Richard Anthony: ರಕ್ಷಿತ್‌ ಶೆಟ್ಟಿಯ ಬಹುನಿರೀಕ್ಷಿತ ‘ರಿಚರ್ಡ್‌ ಆಂಟನಿ’ ಸಿನಿಮಾ ಬಗ್ಗೆ ಕೊನೆಗೂ ಸಿಕ್ತು ಉತ್ತರ | Rakshit Shetty Richard Anthony Set to Begin Shoot Soon Actor Pramod Shetty Shares Major Update

Entertainment

oi-Manohara M

ನಟ ಹಾಗೂ ನಿರ್ದೇಶಕ ರಕ್ಷಿತ್‌ ಶೆಟ್ಟಿ ಅವರ ಮಹತ್ವಾಕಾಂಕ್ಷಿ ಸಿನಿಮಾ ‘ರಿಚರ್ಡ್ ಆಂಟೊನಿ’ ಕುರಿತ ನಿರೀಕ್ಷೆ ಮತ್ತೆ ಜೋರಾಗಿದೆ. ಹಲವು ವರ್ಷಗಳ ಹಿಂದೆ ಭರ್ಜರಿ ಘೋಷಣೆಯೊಂದಿಗೆ ಹೊರಬಂದ ಈ ಚಿತ್ರದ ಬಗ್ಗೆ ಕಳೆದ ನಾಲ್ಕೈದು ವರ್ಷಗಳಿಂದ ಯಾವುದೇ ಸ್ಪಷ್ಟ ಅಪ್‌ಡೇಟ್ ಸಿಕ್ಕಿರಲಿಲ್ಲ. ಹೀಗಾಗಿ ಅಭಿಮಾನಿಗಳು ನಿರಂತರವಾಗಿ ಈ ಸಿನಿಮಾ ಬಗ್ಗೆ ಪ್ರಶ್ನಿಸುತ್ತಲೇ ಇದ್ದರು. ‘ರಿಚರ್ಡ್ ಆಂಟೊನಿ’ಯನ್ನು ಆಧಾರವಾಗಿಸಿಕೊಂಡ ಸ್ಪಿನ್‌ಆಫ್ ಆಗಿದೆ ಎನ್ನಲಾಗಿದ್ದು, ಅದರಿಂದಲೇ ಚಿತ್ರದ ಮೇಲೆ ಭಾರೀ ನಿರೀಕ್ಷೆ ನಿರ್ಮಾಣವಾಗಿದೆ. ಈ ನಡುವೆ ರಕ್ಷಿತ್ ಶೆಟ್ಟಿ ಅವರು ಕಥೆ ಬರವಣಿಗೆಯಲ್ಲಿ ತೊಡಗಿಕೊಂಡಿರುವ ಕಾರಣ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳೂ ಹರಿದಾಡುತ್ತಿದ್ದವು.

ಕಥೆ ರೆಡಿಯಾಗ್ತಿದೆ

ಇದೀಗ ರಕ್ಷಿತ್ ಶೆಟ್ಟಿ ಅವರ ಆಪ್ತ ಹಾಗೂ ನಟ ಪ್ರಮೋದ್‌ ಶೆಟ್ಟಿ ಅವರು ಚಿತ್ರದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ‘ಶೇಷ’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಿಚರ್ಡ್ ಆಂಟೊನಿ ಸಿನಿಮಾದ ಚಿತ್ರಕತೆ ಸಿದ್ಧವಾಗುತ್ತಿದೆ. ಶೀಘ್ರದಲ್ಲೇ ಪ್ರೀ-ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿವೆ. ಇನ್ನೂ ಎರಡು-ಮೂರು ತಿಂಗಳಲ್ಲಿ ಚಿತ್ರೀಕರಣ ಶುರುವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಜೊತೆಗೆ ಈ ಸಿನಿಮಾದಲ್ಲಿ ತಾವು ಸಹ ರಕ್ಷಿತ್ ಶೆಟ್ಟಿಯೊಂದಿಗೆ ನಟಿಸುತ್ತಿರುವುದಾಗಿಯೂ ಅವರು ಖಚಿತಪಡಿಸಿದ್ದಾರೆ.

Rakshit Shetty

ಇನ್ನೊಂದೆಡೆ, ರಕ್ಷಿತ್ ಶೆಟ್ಟಿ ತಂಡದ ಇತರ ಸದಸ್ಯರು ತಮ್ಮ ತಮ್ಮ ಯೋಜನೆಗಳಲ್ಲಿ ಬ್ಯುಸಿಯಾಗಿದ್ದಾರೆ. ನಟ ರಾಜ್‌ ಬಿ.ಶೆಟ್ಟಿ ಅವರದ್ದು ತೀರಾ ನಿರಂತರವಾಗಿ ಬಿಡುಗಡೆಯಾಗುತ್ತಿರುವ ಸಿನಿಮಾಗಳು. ಮಲಯಾಳಂ ಚಿತ್ರರಂಗದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ರಿಷಬ್‌ ಶೆಟ್ಟಿ ಅವರಿಗೆ ತೆಲುಗು ಚಿತ್ರರಂಗದಿಂದಲೂ ಆಫರ್‌ಗಳು ಬರುತ್ತಿದ್ದು, ಅಲ್ಲಿ ಬ್ಯುಸಿಯಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಪ್ರಮೋದ್ ಶೆಟ್ಟಿ, “ಎಲ್ಲರೂ ವೈಯಕ್ತಿಕವಾಗಿ ವಿಭಿನ್ನ ಯೋಜನೆಗಳಲ್ಲಿ ಬ್ಯುಸಿಯಾಗಿದ್ದೇವೆ. ಸಮಯ ಸಿಕ್ಕಾಗ ಒಂದಾಗಿ ಸೇರಿ ಕೆಲಸ ಮಾಡುತ್ತೇವೆ. ಎಲ್ಲ ಸಿನಿಮಾಗಳನ್ನೂ ಒಂದೇ ಸಮಯದಲ್ಲಿ ಮಾಡಿದರೆ ಪ್ರೇಕ್ಷಕರಿಗೆ ಬೋರ್ ಆಗಬಹುದು” ಎಂದು ತಿಳಿಸಿದ್ದಾರೆ. ಹಲವು ವರ್ಷಗಳ ನಿರೀಕ್ಷೆಯ ನಂತರ ‘ರಿಚರ್ಡ್ ಆಂಟೊನಿ’ ಸಿನಿಮಾ ಚಿತ್ರೀಕರಣ ಹಂತಕ್ಕೆ ಬರಲು ಸಜ್ಜಾಗುತ್ತಿರುವ ಸುದ್ದಿ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಹುಟ್ಟಿಸಿದೆ. ಇದೀಗ ಅಧಿಕೃತ ಘೋಷಣೆ ಮತ್ತು ಚಿತ್ರೀಕರಣದ ಆರಂಭಕ್ಕಾಗಿ ಸಿನಿರಸಿಕರು ಕಾತರದಿಂದ ಕಾಯುತ್ತಿದ್ದಾರೆ.

ರಿಚರ್ಡ್‌ ಆಂಟನಿ ಕುರಿತು

ರಕ್ಷಿತ್‌ ಶೆಟ್ಟಿ ಅವರ ಕನಸಿನ ಪ್ರಾಜೆಕ್ಟ್‌ಗಳಲ್ಲೊಂದು ಎನ್ನಲಾಗುತ್ತಿರುವ ‘ರಿಚರ್ಡ್ ಆಂಟೊನಿ’ ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ಹಲವು ವರ್ಷಗಳ ಹಿಂದೆ ಘೋಷಣೆಯಾದ ಈ ಚಿತ್ರಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಮಾಹಿತಿ ಸಿಗದ ಕಾರಣ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದರು. ಆದರೆ ಇತ್ತೀಚಿನ ಬೆಳವಣಿಗೆಗಳು ಚಿತ್ರದ ಕೆಲಸಗಳು ಹಂತ ಹಂತವಾಗಿ ಮುಂದುವರಿಯುತ್ತಿರುವುದನ್ನು ಸೂಚಿಸುತ್ತಿವೆ. ಇನ್ನು ಈ ಸಿನಿಮಾ 2014ರಲ್ಲಿ ಬಿಡುಗಡೆಯಾಗಿ ಕಲ್ಟ್‌ ಫಾಲೋಯಿಂಗ್‌ ಗಳಿಸಿದ್ದ ಉಳಿದವರು ಕಂಡಂತೆ ಚಿತ್ರದ ಪ್ರಮುಖ ಪಾತ್ರ ‘ರಿಚರ್ಡ್ ಆಂಟೊನಿ’ಯನ್ನು ಆಧರಿಸಿದೆ.

ಆ ಚಿತ್ರದಲ್ಲಿ ಕಾಣಿಸಿಕೊಂಡ ರೌಡಿ ಶೈಲಿಯ, ಗಾಢ ಭಾವನೆಗಳಿರುವ ಪಾತ್ರವೇ ಈ ಚಿತ್ರದ ಕೇಂದ್ರಬಿಂದುವಾಗಲಿದೆ ಎಂದು ಹೇಳಲಾಗಿತ್ತು. ಹೀಗಾಗಿ ಕಥೆ, ನಿರ್ವಹಣೆ ಹಾಗೂ ತಾಂತ್ರಿಕ ಮಟ್ಟದಲ್ಲಿ ಹೊಸ ಮಟ್ಟ ತಲುಪುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ. ರಕ್ಷಿತ್ ಶೆಟ್ಟಿ ಅವರು ಕಥೆ ಬರವಣಿಗೆಯಲ್ಲಿ ಹೆಚ್ಚಿನ ಸಮಯ ಮೀಸಲಿಟ್ಟಿದ್ದಾರೆ. ಮೂಲ ಕಥೆಯನ್ನು ಹಲವು ಬಾರಿ ಮರುಪರಿಶೀಲಿಸಿ, ಪ್ಯಾನ್‌ ಇಂಡಿಯಾ ಮಟ್ಟದ ಪ್ರೇಕ್ಷಕರಿಗೂ ಹೊಂದುವಂತೆ ರೂಪಿಸುತ್ತಿದ್ದಾರೆ ಎಂಬ ಗುಸುಗುಸು ಇದೆ. ಈ ಚಿತ್ರವನ್ನು ಕನ್ನಡದ ಜೊತೆಗೆ ಇತರೆ ಭಾಷೆಗಳಲ್ಲೂ ಬಿಡುಗಡೆ ಮಾಡುವ ಯೋಜನೆ ಇದೆ ಎನ್ನಲಾಗುತ್ತಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/rakshit-shetty-richard-anthony-set-to-begin-shoot-soon-actor-pramod-shetty-shares-major-update-443803.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo