
Sports
oi-Madhusudhan KR
Shivam Dube: ಟಿ20 ವಿಶ್ವಕಪ್ 2026 ಫೈನಲ್ ಪಂದ್ಯದಲ್ಲಿ ಭಾರತ ತಂಡದ ಐತಿಹಾಸಿಕ ಜಯದ ನಂತರ, ಕ್ರೀಡಾಂಗಣದಲ್ಲಿ ಕಂಡುಬಂದ ದೃಶ್ಯಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್ಗಳು ಅಭಿಮಾನಿಗಳ ಮನಗೆದ್ದಿವೆ. ಈ ಪೈಕಿ, ಟೀಂ ಇಂಡಿಯಾ ಆಲ್ರೌಂಡರ್ ಶಿವಂ ದುಬೆ ಅವರ ಪತ್ನಿ ಅಂಜುಮ್ ಖಾನ್ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗಿದೆ.
ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಶಿವಂ ದುಬೆ ಅವರು ಬ್ಯಾಟಿಂಗ್ನಲ್ಲಿ ನೀಡಿದ ಅದ್ಭುತ ಪ್ರದರ್ಶನ ಭಾರತದ ಬೃಹತ್ ಮೊತ್ತಕ್ಕೆ ಪ್ರಮುಖ ಕಾರಣವಾಯಿತು. ಈ ಗೆಲುವಿನ ಬಳಿಕ, ಪತಿ ಶಿವಂ ದುಬೆ ಅವರ ಸಾಧನೆಯನ್ನು ಅಂಜುಮ್ ಖಾನ್ ಅವರು ಅತ್ಯಂತ ಹೆಮ್ಮೆಯಿಂದ ಕೊಂಡಾಡಿದ್ದಾರೆ.

ಅಂಜುಮ್ ಖಾನ್ ವಿಶೇಷ ಪೋಸ್ಟ್
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶಿವಂ ದುಬೆ ಅವರ ಫೋಟೋ ಮತ್ತು ಟೀಮ್ ಇಂಡಿಯಾದ ವಿಶ್ವಕಪ್ ವಿಜಯದ ಸಂಭ್ರಮದ ದೃಶ್ಯಗಳನ್ನು ಹಂಚಿಕೊಂಡಿರುವ ಅಂಜುಮ್ ಖಾನ್, “ನನ್ನ ಚಾಂಪಿಯನ್! ನೀನು ಸಾಧಿಸಿರುವುದು ನಿಜಕ್ಕೂ ಅದ್ಭುತ,” ಎಂಬ ಅರ್ಥ ಬರುವಂತೆ ಭಾವನಾತ್ಮಕ ಸಂದೇಶವನ್ನು ಬರೆದಿದ್ದಾರೆ. ಕಠಿಣ ಪರಿಶ್ರಮ ಮತ್ತು ತಂಡದ ಗೆಲುವಿನಲ್ಲಿ ಪತಿಯ ಪಾತ್ರವನ್ನು ಕಂಡು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಸಾಮರಸ್ಯದ ಸಂಕೇತದ ಪೋಸ್ಟ್
ವಿಭಿನ್ನ ಧಾರ್ಮಿಕ ಹಿನ್ನೆಲೆಯಿಂದ ಬಂದಿರುವ ಈ ದಂಪತಿಗಳು, ಪರಸ್ಪರರ ನಂಬಿಕೆಗಳು ಮತ್ತು ಸಂಸ್ಕೃತಿಯನ್ನು ಗೌರವಿಸುವ ಮೂಲಕ ಮಾದರಿಯಾಗಿದ್ದಾರೆ. Prakhar Mishra ಹೆಸರಿನ ಟ್ವಿಟರ್ ಖಾತೆಯಲ್ಲಿ “ಸುನ್ನಿ ಬ್ರಾಹ್ಮಣ ಶಿವಂ ದುಬೆ, ಗಂಡ: ಹರಹರ ಮಹಾದೇವ್ ಪತ್ನಿ: ಮಾಶಾಅಲ್ಲಾಹ್, ಅಲ್ಹಮ್ದುಲಿಲ್ಲಾಹ್ ಎಂದು ಪೋಸ್ಟ್ ಮಾಡಿದ್ದಾರೆ. ಇದರ ಅರ್ಥ ಶಿವಂ ದುಬೆ “ಹರ್ ಹರ್ ಮಹಾದೇವ್” ಎಂದು ಭಕ್ತಿಯಿಂದ ಉದ್ಘರಿಸಿದರೆ, ಪತ್ನಿ ಅಂಜುಮ್ ಖಾನ್ “ಮಾಶಾ ಅಲ್ಲಾಹ್, ಅಲ್ಹಮ್ದುಲಿಲ್ಲಾಹ್” ಎಂದು ಪ್ರಾರ್ಥನೆ ಸಲ್ಲಿಸಿ ಸಾಮರಸ್ಯವನ್ನು ಮೆರೆದಿದ್ದಾರೆ ಅಂತಾಲೂ ತಿಳಿಸಿದ್ಧಾರೆ. ಈ ಪೋಸ್ಟರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಭಿಮಾನಿಗಳಿಂದ ಮೆಚ್ಚುಗೆಗಳ ಸುರಿಮಳೆ
ಅಂಜುಮ್ ಖಾನ್ ಅವರ ಈ ಪೋಸ್ಟ್ಗೆ ಅಭಿಮಾನಿಗಳು ಲೈಕ್ಸ್ ಮತ್ತು ಕಮೆಂಟ್ಗಳ ಸುರಿಮಳೆ ಸುರಿಸುತ್ತಿದ್ದಾರೆ. ಕೇವಲ ಆಟಗಾರನಿಗೆ ಮಾತ್ರವಲ್ಲದೆ, ಅವರ ಕುಟುಂಬದವರಿಗೂ ಈ ಗೆಲುವು ಎಷ್ಟು ಮುಖ್ಯ ಎಂಬುದು ಈ ಪೋಸ್ಟ್ನಿಂದ ತಿಳಿದುಬರುತ್ತದೆ. “ಶಿವಂ ದುಬೆ ಅವರ ಈ ಫಾರ್ಮ್ ಮುಂದುವರಿಯಲಿ,” ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ತಮ್ಮ ತಮ್ಮ ನಂಬಿಕೆಗಳನ್ನು ಎತ್ತಿಹಿಡಿಯುತ್ತಲೇ, ಸಂಗಾತಿಯ ನಂಬಿಕೆಗೂ ಅಷ್ಟೇ ಗೌರವ ನೀಡುವುದು ಈ ದಂಪತಿಗಳ ವಿಶೇಷತೆ. ದ್ವೇಷದ ಮಾತುಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ, ಧರ್ಮದ ಅಡೆತಡೆಗಳನ್ನು ಮೀರಿ ಬೆಳೆಯುವ ಪ್ರೀತಿ ಮತ್ತು ಸಹಬಾಳ್ವೆಯ ಸಂದೇಶವನ್ನು ಈ ಜೋಡಿ ಸಾರುತ್ತಿದೆ. ಇವರ ಸಂದೇ ಗಮನಿಸಿದ ಅಭಿಮಾನಿಗಳು, “ಇದೇ ನಿಜವಾದ ಭಾರತ. ಇವರ ಈ ಸರಳ ಮತ್ತು ಸುಂದರ ಜೀವನ ಅನೇಕರಿಗೆ ಸ್ಫೂರ್ತಿಯಾಗಿದೆ,” ಎಂದು ಹೇಳಿದ್ದಾರೆ.
Sunni Brahmin Shivam Dubey.
Husband: Har har Mahadev
Wife: Mashaallah, Alhamdulillah. pic.twitter.com/WvuEBttUnN— Prakhar Mishra (@prkhrshra) March 8, 2026
ಒಟ್ಟಿನಲ್ಲಿ ಹೇಳುವುದಾದರೆ, ಶಿವಂ ದುಬೆ ಮತ್ತು ಅಂಜುಮ್ ಖಾನ್ ಅವರ ಈ ನಡೆ ಸಮಾಜದಲ್ಲಿ ಸಕಾರಾತ್ಮಕತೆಯನ್ನು ಪಸರಿಸುವ ಜೊತೆಗೆ, ವೈಯಕ್ತಿಕ ಜೀವನದಲ್ಲಿ ಧರ್ಮಕ್ಕಿಂತ ಮಾನವೀಯತೆ ಮತ್ತು ಪರಸ್ಪರ ಗೌರವ ಮುಖ್ಯ ಎಂಬುದನ್ನು ಎತ್ತಿತೋರಿಸಿದೆ. ಇನ್ನೂ ಈ ವಿಶ್ವಕಪ್ ಟೂರ್ನಿಯಲ್ಲಿ ಶಿವಂ ದುಬೆ ಅವರು ತಮ್ಮ ಆಲ್ರೌಂಡ್ ಪ್ರದರ್ಶನದ ಮೂಲಕ ತಂಡಕ್ಕೆ ನೆರವಾಗಿದ್ದಾರೆ. ವಿಶೇಷವಾಗಿ ಫೈನಲ್ ಪಂದ್ಯದ ಒತ್ತಡದ ಕ್ಷಣಗಳಲ್ಲಿ ಅವರು ಆಡಿದ ಶೈಲಿ ಮತ್ತು ತಂಡದ ಗೆಲುವಿನಲ್ಲಿ ವಹಿಸಿದ ಜವಾಬ್ದಾರಿ, ಅವರನ್ನು ತಂಡದ ಪ್ರಮುಖ ಆಟಗಾರನನ್ನಾಗಿ ಮಾಡಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/shivam-dube-s-wife-anjum-khan-s-emotional-instagram-post-after-india-s-t20-world-cup-win-goes-viral-446653.html. xn--babytilbehr-pgb.com does not claim ownership of this content. All rights remain with the original publisher.
