RCB Vs CSK: ಆರ್‌ಸಿಬಿ ನೀಡಿದ ಗುರಿ ಮುಟ್ಟದೇ ಶರಣಾದ ಸಿಎಸ್‌ಕೆ | RCB won by 43 runs against CSK IPL 2026; Tim David’s Blitz Powers Bengaluru to Second Straight Win

Sports

oi-Madhusudhan KR

RCB Vs CSK IPL 2026: ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಇಂದು (ಏಪ್ರಿಲ್‌ 5) ನಡೆದ ಐಪಿಎಲ್‌ 2026ರ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 43 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಈ ಸೀಸನ್‌ನಲ್ಲಿ ಸತತ ಎರಡನೇ ಜಯದೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದತ್ತ ಹೆಜ್ಜೆ ಹಾಕಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಆರ್‌ಸಿಬಿಯು ಸಿಎಸ್‌ಕೆ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ ಬರೋಬ್ಬರಿ 250 ರನ್‌ಗಳನ್ನು ಕಲೆಹಾಕಿತು. ಟಿಮ್ ಡೇವಿಡ್‌ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು ತಂಡ ಇಷ್ಟೊಂದು ರನ್‌ಗಳನ್ನು ಪೇರಿಸಲು ಪ್ರಮುಖ ಕಾರಣವಾಯಿತು. ಆದರೆ ಈ ಗುರಿ ಬೆನ್ನತ್ತುವಲ್ಲಿ ವಿಫಲವಾಗುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀನಾಯ ಸೋಲು ಕಂಡಿತು.

RCB won by 43 runs against CSK IPL 2026 Tim David s Blitz Powers Bengaluru to Second Straight Win

ಬೃಹತ್ ಮೊತ್ತ ಪೇರಿಸಿದ ಆರ್‌ಸಿಬಿ

ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡವು ಟಿಮ್ ಡೇವಿಡ್ 70*, ದೇವದತ್ ಪಡಿಕ್ಕಲ್ 50 ಮತ್ತು ನಾಯಕ ರಜತ್ ಪಾಟಿದಾರ್ (48*) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 250 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಇನ್ನೂ ಆರ್‌ಸಿಬಿ ನೀಡಿದ 251 ರನ್‌ಗಳ ಗುರಿ ಬೆನ್ನಟ್ಟಿದ ಸಿಎಸ್‌ಕೆ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸಂಜು ಸ್ಯಾಮ್ಸನ್ ಮತ್ತು ಕಾರ್ತಿಕ್ ಶರ್ಮಾ ಬೇಗನೇ ಔಟಾಗಿದ್ದು ತಂಡಕ್ಕೆ ಭಾರಿ ಹಿನ್ನಡೆಯಾಯಿತು. ಅಂತಿಮವಾಗಿ ಚೆನ್ನೈ ತಂಡವು ನಿಗದಿತ ಓವರ್‌ಗಳಲ್ಲಿ ಗುರಿ ಮುಟ್ಟಲಾಗದೆ ಹೀನಾತ ಸೋಲನುಭವಿಸಿತು.

ಭುವನೇಶ್ವರ್ ಕುಮಾರ್ ಐತಿಹಾಸಿಕ ದಾಖಲೆ

ರಾಯಲ್ ಚಾಲೆಂಜರ್ಸ್ ಪರ ವೇಗಿ ಭುವನೇಶ್ವರ್ ಕುಮಾರ್ 200ನೇ ವಿಕೆಟ್ ಪಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಈ ಮೈಲಿಗಲ್ಲು ತಲುಪಿದ ಮೊದಲ ವೇಗದ ಬೌಲರ್ ಎಂಬ ಕೀರ್ತಿಗೆ ಭಾಜನರಾದರು. ಇನ್ನೂ ತಮ್ಮ ನೆಚ್ಚಿನ ಆರ್‌ಸಿಬಿ ತಂಡ ಸಿಎಸ್‌ಕೆ ವಿರುದ್ಧ ಭರ್ಜರಿ ಜಯ ಸಾಧಿಸುತ್ತಿದ್ದಂತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಈ ಮೂಲಕ ಉತ್ತಮ ಬೌಲಿಂಗ್ ಮತ್ತು ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆರ್‌ಸಿಬಿ, ಈ ಬಾರಿಯ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮುತ್ತಿದೆ.

ಆರ್‌ಸಿಬಿಗೆ ಶರಣಾದ ಸಿಎಸ್‌ಕೆ

ಆರ್‌ಸಿಬಿ ಪರ ಬೌಲಿಂಗ್ ಮಾಡಿದ ಭುನೇಶ್ವರ್ ಕುಮಾರ್ ಮೂರು ವಿಕೆಟ್ ಕಿತ್ತರೆ, ಜೇಕಬ್ ಡಫಿ, ಅಭಿನಂದನ್ ಸಿಂಗ್ ಹಾಗೂ ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು. ಉಳಿದಂತೆ ಸುಯಾಶ್ ಶರ್ಮಾ ಅವರು ಒಂದು ವಿಕೆಟ್ ಕಬಳಿಸಿ ಮಿಂಚಿದರು. ಈ ಮೂಲಕ ಸಿಎಸ್‌ಕೆ ತಂಡ 19.4 ಓವರ್‌ಗಳಿಗೆ ಕೇವಲ 207 ರನ್‌ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆರ್‌ಸಿಬಿಗೆ ಶರಣಾಯಿತು.

ಆರ್‌ಸಿಬಿ ಪ್ಲೇಯಿಂಗ್ 11: ಫಿಲ್‌ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್,
ಅಭಿನಂದನ್ ಸಿಂಗ್, ಜೇಕಬ್ ಡಫಿ.

ಸಿಎಸ್‌ಕೆ ಪ್ಲೇಯಿಂಗ್ 11: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್ (ನಾಯಕ), ಆಯುಷ್ ಮ್ಹಾತ್ರೆ,
ಸರ್ಫರಾಜ್ ಖಾನ್, ಶಿವಂ ದುಬೆ, ಪ್ರಶಾಂತ್ ವೀರ್, ಜೇಮೀ ಓವರ್ಟನ್, ನೂರ್ ಅಹ್ಮದ್, ಅಂಶುಲ್ ಕಾಂಬೋಜ್, ಮ್ಯಾಟ್ ಹೆನ್ರಿ, ಖಲೀಲ್ ಅಹ್ಮದ್.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/rcb-won-by-43-runs-against-csk-ipl-2026-tim-david-s-blitz-powers-bengaluru-to-second-straight-win-449467.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo