Shiva Rajkumar: ಸೈನಿಕನ ದೇಶಪ್ರೇಮಮೇ ಚಿತ್ರದ ಜೀವಾಳ: ಧುರಂಧರ್-2 ಸಿನಿಮಾ, ರಣವೀರ್‌ ಸಿಂಗ್‌ ನಟನೆಗೆ ಶಿವಣ್ಣ ಫಿದಾ | Shiva Rajkumar Praises Bollywood actor Ranveer Singh Performance in Dhurandhar The Revenge

Entertainment

oi-Manohara M

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಮತ್ತು ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೇಂಜ್’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇದೀಗ ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್ ಕೂಡ ಮನಸೋತಿದ್ದಾರೆ. ಸಿನಿಮಾ ವೀಕ್ಷಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಶಿವಣ್ಣ, ಚಿತ್ರತಂಡದ ಶ್ರಮವನ್ನು ಕೊಂಡಾಡಿದ್ದಾರೆ.

ಶಿವಣ್ಣನ ಪೋಸ್ಟ್‌ನಲ್ಲಿ ಏನಿದೆ?

“ಧುರಂಧರ್: ದಿ ರಿವೇಂಜ್ ಅದ್ಭುತವಾಗಿದೆ. ಚಿತ್ರದ ಪ್ರತಿಯೊಂದು ಕ್ಷಣವನ್ನೂ ಆನಂದಿಸಿದೆ. ರಣವೀರ್ ಸಿಂಗ್ ತಮ್ಮ ನಟನೆಯ ಮೂಲಕ ಮಿಂಚಿದ್ದಾರೆ. ಇನ್ನು ಶಾಶ್ವತ್ ಸಚ್‌ದೇವ್ ಅವರ ಸಂಗೀತ, ವಿಶೇಷವಾಗಿ ಹಳೆಯ ವಿಂಟೇಜ್ ಹಾಡುಗಳನ್ನು ಬಳಸಿಕೊಂಡಿರುವ ರೀತಿ ಮನಸ್ಸಿನ ಮೇಲೆ ಅಚ್ಚೊತ್ತಿದೆ” ಎಂದು ಶಿವಣ್ಣ ಹೊಗಳಿದ್ದಾರೆ. ನಿರ್ದೇಶಕ ಆದಿತ್ಯ ಧರ್ ಅವರ ಮೇಕಿಂಗ್ ಮತ್ತು ಕಥಾ ಹಂದರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಶಿವಣ್ಣ, “ದೇಶಕ್ಕಾಗಿ ಒಬ್ಬ ಸೈನಿಕ ಎಷ್ಟರ ಮಟ್ಟಿಗೆ ಶ್ರಮಿಸುತ್ತಾನೆ ಮತ್ತು ಆತನ ದೇಶಪ್ರೇಮದ ಪಯಣವೇ ಈ ಚಿತ್ರದ ಜೀವಾಳ. ಇಂತಹ ಕಥೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ತೆರೆಯ ಮೇಲೆ ತಂದಿರುವ ಆದಿತ್ಯ ಧರ್ ಅವರ ಕೌಶಲಕ್ಕೆ ನನ್ನ ಗೌರವಗಳು. ಇಡೀ ತಂಡಕ್ಕೆ ಅಭಿನಂದನೆಗಳು” ಎಂದು ಬರೆದುಕೊಂಡಿದ್ದಾರೆ.

Shiva Rajkumar

‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಖ್ಯಾತಿಯ ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಪ್ರಬಲ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇಶಪ್ರೇಮ ಮತ್ತು ಸೇಡಿನ ಕಥಾಹಂದರ ಹೊಂದಿರುವ ಈ ಸಿನಿಮಾ ಈಗಾಗಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇದೀಗ ಸ್ವತಃ ಶಿವರಾಜ್‌ಕುಮಾರ್ ಅವರೇ ಮೆಚ್ಚುಗೆ ಸೂಚಿಸಿರುವುದು ಚಿತ್ರದ ತೂಕವನ್ನು ಹೆಚ್ಚಿಸಿದೆ. ರಣವೀರ್ ಸಿಂಗ್ ಅವರ ವೃತ್ತಿಜೀವನದ ಅತ್ಯುತ್ತಮ ನಟನೆಗಳಲ್ಲಿ ಈ ಸಿನಿಮಾ ಒಂದು ಎಂದು ಶಿವಣ್ಣ ಅಭಿಪ್ರಾಯಪಟ್ಟಿದ್ದು, ಚಿತ್ರದ ತಾಂತ್ರಿಕ ಮೌಲ್ಯಗಳು ಮತ್ತು ಭಾವನಾತ್ಮಕ ಸನ್ನಿವೇಶಗಳು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಲಿವೆ ಎಂದು ಶುಭ ಹಾರೈಸಿದ್ದಾರೆ.

ಬಾಕ್ಸ್‌ ಆಫೀಸ್‌ನಲ್ಲಿ 900 ಕೋಟಿ ಬಾಚಿದ ಸಿನಿಮಾ

‘ಧುರಂಧರ್: ದಿ ರಿವೇಂಜ್’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾದ ದಿನದಿಂದಲೂ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಈ ಸ್ಪೈ ಆಕ್ಷನ್ ಸಿನಿಮಾ, ಇದೀಗ ಜಾಗತಿಕ ಮಟ್ಟದಲ್ಲಿ 900 ಕೋಟಿ ರೂಪಾಯಿಗಳ ಗಡಿಯನ್ನು ದಾಟಿ ಮುನ್ನುಗ್ಗುತ್ತಿದೆ. ವಾರದ ಮಧ್ಯಭಾಗದಲ್ಲೂ ಚಿತ್ರದ ಕ್ರೇಜ್ ಕಡಿಮೆಯಾಗಿಲ್ಲ. ಮಂಗಳವಾರದಂದು ಭಾರತದಾದ್ಯಂತ ಒಟ್ಟು 20,412 ಶೋಗಳಿಂದ ಈ ಸಿನಿಮಾ ಭರ್ಜರಿ 56.55 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಶ್ವದಾದ್ಯಂತ ಒಟ್ಟು ಗಳಿಕೆ 937.49 ಕೋಟಿ ರೂಪಾಯಿ ಎಂದು ವರದಿಯಾಗಿದೆ.

ಕೇವಲ ಕೆಲವೇ ದಿನಗಳಲ್ಲಿ 937 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿರುವ ಈ ಚಿತ್ರ, ಶೀಘ್ರದಲ್ಲೇ 1000 ಕೋಟಿ ರೂಪಾಯಿಗಳ ಕ್ಲಬ್ ಸೇರುವುದು ಬಹುತೇಕ ಖಚಿತವಾಗಿದೆ. ರಣವೀರ್ ಸಿಂಗ್ ಅವರ ವೃತ್ತಿಜೀವನದ ಅತಿದೊಡ್ಡ ಹಿಟ್ ಚಿತ್ರವಾಗಿ ‘ಧುರಂಧರ್’ ಹೊರಹೊಮ್ಮಿದೆ. ದೇಶಪ್ರೇಮದ ಕಥೆ ಮತ್ತು ಅದ್ಭುತ ಆಕ್ಷನ್ ಸನ್ನಿವೇಶಗಳು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿವೆ. ಸದ್ಯದ ಟ್ರೆಂಡ್ ಗಮನಿಸಿದರೆ, ಈ ವಾರಾಂತ್ಯದ ವೇಳೆಗೆ ಸಿನಿಮಾ ಮತ್ತಷ್ಟು ದಾಖಲೆಗಳನ್ನು ಪುಡಿಗಟ್ಟುವ ಸಾಧ್ಯತೆಯಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/entertainment/shiva-rajkumar-praises-bollywood-actor-ranveer-singh-performance-in-dhurandhar-the-revenge-448317.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo