SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ | Trains Special 1 Trip service of Bengaluru SMVT-Belagavi and Hubballi-Kollam on April 2, Read more

Karnataka

oi-Shankrappa Parangi

ಬೆಂಗಳೂರು; ನೈಋತ್ಯ ರೈಲ್ವೆಯು ಗುಡ್ ಫ್ರೈಡೆ ಮತ್ತು ಈಸ್ಟರ್ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ನಿವಾರಣೆ ಸಲುವಾಗಿ ಏಪ್ರಿಲ್ ಮೊದಲ ವಾರದ ಬೆಂಗಳೂರು ಎಸ್‌ಎಂವಿಟಿ ನಿಲ್ದಾಣದಿಂದ ಬೆಳಗಾವಿ ನಿಲ್ದಾಣ ಹಾಗೂ ಹುಬ್ಬಳ್ಳಿ-ಕೊಲ್ಲಂ ವರೆಗೆ ಒಂದು ಸುತ್ತಿನ ವಿಶೇಷ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ನಡೆಸಲು ನಿರ್ಧರಿಸಿದೆ.

ಈ ರೈಲುಗಳು ಏಪ್ರಿಲ್ 2 ರಿಂದ 5ರವರೆಗೆ ಸಂಚಾರ ನಡೆಸಲಿವೆ. ಬೆಂಗಳೂರು ಎಸ್‌ಎಂವಿಟಿ ರೈಲು- ಬೆಳಗಾವಿ ರೈಲು (06503) ಏಪ್ರಿಲ್ 2 ಗುರುವಾರ ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಹೊರಡುತ್ತದೆ. ಮರುದಿನ ಬೆಳಗ್ಗೆ 7:35ಕ್ಕೆ ಬೆಳಗಾವಿ ತಲುಪಲಿದೆ. ಮರಳಿ ಅದೇ ದಿಕ್ಕಿನಲ್ಲಿ ಬೆಳಗಾವಿ-ಬೆಂಗಳೂರು ಎಸ್‌ಎಂವಿಟಿ ರೈಲು (06504) ಏಪ್ರಿಲ್ 5ರಂದು ಭಾನುವಾರ ಸಂಜೆ 5:30 ಗಂಟೆಗೆ ಪ್ರಯಾಣ ಆರಂಭಿಸಿ ಏಪ್ರಿಲ್ 6ರಂದು ಬೆಳಗ್ಗೆ 5 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.

Trains Special 1 Trip Service

ರೈಲು ನಿಲುಗಡೆ ನಿಲ್ದಾಣಗಳು

ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಎಸಿ ತ್ರಿ ಟೈರ್, ಎಸಿ ಟು ಟೈರ್, ನಾನ್ ಎಸಿ ಸ್ಲೀಪರ್ ಹಾಗೂ ಜನರಲ್ ಸೇರಿ ಒಟ್ಟು 19 ಬೋಗಿಗಳನ್ನು ಹೊಂದಿರಲಿದೆ. ಎರಡು ಸಂಚಾರ ದಿಕ್ಕುಗಳಲ್ಲಿ ಈ ರೈಲು ‘ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ.

ಹುಬ್ಬಳ್ಳಿ-ಕೊಲ್ಲಂ ವಿಶೇಷ ರೈಲು ಸೇವೆ

ಎಸ್‌ಎಸ್‌ಎಸ್‌ ಹುಬ್ಬಳ್ಳಿಯಿಂದ ಕೊಲ್ಲಂವರೆಗೆ ಒಂದು ಟ್ರಿಪ್ ವಿಶೇಷ ರೈಲು (07347) ಕಾರ್ಯಾಚರಣೆ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಏಪ್ರಿಲ್ 2ರಂದು ಗುರುವಾರ ಸಂಜೆ 7;5ಕ್ಕೆ ಹುಬ್ಬಳ್ಳಿಯಿಂದ ಹೊರಟು, ಮಾರನೇ ದಿನ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಕೊಲ್ಲಂ ನಿಲ್ದಾಣ ಸೇರುತ್ತದೆ.

ಮರಳಿ ಅದೇ ದಿನಕ್ಕಿನಲ್ಲಿ ಕೊಲ್ಲಂ-ಹುಬ್ಬಳ್ಳಿ ರೈಲು (07348) ಏಪ್ರಿಲ್ 3ರಂದು ಶುಕ್ರವಾರ ರಾತ್ರಿ 10.45ಗಂಟೆಗೆ ಹೊರಟು ಮಾರನೇ ದಿನ ಬೆಳಗ್ಗೆ 10.40ಕ್ಕೆ ಹುಬ್ಬಳ್ಳಿಗೆ ಬಂದು ಸೇರಲಿದೆ. ಈ ರೈಲಿನಲ್ಲಿ ಒಟ್ಟು 17 ಬೋಗಿಗಳು ಇರಲಿವೆ.

ಈ ರೈಲು ಎರಡು ದಿಕ್ಕಿನಲ್ಲಿ ಎಸ್‌ಎಂಎಂ‌ ಹಾವೇರಿ, ರಾಣಿಬೆನ್ನೂರು, ಹರಿಹರ, ಬೀರೂರು, ಅರಸಿಕೆರೆ, ತುಮಕೂರು ಎಸ್‌ಎಂವಿಟಿ, ಕೆ.ಆರ್‍‌.ಪುರಂ, ಬಂಗಾರಪೇಟೆ, ಇರೋಡ್, ತಿರಪುರ, ಪಲ್ಲಕ್ಕಾಡ್, ಕೊಟ್ಟಾಯಂ, ಆಲುವಾ, ಚೆಂಗಾನೂರು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೈಲಿನ ಹೆಚ್ಚಿನ ಮಾಹಿತಿ, ವೇಳಾಪಟ್ಟಿಗಾಗಿ ಭಾರತೀಯ ರೈಲ್ವೆ ಇಲಾಖೆ ಅಧಿಕೃತ ವೆಬ್‌ಸೈಟ್ indianrail.gov.in ಗೆ ಅಥವಾ ಸಹಾಯವಾಣಿ ಸಂಖ್ಯೆ 139ಗೆ ಕರೆ ಮಾಡಬಹುದೆಂದು ತಿಳಿಸಲಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/trains-special-1-trip-service-of-bengaluru-smvt-belagavi-and-hubballi-kollam-on-april-2-read-more-448895.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo