
Entertainment
oi-Manohara M
ನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಭಾರತೀಯ ಚಿತ್ರರಂಗದಲ್ಲಿ ಸಂಭಾವನೆ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ‘ಕಾಂತಾರ’ ಹಾಗೂ ಅದರ ಪ್ರೇಕ್ವೆಲ್ ‘ಕಾಂತಾರ-ಚಾಪ್ಟರ್ 1’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ, ರಿಷಬ್ ಶೆಟ್ಟಿ ತಮ್ಮ ಮುಂದಿನ ಸಿನಿಮಾಗಳಿಗೆ ಭಾರೀ ಸಂಭಾವನೆಯ ಬೇಡಿಕೆ ಇಟ್ಟಿದ್ದಾರೆ ಎಂಬ ವರದಿಗಳು ಸಿನಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಅಲ್ಲದೆ ಈಗ ಒಂದು ಸಿನಿಮಾಗೆ ಎಷ್ಟು ಸಂಭಾವನೆ ಕೇಳಿದ್ದಾರೆ ಎಂಬುದು ಸಹ ರಿವೀಲ್ ಆಗಿದೆ.
ರಿಷಬ್ ಶೆಟ್ಟಿಯ ವೃತ್ತಿಜೀವನಕ್ಕೆ ‘ಕಾಂತಾರ’ ಸಿನಿಮಾಗಳು ಹೊಸ ದಿಕ್ಕನ್ನು ನೀಡಿದ್ದು ಗೊತ್ತೇ ಇದೆ. ನಿರ್ದೇಶನ ಮತ್ತು ನಾಯಕನಟನಾಗಿ ಅವರು ಕಟ್ಟಿದ ಕಾಂತಾರ ಪ್ರಪಂಚ ಕೇವಲ ವಿಮರ್ಶಾತ್ಮಕ ಪ್ರಶಂಸೆಯಷ್ಟೇ ಅಲ್ಲ, ಬಾಕ್ಸ್ ಆಫೀಸ್‌ನಲ್ಲೂ ದಾಖಲೆ ಗಳಿಕೆ ಮಾಡಿತು. ವರದಿಗಳ ಪ್ರಕಾರ, ‘ಕಾಂತಾರ’ ಚಿತ್ರದ ಲಾಭವನ್ನು ಹೋಂಬಾಳೆ ಫಿಲ್ಮ್ಸ್ ಜೊತೆ ಹಂಚಿಕೊಂಡಿದ್ದ ರಿಷಬ್ ಶೆಟ್ಟಿ, ಒಬ್ಬ ಕಲಾವಿದನಾಗಿ ಅಷ್ಟೇ ಅಲ್ಲದೆ, ಸಿನಿಮಾ ವ್ಯವಹಾರ ತಿಳಿದ ವ್ಯಕ್ತಿಯಾಗಿಯೂ ಗಮನ ಸೆಳೆದಿದ್ದಾರೆ. ಕಾಂತಾರ ಬಳಿಕ ಮುಂದಿನ ಚಿತ್ರಗಳಿಗೆ ಅವರು ಬರೋಬ್ಬರಿ ₹80 ಕೋಟಿವರೆಗೆ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ.

ಟಾಲಿವುಡ್‌ನಿಂದ ರಿಷಬ್‌ಗೆ ಹೆಚ್ಚು ಆಫರ್
‘ಕಾಂತಾರ’ ಯಶಸ್ಸಿನ ನಂತರ ರಿಷಬ್ ಶೆಟ್ಟಿಗೆ ವಿವಿಧ ಭಾಷೆಗಳ ಚಿತ್ರರಂಗಗಳಿಂದ ಅದರಲ್ಲೂ ವಿಶೇಷವಾಗಿ ತೆಲುಗು ಚಿತ್ರರಂಗದಿಂದ ದೊಡ್ಡ ಆಫರ್‌ಗಳು ಬಂದಿವೆ ಎನ್ನಲಾಗಿದೆ. ಇದೀಗ ಅವರು ಅಧಿಕೃತವಾಗಿ ಎರಡು ಭಾರೀ ಬಜೆಟ್ ತೆಲುಗು ಸಿನಿಮಾಗಳಿಗೆ ಒಪ್ಪಿಗೆ ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇದು ಅವರು ಕನ್ನಡ ಚಿತ್ರರಂಗದ ಹೊರಗೂ ತಮ್ಮ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ ಎಂದು ಸಿನಿ ವಲಯ ಚರ್ಚೆಗಳು ಜೋರಾಗಿವೆ.
ರಿಷಬ್ ಶೆಟ್ಟಿ ತಮ್ಮ ಮುಂದಿನ ಪ್ರಾಜೆಕ್ಟ್‌ಗಳಲ್ಲಿ ಲಾಭ ಹಂಚಿಕೆ ಮಾದರಿಯನ್ನು ಕೈಬಿಟ್ಟು, ಪ್ರತಿ ಸಿನಿಮಾಗೆ ₹80 ಕೋಟಿ ಸಂಭಾವನೆ ಕೇಳುತ್ತಿದ್ದಾರೆ ಎನ್ನಲಾಗಿದೆ. ರಿಷಬ್ ಅವರ ಈ ನಿರ್ಧಾರ ನಿರ್ಮಾಪಕರಿಗೂ ಅಚ್ಚರಿ ಮೂಡಿಸಿದೆಯಂತೆ. ಆದರೆ ಈ ಕುರಿತಂತೆ ರಿಷಬ್ ಶೆಟ್ಟಿ ಅಥವಾ ಅವರ ತಂಡದಿಂದ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ. ಪ್ರಮುಖ ನಿರ್ಮಾಣ ಸಂಸ್ಥೆಗಳು ರಿಷಬ್ ಶೆಟ್ಟಿ ಅವರ ಕಥೆ ಆಯ್ಕೆ, ನಟನಾ ಸಾಮರ್ಥ್ಯ ಮತ್ತು ಜನರನ್ನು ಚಿತ್ರಮಂದಿರಗಳಿಗೆ ಸೆಳೆಯುವ ಶಕ್ತಿ ಮೇಲೆ ಭಾರೀ ವಿಶ್ವಾಸ ಹೊಂದಿವೆ ಎನ್ನಲಾಗುತ್ತಿದೆ.
ಸಾಲು ಸಾಲು ಸಿನಿಮಾಗಳು
ರಿಷಬ್ ಶೆಟ್ಟಿಯ ಮುಂದಿನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಪ್ರಮುಖವಾದುದು ತೆಲುಗು ಭಾಷೆಯ ‘ಜೈ ಹನುಮಾನ್’. ಈ ಚಿತ್ರವನ್ನು ಪ್ರಶಾಂತ್ ವರ್ಮಾ ನಿರ್ದೇಶಿಸುತ್ತಿದ್ದು, ಖ್ಯಾತ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದೆ. ಪೌರಾಣಿಕ ಹಿನ್ನೆಲೆ ಹೊಂದಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದು ಭಾರತೀಯ ಸಿನಿರಂಗದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ಈ ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆಯಾಗಿದೆ.
ರಿಷಬ್ ಶೆಟ್ಟಿಯ ಸಂಭಾವನೆ ಬೇಡಿಕೆ ನಿಜವಾಗಿದೆಯೇ? ಅಥವಾ ಇದು ಕೇವಲ ಊಹಾಪೋಹವೇ? ಎಂಬ ಚರ್ಚೆಗಳು ಸಿನಿ ವಲಯದಲ್ಲಿ ಮುಂದುವರಿದಿವೆ. ಆದರೆ ‘ಕಾಂತಾರ’ ನಂತರ ರಿಷಬ್ ಶೆಟ್ಟಿ ಭಾರತೀಯ ಸಿನಿರಂಗದ ಅತ್ಯಂತ ಬೇಡಿಕೆಯ ನಟ-ನಿರ್ದೇಶಕರ ಪೈಕಿ ಒಬ್ಬರಾಗಿರುವುದಂತೂ ಸತ್ಯ. ಇನ್ನು ರಿಷಬ್ ಸಂಭಾವನೆ ಹೆಚ್ಚಿಸಿಕೊಂಡರೆ ತಪ್ಪೇನು? ಎಂದು ಜನ ಅವರ ಬೆನ್ನಿಗೆ ನಿಂತಿದ್ದಾರೆ. ರಿಷಬ್ ಶೆಟ್ಟಿಯ ಹವಾ ಈಗ ಕನ್ನಡ ಮಾತ್ರವಲ್ಲ, ಬಾಲಿವುಡ್‌ನಲ್ಲೂ ಇದೆ.
-

Gold Price: ಚಿನ್ನ-ಬೆಳ್ಳಿ ದರದಲ್ಲಿ ಮತ್ತೆ ಹಾವು-ಏಣಿ ಆಟ: ಒಂದೇ ದಿನದಲ್ಲಿ ದಾಖಲೆಯ ಏರಿಕೆ ಕಂಡ ಬಂಗಾರ
-

ಫೆಬ್ರವರಿ 7 ದಿನ ಭವಿಷ್ಯ: ಎಲ್ಲಾ ರಾಶಿಯವರ ಉದ್ಯೋಗ, ಹಣಕಾಸು, ಆರೋಗ್ಯ ಹಾಗೂ ಸಂಬಂಧಗಳ ಕುರಿತ ಸಂಪೂರ್ಣ ಭವಿಷ್ಯ ತಿಳಿಯಿರಿ
-

Karnataka Heat Wave: ರಾಜ್ಯದಲ್ಲಿ ಫೆಬ್ರವರಿ ಅಂತ್ಯಕ್ಕೆ ಶಾಖದ ಅಲೆ ವಾತಾವರಣ ನಿರೀಕ್ಷೆ, 7 ದಿನದ ಮುನ್ಸೂಚನೆ
-

Bengaluru Rail Project: ಉಪನಗರ ರೈಲು ಕಾರಿಡಾರ್-3 ‘ಪಾರಿಜಾತ’ಗೆ ಅನುಮೋದನೆ, ವೈಟ್ಫಿಲ್ಡ್-ಕೆಂಗೇರಿಗೆ ಸಂಪರ್ಕ
-

Namma Metro: ಮೆಟ್ರೋ ದರ ಹೆಚ್ಚಳದಲ್ಲಿ ಸರ್ಕಾರ ಪಾತ್ರ ಬಹಿರಂಗಪಡಿಸಿದ ಸಂಸದ ತೇಜಸ್ವಿ ಸೂರ್ಯ
-

Krishi Thapanda: ನಿರ್ಮಾಪಕನಿಗೆ ಬ್ಲಾಕ್ಮೇಲ್ ಪ್ರಕರಣ: ನಟಿ ಕೃಷಿ ತಾಪಂಡಗೆ ಪೊಲೀಸರಿಂದ ನೋಟಿಸ್
-

SSLC Exam: 625 ಅಂಕ ಗಳಿಸುವ ವಿದ್ಯಾರ್ಥಿಗಳಿಗೆ 1 ಲಕ್ಷ ರೂ. ನಗದು ಬಹುಮಾನ: ಚನ್ನಗಿರಿ ಶಾಸಕ ಘೋಷಣೆ
-

ಫೆಬ್ರವರಿ 9ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
-

ಭಾರತಕ್ಕೆ ಭರ್ಜರಿ ಲಾಭ, ಅಮೆರಿಕ ಜೊತೆಗಿನ ಒಪ್ಪಂದದ ಪರಿಣಾಮ ಭರ್ಜರಿ ಲಾಟರಿ… India And America
-

DEMU Rail: ದಾಂಡೇಲಿ-ಅಳ್ನಾವರ ಮಧ್ಯ ಡೆಮು ರೈಲುಗಳ ಸೇವೆ ಆರಂಭ, ವೇಳಾಪಟ್ಟಿ, ಸಂಚಾರ ವಿವರ
-

ಅಂಡರ್ 19 ವಿಶ್ವಕಪ್ ಫೈನಲ್ನಲ್ಲಿ 15 ಸಿಕ್ಸ್, 15 ಬೌಂಡರಿ ಬಾರಿಸಿ ದಾಖಲೆ ಬರೆದ 16 ವರ್ಷದ ವೈಭವ್ ಸೂರ್ಯವಂಶಿ ಯಾರು ಗೊತ್ತಾ?
-

ತಾಯಿಯಾಗುವುದು ಹೆಣ್ಣಿನ ಹಕ್ಕು, ಒತ್ತಾಯ ಸಲ್ಲದು: 30ನೇ ವಾರದಲ್ಲಿಯೂ ಗರ್ಭಪಾತಕ್ಕೆ ಅವಕಾಶ ಕೊಟ್ಟ ಸುಪ್ರೀಂ ಕೋರ್ಟ್
-

ಗಿಲ್ಲಿ ಮೇಲೆ ಸಿನಿಮಾ ಪ್ರಚಾರಕ್ಕೆ ಬಾರದ ಆರೋಪ; ವೈರಲ್ ಆಯ್ತು ಪ್ರಮೋಷನ್ ಮಾಡಿರುವ ಹಳೆಯ ವಿಡಿಯೋ
-

Namma Metro Fare: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ತಡೆ: ಪ್ರಯಾಣಿಕರಿಗೆ ನೆಮ್ಮದಿಯ ಸುದ್ದಿ ಕೊಟ್ಟ ತೇಜಸ್ವಿ ಸೂರ್ಯ
-

India And Russia: ರಷ್ಯಾ ತೈಲ ಖರೀದಿ ವಿಚಾರದಲ್ಲಿ ದೊಡ್ಡ ಚರ್ಚೆ, ಭಾರತದ ನಡೆ ಬಗ್ಗೆ ಮೂಡಿದೆ ಕುತೂಹಲ
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/rishab-shetty-has-reportedly-hiked-his-remuneration-to-80-crore-per-film-after-kantara-chapter-1-442247.html. xn--babytilbehr-pgb.com does not claim ownership of this content. All rights remain with the original publisher.
