Toxic audio rights: ಟಾಕ್ಸಿಕ್‌ಗೆ ರವಿ ಬಸ್ರೂರು ಸೇರಿ ಐದು ಮಂದಿ ಸಂಗೀತ: Zee ಮ್ಯೂಸಿಕ್‌ ಪಾಲಾದ ಆಡಿಯೋ ಹಕ್ಕು | Toxic Movie Ravi Basrur And 4 Others Compose For Yash Music Zee Music Company Buys Audio Rights

Entertainment

oi-Manohara M

ನಟ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್‌ (Toxic) ಹೊಸ ಬೆಳವಣಿಗೆಯಿಂದ ಮತ್ತೆ ಗಮನ ಸೆಳೆದಿದೆ. ಚಿತ್ರದ ಸಂಗೀತ ಹಕ್ಕುಗಳನ್ನು ಝೀ ಮ್ಯೂಸಿಕ್ ಕಂಪನಿ ಭಾರೀ ಮೊತ್ತಕ್ಕೆ ಪಡೆದುಕೊಂಡಿದೆ. ಈ ಒಪ್ಪಂದವು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಅನ್ವಯಿಸುತ್ತದೆ. ನಿರ್ಮಾಣ ಸಂಸ್ಥೆ ಹಾಗೂ ನಟ ಯಶ್ ಅವರ ವೃತ್ತಿಜೀವನದಲ್ಲಿ ಇದು ಅತಿ ದೊಡ್ಡ ಸಂಗೀತ ಒಪ್ಪಂದಗಳಲ್ಲಿ ಒಂದಾಗಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಸಿನಿಮಾ ನಿರ್ದೇಶಕಿ ಗೀತು ಮೋಹನ್‌ದಾಸ್‌ ಮಾಹಿತಿ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ, ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಭಾಗಿತ್ವದಲ್ಲಿ ನಿರ್ಮಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾದ ಚಿತ್ರದ ವ್ಯಾಪಕ ವಿತರಣಾ ಯೋಜನೆಗೆ ಈ ಸಂಗೀತ ಹಕ್ಕುಗಳ ಒಪ್ಪಂದವು ಮಹತ್ವದ ಹೆಜ್ಜೆಯಾಗಿದೆ.

Toxic Movie

ಖ್ಯಾತ ಸಂಗೀತ ನಿರ್ದೇಶಕರ ಸಂಗಮ

ಇಲ್ಲಿವರೆಗೆ ಅಧಿಕೃತವಾಗಿ ರವಿ ಬಸ್ರೂರು ಅವರು ಸಂಗೀತ ನಿರ್ದೇಶನ ಈ ಸಿನಿಮಾಗೆ ಇರಲಿದೆ ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕರು ಕೈಜೋಡಿಸಿದ್ದಾರೆ. ಹಿನ್ನೆಲೆ ಸಂಗೀತ ಹಾಗೂ ಪ್ರಮುಖ ಹಾಡು ರವಿ ಬಸ್ರೂರು ಅವರು ರಚಿಸುತ್ತಿದ್ದಾರೆ. ನಾಲ್ಕು ಹಾಡುಗಳಿಗೆ ವಿಶಾಲ್‌ ಮಿಶ್ರಾ ಸಂಗೀತ ನೀಡಿದ್ದು, ಒಂದು ಹಾಡಿಗೆ ತಾನಿಷ್ಕ್ ಬಾಗ್ಚಿ (Tanishk Bagchi) ಸಂಗೀತ ನೀಡಿದ್ದು, ಅದನ್ನು ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಅವರೊಂದಿಗೆ ಸಹ-ಸಂಯೋಜಿಸಿದ್ದಾರೆ.

ಈ ರೀತಿಯ ಬಹು ಸಂಗೀತ ನಿರ್ದೇಶಕರ ಸಂಯೋಜನೆ ಚಿತ್ರಕ್ಕೆ ವೈವಿಧ್ಯಮಯ ಸಂಗೀತ ಅನುಭವ ನೀಡಲಿದೆ ಎಂಬ ನಿರೀಕ್ಷೆ ಇದೆ. ಕಥೆಯ ತೀವ್ರತೆ ಹಾಗೂ ಭಾವನಾತ್ಮಕ ಕ್ಷಣಗಳನ್ನು ಒತ್ತಿ ಹೇಳುವಲ್ಲಿ ಹಿನ್ನೆಲೆ ಸಂಗೀತ ಪ್ರಮುಖ ಪಾತ್ರ ವಹಿಸಲಿದೆ.

ರಾಯ-ಟಿಕೆಟ್‌ ಪಾತ್ರಗಳಲ್ಲಿ ಯಶ್‌

ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಪರಿಚಯ ದೃಶ್ಯದಲ್ಲಿ ಯಶ್ ‘ರಾಯ’ ಮತ್ತು ‘ಟಿಕೆಟ್’ ಎಂಬ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದ್ವಿಪಾತ್ರಾಭಿನಯದ ಮೂಲಕ ಅವರು ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದ್ದಾರೆ. ಚಿತ್ರದ ಕಥೆಯನ್ನು ಯಶ್ ಅವರೇ ಸಹ ಬರೆಯಲಾಗಿದ್ದು, ನಿರ್ದೇಶನವನ್ನು ಗೀತು ಮೋಹನ್ ದಾಸ್ ವಹಿಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಹಾಗೂ ತಾರಾ ಸುತಾರಿಯಾ ನಟಿಸುತ್ತಿದ್ದಾರೆ.

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಿರುವ ಈ ಚಿತ್ರವನ್ನು ಅನೇಕ ಭಾಷೆಗಳಲ್ಲಿ ಅನುವಾದಿಸಿ ದೇಶಾದ್ಯಂತ ಹಾಗೂ ವಿದೇಶಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. 2026ರ ಮಾರ್ಚ್ 19ರಂದು ಜಾಗತಿಕ ಮಟ್ಟದಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಭರ್ಜರಿ ಸಂಗೀತ ಹಕ್ಕುಗಳ ಒಪ್ಪಂದ, ಖ್ಯಾತ ಸಂಗೀತ ನಿರ್ದೇಶಕರ ಸಂಗಮ ಮತ್ತು ಯಶ್ ಅವರ ದ್ವಿಪಾತ್ರಾಭಿನಯ ಈ ಎಲ್ಲ ಕಾರಣಗಳಿಂದ ‘ಟಾಕ್ಸಿಕ್’ ಚಿತ್ರ 2026ರ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/entertainment/toxic-movie-ravi-basrur-and-4-others-compose-for-yash-music-zee-music-company-buys-audio-rights-444693.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo