
Entertainment
oi-Shankrappa Parangi
ಹೈದರಾಬಾದ್/ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ತಾನು ಪ್ರೀತಿಸಿದ ಟಾಲಿವುಡ್ ನಟ ವಿಜಯ್ ದೇವರಕೊಂಡ ಜೊತೆಗೆ ಸಾಂಪ್ರದಾಯಿಕವಾಗಿ ಮತ್ತು ಅದ್ಧೂರಿಯಾಗಿ ಉದಯಪುರದಲ್ಲಿ ವಿವಾಹ ಆಗಿದ್ದಾರೆ. ಇಂದು ಮಾರ್ಚ್ 4ರಂದು ಬುಧವಾರ ಹೈದರಾಬಾದ್ನಲ್ಲಿ ಅತ್ಯಾಪ್ತರ ಸಮ್ಮುಖದಲ್ಲಿ ವಿವಾಹ ಅರತಕ್ಷತೆ ನೇರವೇರಿತು. ಅನೇಕ ಗಣ್ಯರು, ಕನ್ನಡ, ತೆಲುಗು ಚಿತ್ರರಂಗದ ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು. ಈ ವೇಳೆ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಹ ಭಾಗವಹಿಸಿ ನವ ದಂಪತಿಗಳಿಗೆ ಶುಭಾಶಯ ತಿಳಿಸಿದ್ದಾರೆ. ನಿಮ್ಮ ಜೀವನ ಸುಖಃಕರವಾಗಿರಲೆಂದು ಹಾರೈಸಿದ್ದಾರೆ.
ಕೋಟ್ಯಾಂತರ ಅಭಿಮಾನಿಗಳ ಹಾರೈಕೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸಲು ಸಂತೋಷವಾಗಿದೆ. ಅವರು ಈ ಹೊಸ ಅಧ್ಯಾಯವನ್ನು ಒಟ್ಟಿಗೆ ಪ್ರಾರಂಭಿಸುತ್ತಿದ್ದು, ಅವರಿಬ್ಬರ ಜೀವನ ಸಂತೋಷದಿಂದ ಕೂಡಿರಲಿ. ಒಗ್ಗಟ್ಟಿನ ಜೀವನ ನಡೆಸುವಂತೆ ಹಾರೈಸಿದ್ದಾಗಿ ಡಿಕೆ ಶಿವಕುಮಾರ್ ಅವರು ಎಕ್ಸ್ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ ವಿಜಯ್ ಹಾಗೂ ರಶ್ಮಿಕಾ ಅವರಿಗೆ ಹೂವಿನ ದೊಡ್ಡ ಬೊಕ್ಕೆ ನೀಡಿರುವ ಡಿಕೆ ಶಿವಕುಮಾರ್ ಅವರು ಒಟ್ಟಿಗೆ ಫೋಟೋಗೆ ಪೋಸ್ ನೀಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಗಳಿಗೆ ರಶ್ಮಿಕಾ ಆಹ್ವಾನ ನೀಡಿದ್ದು ವಿಶೇಷವಾಗಿತ್ತು. ಬಿಳಿ ಪಂಚೆ, ಶರ್ಟ್ ತೊಟ್ಟು ಹುರಿ ಮೀಸೆಯಲ್ಲಿ ವಿಜಯ್ ಮಿಂಚಿಸಿದರೆ, ಕೆಂಪು ಸೀರೆ ಮೈತುಂಬಾ ಒಡವೆಯೊಂದಿಗೆ ನಗುಮೊಗದೊಂದಿಗೆ ರಶ್ಮಿಕಾ ಅರತಕ್ಷತೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂತು. ಅವರ ನಗು ನೋಡಿದರೆ ತಾವು ಅಂದುಕೊಂಡಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಖಷಿ ನಟಿ ಮುಖದಲ್ಲಿ ಎದ್ದು ಕಾಣಿಸುತ್ತಿದೆ.
ಹೈದರಾಬಾದ್ನ ಹೋಟೆಲ್ ವೊಂದರಲ್ಲಿ ಈ ಅರತಕ್ಷತೆ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ನಟ ನಾಗಾರ್ಜುನ್, ಚಿರಂಜೀವಿ, ತಮಿಳು ನಟ ಶರತ್ಕುಮಾರ್ ಹಾಗೂ ಪತ್ನಿ ನಟಿ ರಾಧಿಕಾ ಶರತ್ಕುಮಾರ್, ನಟಿ ಶ್ರೀಲೀಲಾ, ನಟ ನಾನಿ, ನಟ ಅಲ್ಲು ಅರ್ಜುನ್, ರಾಮಚರಣ್ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ಹಾಜರಾಗಿದ್ದರು. ವಿಜಯ್ ರಶ್ಮಿಕಾಗೆ ವಿಶ್ ಮಾಡಿದ್ದಾರೆ. ಉದಯಪುರದಲ್ಲಿ ಮದುವೆಗೂ ಸೀಮಿತ ಜನರಿಗೆ ಆಹ್ವಾನಿಸಿದ್ದ ರಶ್ಮಿಕಾ ಜೋಡಿ, ಹೈದರಾಬಾದ್ನಲ್ಲಿ ನಡೆಯಲಿರುವ ಅರತಕ್ಷತೆಯಲ್ಲಿ ಸ್ಯಾಂಡಲ್ವುಡ್ನ ಆಹ್ವಾನಿತರಲ್ಲಿ ಕಡಿಮೆ ಮಂದಿ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಇನ್ನೂ ಭದ್ರತಾ ದೃಷ್ಟಿಯಿಂದಾಗಿ ಯಾರಿಗೆಲ್ಲ ಆಹ್ವಾನ ನೀಡಲಾಗಿತ್ತೋ ಅವರನ್ನು ಮಾತ್ರವೇ ಅರತಕ್ಷತೆಗೆ ಬಿಡಲಾಗಿತ್ತು. ಇಂದಿನ ಕಾರ್ಯಕ್ರಮಕ್ಕಾಗಿ ಹೈದರಾಬಾದ್ನ ಹೋಟೆಲ್ ವಿದ್ಯುದಲಂಕಾರಗಳಿಂದ ಕಂಗೊಳಿಸುವಂತೆ ಮಾಡಲಾಗಿತ್ತು. ಫೆಬ್ರವರಿ 26ರಿಂದ ಆರಂಭವಾದ ‘ವಿರೋಶ್’ ಜೋಡಿ ಕಲ್ಯಾಣವು ಇಂದಿನ ಹೈದರಾಬಾದ್ ಅರತಕ್ಷತೆ ಮೂಲಕ ಕೊನೆಗೊಂಡಿತು. ವಿವಾಹ ಬಳಿಕ ದೇಶದ ಅನೇಕ ದೇವಸ್ಥಾನಗಳಿಗೆ ಈ ಜೋಡಿ ಭೇಟಿ ಕೊಟ್ಟಿತ್ತು. 14 ರಾಜ್ಯಗಳ ಅಭಿಮಾನಿಗಳಿಗೆ ಸಿಹಿ ಪೊಟ್ಟಣವನ್ನು ರವಾನಿಸಿ ಗಮನಸೆಳೆದಿತ್ತು.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/rashmika-mandanna-vijay-deverakonda-wedding-reception-dk-shivakumar-attends-wishes-the-couple-445983.html. xn--babytilbehr-pgb.com does not claim ownership of this content. All rights remain with the original publisher.
