Thalapathy Vijay: 400 ಕೋಟಿ ಆಸ್ತಿಗೆ ಒಡತಿ, ಲಂಡನ್ ಬೆಡಗಿ: ಯಾವ ಸಿನಿಮಾಗೂ ಕಡಿಮೆ ಇಲ್ಲ ದಳಪತಿ ವಿಜಯ್‌-ಸಂಗೀತಾ ಲವ್‌ ಸ್ಟೋರಿ | Thalapathy Vijay Sangeetha Divorce Buzz 400 Crore Wealth London Life Their 25 Year Love Story

Entertainment

oi-Manohara M

ತಮಿಳು ಚಿತ್ರರಂಗದ ಹಿರಿಯ ನಟ ಮತ್ತು ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ದಳಪತಿ ವಿಜಯ್ (Thalapathy Vijay) ಅವರ 25 ವರ್ಷಗಳ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರುವ ಸುದ್ದಿ ಎಲ್ಲೆಡೆ ಚರ್ಚೆಯಾಗುತ್ತಿದೆ. ವಿಜಯ್‌ ಪತ್ನಿ ಸಂಗೀತಾ ಸ್ವರ್ಣಲಿಂಗಂ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ವಿಚಾರ ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಸಂಗೀತಾ ಯಾರು? ಅವರ ಹಿನ್ನೆಲೆ ಮತ್ತು ಈ ವಿಚ್ಛೇದನಕ್ಕೆ ಕಾರಣವೇನು? ಎಂಬ ಪ್ರಶ್ನೆಗಳು ಕೂಡ ಮುನ್ನೆಲೆಗೆ ಬಂದಿವೆ.

ಯಾರು ಈ ಸಂಗೀತಾ ಸ್ವರ್ಣಲಿಂಗಂ?

ಸಂಗೀತಾ ಅವರು ಲಂಡನ್ ಮೂಲದ ಶ್ರೀಲಂಕನ್ ತಮಿಳು ಕುಟುಂಬಕ್ಕೆ ಸೇರಿದವರು. ಇವರ ತಂದೆ ಸ್ವರ್ಣಲಿಂಗಂ ಅವರು ಲಂಡನ್‌ನಲ್ಲಿ ನೆಲೆಸಿರುವ ದೊಡ್ಡ ಉದ್ಯಮಿ. ಸಂಗೀತಾ ಅವರು ಸುಮಾರು 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎನ್ನಲಾಗಿದೆ. ಲಂಡನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿರುವ ಇವರು, ಸದ್ಯ ಲಂಡನ್‌ನಲ್ಲೇ ತಮ್ಮ ಕುಟುಂಬದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.

Thalapathy Vijay

ವಿಜಯ್‌ ಫ್ಯಾನ್‌ ಆಗಿದ್ದ ಸಂಗೀತಾ

ನಟ ದಳಪತಿ ವಿಜಯ್‌ ಅವರಿಗೆ ಕೋಟ್ಯಂತರ ಅಭಿಮಾನಿಗಳಾಗಿದ್ದಾರೆ. ಅವರಲ್ಲಿ ಪತ್ನಿ ಸಂಗೀತಾ ಸ್ವರ್ಣಲಿಂಗಂ ಕೂಡ ಒಬ್ಬರು. ವಿಜಯ್ ಮತ್ತು ಸಂಗೀತಾ ಅವರ ಪ್ರೇಮಕಥೆ ಸಿನಿಮಾ ಕಥೆಯಷ್ಟೇ ರೋಚಕವಾಗಿದ್ದು, ಅಭಿಮಾನಿಯಾದವಳು ಅರ್ಧಾಂಗಿಯಾದ ಕಥೆ ತೆರೆದುಕೊಳ್ಳುತ್ತದೆ. 1996ರಲ್ಲಿ ಬಿಡುಗಡೆಯಾದ ವಿಜಯ್ ಅವರ ‘ಪೂವೆ ಉನಕ್ಕಾಗ’ ಸಿನಿಮಾ ನೋಡಿ ಸಂಗೀತಾ ಮಾರು ಹೋಗಿದ್ದರು.

ನಂತರ ವಿಜಯ್ ಅವರನ್ನು ಭೇಟಿ ಮಾಡಲೆಂದೇ ಇವರು ಲಂಡನ್‌ನಿಂದ ಚೆನ್ನೈಗೆ ಬಂದಿದ್ದರು. ಮೊದಲು ಸ್ನೇಹದಿಂದ ಆರಂಭವಾದ ಇವರ ಸಂಬಂಧ ಬಳಿಕ ಪ್ರೀತಿಗೆ ತಿರುಗಿತು. ಬಳಿಕ 1999ರ ಆಗಸ್ಟ್ 25ರಂದು ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರೂ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾದರು.

Thalapathy Vijay

ಮಕ್ಕಳು ಮತ್ತು ಕುಟುಂಬ

ವಿಜಯ್-ಸಂಗೀತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಜೇಸನ್ ಸಂಜಯ್ (ಮಗ) ತಂದೆಯೊಂದಿಗೆ ‘ವೆಟ್ಟೈಕಾರನ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ‘Sigma’ ಎಂಬ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಇವರು ಇನ್‌ಸ್ಟಾಗ್ರಾಂನಲ್ಲಿ ವಿಜಯ್ ಅವರನ್ನು ಅನ್‌ಫಾಲೋ ಮಾಡಿರುವುದು ಡಿವೋರ್ಸ್‌ಗೆ ವದಂತಿಗೆ ಪುಷ್ಟಿ ನೀಡಿತ್ತು. ಇನ್ನು ಮಗಳು ದಿವ್ಯ ಸಾಶಾ, ‘ಥೇರಿ’ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದ ಇವರು, ಸದ್ಯ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದಾರೆ.

ವಿಜಯ್ ಅವರಿಗಿಂತ ಹೆಚ್ಚಾಗಿ ಸಂಗೀತಾ ಅವರಿಗೆ ಚಿತ್ರರಂಗದಲ್ಲಿ ಆಪ್ತ ಗೆಳೆಯರಿದ್ದಾರೆ. ನಟ ಅಜಿತ್ ಕುಮಾರ್ ಪತ್ನಿ ಶಾಲಿನಿ ಅಜಿತ್ ಮತ್ತು ಜಯಂ ರವಿ ಅವರ ಮಾಜಿ ಪತ್ನಿ ಆರತಿ ರವಿ ಸಂಗೀತಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ವಿಜಯ್ ಅವರು ರಾಜಕೀಯದಲ್ಲಿ ಸಕ್ರಿಯರಾಗಲು ತಯಾರಿ ನಡೆಸುತ್ತಿರುವಾಗಲೇ ಈ ಕೌಟುಂಬಿಕ ಕಲಹ ಬೀದಿಗೆ ಬಂದಿರುವುದು ಅವರ ರಾಜಕೀಯ ಭವಿಷ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

Thalapathy Vijay

ವಿಚ್ಛೇದನಕ್ಕೆ ಕಾರಣವೇನು?

ಇತ್ತೀಚೆಗೆ ಸಂಗೀತಾ ಅವರು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಅರ್ಜಿಯಲ್ಲಿ ಅವರು ನೀಡಿರುವ ಪ್ರಮುಖ ಕಾರಣಗಳು ಹೀಗಿವೆ. ಪತಿ ವಿಜಯ್‌ಗೆ ಪರಸ್ತ್ರೀ ಸಂಬಂಧದ ಆರೋಪ ಮಾಡಿರುವ ಸಂಗೀತಾ, ವಿಜಯ್ ಅವರು ಒಬ್ಬ ನಟಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಸಂಗೀತಾ ಗಂಭೀರ ಆರೋಪ ಮಾಡಿದ್ದಾರೆ. 2021ರಲ್ಲೇ ಈ ವಿಷಯ ಸಂಗೀತಾ ಅವರಿಗೆ ತಿಳಿದಿತ್ತು. ವಿಜಯ್ ಅವರು ಈ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಭರವಸೆ ನೀಡಿದ್ದರೂ, ಅದು ಮುಂದುವರಿದಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/thalapathy-vijay-sangeetha-divorce-buzz-400-crore-wealth-london-life-their-25-year-love-story-445647.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo