
Entertainment
oi-Hitesh Y
Sudharani: ನಟ ಶಿವರಾಜ್ ಕುಮಾರ್ ಅವರನ್ನು ಮದುವೆ ಆಗುವುದಕ್ಕೆ ನಟಿ ಸುಧಾರಾಣಿ ಅವರು ಮುಂದಾಗಿದ್ದರು ಎನ್ನುವ ವಿಚಾರವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ನಟಿ ಸುಧಾರಾಣಿ ಅವರು ತಮ್ಮದೇ ಶೈಲಿಯಲ್ಲಿ ಪ್ರತ್ಯುತ್ತರ ಕೊಟ್ಟಿದ್ದಾರೆ. ಮೊದಲೆಲ್ಲ ನಟ – ನಟಿಯರ ಬಗ್ಗೆ ಯಾರಾದರೂ ಟ್ರೋಲ್ ಮಾಡಿದರೆ, ಸುಳ್ಳು ಸುದ್ದಿಗಳನ್ನು ಹರಡಿದರೆ ಅದನ್ನು ನೋಡಿ ಸೆಲೆಬ್ರಿಟಿಗಳು ನಿರ್ಲಕ್ಷಿಸುತ್ತಿದ್ದರು. ಆದರೆ ಇದೀಗ ಟ್ರೋಲ್ ಮತ್ತು ಸುಳ್ಳು ಸುದ್ದಿಗಳಿಗೆ ನಟ – ನಟಿಯರು ಟ್ರೋಲ್ ಭಾಷೆಯಲ್ಲೇ ಉತ್ತರ ನೀಡುತ್ತಿವ ಟ್ರೆಂಡ್ ಶುರು ಮಾಡಿದ್ದಾರೆ. ಅದಕ್ಕೆ ಇದೀಗ ನಟಿ ಸುಧಾರಾಣಿ ಅವರು ಹೊಸ ಸೇರ್ಪಡೆ. ನಟಿ ಸುಧಾರಾಣಿ ಅವರು ನಟ ಶಿವರಾಜ್ ಕುಮಾರ್ ಅವರನ್ನು ಮದುವೆ ಆಗುವುದಕ್ಕೆ ಮುಂದಾಗಿದ್ದರು ಎನ್ನುವ ಸುದ್ದಿ ವಿಚಾರಕ್ಕೆ ತಮ್ಮ ಮನೆಯ ನಾಯಿಯನ್ನು ಬಳಸಿಕೊಂಡು ವ್ಯಂಗ್ಯಾತ್ಮಕವಾಗಿ ರಿಪ್ಲೈ ಕೊಟ್ಟಿದ್ದಾರೆ.
ಏನಿದು ಶಿವರಾಜ್‌ಕುಮಾರ್ – ಸುಧಾರಾಣಿ ಮದುವೆ ಸುದ್ದಿ
ನಟಿ ಸುಧಾರಾಣಿ ಅವರು ಶಿವರಾಜ್ ಕುಮಾರ್ ಅವರನ್ನು ಪ್ರೀತಿ ಮಾಡುತ್ತಿದ್ದರು. ಶಿವರಾಜ್ ಕುಮಾರ್ ಅವರನ್ನು ಮದುವೆ ಆಗಬೇಕೆಂದು ಆಸೆಪಟ್ಟಿದ್ದರು ಎನ್ನುವ ಸುದ್ದಿಯೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಅಲ್ಲದೆ ಅದರಲ್ಲಿ ಆನಂದ್ ಚಿತ್ರೀಕರಣದ ಸಮಯದಲ್ಲಿ ನಟಿ ಸುಧಾರಾಣಿ ಅವರಿಗೆ ಶಿವರಾಜ್ ಕುಮಾರ್ ಕಂಡರೆ ಭಯವಿತ್ತು. ನಂತರ ಅವರ ಮೇಲೆ ಪ್ರೀತಿ ಹುಟ್ಟಿತ್ತು ಮತ್ತು ಮದುವೆಯಾಗುವ ಆಸೆಯೂ ಇತ್ತು.

ಆದರೆ ಡಾ.ರಾಜ್ ಕುಮಾರ್ ಅವರ ಮಗ ಎಂಬ ಕಾರಣದಿಂದ ಅವರು ಇದನ್ನು ಯಾರಿಗೂ ಹೇಳದೆ ಸುಮ್ಮನಾಗಿದ್ದರು. ಈ ವಿಷಯವನ್ನು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್‌ವೊಂದರಲ್ಲಿ ಹಂಚಿಕೊಳ್ಳಲಾಗಿತ್ತು. ಈ ಸುಳ್ಳು ಸುದ್ದಿಗೆ ನಟಿ ಸುಧಾರಾಣಿ ಅವರ ತಮ್ಮದೇ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಅಲ್ಲದೆ ಸುಳ್ಳು ಸುದ್ದಿಗಳನ್ನು ಹರಡಿದರೆ, ಮಾನನಷ್ಟ ಮೊಕದ್ದೆ ದಾಖಲಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಅವರ ಹಾಸ್ಯ ಮಾದರಿಯ ಎಚ್ಚರಿಕೆ ವಿಡಿಯೋ ವಿವರ ಮುಂದಿದೆ.
Sudharani: ನಟಿ ಸುಧಾರಾಣಿ ಹೇಳಿದ್ದೇನು
ಅಪಪ್ರಚಾರ! ನಕಲಿ ಸುದ್ದಿ 😡 ಎನ್ನುವ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ನಟಿ ಸುಧಾರಾಣಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ದಯವಿಟ್ಟು ಕೆಲವು ಮೂಲ ನೈತಿಕತೆಯನ್ನು ತೋರಿಸಿ. ಕೇವಲ ವೀವ್ಸ್ ಪಡೆಯಲು ಜನರು ಸುಳ್ಳು ಮಾಹಿತಿಯನ್ನು ಹರಡುವುದನ್ನು ನೋಡುವುದು ನಿರಾಶಾದಾಯಕವಾಗಿದೆ. ಉತ್ತಮವಾಗಿ – ಕಷ್ಟಪಟ್ಟು ಕೆಲಸ ಮಾಡಿ, ಪ್ರಾಮಾಣಿಕವಾಗಿರಿ ಮತ್ತು ನಿಮ್ಮ ಯಶಸ್ಸನ್ನು ಸರಿಯಾದ ರೀತಿಯಲ್ಲಿ ಗಳಿಸಿ ಎಂದು ಅವರು ಹೇಳಿದ್ದಾರೆ.
ನಾಯಿಗಳು ಮಾತನಾಡುವ ರೀತಿಯಲ್ಲಿ ವಿಡಿಯೋ
ಸುಧಾರಾಣಿ ಅವರು ಈ ಸುಳ್ಳು ಸುದ್ದಿಗೆ ತಮ್ಮ ಮನೆಯ ಎರಡು ನಾಯಿಗಳ ನಡುವೆ ನಡೆಯುತ್ತಿರುವ ಸಂಭಾಷಣೆಯಂತೆ ಉತ್ತರ ಕೊಟ್ಟಿದ್ದಾರೆ. ಸುಧಾರಾಣಿ ಅವರ ಮನೆಯ ಎರಡು ನಾಯಿಗಳ ನಡುವಿನ ಸಂಭಾಷಣೆಯಂತೆ ಇದನ್ನು ಹೇಳಲಾಗಿದೆ. ನಾಯಿ 1: ಅಮ್ಮ ನೀನು ಆನಂದ್ ಸಿನಿಮಾ ಮಾಡುವಾಗಲೇ ಶಿವಣ್ಣನ ಮದುವೆ ಮಾಡ್ಕೋತಿನಿ ಅಂದಿದ್ಯಂತೆ, ನಾಯಿ 2: ಲೋ ಅಣ್ಣ ಆಗ ಅಮ್ಮ ಇನ್ನೂ 7ನೇ ಕ್ಲಾಸು, ಶಿವಣ್ಣಗೆ ಗೀತಾ ಅವರ ಜೊತೆ ಎಂಗೇಜ್‌ಮೆಂಟ್‌ಆಗಿತ್ತು.
ಅವನು ಯಾವೊನೊ ತಿರುಬೋಕಿ ನನ್ ಮ*, ಅಮ್ಮ ಇತ್ತೀಚೆಗೆ ಕೊಟ್ಟ ಇಂಟರ್‌ವ್ಯೂನಲ್ಲಿ ಹೇಳಿದ್ದಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡಿದ್ದಾನೆ. ಲಾಯರ್‌ಗೆ ಹೇಳ್ಸಿ ಮಾನನಷ್ಟ ಮೊಕದ್ದಮೆ ಹಾಕಿಸಿ ಅಂತ ಹೇಳಿರೋದು ಇದೆ. ಕೊನೆಯದಾಗಿ ಆಯ್ಕೊಂಡು ತಿನ್ನೋರೆಲ್ಲ ಕಂಟೆಂಟ್ ಕ್ರಿಯೇಟರ್ಸ್ ಆದರೆ ಹಿಂಗೇ ಆಗೋದು ಇರುವ ಡೈಲಾಗ್ ಸಹ ಇದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/sudharani-slams-rumours-shivarajkumar-marriage-news-is-fake-warns-content-creators-in-viral-video-449545.html. xn--babytilbehr-pgb.com does not claim ownership of this content. All rights remain with the original publisher.
