Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ | Smriti Mandhana Father Meets Palak Muchhal and Mithoon: Reunion Rumours with Palash Resurface

Sports

oi-Madhusudhan KR

Smriti Mandhana: ಇತ್ತೀಚೆಗಷ್ಟೇ ಮುಂಬೈನ ರೆಸ್ಟೋರೆಂಟ್‌ವೊಂದರ ಹೊರಗೆ ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಅವರು ಪಲಾಶ್ ಮುಚ್ಚಲ್ ಅವರ ಸಹೋದರಿ ಪಲಕ್ ಮುಚ್ಚಲ್ ಮತ್ತು ಅವರ ಪತಿ ಮಿಥುನ್ ಶರ್ಮಾ ಅವರನ್ನು ಭೇಟಿಯಾದ ವಿಡಿಯೋ ವೈರಲ್ ಆಗಿದೆ. 2025ರಲ್ಲಿ ಮದುವೆ ಮುರಿದುಬಿದ್ದ ನಂತರ ಇದೀಗ ಈ ಕುಟುಂಬಗಳ ಭೇಟಿಯು, ಸ್ಮೃತಿ ಮತ್ತು ಪಲಾಶ್ ಮತ್ತೆ ಒಂದಾಗುತ್ತಿದ್ದಾರೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಈ ವಿಡಿಯೋದಲ್ಲಿ ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಅವರು ಮುಂಬೈನ ರೆಸ್ಟೋರೆಂಟ್‌ವೊಂದರಲ್ಲಿ ಪಲಾಶ್ ಅವರ ಸಹೋದರಿ, ಗಾಯಕಿ ಪಲಕ್ ಮುಚ್ಚಲ್ ಮತ್ತು ಅವರ ಪತಿ ಮಿಥುನ್ ಅವರನ್ನು ಭೇಟಿಯಾಗಿರುವುದು ಕಂಡುಬಂದಿದೆ. ಅಲ್ಲದೆ, ಪಲಕ್ ಅವರು ಶ್ರೀನಿವಾಸ್ ಅವರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದಿರುವುದು ವಿಶೇಷವಾಗಿದೆ.

Smriti Mandhana s Father Meets Palak Muchhal and Mithoon Reunion Rumours with Palash Resurface

ವೈರಲ್ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆಗಳು ಹೀಗಿವೆ

ಈ ಭೇಟಿಯ ಉದ್ದೇಶದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಅಚ್ಚರಿ ವ್ಯಕ್ತಪಡಿಸಿದರೆ, ಇನ್ನು ಕೆಲವರು ಈ ಭೇಟಿಯ ಹಿಂದಿನ ಅರ್ಥವೇನಿರಬಹುದು ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಇನ್ನೂ ಕೆಲವರು ಈ ವಿಡಿಯೋ ಹಳೆಯದಿರಬಹುದು ಎಂಬ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ.

“ನನಗೆ ಅಚ್ಚರಿಯಾಗುತ್ತಿದೆ… ಅವರಿಬ್ಬರೂ ಮತ್ತೆ ಒಂದಾಗಿದ್ದಾರೆಯೇ?” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು “ಏನಾಗುತ್ತಿದೆ ಇಲ್ಲಿ?” ಎಂದು ಕುತೂಹಲದಿಂದ ಪ್ರಶ್ನಿಸಿದ್ದಾರೆ. ಅಲ್ಲದೆ, “ಅವರು ಮತ್ತೆ ಒಂದಾಗಿದ್ದಾರೆಯೇ?,” ಎಂದು ಮತ್ತೊಬ್ಬ ಬಳಕೆದಾರರು ಕೇಳಿದ್ದಾರೆ.

ಕಳೆದ ವರ್ಷ ಸ್ಮೃತಿ ಮತ್ತು ಪಲಾಶ್ ಅವರ ವಿವಾಹ ನಿಶ್ಚಯವಾಗಿದ್ದು, ನಂತರ ಕೆಲವು ಕಾರಣಗಳಿಂದ ರದ್ದಾಗಿತ್ತು. ಇದೀಗ ಇವರಿಬ್ಬರ ಕುಟುಂಬಗಳ ನಡುವಿನ ಈ ಆತ್ಮೀಯ ಭೇಟಿಯನ್ನು ಕಂಡು ನೆಟ್ಟಿಗರು “ಇಬ್ಬರೂ ಮತ್ತೆ ಒಂದಾಗುತ್ತಿದ್ದಾರೆಯೇ? ಅಥವಾ ಮದುವೆ ಮಾತುಕತೆ ಮತ್ತೆ ಶುರುವಾಗಿದೆಯೇ?” ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ.

ಆದರೆ, ಈ ಭೇಟಿಯ ಬಗ್ಗೆ ಮಂಧಾನ ಅಥವಾ ಮುಚ್ಚಲ್ ಕುಟುಂಬದವರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಕೆಲವು ವರದಿಗಳ ಪ್ರಕಾರ, ಇದು ಕೇವಲ ಗೌರವದ ಸಂಕೇತದ ಭೇಟಿಯಾಗಿದ್ದು, ಹಳೆಯ ಕಹಿ ಘಟನೆಗಳನ್ನು ಮರೆತು ಕುಟುಂಬಗಳು ಪರಸ್ಪರ ಗೌರವದಿಂದ ನಡೆದುಕೊಳ್ಳುತ್ತಿವೆ ಎನ್ನಲಾಗುತ್ತಿದೆ.

ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮದುವೆ ರದ್ದು

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹವು 2025ರ ನವೆಂಬರ್ 23ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆಯಬೇಕಿತ್ತು. ಆದರೆ, ನಿಗದಿತ ದಿನದಂದು ಮದುವೆ ನಡೆಯುವ ಬದಲಿಗೆ ಮೊದಲು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತು ಮತ್ತು ನಂತರ ಕಾರಣಾಂತರಗಳಿಂದ ವಿವಾಹ ರದ್ದಾಯಿತು.

ಸ್ಮೃತಿ ಮಂಧಾನ ನೀಡಿದ್ದ ಸ್ಪಷ್ಟನೆ

ಮದುವೆ ರದ್ದತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟಿಕೊಂಡ ಬಳಿಕ ಸ್ಮೃತಿ ಮಂಧಾನ ಅವರು ಇನ್‌ಸ್ಟಾಗ್ರಾಮ್ ಮೂಲಕ ಸ್ಪಷ್ಟನೆಯನ್ನ ನೀಡಿದ್ದರು. “ನನ್ನ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ತೆರೆ ಎಳೆಯುವುದು ಮುಖ್ಯ ಎಂದು ನನಗೆ ಅನಿಸುತ್ತಿದೆ. ನಾನು ಖಾಸಗಿ ಜೀವನವನ್ನು ಗೌರವಿಸುವ ವ್ಯಕ್ತಿ, ಆದರೆ ನಮ್ಮ ಮದುವೆ ರದ್ದಾಗಿದೆ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸುತ್ತಿದ್ದೇನೆ. ಈ ವಿಷಯವನ್ನು ಇಲ್ಲಿಗೇ ಬಿಟ್ಟುಬಿಡಿ ಎಂದು ಎಲ್ಲರಲ್ಲೂ ವಿನಂತಿಸುತ್ತೇನೆ. ಎರಡೂ ಕುಟುಂಬಗಳ ಗೌಪ್ಯತೆಯನ್ನು ಕಾಪಾಡಿ,” ಎಂದು ಅವರು ಬರೆದುಕೊಂಡಿದ್ದರು.

ಪಲಾಶ್ ಮುಚ್ಚಲ್ ವಿರುದ್ಧ ಕೇಳಿಬಂದ ಆರೋಪಗಳು

ಸ್ಮೃತಿ ಮಂಧಾನ ಅವರ ಆಪ್ತ ಸ್ನೇಹಿತ ವಿಜ್ಞಾನ್ ಮಾನೆ ಎಂಬುವವರು ಪಲಾಶ್ ಮುಚ್ಚಲ್ ಮೇಲೆ ಗಂಭೀರ ಆರೋಪ ಮಾಡಿದ್ದರು. “ಮದುವೆಯ ಸಂಭ್ರಮ ನಡೆಯುತ್ತಿದ್ದಾಗಲೇ ಪಲಾಶ್ ಮತ್ತೊಬ್ಬ ಮಹಿಳೆಯೊಂದಿಗೆ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಆ ಸಮಯದಲ್ಲಿ ಅಲ್ಲಿ ನೆರೆದಿದ್ದ ಮಹಿಳಾ ಕ್ರಿಕೆಟಿಗರು ಪಲಾಶ್‌ಗೆ ಬುದ್ಧಿ ಕಲಿಸಿದ್ದರು,” ಎಂದು ಮಾನೆ ಹೇಳಿಕೆ ನೀಡಿದ್ದಾಗಿ ವರದಿಗಳಾಗಿದ್ದವು. ಇದು ಕ್ರೀಡಾ ಮತ್ತು ಸಿನಿಮಾ ಜಗತ್ತಿನಲ್ಲಿ ಭಾರಿ ಸಂಚಲನ ಮೂಡಿಸಿತ್ತು.

ಪಲಾಶ್ ಮುಚ್ಚಲ್ ಹೇಳಿದ್ದೇನು?

ತನ್ನ ಮೇಲಿನ ಎಲ್ಲಾ ಆರೋಪಗಳನ್ನು ಪಲಾಶ್ ಮುಚ್ಚಲ್ ಸುಳ್ಳು ಎಂದು ತಳ್ಳಿಹಾಕಿದ್ದರು. “ವಿಜ್ಞಾನ್ ಮಾನೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದವು ಮತ್ತು ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದ ಕೂಡಿದೆ. ಈ ವಿಷಯವನ್ನು ನಾನು ಕಾನೂನಾತ್ಮಕವಾಗಿ ಎದುರಿಸುತ್ತೇನೆ,” ಎಂದು ಪಲಾಶ್ ಹೇಳಿಕೆ ನೀಡಿದ್ದರು.

ಕಳೆದ ವರ್ಷ ಇಷ್ಟೆಲ್ಲಾ ಕಹಿ ಘಟನೆಗಳು ನಡೆದಿದ್ದರೂ, ಇದೀಗ ಮುಂಬೈನಲ್ಲಿ ಎರಡೂ ಕುಟುಂಬಗಳು ಮತ್ತೆ ಪರಸ್ಪರ ಭೇಟಿಯಾಗಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಅಲ್ಲದೆ, ಹಳೆಯದನ್ನ ಮರೆತು ಇಬ್ಬರೂ ಮತ್ತೆ ಒಂದಾಗುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/smriti-mandhana-father-meets-palak-muchhal-and-mithoon-reunion-rumours-with-palash-resurface-450107.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo