Rashmika Mandanna: ವಿಶೇಷ ಪೋಸ್ಟ್‌ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ – ನಟ ವಿಜಯ್ ದೇವರಕೊಂಡ, ಏನಿದು VIROSH | Rashmika Mandanna and Vijay Deverakonda Share Special Instagram Post; What Is VIROSH Fans Curious

Entertainment

-Hitesh Y

Rashmika Mandanna: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ನಟ ವಿಜಯ್ ದೇವರಕೊಂಡ ಇಬ್ಬರು ಏಕಕಾಲಕ್ಕೆ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ಮದುವೆಯ ಬಗ್ಗೆ ಕೊನೆಗೂ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ಇವರ ವಿವಾಹದ ಬಗ್ಗೆ ಹಲವು ದಿನಗಳಿಂದ ವದಂತಿಗಳು ಹೆಚ್ಚಾಗಿದ್ದವು, ಕೊನೆಗೂ ಈ ವದಂತಿಗಳಿಗೆ ಇಬ್ಬರೂ ತೆರೆ ಎಳೆದಿದ್ದಾರೆ.

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಈ ಜೋಡಿಯು ಭಾನುವಾರ ರಾತ್ರಿ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಏಕಕಾಲಕ್ಕೆ ಪೋಸ್ಟ್ ಮಾಡುವ ಮೂಲಕ ತಮ್ಮ ಮದುವೆಯ ಬಗ್ಗೆ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕಳೆದ ಹಲವು ದಿನಗಳಿಂದ ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ಮದುವೆಯ ಬಗ್ಗೆ ಊಹಾಪೋಹಗಳು ಸೃಷ್ಟಿಯಾಗಿದ್ದವು. ಈಗ, ಈ ವದಂತಿಗಳಿಗೆ ತೆರೆ ಬಿದ್ದಿದೆ. ಇಬ್ಬರೂ ತಮ್ಮ ಮದುವೆಯನ್ನು ದೃಢಪಡಿಸಿದ್ದಾರೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳಿಗಾಗಿ ಪ್ರೀತಿಯ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

Rashmika Mandanna and Vijay Deverakonda Share Special Instagram Post What Is VIROSH Fans Curious

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರು ವರ್ಷಗಳ ಹಿಂದೆಯೇ ಅವರ ವಿವಾಹದ ಬಗ್ಗೆ ಸುಳಿವು ನೀಡಿದ್ದರು. ಇವರಿಬ್ಬರು ಪ್ರೀತಿಸುತ್ತಿರುವುದು ಒಪನ್ ಸಿಕ್ರೆಟ್‌ನಂತೆ ಆಗಿತ್ತು. ಇದೀಗ ಇಷ್ಟು ದಿನಗಳಿಂದ ಚರ್ಚೆ ಆಗುತ್ತಿದ್ದ ವಿಷಯಕ್ಕೆ ತೆರೆ ಬಿದ್ದಿದೆ.

ಜಂಟಿ ಪೋಸ್ಟ್‌ ಹಂಚಿಕೊಂಡ ಜೋಡಿಗಳು

ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ವಿಶೇಷ ಪೋಸ್ಟ್‌ ಹಂಚಿಕೊಂಡಿದ್ದಾರೆ. ಭಾನುವಾರ ರಶ್ಮಿಕಾ ಮತ್ತು ವಿಜಯ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ ವೈರಲ್ ಆಗಿದೆ. ಅವರ ಅಭಿಮಾನಿಗಳು ಅವರಿಗೆ ತುಂಬಾ ಪ್ರೀತಿಯಿಂದ VIROSH ಎಂಬ ಹೆಸರಿನಲ್ಲಿ ಸಂದೇಶವನ್ನು ಹಂಚಿಕೊಂಡಿದ್ದಾರೆ.

ವೈರಲ್ ಪೋಸ್ಟ್‌ನಲ್ಲಿ ಏನಿದೆ

ನಮ್ಮ ಅತ್ಯಂತ ಪ್ರೀತಿಯ ಅಭಿಮಾನಿಗಳೇ ನಾವು ಯಾವುದೇ ಪ್ಲ್ಯಾನ್ ಮಾಡುವ ಮುನ್ನ, ನಮ್ಮಗಾಗಿ ಯಾವುದನ್ನಾದರೂ ಆಯ್ಕೆ ಮಾಡುವ ಮುನ್ನವೇ ನೀವು ಈಗಾಗಲೇ ನಮ್ಮ ಜೊತೆ ಇದ್ದಿರಿ. ಬಹಳಷ್ಟು ಪ್ರೀತಿಯಿಂದ ನೀವು ನಮಗೆ ಒಂದು ಹೆಸರು ನೀಡಿದ್ದೀರಿ. ನೀವು ನಮ್ಮನ್ನು “VIROSH” ಎಂದು ಕರೆದಿದ್ದೀರಿ.
ಆದ್ದರಿಂದ ಇಂದು, ತುಂಬಿದ ಹೃದಯದಿಂದ ನಮ್ಮ ಈ ಬಾಂಧವ್ಯಕ್ಕೆ ನಿಮ್ಮ ಗೌರವಕ್ಕಾಗಿ ಒಂದು ಹೆಸರು ಕೊಡಲು ಬಯಸುತ್ತೇವೆ.

ಅದಕ್ಕೆ ನಾವು “The Wedding of VIROSH” ಎಂದು ಹೆಸರು ಇಡಲು ನಿರ್ಧರಿಸಿದ್ದೇವೆ. ಇಷ್ಟು ಪ್ರೀತಿಯಿಂದ ನಮ್ಮನ್ನು ಸದಾ ಬೆಂಬಲಿಸಿದ ನಿಮಗೆ ಧನ್ಯವಾದಗಳು. ನೀವು ನಮ್ಮ ಜೀವನದ ಒಂದು ಭಾಗ ಸದಾಕಾಲ. ದೊಡ್ಡ ಅಪ್ಪುಗೆ ಮತ್ತು ತುಂಬು ಪ್ರೀತಿ! ಎಂದು ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ವಿಶೇಷ ಪೋಸ್ಟ್ ಮಾಡಿದ್ದಾರೆ.

ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಮದುವೆ ಯಾವಾಗ

ಇನ್ನು ಈಗಲೂ ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ತಮ್ಮ ವಿವಾಹ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಈ ಜೋಡಿಯು ಫೆಬ್ರವರಿ 26, 2026 ರಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಲಿದ್ದಾರೆ. ಮದುವೆಗಾಗಿ ರಾಜಮನೆತನವನ್ನು ಆಯ್ಕೆ ಮಾಡಿಕೊಂಡರು, ಅಲ್ಲಿ ಕುಟುಂಬ ಸದಸ್ಯರು ಮತ್ತು ಅತ್ಯಂತ ಆಪ್ತರು ಮಾತ್ರ ಭಾಗವಹಿಸುತ್ತಾರೆ ಎಂದು ಹೇಳಲಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/rashmika-mandanna-and-vijay-deverakonda-share-special-instagram-post-what-is-virosh-fans-curious-011-444719.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo