
Entertainment
oi-Hitesh Y
Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರು ಮತ್ತೆ ಭಾರೀ ಸುದ್ದಿಯಲ್ಲಿದ್ದಾರೆ. ಈಚೆಗೆ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಇಬ್ಬರೂ ಅದ್ಧೂರಿಯಾಗಿ ಮದುವೆಯಾಗಿದ್ದರು. ಇದೀಗ ಮದುವೆಯಾಗಿ ಒಂದೂವರೆ ತಿಂಗಳ ಒಳಗೆಯೇ ರಶ್ಮಿಕಾ ಮಂದಣ್ಣ ಅವರು ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ನಟಿ ರಶ್ಮಿಕಾ ಮಂದಣ್ಣ ಅವರು, ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿರುವ ಪೋಸ್ಟ್ ಏನು, ಈ ವಿಷಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿರುವುದು ಏಕೆ ಎನ್ನುವ ವಿವರ ನೋಡೋಣ.
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಈಚೆಗೆ ತಮ್ಮ ಬಹುಕಾಲದ ಗೆಳೆಯ ವಿಜಯ್ ದೇವರಕೊಂಡ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇವರ ದಾಂಪತ್ಯ ಜೀವನವು ಈಚೆಗೆ ಪ್ರಾರಂಭವಾಗಿದ್ದು, ಅದ್ಧೂರಿ ವಿವಾಹ ಸಂಭ್ರಮ ನಡೆದಿತ್ತು. ಇದೀಗ ಮದುವೆಯಾಗಿ ಒಂದೂವರೆ ತಿಂಗಳಾಗುತ್ತಿರುವಾಗಲೇ ರಶ್ಮಿಕಾ ಅವರು ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಆದರೆ ಈ ವಿಚಾರವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ರಾಶ್ಮಿಕಾ ಅವರ ಪೋಸ್ಟ್‌ನಲ್ಲಿ ಏನಿದೆ ಹಾಗೂ ಇದಕ್ಕೆ ಅಭಿಮಾನಿಗಳು, ನೆಟ್ಟಿಗರು ಹೇಳಿದ್ದೇನು.

ನಟಿ ರಶ್ಮಿಕಾ ಮಂದಣ್ಣ ಹಂಚಿಕೊಂಡ ಪೋಸ್ಟ್‌ನಲ್ಲೇನಿದೆ
ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾರನ್ನು ಹೋಲುವ ಮೂವಿಂಗ್ ಗ್ರಾಫಿಕ್ಸ್ ಹಂಚಿಕೊಂಡಿದ್ದಾರೆ. ಇವರಿಬ್ಬರ ಪಕ್ಕ ಸುಂದರವಾದ ಹಳದಿ ಬಣ್ಣದ ಹೂವೊಂದು ಬರುವಂತಹ ಗ್ರಾಫಿಕ್ ಹಂಚಿಕೊಂಡಿದ್ದಾರೆ. ಅದರಲ್ಲಿ ಮೂವಿಂಗ್ ರೆಡ್ ಹಾರ್ಟ್ ಎಮೋಜಿಗಳು ಸಹ ಬರುವಂತೆ ಗ್ರಾಫಿಕ್ಸ್ ಬರುವಂತೆ ಮಾಡಲಾಗಿದೆ ಇದರೊಂದಿಗೆ ಈಗ ನಾವು ಮೂವರು ಅಂತ ರಶ್ಮಿಕಾ ಮಂದಣ್ಣ ಅವರು ವಿಡಿಯೋದಲ್ಲಿ
ಬರೆದುಕೊಂಡಿದ್ದಾರೆ. ಬಿಳಿ ಬಣ್ಣದ ಹಾರ್ಟ್ ಎಮೋಜಿ ಸಹ ಬಳಕೆ ಮಾಡಲಾಗಿದೆ.
Rashmika Mandanna: ರಶ್ಮಿಕಾ ಪೋಸ್ಟ್‌ಗೆ ನೆಟ್ಟಿಗರು ಹೇಳಿದ್ದೇನು
ಇನ್ನು ಈ ಪೋಸ್ಟ್‌ಗೆ ಸೋಷಿಯಲ್ ಮೀಡಿಯಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ತಾಯಿಯಾಗುತ್ತಿದ್ದಾರೆಯೇ, ರಶ್ಮಿಕಾ ಗರ್ಭಿಣಿನಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಈಗಿನ ಮಟ್ಟಿಗೆ ಮೂವರು ಎಂದರೆ ಹೂವು, ಮೂವರು ಎಂದರೆ ಜೂನಿಯರ್ ವಿರೋಶ್ ಎಂದು ನೆಟ್ಟಿಗರು ರಿಯಾಕ್ಟ್ ಮಾಡುತ್ತಿದ್ದಾರೆ. ನಟಿ ಮದುವೆ, ಹನಿಮೂನ್ ಮುಗಿಸಿ ಮತ್ತೆ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಅವರು ವಿಜಯ್ ದೇವರಕೊಂಡ ಜೊತೆ ರಣಬಾಲಿ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಈ ಪೋಸ್ಟ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಸದಾಗಿ ಮದುವೆಯಾದವರಿಂದ 1 ತಿಂಗಳಲ್ಲಿ ಪೋಷಕರಾಗಲಿರುವವರವರೆಗೆ ಎಂತಹ ಪ್ರಯಾಣ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ನನ್ನ ಪ್ರಕಾರ ಇದು ಅವರ ಮುಂಬರುವ ಯಾವುದೇ ಯೋಜನೆಗಳಿಗೆ / ಪ್ರಾಜೆಕ್ಟ್‌ಗಳ ಪ್ರಾರಂಭವಾಗಬಹುದು!! (ಡಿಯರ್ ಡೈರಿಯಂತೆ!) ಎಂದೂ ನೆಟ್ಟಿಗರೊಬ್ಬರು ಅಂದಾಜಿಸಿದ್ದಾರೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಅವರು ಈ ಬಗ್ಗೆ ನೇರವಾಗಿ ಹೇಳದೆ ಕುತೂಹಲ ಉಳಿಸಿದ್ದಾರೆ ಎಂದೂ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/rashmika-mandanna-says-we-are-three-now-just-a-month-after-marriage-netizens-react-rashmika-vijay-449271.html. xn--babytilbehr-pgb.com does not claim ownership of this content. All rights remain with the original publisher.
