UGCET ಅಭ್ಯರ್ಥಿಗಳ ಗಮನಕ್ಕೆ: ಇದೇ ತಿಂಗಳು CET ಪರೀಕ್ಷೆ, ರಿಲೀಸಾದ ನಕಲಿ ಲಿಂಕ್ ಬಗ್ಗೆ ಎಚ್ಚರ | KEA Warns Fake UGCET 2026 Admit Card Links, Urges Students to Use Official Website Only, Exam dates

Karnataka

oi-Shankrappa Parangi

ಬೆಂಗಳೂರು: ರಾಜ್ಯದಲ್ಲಿ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಾಮಾನ್ಯ ಪ್ರವೇಶ ಪರೀಕ್ಷೆ (CET Exam 2026 ) ನಡೆಸಲಿದೆ. ಇಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಎಲ್ಲವು ಪೂರ್ಣಗೊಂಡಿದೆ. ಇದೇ ತಿಂಗಳು ಬಹುನಿರೀಕ್ಷೆಯ ಸಿಇಟಿ ಪರೀಕ್ಷೆಗಳು ಜರುಗಲಿವೆ. ಈ ಸಂಬಂಧ ಪ್ರಾಧಿಕಾರ ಅಧಿಕೃತ ಪ್ರವೇಶ ಪತ್ರ (CET Admit Card) ಪಡೆಯುವ ಲಿಂಕ್ ನೆನ್ನೆ ಶುಕ್ರವಾರ ಬಿಡುಗಡೆ ಮಾಡಿತ್ತು. ಆದರ ಬೆನ್ನಲ್ಲೆ ಕಿಡಿಗೇಡಿಗಳು ಬೇಕು ಅಂತಲೇ ನಕಲಿ (Fake Link) ಬಿಡುಗಡೆ ಮಾಡಿದೆ, ಅಭ್ಯರ್ಥಿಗಳಿಗೆ ಈ ಕುರಿತು ಕೆಇಎ ಮಹತ್ವದ ಎಚ್ಚರಿಕೆ ನೀಡಿದೆ.

ಹೌದು, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಪದವಿ ಕೋರ್ಸ್ (UGCET 2026) ಪಡೆಯಲು ಇಚ್ಛಿಸಿದ್ದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆಯ ಸಿದ್ಧತೆಯಲ್ಲಿದ್ದು. ಈ ನಡುವೆ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಇದೇ ತಿಂಗಳ ಏಪ್ರಿಲ್ 23 ಮತ್ತು 24ರಂದು ನಡೆಯಲಿರುವ ಸಿಇಟಿ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಶುಕ್ರವಾರವಷ್ಟೇ (ಏ.10) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತ ಜಾಲತಾಣ (https://cetonline.karnataka.gov.in/UGCET_Admit_Card_2026/Forms/Login.aspx) ಲಿಂಕ್ ಬಿಡುಗಡೆ ಮಾಡಿತ್ತು.

UGCET 2026 Admit Card

ಅದರ ಬೆನ್ನಲ್ಲೆ ಕಿಡಿಗೇಡಿಗಳು ಅಭ್ಯರ್ಥಿಗಳ ಮಾಹಿತಿ ಕದಿಯಲು ದುರುದ್ದೇಶದಿಂದ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ನಕಲಿ ಲಿಂಕ್ (Fake link- https://applytocollege.co/kcet_admit_card_2026/) ಬಿಡುಗಡೆ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರವಹಿಸಿ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ಎಚ್‌.ಪ್ರಸನ್ನ ಅವರು ತಿಳಿಸಿದ್ದಾರೆ.

ಇಲ್ಲಿ ನೀಡಲಾಗಿರುವ ನಕಲಿ ಲಿಂಕ್ ಮೂಲಕ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯ ಇಲ್ಲ. ಹೀಗಾಗಿ ಎಚ್ಚರವಹಿಸುವುದ ಅಗತ್ಯವಾಗಿದೆ. ಪರೀಕ್ಷೆ ಸಮಯದಲ್ಲಿ ಅಭ್ಯರ್ಥಿಗಳು ಗೊಂದಲಕ್ಕೀಡಾಗದೇ, ಅಗತ್ಯ ಜಾಗ್ರತೆ ವಹಿಸಲು ತಿಳಿಸಲಾಗಿದೆ ಎಂದರು. ಪ್ರವೇಶ ಪತ್ರ ಪಡೆಯುವವರು ಪ್ರಾಧಿಕಾರದ ಅಧಿಕೃತ ಜಾಲತಾಣ ಪರಿಶೀಲಿಸಿ ಭೇಟಿ ನೀಡಬೇಕು. ಅಗತ್ಯ ಮಾಹಿತಿ ನಮೂದಿಸಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

ಸುಮಾರು ಲಕ್ಷಾಂತರ ಮಂದಿ ನೋಂದಣಿ

ಫೆಬ್ರವರಿ 13ರವರೆಗೆ ಯುಜಿ ಸಿಇಟಿ ಪರೀಕ್ಷೆಗಾಗಿ 2.9 ಲಕ್ಷ ಮಂದಿ ಆಧಾರ್ ಸಂಖ್ಯೆ ಮೂಲಕ ನೋಂದಣಿ ಮಾಡಿಕೊಂಡಿದ್ದರು. ಕೊನೆ ದಿನಾಂಕ ಫೆಬ್ರವರಿ 17ರ ಹೊತ್ತಿಗೆ ಮತ್ತಷ್ಟು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅರ್ಜಿ ಸಲ್ಲಿಕೆ, ಸ್ವೀಕಾರ, ಸರಿ ತಪ್ಪು ತಿದ್ದುಪಡಿ ಎಲ್ಲ ಪ್ರಕ್ರಿಯೆ ಪೂರ್ಣಗೊಂಡಿದೆ.

ಸ್ವೀಕರಿಸಿದ ಅರ್ಜಿಗಳನ್ನು ಸ್ಯಾಟ್ಸ್ ಮೂಲಕ 1.8 ಲಕ್ಷ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಆನ್‌ಲೈನ್ ಮೂಲಕ ಆಗಿದೆ. ಕಾಲೇಜು ಹಂತದಲ್ಲಿ 35 ಸಾವಿರ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮಾಡಲಾಗಿದೆ. ಇದೇ ತಿಂಗಳು ಏಪ್ರಿಲ್ 23 ಮತ್ತು 24ರಂದು ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಪ್ರವೇಶ ಪತ್ರ ಪಡೆಯಬಹುದಾಗಿದ್ದು, ನಕಲಿ ಲಿಂಕ್/ಜಾಲತಾಣಗಳ ಬಗ್ಗೆ ಜಾಗ್ರತೆ ವಹಿಸುವಂತೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/kea-warns-fake-ugcet-2026-admit-card-links-urges-students-to-use-official-website-only-exam-dates-450103.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo