
Entertainment
oi-Manohara M
ನಟ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಕಹಿಸುದ್ದಿ ಬಂದಿದೆ. ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಚಿತ್ರದ ಬಿಡುಗಡೆ ದಿನಾಂಕವನ್ನು ದಿಢೀರ್ ಮುಂದೂಡಲಾಗಿದೆ. ಈ ಕುರಿತು ಚಿತ್ರತಂಡ ಅಧಿಕೃತ ಪ್ರಕಟಣೆ ನೀಡಿದೆ. ಮಧ್ಯಪ್ರಾಚ್ಯದಲ್ಲಿ (Middle East) ಸದ್ಯ ಉಂಟಾಗಿರುವ ಅನಿಶ್ಚಿತತೆ ಮತ್ತು ಯುದ್ಧದ ವಾತಾವರಣದಿಂದಾಗಿ ಚಿತ್ರವನ್ನು ಜಾಗತಿಕವಾಗಿ ಹೆಚ್ಚಿನ ಪ್ರೇಕ್ಷಕರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪ್ರೇಕ್ಷಕರ ಮತ್ತು ಪಾಲುದಾರರ ಹಿತದೃಷ್ಟಿಯಿಂದ ಬಿಡುಗಡೆಯನ್ನು ಮುಂದೂಡಲು ನಿರ್ಧರಿಸಿರುವುದಾಗಿ ಚಿತ್ರತಂಡ ತಿಳಿಸಿದೆ.
ಈ ಮೊದಲು ಮಾರ್ಚ್ 19ರಂದು ಸಿನಿಮಾ ಬಿಡುಗಡೆಯಾಗಬೇಕಿತ್ತು. ಈಗ ‘ಟಾಕ್ಸಿಕ್’ ಸಿನಿಮಾ 2026ರ ಜೂನ್ 4ರಂದು ವಿಶ್ವದಾದ್ಯಂತ ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳಲ್ಲಿ ತೆರೆಕಾಣಲಿದೆ ಎಂದು ಕೆವಿಎನ್ ಪ್ರೊಡಕ್ಷನ್ಸ್ ಅಧಿಕೃತವಾಗಿ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿರುವುದನ್ನು ಪೋಸ್ಟ್ ಮೂಲಕ ಖಚಿತಪಡಿಸಿದೆ. ಯುದ್ಧದ ಬಿಸಿ ಇದೀಗ ಟಾಕ್ಸಿಕ್ಗೂ ತಟ್ಟಿದೆ.

ಈ ಚಿತ್ರವನ್ನು ಜಾಗತಿಕ ಪ್ರೇಕ್ಷಕರಿಗಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದೆ. ಅಮೆರಿಕ-ಇರಾನ್ ಯುದ್ಧದ ಭೀತಿಯು, ಈಗ ಚಿತ್ರರಂಗದ ಮೇಲೂ ಪ್ರಭಾವ ಬೀರಿದೆ. ಯಶ್ ಅಭಿಮಾನಿಗಳು ನೆಚ್ಚಿನ ನಟನ ಸಿನಿಮಾ ನೋಡಲು ಇನ್ನೂ 3 ತಿಂಗಳು ಕಾಯಬೇಕಾಗಿದೆ. ಇದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
Toxic : A Fairy Tale for Grown-Ups – in Cinemas Worldwide on 4 June 2026 pic.twitter.com/tg28qLUooH
— KVN Productions (@KvnProductions) March 4, 2026
ಜಾಗತಿಕ ಪ್ರೇಕ್ಷಕರ ದೃಷ್ಟಿಯಿಂದ ಈ ನಿರ್ಧಾರ
ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಿಸಲಾದ ಈ ಸಿನಿಮಾ, ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವ ನಂಬಿಕೆಯಿಂದ ರೂಪುಗೊಂಡಿದೆ. ವರ್ಷಗಳ ಪರಿಶ್ರಮದ ನಂತರ, ಮಾರ್ಚ್ 19ರಂದು ನಮ್ಮ ಚಿತ್ರವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೆವು. ಆದರೆ, ವಿಶೇಷವಾಗಿ ಮಧ್ಯಪೂರ್ವ ಪ್ರದೇಶದಲ್ಲಿ ಉಂಟಾದ ಅನಿಶ್ಚಿತ ಪರಿಸ್ಥಿತಿ, ಜಗತ್ತಿನಾದ್ಯಂತ ಅತ್ಯಂತ ವ್ಯಾಪಕ ಪ್ರೇಕ್ಷಕರನ್ನು ತಲುಪಿ ಸಂಪರ್ಕಿಸುವ ನಮ್ಮ ಗುರಿಗೆ ಪರಿಣಾಮ ಬೀರಿದೆ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.
ಆದ್ದರಿಂದ, ನಮ್ಮ ಪಾಲುದಾರರು ಮತ್ತು ಪ್ರೇಕ್ಷಕರ ಹಿತದೃಷ್ಟಿಯಿಂದ, ಬಿಡುಗಡೆ ದಿನಾಂಕವನ್ನು ಮುಂದೂಡುವ ಕಠಿಣ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ನಿಮ್ಮ ಸಹನೆಗೆ ಧನ್ಯವಾದಗಳು. ನಿಮ್ಮ ನಿರಂತರ ಪ್ರೀತಿ ಮತ್ತು ಬೆಂಬಲವನ್ನು ನಾವು ನಿರೀಕ್ಷಿಸುತ್ತೇವೆ. ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರವು ಈಗ ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳಲ್ಲಿ ಜಗತ್ತಿನಾದ್ಯಂತ 2026 ಜೂನ್ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದೆ.
ಯಶ್ ಅಭಿಮಾನಿಗಳ ಬೇಸರ
ಯಶ್ ಅವರ ಕೊನೆಯ ಚಿತ್ರ ‘KGF 2’ ಬಿಡುಗಡೆಯಾಗಿ ಸುಮಾರು 4 ವರ್ಷಗಳೇ ಕಳೆದಿವೆ. ತಮ್ಮ ನೆಚ್ಚಿನ ನಟನನ್ನು ದೊಡ್ಡ ಪರದೆಯ ಮೇಲೆ ನೋಡಲು ತುದಿಗಾಲಲ್ಲಿ ಕಾಯುತ್ತಿದ್ದ ಅಭಿಮಾನಿಗಳಿಗೆ ಮತ್ತೆ ಮೂರು ತಿಂಗಳ ವಿಳಂಬವು ದೊಡ್ಡ ನಿರಾಸೆಯನ್ನುಂಟು ಮಾಡಿದೆ. ಕೇವಲ ದಿನಾಂಕ ಬದಲಾಗಿರುವುದು ಮಾತ್ರವಲ್ಲದೆ, ಯುದ್ಧದ ಗಂಭೀರ ಕಾರಣಗಳಿಂದಾಗಿ ಚಿತ್ರತಂಡ ಈ ನಿರ್ಧಾರ ತೆಗೆದುಕೊಂಡಿರುವುದು ಅಭಿಮಾನಿಗಳಲ್ಲಿ ಮುಂದಿನ ದಿನಗಳ ಬಗ್ಗೆಯೂ ಆತಂಕ ಮೂಡಿಸಿದೆ. ಪ್ರಕಟಣೆಯಲ್ಲಿ ತಿಳಿಸಿರುವಂತೆ ಮಧ್ಯಪ್ರಾಚ್ಯದ ಪರಿಸ್ಥಿತಿಯೇ ಈ ಬದಲಾವಣೆಗೆ ಪ್ರಮುಖ ಕಾರಣವಾಗಿದೆ.
ಮತ್ತೊಂದೆಡೆ ಸಿನಿಮಾ ಬಿಡುಗಡೆ ವಿಳಂಬವಾದಷ್ಟೂ ಅದರ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಜಾಗತಿಕ ಪ್ರೇಕ್ಷಕರಿಗಾಗಿ ಸಿನಿಮಾ ಸಿದ್ಧವಾಗುತ್ತಿದೆ ಎಂದು ಚಿತ್ರತಂಡ ಹೇಳಿರುವುದು ಅಭಿಮಾನಿಗಳಲ್ಲಿ ಸಿನಿಮಾ ಇನ್ನೂ ಅದ್ದೂರಿಯಾಗಿ ಮೂಡಿಬರಲಿದೆ ಎಂಬ ಭರವಸೆಯನ್ನೂ ಮೂಡಿಸಿದೆ. ವಿಶ್ವದಾದ್ಯಂತ ಇರುವ ಯಶ್ ಅಭಿಮಾನಿಗಳು ಮಾರ್ಚ್ 19ರಂದು ಸಿನಿಮಾ ನೋಡಲು ಯೋಜನೆಗಳನ್ನು ಹಾಕಿಕೊಂಡಿದ್ದರು. ಈಗ ಈ ಯೋಜನೆಗಳೆಲ್ಲವೂ ಜೂನ್ 4ಕ್ಕೆ ಬದಲಾಗಬೇಕಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದ್ದು, ಚಿತ್ರತಂಡದ ಈ ನಿರ್ಧಾರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವು ಅಭಿಮಾನಿಗಳು ಚಿತ್ರತಂಡದ ನಿರ್ಧಾರವನ್ನು ಬೆಂಬಲಿಸುತ್ತಿದ್ದರೆ, ಇನ್ನು ಕೆಲವರು ಮತ್ತಷ್ಟು ಕಾಯಬೇಕಾದ ಅನಿವಾರ್ಯತೆಯನ್ನು ಒಪ್ಪಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಯುದ್ಧದ ವಾತಾವರಣವು ಯಶ್ ಅಭಿಮಾನಿಗಳ ಸಂಭ್ರಮಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದೆ. ಆದರೆ, ಜೂನ್ 4ರವರೆಗೆ ಕಾಯಲೇಬೇಕಿದೆ.
-

ಇರಾನ್ ಸುಪ್ರೀಂ ಯತೊಲ್ಲಾ ಅಲಿ ಖಮೇನಿ ಅಂತ್ಯ: ವಿಶ್ವದ ಮೇಲೆ 5 ಪರಿಣಾಮ ಸಾಧ್ಯತೆ: ಆಶಿಶ್ ಸಾರಡ್ಕ ಬರಹ
-

Fuel Price: ತೀವ್ರಗೊಂಡ ಯುದ್ಧದ ಕಿಚ್ಚು, ಕಚ್ಚಾ ತೈಲ ದರ ಏರಿಕೆಯಾದರೂ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ
-

Shares Price Drop: ಇರಾನ್-ಇಸ್ರೇಲ್ ಯುದ್ಧದಿಂದ ಈ ವೈಮಾನಿಕ ಸಂಸ್ಥೆಗಳ ಶೇರು ಮೌಲ್ಯ ಭಾರೀ ಕುಸಿತ
-

Iran Vs America, Israel ಯುದ್ಧ ತೀವ್ರ: ಗಲ್ಫ್ ರಾಷ್ಟ್ರಗಳಿಗೂ ವ್ಯಾಪಿಸಿದ ಸಂಕಷ್ಟ; ಈ ಕ್ಷಣದ 10 ಪ್ರಮುಖ ಬೆಳವಣಿಗೆಗಳು
-

Iran Vs Israel War: ಇರಾನ್ – ಇಸ್ರೇಲ್ ಯುದ್ಧ: ಯುರೋಪಿಗೆ ವಿಸ್ತರಿಸುವ ಆತಂಕ, ಯುಕೆ ಮೇಲೆ ಶಂಕಿತ ಡ್ರೋನ್ ದಾಳಿ
-

ಹೆಚ್ಚಾದ ಇರಾನ್-ಇಸ್ರೇಲ್ ಯುದ್ಧದ ತೀವ್ರತೆ, 3ನೇ ಮಹಾಯುದ್ಧದ ಆತಂಕ: 10 ಪ್ರಮುಖಾಂಶಗಳು ಹೀಗಿವೆ
-

ದುಬೈಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು: ಪಿ.ವಿ ಸಿಂಧು, ಭೋಜೇಗೌಡ ಸೇರಿದಂತೆ ಹಲವರು ಬೆಂಗಳೂರಿಗೆ ವಾಪಾಸ್
-

Israel-Iran War: ಬೆಂಗಳೂರು ಏರ್ಪೋರ್ಟ್ನಲ್ಲಿ 15 ವಿಮಾನಗಳ ಹಾರಾಟ ದಿಢೀರ್ ರದ್ದು, ಪ್ರಯಾಣಿಕರ ಪರದಾಟ
-

Gold Price: ಇಂದು ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ, ಯುದ್ಧದ ಎಫೆಕ್ಟ್ನಿಂದ ಬಂಗಾರ-ಬೆಳ್ಳಿ ಮತ್ತಷ್ಟು ದುಬಾರಿ! ಮುನ್ಸೂಚನೆ
-

Iran Vs Israel War: 7 ದೇಶಗಳಲ್ಲಿ ಇಂದಿನ CBSE ಬೋರ್ಡ್ ಪರೀಕ್ಷೆಗಳು ಮುಂದೂಡಿಕೆ
-

ರಶ್ಮಿಕಾ ಮೊದಲ ಸಿನಿಮಾದಲ್ಲಿ ನಾನು ಹೀರೋ, ನೀನು ಬಾಲಿವುಡ್ಗೆ ಪಕ್ಕಾ ಹೋಗ್ತೀಯ ಎಂದಿದ್ದೆ: ನಟ ತ್ರಿವಿಕ್ರಮ್
-

ಇರಾನ್ ಸುಪ್ರೀಂ ಯತೊಲ್ಲಾ ಅಲಿ ಖಮೇನಿ ಅಂತ್ಯ: ವಿಶ್ವದ ಮೇಲೆ 5 ಪರಿಣಾಮ ಸಾಧ್ಯತೆ: ಆಶಿಶ್ ಸಾರಡ್ಕ ಬರಹ
-

Thalapathy Vijay: 400 ಕೋಟಿ ಆಸ್ತಿಗೆ ಒಡತಿ, ಲಂಡನ್ ಬೆಡಗಿ: ಯಾವ ಸಿನಿಮಾಗೂ ಕಡಿಮೆ ಇಲ್ಲ ದಳಪತಿ ವಿಜಯ್-ಸಂಗೀತಾ ಲವ್ ಸ್ಟೋರಿ
-

ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಹೇಗಿದ್ರು ನೋಡಿ ರಶ್ಮಿಕಾ ಮಂದಣ್ಣ, ವಿಡಿಯೋ ವೈರಲ್
-

Sanju Samson: ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರ: ತೆಗಳಿದ ಬಾಯಲ್ಲೇ ಸಂಜು ಸ್ಯಾಮ್ಸನ್ಗೆ ಗೌತಮ್ ಗಂಭೀರ್ ಶಹಭಾಸ್ಗಿರಿ
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/yash-toxic-release-postponed-amid-middle-east-uncertainty-movie-worldwide-new-date-announced-june-4-445883.html. xn--babytilbehr-pgb.com does not claim ownership of this content. All rights remain with the original publisher.
