T20 World Cup 2026: ಕೊನೆಗೂ ಟೀಂ ಇಂಡಿಯಾ ವಿರಾಟ್ ಕೊಹ್ಲಿ ದಾಖಲೆ ಚೇಸ್‌ ಮಾಡಿದ ಪಾಕಿಸ್ತಾನದ ಫರ್ಹಾನ್ | T20 World Cup 2026: Sahibzada Farhan Breaks Virat Kohli’s Record for Most Runs in a Single Edition

Sports

oi-Madhusudhan KR

T20 World Cup 2026: ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಸಾಹಿಬ್‌ಜಾದಾ ಫರ್ಹಾನ್ ಅವರು ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಟೀಂ ಇಂಡಿಯಾ ಚೇಸ್‌ ಮಾಸ್ಟರ್‌ ಅಂತಲೇ ಹೆಸರು ಗಳಿಸಿರುವ ವಿರಾಟ್ ಕೊಹ್ಲಿ ಅವರ ದೀರ್ಘಕಾಲದ ದಾಖಲೆಯನ್ನು ಮುರಿದು ಗಮನ ಸೆಳೆದಿದ್ದಾರೆ.

ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ (ಫೆಬ್ರವರಿ 28) ಟಿ20 ವಿಶ್ವಕಪ್‌ 2026 ಸೂಪರ್ 8 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನದ ಪರ ಫರ್ಹಾನ್ ಸ್ಫೋಟಕ ಬ್ಯಾಟಿಂಗ್‌ ಮಾಡಿ ಉತ್ತಮ ಆರಂಭ ನೀಡಿದರು. ಅಲ್ಲದೆ, ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಅವರನ್ನು ಹಿಂದಿಕ್ಕಿ ನಂಬರ್ 1 ಸ್ಥಾನ ಅಲಂಕರಿಸಿದ್ದಾರೆ.

T20 World Cup 2026 Sahibzada Farhan Breaks Virat Kohli s Record for Most Runs in a Single Edition

ಉತ್ತಮ ಆರಂಭ ನೀಡಿದ ಫರ್ಹಾನ್

ಹೌದು.. ಶ್ರೀಲಂಕಾ ವಿರುದ್ಧ ನಡೆದ ಅಂತಿಮ ಸೂಪರ್ 8 ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಉತ್ತಮ ಆರಂಭವನ್ನು ನೀಡಿದ ಫರ್ಹಾನ್, ವಿರಾಟ್‌ ಕೊಹ್ಲಿ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ವಿರಾಟ್ ಕೊಹ್ಲಿ 2014ರ ಟಿ20 ವಿಶ್ವಕಪ್‌ನಲ್ಲಿ 6 ಇನ್ನಿಂಗ್ಸ್‌ಗಳಲ್ಲಿ 106.33ರ ಸರಾಸರಿಯಲ್ಲಿ ಅಜೇಯ 319 ಗಳಿಸುವ ಮೂಲಕ ದಾಖಲೆ ನಿರ್ಮಿಸಿದರು. ಇದರಲ್ಲಿ ನಾಲ್ಕು ಅರ್ಧಶತಕಗಳು ಸೇರಿವೆ. ಮಾರಕ ಬೌಲಿಂಗ್ ದಾಳಿ ವಿರುದ್ಧ ಅವರು ತೋರಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಭಾರತವನ್ನು ಫೈನಲ್‌ಗೆ ತಲುಪಲು ಮಹತ್ವದ ಪಾತ್ರ ವಹಿಸಿತ್ತು.

ಕೊನೆಗೂ ಕೊಹ್ಲಿ ದಾಖಲೆ ಅಳಿಸಿದ ಫರ್ಹಾನ್

ಒಂದು ದಶಕಕ್ಕೂ ಹೆಚ್ಚು ಕಾಲ ಈ ದಾಖಲೆಯನ್ನೂ ಯಾರೂ ಮುರಿಯಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಪಾಕಿಸ್ತಾನದ 26 ವರ್ಷದ ಬಲಗೈ ಆರಂಭಿಕ ಬ್ಯಾಟ್ಸ್‌ಮನ್‌ ಸಾಹಿಬ್‌ಜಾದಾ ಫರ್ಹಾನ್ 2026ರ ಟೂರ್ನಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಪಾಕಿಸ್ತಾನದ ಪರ ಓಪನರ್ ಆಗಿ ಕಣಕ್ಕಿಳಿದ ಫರ್ಹಾನ್ 60 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 100 ರನ್‌ ಶತನ ಸಿಡಿಸಿ ಮಿಂಚಿದರು.

ನಾಮೀಬಿಯಾ ವಿರುದ್ಧ ಶತಕ

ಗುಂಪು ಹಂತದಲ್ಲಿ ನಾಮೀಬಿಯಾ ವಿರುದ್ಧ ಅವರು ಅಜೇಯ ಶತಕ (100*) ಸಿಡಿಸಿ ತಂಡಕ್ಕೆ ಭರ್ಜರಿ ಆರಂಭ ನೀಡಿದ್ದರು. ಬಳಿಕ ಸೂಪರ್ 8 ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಅರ್ಧಶತಕ ಸೇರಿದಂತೆ ನಿರಂತರವಾಗಿ ಉಪಯುಕ್ತ ಕೊಡುಗೆ ನೀಡಿ ತಮ್ಮ ಅದ್ಭುತ ಪ್ರದರ್ಶನ ತೋರಿದ್ದಾರೆ.

ಶ್ರೀಲಂಕಾ ವಿರುದ್ಧದ ಆಕ್ರಮಣಕಾರಿ ಆಟ

ಹಾಗೆಯೇ ಇಂದಿನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಆಕ್ರಮಣಕಾರಿ ಆಟ ಆಡಿದರು. ಆರಂಭದಲ್ಲೇ ಬೌಂಡರಿ, ಸಿಕ್ಸರ್‌ಗಳನ್ನು ಸಿಡಿಸಿ ರನ್‌ಗಳನ್ನು ಹೆಚ್ಚಿಸಿದರ ಅವರು ಟೀಂ ಇಂಡಿಯಾ ಚೇಸ್‌ ಮಾಸ್ಟರ್ ಅಂತಲೇ ಹೆಸರುವಾಸಿಯಾಗಿರುವ ವಿರಾಟ್ ಕೊಹ್ಲಿಯ ದಾಖಲೆಯನ್ನು ಮೀರಿಸಿ ಹೊಸ ಇತಿಹಾಸ ನಿರ್ಮಾಣ ಮಾಡಿದ್ದಾರೆ.

ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದವರು

* ಸಾಹಿಬ್‌ಜಾದಾ ಫರ್ಹಾನ್ (ಪಾಕಿಸ್ತಾನ) – 323* (2026)

* ವಿರಾಟ್ ಕೊಹ್ಲಿ (ಭಾರತ) – 319 (2014)

* ತಿಲಕರತ್ನೆ ದಿಲ್ಷಾನ್ (ಶ್ರೀಲಂಕಾ) – 317 (2009)

* ಮೊಹಮ್ಮದ್ ಬಾಬರ್ ಆಜಂ (ಪಾಕಿಸ್ತಾನ) – 303 (2021)

* ಮಹೇಲ ಜಯವರ್ಧನೆ (ಶ್ರೀಲಂಕಾ) – 302 (2010)

* ವಿರಾಟ್ ಕೊಹ್ಲಿ (ಭಾರತ) – 296 (2022)

* ತಮೀಮ್ ಇಕ್ಬಾಲ್ (ಬಾಂಗ್ಲಾದೇಶ) – 295 (2016)

* ರಹಮಾನುಲ್ಲಾ ಗುರ್ಬಾಜ್ (ಅಫ್ಘಾನಿಸ್ತಾನ) – 281 (2024)

* ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ) – 265 (2007)

* ಶೇನ್ ವಾಟ್ಸನ್ (ಆಸ್ಟ್ರೇಲಿಯಾ) – 249 (2012)

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/t20-world-cup-2026-sahibzada-farhan-breaks-virat-kohli-s-record-for-most-runs-in-a-single-edition-445489.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo