Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ | Sanju Samson’s Father Vishwanath Opens Up on Early Struggles After India T20 World Cup 2026 Triumph

Sports

oi-Madhusudhan KR

Sanju Samson Father: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ 2026 ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಟೀಂ ಇಂಡಿಯಾ ಟ್ರೋಫಿ ತನ್ನದಾಗಿಸಿಕೊಂಡಿತು. ಭಾರತ ಈ ಸಾಧನೆ ಮಾಡಲು ಪ್ರಮುಖ ಪಾತ್ರವಹಿಸಿದವರಲ್ಲಿ ಸಂಜು ಸ್ಯಾಮ್ಸನ್‌ ಕೂಡ ಒಬ್ಬರಾಗಿದ್ದಾರೆ. ಈ ಬಗ್ಗೆ ಸಂಜು ತಂದೆ ಪ್ರತಿಕ್ರಯಿಸಿ ಅವರ ಆರಂಭಿಕ ಜೀವನದ ಹಾದಿ ಬಗ್ಗೆ ವಿವರಿಸಿದ್ದಾರೆ.

ಸಂಜು ಸ್ಯಾಮ್ಸನ್ ತಂದೆ ಸ್ಯಾಮ್ಸನ್ ವಿಶ್ವನಾಥ್ ಅವರು ಭಾರತ ತಂಡವು ವಿಶ್ವ ಚಾಂಪಿಯನ್ ಆಗಿದ್ದಕ್ಕೆ ಮತ್ತು ತಮ್ಮ ಮಗನ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಆರಂಭಿಕ ದಿನಗಳಲ್ಲಿ ಸಂಜು ಎದುರಿಸಿದ ಸವಾಲುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Sanju Samson s Father Vishwanath Opens Up on Early Struggles After India T20 World Cup 2026 Triumph

ಮಗನ ಸಾಧನೆಯ ಬಗ್ಗೆ ಮಾತನಾಡುತ್ತಾ, ತಮ್ಮ ಮಗನ ಕ್ರಿಕೆಟ್ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಆತನಿಗೆ ಸಾಕಷ್ಟು ತೊಂದರೆಗಳನ್ನು ನೀಡಲಾಗಿತ್ತು ಮತ್ತು ಆತನನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನಗಳು ನಡೆದಿದ್ದವು ಎಂದು ಅವರು ಹೇಳಿದರು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಟೂರ್ನಿಯ ಮೂರು ನಿರ್ಣಾಯಕ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಅವರು ಭಾರತ ತಂಡಕ್ಕೆ ಅದ್ಭುತ ಆರಂಭವನ್ನು ಒದಗಿಸಿಕೊಟ್ಟರು. ಸ್ಯಾಮ್ಸನ್ ಅವರ ಈ ಅಮೋಘ ಪ್ರದರ್ಶನವನ್ನು ಪರಿಗಣಿಸಿ, ಅವರನ್ನು ಸರಣಿ ಶ್ರೇಷ್ಠ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು. ಭಾರತ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿದ್ದಕ್ಕೆ ಸಂಜು ಅವರ ತಂದೆ ಸ್ಯಾಮ್ಸನ್ ವಿಶ್ವನಾಥ್ ಅವರು ಅಪಾರ ಸಂತೋಷ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸಂಜು ಬದುಕಿನಲ್ಲಿ ಎದುರಾದ ಸವಾಲುಗಳ ಬಗ್ಗೆಯೂ ವಿವರಿಸಿದ್ದಾರೆ.

ಆರಂಭದಲ್ಲಿ ಸಾಕಷ್ಟು ಸವಾಲುಗಳನ್ನ ಎದುರಿಸಿದ ಸಂಜು

ತಮ್ಮ ಮಗನ ಪ್ರದರ್ಶನದ ಬಗ್ಗೆ ಮಾತನಾಡಿದ ಸ್ಯಾಮ್ಸನ್ ವಿಶ್ವನಾಥ್, “ನಾನು ನನ್ನ ಮಗನ ಸಾಧನೆಯಿಂದ ಅತ್ಯಂತ ಸಂತೋಷಗೊಂಡಿದ್ದೇನೆ. ಆದರೆ, ಸಂಜು ವೃತ್ತಿಜೀವನದ ಆರಂಭದಲ್ಲಿ ಸಾಕಷ್ಟು ತೊಂದರೆಗಳು ಎದುರಾದವು. ಮತ್ತು ಅವನನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನಗಳು ನಡೆದವು. ಸದ್ಯಕ್ಕೆ ಈ ರೀತಿಯ ತೊಂದರೆಗಳು ಕೊನೆಗೊಳ್ಳಬಹುದು,” ಎಂದು ಹೇಳಿದರು.

ಮಗನ ಕ್ರಿಕೆಟ್‌ ಭವಿಷ್ಯಕ್ಕಾಗಿ ಪೊಲೀಸ್‌ ಹುದ್ದೆ ತ್ಯಜಿಸಿದ ತಂದೆ

ಸಂಜು ಸ್ಯಾಮ್ಸನ್ ಅವರ ತಂದೆ ಸ್ಯಾಮ್ಸನ್ ವಿಶ್ವನಾಥ್ ಅವರು ಒಬ್ಬ ಫುಟ್‌ಬಾಲ್ ಆಟಗಾರರಾಗಿದ್ದರು. ಅಲ್ಲದೆ, ಅವರು ದೆಹಲಿ ಪೊಲೀಸ್‌ನಲ್ಲಿ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸಿದ್ದಾರೆ. ಇನ್ನೂ ಸಂಜು ಅವರು ದೆಹಲಿಯಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿ, ಅಲ್ಲಿಯೇ ಕ್ರಿಕೆಟ್ ತರಬೇತಿಯನ್ನೂ ಪಡೆದರು. ಅವರು ಉತ್ತಮ ಪ್ರದರ್ಶನ ನೀಡಿದರೂ ಸಹ, ಅಂಡರ್-13 ತಂಡಕ್ಕೆ ಆಯ್ಕೆಯಾಗಲು ವಿಫಲರಾದಾಗ ಅವರ ತಂದೆ ಸ್ವಯಂ ನಿವೃತ್ತಿ ಪಡೆದು ಕೇರಳಕ್ಕೆ ತೆರಳಿದರು. ಅಲ್ಲಿ ಸಂಜು ಅವರು ತರಬೇತಿಯನ್ನು ಮುಂದುವರಿಸಿ ಜೂನಿಯರ್ ಮಟ್ಟ ಪಂದ್ಯಗಳಲ್ಲಿ ಮಿಂಚಿದರು.

“ನಾನು 18ನೇ ವಯಸ್ಸಿನಲ್ಲಿ ದೆಹಲಿಯಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು. 19ನೇ ವಯಸ್ಸಿನಿಂದ 42ನೇ ವಯಸ್ಸಿನವರೆಗೆ ದೆಹಲಿ ಪೊಲೀಸ್ ಫುಟ್‌ಬಾಲ್ ತಂಡದ ಭಾಗವಾಗಿದ್ದೆ. ನನ್ನ ಮಕ್ಕಳು ಬಾಲ್ಯದಲ್ಲಿ ದೆಹಲಿಯಲ್ಲೇ ಬೆಳೆದರು. ಸಂಜು ಸ್ಯಾಮ್ಸನ್ ಒಂದೇ ಪ್ರವಾಸದಲ್ಲಿ 500 ರನ್‌ಗಳನ್ನು ಗಳಿಸಿದರೂ ಸಹ, ಅವರಿಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ,” ಎಂಬ ನೋವನ್ನು ಸ್ಯಾಮ್ಸನ್ ವಿಶ್ವನಾಥ್ ಅವರು ಹಂಚಿಕೊಂಡಿದ್ದಾರೆ.

ಸಂಜು ಅವರ ತಂದೆ ಮುಂದುವರಿದು ಮಾತನಾಡುತ್ತಾ, “ಸಂಜು ಕೇವಲ 10 ವರ್ಷದವನು ಎಂದು ಹೇಳಿದರು. ಆದರೆ ಈ ಟೂರ್ನಮೆಂಟ್‌ 13 ವರ್ಷದ ಮಕ್ಕಳಿಗಾಗಿ ಎಂದು ಹೇಳಲಾಗಿತ್ತು. ಹಾಗಾದರೆ, ಲಿಯೋನೆಲ್ ಮೆಸ್ಸಿ 17ನೇ ವಯಸ್ಸಿನಲ್ಲಿ ಮತ್ತು ಸಚಿನ್ ತೆಂಡೂಲ್ಕರ್ 15ನೇ ವಯಸ್ಸಿನಲ್ಲಿ ತಂಡದಲ್ಲಿ ಅವಕಾಶ ಪಡೆದಿದ್ದರು. ಕೇವಲ ಕಡಿಮೆ ವಯಸ್ಸು ಎಂಬ ಕಾರಣದಿಂದ ಸಂಜುಗೆ ತಂಡಕ್ಕೆ ಸೇರಿಸಿಲ್ಲ. ಮುಂದಿನ ವರ್ಷವೂ ಇದೇ ರೀತಿ ಉತ್ತಮ ಪ್ರದರ್ಶನ ನೀಡದಿದ್ದರೆ, ಅವರಿಗೆ ಮತ್ತೆ ತಂಡದಲ್ಲಿ ಅವಕಾಶ ಕೊಡುತ್ತೀರಾ?,” ಎಂದು ಪ್ರಶ್ನಿಸಿದೆ ಎಂದು ಹೇಳಿದರು.

“ಮಗು ಉತ್ತಮ ಪ್ರದರ್ಶನ ನೀಡಿದಾಗ, ಅದಕ್ಕೆ ತಕ್ಕ ಪ್ರತಿಫಲ ದೊರೆಯಲೇಬೇಕು. ಅಂಡರ್-13 ದೆಹಲಿ ರಾಜ್ಯ ತಂಡದಲ್ಲಿ ಸಂಜು ಅವರನ್ನು ಆಯ್ಕೆ ಮಾಡದಿದ್ದಾಗ, ನಾನು ಕೇರಳಕ್ಕೆ ಮರಳಲು ನಿರ್ಧರಿಸಿದೆ. ನನ್ನ ಈ ನಿರ್ಧಾರದ ಬಗ್ಗೆ ಪತ್ನಿ ಪ್ರಶ್ನೆಗಳನ್ನು ಎತ್ತಿದ್ದರು. ಆದರೆ ಆಗ ನಾನು ಅವರಿಗೆ ಒಂದು ವಿಷಯವನ್ನು ಸ್ಪಷ್ಟಪಡಿಸಿದೆ. ಸಂಜು ತನ್ನ 10ನೇ ವಯಸ್ಸಿನಲ್ಲಿ ಆಡುತ್ತಿರುವ ರೀತಿಯಲ್ಲಿ, ಆತ 17ನೇ ವಯಸ್ಸಿನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಆ ವಯಸ್ಸಿಗೆ ಬಂದಾಗ ಆತ ಉಳಿದ ಸಾಮಾನ್ಯ ಮಕ್ಕಳಂತೆಯೇ ಆಗಿಬಿಡುತ್ತಾನೆ ಎಂದು ನಾನು ತಿಳಿಸಿದ್ದೆ,” ಎಂದು ಹೇಳಿದರು.

“ಕೇರಳಕ್ಕೆ ತೆರಳಿ ನಮ್ಮ ಮಗ ಅಲ್ಲಿ ಅದ್ಭುತ ಪ್ರದರ್ಶನ ನೀಡಿದರೆ, ಇಡೀ ಕೇರಳವೇ ಅವನ ಅಭಿಮಾನಿಯಾಗಲಿದೆ ಎಂಬ ನಂಬಿಕೆ ನನಗಿತ್ತು. ಇದಕ್ಕಾಗಿ ನಾನು ನನ್ನ ಕೆಲಸವನ್ನೇ ತ್ಯಜಿಸಿದೆ. ಸಂಜು ಬಳಿ ಕೆಲವರು ಕ್ಷಮೆಯಾಚಿಸುವುದನ್ನು ನಾನು ನೋಡಿದ್ದೇನೆ. ನಾನು ನಡೆದಿದ್ದ ಎಲ್ಲಾ ಕೆಟ್ಟ ವಿಷಯಗಳನ್ನು ಮರೆತುಬಿಟ್ಟಿದ್ದೇನೆ. ಈಗ ನನ್ನ ಪಾಲಿಗೆ ಎಲ್ಲವೂ ಸುಂದರವಾಗಿದೆ” ಎಂದು ಅವರು ತಿಳಿಸಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/sanju-samson-s-father-vishwanath-opens-up-on-early-struggles-after-india-t20-world-cup-2026-triumph-446495.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo