Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ ‘ರಜಾಮಜಾ’ ಆಯೋಜನೆ | Summer Camp 2026 Natana Mysuru ‘Raja Maja’ by Mandya Ramesh: Check Dates, Venue and Admission Info

Karnataka

oi-Pragathi S

ಮೈಸೂರು : ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆಯೇ, ಪೋಷಕರಿಗೆ ತಮ್ಮ ಮಕ್ಕಳನ್ನು ಯಾವ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂಬ ಚಿಂತೆ ಶುರುವಾಗುತ್ತದೆ. ಮೊಬೈಲ್, ವಿಡಿಯೋ ಗೇಮ್ ಗೀಳಿನಿಂದ ಮಕ್ಕಳನ್ನು ಹೊರತಂದು, ಅವರಲ್ಲಿ ಅಡಗಿರುವ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಹೊರತರಲು ಬೇಸಿಗೆ ಶಿಬಿರಗಳು ಅತ್ಯುತ್ತಮ ವೇದಿಕೆಯಾಗಿವೆ. ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಂಗಭೂಮಿ ಆಸಕ್ತರು ಹಾಗೂ ಪೋಷಕರಿಗೆ ಭರ್ಜರಿ ಸುದ್ದಿಯೊಂದು ಇಲ್ಲಿದೆ. ಖ್ಯಾತ ರಂಗಭೂಮಿ ಮತ್ತು ಸಿನಿಮಾ ಕಲಾವಿದ ಮಂಡ್ಯ ರಮೇಶ್ ಅವರ ನೇತೃತ್ವದ ಪ್ರತಿಷ್ಠಿತ ‘ನಟನ ಮೈಸೂರು’ ಸಂಸ್ಥೆಯು 2026ನೇ ಸಾಲಿನ ಮಕ್ಕಳ ಬೇಸಿಗೆ ಶಿಬಿರ ‘ರಜಾಮಜಾ’ವನ್ನು ಘೋಷಣೆ ಮಾಡಿದೆ.

ಮಕ್ಕಳ ರಜೆಯ ದಿನಗಳನ್ನು ಮಜವಾಗಿ ಕಳೆಯುವುದರ ಜೊತೆಗೆ ರಂಗಭೂಮಿ, ನಟನೆ, ಹಾಡು, ಕುಣಿತ, ಮತ್ತು ವ್ಯಕ್ತಿತ್ವ ವಿಕಸನದಂತಹ ಸೃಜನಶೀಲ ಚಟುವಟಿಕೆಗಳನ್ನು ಕಲಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಈ ಹಿಂದಿನ ವರ್ಷಗಳಲ್ಲೂ ‘ನಟನ’ ಸಂಸ್ಥೆಯ ಬೇಸಿಗೆ ಶಿಬಿರಗಳು ಅಪಾರ ಜನಮನ್ನಣೆ ಗಳಿಸಿದ್ದು, ಈ ಬಾರಿಯೂ ಅದ್ಧೂರಿಯಾಗಿ ಶಿಬಿರ ನಡೆಯಲಿದೆ.

Summer Camp

ಯಾರಿಗೆಲ್ಲಾ ಅವಕಾಶ?

ಈ ಶಿಬಿರವು ಕೇವಲ 08 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಸೀಮಿತವಾಗಿದೆ. ಕಡ್ಡಾಯವಾಗಿ ಈ ವಯೋಮಿತಿಯೊಳಗಿನ ಮಕ್ಕಳು ಮಾತ್ರ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.

ಶಿಬಿರದ ದಿನಾಂಕ ಮತ್ತು ಸ್ಥಳ

‘ರಜಾಮಜಾ’ ಮಕ್ಕಳ ಬೇಸಿಗೆ ಶಿಬಿರವು ಏಪ್ರಿಲ್ 14, 2026 ರಿಂದ ಆರಂಭವಾಗಿ ಮೇ 09, 2026 ರವರೆಗೆ ಸತತವಾಗಿ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 4:30 ರವರೆಗೆ ಶಿಬಿರದ ಚಟುವಟಿಕೆಗಳು ಇರಲಿವೆ. ಮೈಸೂರಿನ ಬಲ್ಲಾಳ್ ಸರ್ಕಲ್, ಶ್ರೀ ರಾಘವೇಂದ್ರ ಸ್ವಾಮಿ ಮಠದ ಪಕ್ಕದಲ್ಲಿರುವ ಬಿ.ಎಸ್.ಎಸ್. ವಿವೇಕೋದಯ (ಭಗಿನಿ ಸೇವಾ ಸಮಾಜ) ಶಾಲಾ ಆವರಣದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ.

ಪ್ರವೇಶ ಪ್ರಕ್ರಿಯೆ ಮತ್ತು ನಿಯಮಗಳು

ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಮಕ್ಕಳ ಪೋಷಕರು ಪ್ರವೇಶ ಪ್ರಕ್ರಿಯೆಯ ದಿನಾಂಕವನ್ನು ಕಡ್ಡಾಯವಾಗಿ ಗಮನಿಸಬೇಕು. ಮಾರ್ಚ್ 29, 2026 ರ ಭಾನುವಾರದಂದು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ಮಾತ್ರ ಪ್ರವೇಶಾತಿ ನಡೆಯಲಿದೆ. ಪ್ರವೇಶ ಪ್ರಕ್ರಿಯೆಯು ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ‘ನಟನ ರಂಗಶಾಲೆ’ಯಲ್ಲಿ ನಡೆಯಲಿದೆ.

ಶಿಬಿರಕ್ಕೆ ಸೀಮಿತ ಸೀಟುಗಳಿರುವುದರಿಂದ ‘ಮೊದಲು ಬಂದವರಿಗೆ ಆದ್ಯತೆ’ಯ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ. ಪೋಷಕರು ಅರ್ಜಿ ಪಡೆದ ತಕ್ಷಣ, ಅಲ್ಲಿಯೇ ಭರ್ತಿ ಮಾಡಿ ಪ್ರವೇಶ ಪ್ರಕ್ರಿಯೆಯನ್ನು ಪೂರೈಸಬೇಕು. ಪ್ರವೇಶದ ವೇಳೆ ಮಗುವಿನ ಆಧಾರ್ ಕಾರ್ಡ್ ಪ್ರತಿ ಮತ್ತು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸುವುದು ಕಡ್ಡಾಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಪೋಷಕರು ನಟನ ಸಂಸ್ಥೆಯ ಸಂಪರ್ಕ ಸಂಖ್ಯೆಗಳಾದ 7259537777, 9480468327, ಅಥವಾ 9845595505 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಅಂಟಿಕೊಂಡಿರುವ ಇಂದಿನ ತಲೆಮಾರಿನ ಮಕ್ಕಳಿಗೆ ನೈಜ ಪ್ರಪಂಚದ ಪರಿಚಯ ಮಾಡಿಸಲು, ಸಂವಹನ ಕಲೆ ಬೆಳೆಸಲು ಹಾಗೂ ರಜೆಯನ್ನು ಅರ್ಥಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಲು ‘ರಜಾಮಜಾ’ ಒಂದು ಸುವರ್ಣಾವಕಾಶವಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/summer-camp-2026-natana-mysuru-raja-maja-by-mandya-ramesh-check-dates-venue-and-admission-info-448487.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo