
Karnataka
oi-Shankrappa Parangi
ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ 2026 (IPL 2026) ಹತ್ತಿರ ಬರುತ್ತಿದೆ. ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಾರಿ ಆರ್‌ಸಿಬಿ ಪಂದ್ಯಾವಳಿಗೆ ಬೆಂಗಳೂರಲ್ಲಿ ಆಡಲು ಅವಕಾಶ ನೀಡುವ ಬಗ್ಗೆ ಇನ್ನು ಅಂತಿಮ ನಿರ್ಧಾರವಾಗಿಲ್ಲ. ಇದೀಗ ರಾಜ್ಯ ಗೃಹ ಸಚಿವರನ್ನು ಕರ್ನಾಟಕ ರಾಜ್ಯ ಕ್ರಿಕೇಟ್ ಸಂಘ (KSCA) ಮತ್ತು RCB ನಿಯೋಗ ಇಂದು ಸೋಮವಾರ ಭೇಟಿ ಮಾಡಿದೆ. ಕೆಲವು ವಿಚಾರಗಳನ್ನು ಚರ್ಚೆ ಮಾಡಲಾಯಿತು. ಬಳಿಕ ಜಿ.ಪರಮೇಶ್ವರ ಅವರ ಮಹತ್ವದ ಮಾಹಿತಿ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ ಅವರು, ಬೆಂಗಳೂರಿನಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು (ಆರ್‌ಸಿಬಿ) ಪಂದ್ಯ ಆಡಿಸುವ ವಿಚಾರಕ್ಕೆ ಉತ್ತರಿಸಿದರು. ಜಸ್ಟೀಸ್ ಕುನ್ಹಾ ಅವರ ವರದಿಯ ಶಿಫಾರಸು ಪಾಲಿಸಬೇಕು ಎಂದು ಸರ್ಕಾರ ತಿಳಿಸಿದೆ. ರಾಜ್ಯ ಸರ್ಕಾರದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಮಿತಿ ಕೂಡಾ ರಚನೆ ಮಾಡಲಾಗಿದೆ.

ಫೆಬ್ರವರಿ 12 ಬುಧವಾರ ಮಹತ್ವದ ಸಭೆ
ಈ ಸಮಿತಿಯು ಸಹ ಭದ್ರತೆಗೆ ಸಂಬಂಧಿಸಿದಂತೆ ಒಂದಷ್ಟು ಶಿಫಾರಸು ಮಾಡಿತ್ತು. ಅದೆಲ್ಲವುಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಅವು ಎಷ್ಟರ ಮಟ್ಟಿಗೆ ಪಾಲನೆ ಆಗಿವೆ ಎಂದು ನೋಡುತ್ತೇವೆ. ಐಪಿಎಲ್ ಮ್ಯಾಚ್ ಗಳು ಶೀಘ್ರವೇ ಅರಂಭವಾಗಲಿವೆ. ಸರ್ಕಾರದಿಂದ ಬೆಂಗಳೂರಿನಲ್ಲಿ ಕ್ಲಿಯರೆನ್ಸ್ ಸಿಗಬೇಕಿದೆ. ಇದೇ ವಿಚಾರವಾಗಿ ನಾನು ನಾಡಿದ್ದು ಬುಧವಾರ (ಫೆಬ್ರವರಿ 11) ನಾನು ಸಭೆ ಕರೆದಿದ್ದೇನೆ ಎಂದು ತಿಳಿಸಿದರು.
ಸರ್ಕಾರದ ಹಂತದಲ್ಲಿ ಏನು ಮಾಡಬೇಕೋ, ಅವರಿಗೆ ಏನು ಸೂಚನೆ ಕೊಡಬೇಕೋ ಎಂಬುದರ ಬಗ್ಗೆ ಮುಖ್ಯಮಂತ್ರಿ ಬಳಿ ಚರ್ಚಿಸಿ ತಿಳಿಸಲಾಗುವುದು. ಮುಖ್ಯವಾಗಿ ಭದ್ರತೆ, ಸುರಕ್ಷತೆ ಮುಖ್ಯ. ಈಗಾಗಲೇ ನಾವು ನೀಡಿರುವ ಶಿಫಾರಸುಗಳನ್ನು ಅವರು ಎಷ್ಟರ ಮಟ್ಟಿಗೆ ಪೂರೈಸಿದ್ದಾರೆ ಎಂಬುದನ್ನು ನೋಡಿಕೊಂಡು ಪಂದ್ಯಾವಳಿಗೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವಕಾಶ ನೀಡುವ ಕುರಿತು ತೀರ್ಮಾನ ಮಾಡುತ್ತೇವೆ.

ಬೆಂಗಳೂರಿನಲ್ಲಿ ಈ ಬಾರಿಯು ಐಪಿಎಲ್ ಪಂದ್ಯಾವಳಿಗಳು, ಅದರಲ್ಲೂ ಆರ್‌ಸಿಬಿ ಪಂದ್ಯಾವಳಿಗು ನಡೆಯಬೇಕೆಂದು ಅಭಿಮಾನಿಗಳು ಬಯಸಿದ್ದಾರೆ. ಆದರೆ ಅವರ ಸುರಕ್ಷತೆಯನ್ನೂ ನೋಡಬೇಕು. ಕಾಲ್ತುಳಿತದಂತಹ ಘಟನೆಗಳು ಮರುಕಳಿಸಬಾರದು. ಪ್ರತಿಯೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.
ಆರ್‌ಸಿಬಿ ಪಂದ್ಯಾವಳಿಗೆ ಅನುಮತಿ: ವೆಂಕಟೇಶ್ ಪ್ರಸಾದ್ ವಿಶ್ವಾಸ
ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿದ್ದು, ನಮ್ಮ ಮನವಿ ಸಲ್ಲಿಸಿದ್ದೇವೆ. ಬೆಂಗಳೂರಲ್ಲಿ ಆರ್‌ಸಿಬಿ ಪಂದ್ಯಾವಳಿ ನಡೆಸಲು ಅವರು ನಮ್ಮನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಸಮಿತಿ ಜೊತೆಗೆ ಸಚಿವರು ಸಭೆ ನಡೆಸಿ ಚರ್ಚಿಸಲಿದ್ದಾರೆ. ಅಲ್ಲದೇ ನಾವು ದಿನಾಂಕ ತಿರ್ಮಾನಿಸಲು, ಬಿಸಿಸಿಐಗೆ ಮಾಹಿತಿ ನೀಡಬೇಕಿದೆ. ಅದಕ್ಕಾಗಿ ಆದಷ್ಟು ಬೇಗ ನಿರ್ಧಾರ ನೀಡಬೇಕಿದೆ ಎಂದು ತಿಳಿಸಿದೆವು. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಕೆಎಸ್‌ಸಿಎ ಕಡೆಯಿಂದ ಕ್ರೀಡಾಂಗಣದಲ್ಲಿ ಎಲ್ಲ ಶಿಫಾರಸು ಹಾಗೂ ಭದ್ರತೆ, ಸುರಕ್ಷತೆ ಬಗೆಗಿನ ಬೇಡಿಕೆಗಳನ್ನು ಈಡೇರಿಸಲಿದ್ದೇವೆ. ಫೆಬ್ರವರಿ 12ರಂದು ಪಾಸಿಟಿವ್ ಸುದ್ದಿ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
———
ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ ‘ಮೈಖೇಲ್’ ವೆಬ್‌ಸೈಟ್‌ನಲ್ಲಿದೆ
ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ ‘ಮೈಖೇಲ್’ ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್‌ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ ‘ಮೈಖೇಲ್’ ವೆಬ್‌ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್, ‘ಮೈಖೇಲ್’ ವೆಬ್‌ಸೈಟ್ ಬೆಸ್ಟ್.
ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲೂ ಮೈಖೇಲ್ ಫಾಲೊ ಮಾಡಿ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/ipl-2026-rcb-matches-in-bengaluru-likely-high-level-meeting-on-feb-12-to-finalize-permissions-443063.html. xn--babytilbehr-pgb.com does not claim ownership of this content. All rights remain with the original publisher.
