
India
oi-Shiddalingesh S
ಭಾರತದಲ್ಲಿ ವಿಮಾನಯಾನ ಎಂಬುದು ಈಗ ಕೇವಲ ಶ್ರೀಮಂತರ ಸೊತ್ತಾಗಿ ಉಳಿದಿಲ್ಲ, ಇದು ದಿನದಿಂದ ದಿನಕ್ಕೆ ಸಾಮನ್ಯ ಜನರಿಗೂ ಕೈಗೆಟುಕುವಂತಾಗುತ್ತಿದೆ. ಟಿಕೆಟ್ ಗಳು ಮಾತ್ರವಲ್ಲದೆ ಈಗ ವಿಮಾನ ನಿಲ್ದಾಣಗಳಲ್ಲಿ ದುಬಾರಿ ಆಹಾರದ ಸಮಸ್ಯೆಗು ಪರಿಹಾರ ಸಿಕ್ಕಿದೆ. ಅಂದರೆ ಆಹಾರವೂ ಸಾಮಾನ್ಯ ಪ್ರಯಾಣಿಕರ ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತಿದೆ. ಕೇಂದ್ರ ಸರ್ಕಾರದ ಉಡಾನ್ (Ude Desh Ka Aam Nagrik) ಯೋಜನೆಯಡಿ ಪ್ರಾರಂಭವಾದ ‘ಉಡಾನ್ ಯಾತ್ರಿ ಕೆಫೆ’ ಈಗ ದೇಶದ 17 ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
10 ರೂ. ಚಹಾ ಮತ್ತು ಕಡಿಮೆ ಬೆಲೆಗೆ ತಿಂಡಿಗಳು
ಈ ಉಡಾನ್ ಯಾತ್ರಿ ಕೆಫೆಯ ಮುಖ್ಯ ಉದ್ದೆಶ ಏನೆಂದರೆ ಅದರಲ್ಲಿ ಸಿಗುವ ಆಹಾರಗಳು ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯಬೇಕು. ಸುಮಾರು 10 ರೂಪಾಯಿಗೆ ಚಹಾ, ಕಡಿಮೆ ದರದಲ್ಲಿ ಸಮೋಸಾ ಮತ್ತು ಇತರ ತಿಂಡಿಗಳು ಇಲ್ಲಿ ಲಭ್ಯವಿರುತ್ತವೆ. ಸಾಮಾನ್ಯವಾಗಿ ವಿಮಾನ ನಿಲ್ದಾಣಗಳಲ್ಲಿ ಆಹಾರಗಳು ದುಬಾರಿ ಎಂದು ಹೇಳಲಾಗುತ್ತದೆ ಅದಕ್ಕಾಗಿ ಈ ಉಡಾನ್ ಯಾತ್ರಿ ಕೆಫೆಯ ಆಹಾರವು ಉತ್ತಮ ಪರ್ಯಾಯವಾಗಿದೆ.

ಯಾವ ಯಾವ ವಿಮಾನ ನಿಲ್ದಾಣಗಳಲ್ಲಿ ಲಭ್ಯವಿದೆ?
ಮಾರ್ಚ್ ಮತ್ತು ಏಪ್ರಿಲ್ 2026ರ ವೇಳೆಗೆ ಕೆಳಗಿನ 17 ವಿಮಾನ ನಿಲ್ದಾಣಗಳಲ್ಲಿ ಈ ‘ಉಡಾನ್ ಯಾತ್ರಿ ಕೆಫೆ’ ಕಾರ್ಯನಿರ್ವಹಿಸುತ್ತಿದೆ:
ಮುಂಬೈ – ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (T2)
ಅಹಮದಾಬಾದ್ – ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಸೂರತ್ ವಿಮಾನ ನಿಲ್ದಾಣ
ಭುವನೇಶ್ವರ – ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಕೊಲ್ಕತ್ತಾ – ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಪುಣೆ ವಿಮಾನ ನಿಲ್ದಾಣ
ವಿಜಯವಾಡ ವಿಮಾನ ನಿಲ್ದಾಣ
ಇಟಾನಗರ – ಡೊನ್ಯಿ ಪೋಲೋ ವಿಮಾನ ನಿಲ್ದಾಣ
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ತಿರುವನಂತಪುರಂ – ತ್ರಿವೇಂಡ್ರಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಕೊಯಂಬತ್ತೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಲಖನೌ – ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಜಮ್ಮು ವಿಮಾನ ನಿಲ್ದಾಣ
ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಪಾಟ್ನಾ – ಜಯ ಪ್ರಕಾಶ್ ನಾರಾಯಣ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ದರ ಕಡಿಮೆ ಮತ್ತು ಸರಳವಾದ ಮೆನು
ಉಡಾನ್ ಯಾತ್ರಿ ಕೆಫೆಯಲ್ಲಿ ಸರಳವಾದ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ. ಚಹಾ, ಕಾಫಿ, ಉಪಹಾರದ ತಿಂಡಿಗಳು ಮತ್ತು ದಿನನಿತ್ಯದ ಆಹಾರ ವಿಮಾನ ನಿಲ್ದಾಣದಗಳಲ್ಲಿನ ಬೆಲೆಗೆ ಹೋಲಿಸಿದರೆ ಕಡಿಮೆ ದರದಲ್ಲಿ ಸಿಗುತ್ತವೆ.
ಪ್ರಯಾಣಿಕರಿಗೆ ಏಕೆ ಮುಖ್ಯ?
ವಿಮಾನ ನಿಲ್ದಾಣದ ಆಹಾರ ದುಬಾರಿ ಎಂಬುದು ಜನರಲ್ಲಿರುವ ಕಲ್ಪನೆಯನ್ನು ‘ಉಡಾನ್ ಯಾತ್ರಿ ಕೆಫೆ’ ಬದಲಾಯಿಸುತ್ತಿದೆ. ವಿಶೇಷವಾಗಿ ಬಜೆಟ್ ಪ್ರಯಾಣಿಕರು, ಕುಟುಂಬಗಳು ಮತ್ತು ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡುವವರಿಗೆ ಇದು ದೊಡ್ಡ ಅನುಕೂಲಕರವಾಗಿದೆ.
ಮುಂದಿನ ಯೋಜನೆ ಏನು?
ಇದೀಗ ‘ಉಡಾನ್ ಯಾತ್ರಿ ಕೆಫೆ’ 17 ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೆಫೆ, ಮುಂದಿನ ತಿಂಗಳುಗಳಲ್ಲಿ ಇನ್ನಷ್ಟು ಸ್ಥಳಗಳಿಗೆ ವಿಸ್ತರಿಸುವ ಯೋಜನೆ ಹೊಂದಿದೆ. ಪ್ರಮುಖ ಹಾಗೂ ಪ್ರಾದೇಶಿಕ ವಿಮಾನ ನಿಲ್ದಾಣಗಳಲ್ಲಿ ಈ ಸೇವೆಯನ್ನು ಹೆಚ್ಚಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/udaan-yatri-cafe-rs-10-tea-at-airports-now-at-17-airports-in-india-check-full-list-details-now-449253.html. xn--babytilbehr-pgb.com does not claim ownership of this content. All rights remain with the original publisher.
