಂದು ಕರೆಸಿಕೊಳ್ಳುತ್ತಿರುವ ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಈಗ ತನ್ನ ವ್ಯವಹಾರದ ವಿಚಾರವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ದೀಪಾವಳಿ 2026ಕ್ಕೆ ಮೊದಲ ಭಾಗ ತೆರೆಗೆ ಬರಲು ಸಿದ್ಧವಾಗುತ್ತಿದ್ದು, ಚಿತ್ರದ ಡಿಜಿಟಲ್ ಹಕ್ಕುಗಳ (OTT Rights) ವ್ಯವಹಾರ ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಇತ್ತೀಚಿನ ವರದಿಗಳ ಪ್ರಕಾರ, ಖ್ಯಾತ OTT ಸಂಸ್ಥೆಯೊಂದು ಈ ಚಿತ್ರದ ಎರಡು ಭಾಗಗಳ ಡಿಜಿಟಲ್ ಹಕ್ಕುಗಳಿಗಾಗಿ ಬರೊಬ್ಬರಿ ₹700 ಕೋಟಿ ಮೊತ್ತದ ಆಫರ್ ನೀಡಿತ್ತು. ಆದರೆ, ಚಿತ್ರಕ್ಕೆ ಹಾಕಿರುವ ಬಂಡವಾಳವನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಪಕ ನಮಿತ್ ಮಲ್ಹೋತ್ರಾ ಈ ಆಫರ್ ಅನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ, ನಮಿತ್ ಮಲ್ಹೋತ್ರಾ ಅವರು ಈ ಚಿತ್ರದ ಡಿಜಿಟಲ್ ಹಕ್ಕುಗಳಿಂದ ಕನಿಷ್ಠ ₹1,000 ಕೋಟಿ ಗಳಿಸುವ ಗುರಿ ಹೊಂದಿದ್ದಾರೆ ಎನ್ನಲಾಗಿದೆ.

Ramayana

ನಿರ್ಮಾಪಕರ ಪ್ಲ್ಯಾನ್‌ ಏನು?

ಒಟ್ಟು ಬಜೆಟ್ ಸುಮಾರು ₹4,000 ಕೋಟಿ ಎನ್ನಲಾಗಿದ್ದು, ಡಿಜಿಟಲ್ ಗುರಿ ₹1,000 ಕೋಟಿ ಇದೆ. ಉಳಿದ ₹3,000 ಕೋಟಿಯನ್ನು ಚಿತ್ರಮಂದಿರದ ಕಲೆಕ್ಷನ್ ಮತ್ತು ಇತರ ಹಕ್ಕುಗಳ ಮೂಲಕ ಸಂಗ್ರಹಿಸಲು ತಂಡ ಯೋಜಿಸಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಮೊದಲ ನೋಟದ ಟೀಸರ್‌ನಲ್ಲಿ ರಣಬೀರ್ ಕಪೂರ್ ಅವರು ಶ್ರೀರಾಮನಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಜಾಗತಿಕ ಮಟ್ಟದ ವಿಎಫ್‌ಎಕ್ಸ್ ತಂತ್ರಜ್ಞಾನ ಮತ್ತು ಅದ್ದೂರಿ ತಾರಾಗಣ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಬಿಡುಗಡೆ ಯಾವಾಗ?

‘ರಾಮಾಯಣ’ದ ಮೊದಲ ಭಾಗವು 2026ರ ದೀಪಾವಳಿಗೆ ಮತ್ತು ಎರಡನೇ ಭಾಗವು 2027ರ ದೀಪಾವಳಿಗೆ ತೆರೆಕಾಣಲಿದೆ. “ದಂಗಲ್” ಖ್ಯಾತಿಯ ನಿತೀಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ, ರಾಕಿಂಗ್‌ ಸ್ಟಾರ್‌ ಯಶ್ ರಾವಣನಾಗಿ ಮತ್ತು ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಪ್ಲಸ್ ಪಾಯಿಂಟ್ ಆಗಿದೆ. ಒಂದು ವೇಳೆ ₹1,000 ಕೋಟಿಯ ಡೀಲ್ ಕುದುರಿದರೆ, ಇದು ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತೀ ದೊಡ್ಡ ಒಟಿಟಿ ವ್ಯವಹಾರವಾಗಲಿದೆ.

ಚಿತ್ರದ ಡಿಜಿಟಲ್ ಹಕ್ಕುಗಳ ಬೆಲೆ ಒಂದೆಡೆಯಾದರೆ, ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಸಂಭಾವನೆ ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಈ ಬೃಹತ್ ಸಿನಿಮಾದ ಸಂಗೀತದ ಜವಾಬ್ದಾರಿಯನ್ನು ಹೊತ್ತಿರುವ ಎ.ಆರ್.ರೆಹಮಾನ್, ಇದಕ್ಕಾಗಿ ಬರೊಬ್ಬರಿ ₹30 ಕೋಟಿ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ, ಕೇವಲ ಸಂಭಾವನೆ ಮಾತ್ರವಲ್ಲದೆ, ಚಿತ್ರದ ಒಟ್ಟು ಲಾಭದಲ್ಲಿಯೂ ಅವರು ಪಾಲು ಪಡೆಯಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಹಾಲಿವುಡ್‌ನ ದಿಗ್ಗಜ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಅವರೊಂದಿಗೆ ರೆಹಮಾನ್ ಜಂಟಿಯಾಗಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ವಿಶೇಷ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/ramayana-ott-deal-producer-namit-malhotra-rejects-700-crore-offer-targets-1000-crore-digital-rights-449395.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo