
Entertainment
oi-Manohara M
ನಟ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ “ಟಾಕ್ಸಿಕ್” (Toxic) ಸಿನಿಮಾ ರಿಲೀಸ್‌ಗೆ ಕೆಲವೇ ದಿನಗಳು ಬಾಕಿ ಇವೆ. ಯಶ್ ನಟಿಸಿದ್ದ ಕೆಜಿಎಫ್ ಸಿನಿಮಾ ಎರಡು ಭಾಗಗಳಲ್ಲಿ ಈಗಾಗಲೇ ತೆರೆಕಂಡಿದ್ದು, “ಕೆಜಿಎಫ್-3” ಸಿನಿಮಾ ಕೂಡ ಘೋಷಣೆಯಾಗಿದೆ. ಈಗ ಟಾಕ್ಸಿಕ್ ಕೂಡ ಇದೇ ರೀತಿ ಸೀಕ್ವೆಲ್ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. ಹೌದು ಟಾಕ್ಸಿಕ್ ರಿಲೀಸ್‌ಗೂ ಮುನ್ನವೇ “ಟಾಕ್ಸಿಕ್-2” ಸಿನಿಮಾ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಇದಕ್ಕೆ ಕಾರಣವೂ ಇಲ್ಲಿದೆ.
ಕೆಜಿಎಫ್ ರೀತಿಯೇ ಟಾಕ್ಸಿಕ್ ಕೂಡ ಬಿಗ್ ಬಜೆಟ್‌ನ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಈ ಸಿನಿಮಾ ಸಿಕ್ಕಾಪಟ್ಟೆ ಹೈಪ್ ತೆಗೆದುಕೊಂಡಿದೆ. ಕನ್ನಡ ಮಾತ್ರವಲ್ಲದೆ ಬಹುಭಾಷೆಯ ಪ್ರೇಕ್ಷಕರು ಟಾಕ್ಸಿಕ್ ಬಗ್ಗೆಯೇ ಮಾತನಾಡುತ್ತಿದ್ದಾರೆ. ಈ ಹಿನ್ನೆಲೆ ಚಿತ್ರತಂಡ ಟಾಕ್ಸಿಕ್ ಸೀಕ್ವೆಲ್‌ಗೆ ಪ್ಲ್ಯಾನ್ ಮಾಡಿಕೊಂಡಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ಸಿನಿಮಾ ರನ್‌ಟೈಮ್ ಕಡಿಮೆ
ಸದ್ಯ ಟಾಕ್ಸಿಕ್ ಸಿನಿಮಾ ಓಟದ ಅವಧಿ (Runtime) ಕುರಿತಾದ ವದಂತಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ. ಸದ್ಯದ ವರದಿಗಳ ಪ್ರಕಾರ, ‘ಟಾಕ್ಸಿಕ್’ ಚಿತ್ರದ ಅವಧಿ ಸುಮಾರು 2 ಗಂಟೆ 20 ನಿಮಿಷ ಇರಬಹುದು ಎಂದು ಹೇಳಲಾಗುತ್ತಿದೆ. ಈಗ ಈ ಚಿತ್ರದ ಅವಧಿಯ ಬಗ್ಗೆ ಹರಿದಾಡುತ್ತಿರುವ ಸುದ್ದಿಯೊಂದು ಅಭಿಮಾನಿಗಳಲ್ಲಿ ಕುತೂಹಲ ಮತ್ತು ಆತಂಕ ಎರಡನ್ನೂ ಮೂಡಿಸಿದೆ.
ಭಾರಿ ಬಜೆಟ್ ಹಾಗೂ ಅದ್ದೂರಿ ತಾರಾಗಣ ಹೊಂದಿರುವ ಈ ಮಟ್ಟದ ಚಿತ್ರಕ್ಕೆ ಇಷ್ಟು ಕಡಿಮೆ ಅವಧಿ ಸಾಕೇ ಎನ್ನುವುದು ಅನೇಕರ ಪ್ರಶ್ನೆಯಾಗಿದೆ. ಚಿತ್ರದ ಕಥಾಹಂದರವು ಹಲವು ಮಜಲುಗಳನ್ನು ಹೊಂದಿದ್ದು, ಹಲವಾರು ಪಾತ್ರಗಳಿರುವಾಗ ಕೇವಲ 140 ನಿಮಿಷಗಳಲ್ಲಿ ಸಂಪೂರ್ಣ ಕಥೆಯನ್ನು ನ್ಯಾಯಬದ್ಧವಾಗಿ ಕಟ್ಟಿಕೊಡಲು ಸಾಧ್ಯವೇ? ಎಂಬ ಚರ್ಚೆಯೂ ಶುರುವಾಗಿದೆ.
ಒಂದು ವೇಳೆ ಚಿತ್ರದ ಅವಧಿ ಇಷ್ಟೇ ಚಿಕ್ಕದಾಗಿದ್ದರೆ, ಕಥೆಯನ್ನು ಸರಿಯಾಗಿ ವಿವರಿಸುವ ಸಲುವಾಗಿ ಚಿತ್ರತಂಡ ಇದನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಬೃಹತ್ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಈ ಗ್ಯಾಂಗ್‌ಸ್ಟರ್ ಕಥೆಯು ಎಲ್ಲ ಅಂಶಗಳನ್ನು ಒಳಗೊಳ್ಳಲು ಸೀಕ್ವೆಲ್ ಅನಿವಾರ್ಯ ಎಂಬುದು ಅಭಿಮಾನಿಗಳ ವಾದ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಟಾಕ್ಸಿಕ್ ಸಿನಿಮಾ ರಿಲೀಸ್ ಆದಾಗಲೇ ಇದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ.
ಯಶ್ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ
ಈ ನಡುವೆ ಚಿತ್ರದ ಟ್ರೈಲರ್ ಮತ್ತು ಯಶ್ ಅವರ ಮಾಸ್ ಲುಕ್ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದೆ. ಬಹುಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಹೈ-ಬಜೆಟ್ ಸಿನಿಮಾದ ರನ್‌ಟೈಮ್ ಅವಧಿಯ ಬಗ್ಗೆ ಚಿತ್ರತಂಡದಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಅಂತಿಮವಾಗಿ ಈ ವದಂತಿಗಳು ನಿಜವೇ ಅಥವಾ ಚಿತ್ರವು ಒಂದೇ ಭಾಗದಲ್ಲಿ ಸಂಪೂರ್ಣ ಕಥೆಯನ್ನು ಹೇಳಲಿದೆಯೇ ಎಂಬುದನ್ನು ತಿಳಿಯಲು ಇನ್ನು ಕೆಲವೇ ದಿನಗಳು ಕಾಯಬೇಕಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/toxic-2-before-release-actor-yash-fans-speculate-sequel-possibility-ahead-of-toxic-movie-launch-445283.html. xn--babytilbehr-pgb.com does not claim ownership of this content. All rights remain with the original publisher.

